2025-26ರ ಸಾಲಿನ ಭಾರತ ತಂಡದ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತವರು ಸರಣಿಗಳ ವೇಳಾಪಟ್ಟಿ!
India's home season in 2025-26: ಭಾರತ ಕ್ರಿಕೆಟ್ ತಂಡ 2025-26ರ ಸಾಲಿನ ತವರು ಸರಣಿಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ (ಬಿಸಿಸಿಐ) ಏಪ್ರಿಲ್ 2 ರಂದು ಪ್ರಕಟಿಸಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗಳನ್ನು ಆಡಲಿದೆ.

ಭಾರತ ಕ್ರಿಕೆಟ್ ತಂಡದ 2025-26ರ ಸಾಲಿನ ತವರು ಸರಣಿಗಳ ವೇಳಾಪಟ್ಟಿ.

ನವದೆಹಲಿ: ಭಾರತ ಪುರುಷರ ಕ್ರಿಕೆಟ್ ತಂಡ (Indian Cricket Team) 2025-26ರ ಸಾಲಿನ ತವರು ಸರಣಿಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಏಪ್ರಿಲ್ 2 ರಂದು ಬುಧವಾರ ಪ್ರಕಟಿಸಿದೆ. ಅಕ್ಟೋಬರ್ 2 ರಂದು ವೆಸ್ಟ್ ಇಂಡೀಸ್ (West Indies) ವಿರುದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ಟೀಮ್ ಇಂಡಿಯಾದ ತವರು ಅವಧಿ ಆರಂಭವಾಗಲಿದೆ. ಇದಾದ ನಂತರ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ.
ಭಾರತ ತಂಡದ ತವರು ಸೀಸನ್ ಆರಂಭವಾಗುವುದೇ ಅಕ್ಟೋಬರ್ ತಿಂಗಳಿನಲ್ಲಿ. ಇದಕ್ಕೂ ಮುನ್ನ ಭಾರತ ತಂಡ ಇಂಗ್ಲೆಂಡ್ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಜೂನ್ 20 ರಿಂದ ಆಗಸ್ಟ್ 5ರವರೆಗೆ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದಾದ ಬಳಿಕ ಟಿ20 ಸ್ವರೂಪದಲ್ಲಿ 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ.
IPL 2025: ಆರ್‌ಸಿಬಿ, ಸಿಎಸ್‌ಕೆ ಅಲ್ಲವೇ ಅಲ್ಲ! ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಆರಿಸಿದ ಇರ್ಫಾನ್ ಪಠಾಣ್!
ಬರ್ಸಪರ ಸ್ಟೇಡಿಯಂನಲ್ಲಿ ಮೊಟ್ಟ ಮೊದಲ ಟೆಸ್ಟ್
ಭಾರತ ತಂಡದ ತವರು ಸೀಸನ್‌ನಲ್ಲಿ ಗುವಾಹಟಿಯ ಬರ್ಸಪರ ಸ್ಟೇಡಿಯಂನಲ್ಲಿ ಮೊಟ್ಟ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನವೆಂಬರ್ 22 ರಂದು ಆರಂಭವಾಗಲಿದೆ. ಇದಕ್ಕೂ ಮುನ್ನ ಹರಿಣ ಪಡೆಯ ಎದುರು ಟೀಮ್ ಇಂಡಿಯಾ ಮೊದಲನೇ ಟೆಸ್ಟ್ ಪಂದ್ಯದಲ್ಲಿ ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಸೆಣಲಿದೆ. ತವರಿನಲ್ಲಿ ಈ ಬಾರಿ ನಡೆಯವ ನಾಲ್ಕು ಟೆಸ್ಟ್ ಪಂದ್ಯಗಳು ಅಹಮದಾಬಾದ್, ಕೋಲ್ಕತಾ, ನವದೆಹಲಿ ಹಾಗೂ ಗುವಾಹಟಿಯಲ್ಲಿ ನಡೆಯಲಿವೆ. ಇನ್ನು ರಾಂಚಿ, ಧರ್ಮಶಾಲಾ, ಕಟಕ್, ನವ ಚಂಡಿಗಢ ಹಾಗೂ ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್ ಸರಣಿಯ ಪಂದ್ಯಗಳು ಜರುಗಲಿವೆ.
🚨Announcement🚨
— BCCI (@BCCI) April 2, 2025
Fixtures for #TeamIndia (Senior Men) international home season for 2025 announced.
Test series against West Indies, followed by an all-format series against South Africa.
Guwahati to host its maiden Test
Details 🔽https://t.co/s1HyuWSDL2
ಎರಡು ತವರು ಸರಣಿಗಳ ನಡುವೆ ಭಾರತ ತಂಡ, ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಭಾರತ ವಿರುದ್ಧದ ತವರು ಸೀಮಿತ ಓವರ್‌ಗಳ ಸರಣಿಗಳ ವೇಳಾಪಟ್ಟಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಪ್ರಕಟಿಸಿತ್ತು. ಆಸ್ಟ್ರೇಲಿಯಾ ಒಡಿಐ ಸರಣಿಯು ಅಕ್ಟೋಬರ್ 19 ರಂದು ಆರಂಭವಾದರೆ, ಟಿ20ಐ ಸರಣಿ ಅಕ್ಟೋಬರ್ 29 ರಂದು ಶುರುವಾಗಲಿದೆ. ಅಂದ ಹಾಗೆ ಬಿಸಿಸಿಐ, ಆಸ್ಟ್ರೇಲಿಯಾ ಪ್ರವಾಸಕ್ಕೆ ತನ್ನ ಎರಡನೇ ತಂಡವನ್ನು ಕಳುಹಿಸುವ ಸಾಧ್ಯತೆ ಇದೆ.
IPL 2025: ʻಕೆಕೆಆರ್ ಪ್ರಶಸ್ತಿ ಗೆದ್ದರೂ ಶ್ರೇಯಸ್ ಅಯ್ಯರ್‌ಗೆ ಸಿಗದ ಶ್ರೇಯʼ-ಸುನೀಲ್ ಗವಾಸ್ಕರ್!
ವೆಸ್ಟ್ ಇಂಡೀಸ್ ತಂಡದ ಭಾರತದ ಪ್ರವಾಸದ ವೇಳಾಪಟ್ಟಿ
ಟೆಸ್ಟ್ ಸರಣಿ
ಮೊದಲನೇ ಟೆಸ್ಟ್ -ಅಕ್ಟೋಬರ್ 02 ರಿಂದ 06 | ಬೆಳಿಗ್ಗೆ 9:30 | ಅಹಮದಾಬಾದ್
ಎರಡನೇ ಟೆಸ್ಟ್ - ಅಕ್ಟೋಬರ್ 10 ರಿಂದ 14 | ಬೆಳಿಗ್ಗೆ 9:30 | ಕೋಲ್ಕತಾ
ದಕ್ಷಿಣ ಆಫ್ರಿಕಾ ತಂಡದ ಭಾರತದ ಪ್ರವಾಸದ ವೇಳಾಪಟ್ಟಿ
ಟೆಸ್ಟ್ ಸರಣಿ
ಮೊದಲನೇ ಟೆಸ್ಟ್ - ನವೆಂಬರ್ 14 ರಿಂದ 18 | ಬೆಳಿಗ್ಗೆ 9:30 | ನವದೆಹಲಿ
ಎರಡನೇ ಟೆಸ್ಟ್ - ನವೆಂಬರ್ 22 ರಿಂದ 26 | ಬೆಳಿಗ್ಗೆ 9:30 | ಗುವಾಹಟಿ
IPL 2025: 27 ಕೋಟಿ ರೂ ಕೊಟ್ಟಿದ್ದೇಕೆ? 2 ರನ್‌ಗೆ ವಿಕೆಟ್ ಒಪ್ಪಿಸಿದ ರಿಷಭ್ ಪಂತ್ ವಿರುದ್ದ ಫ್ಯಾನ್ಸ್ ಗರಂ!
ಏಕದಿನ ಸರಣಿ
ಮೊದಲನೇ ಏಕದಿನ - ನವೆಂಬರ್ 30 | ಮಧ್ಯಾಹ್ನ 1:30 | ರಾಂಚಿ
ಎರಡನೇ ಏಕದಿನ - ಡಿಸೆಂಬರ್ 03 | ಮಧ್ಯಾಹ್ನ 1:30 | ರಾಯ್ಪುರ
ಮೂರನೇ ಏಕದಿನ -ಡಿಸೆಂಬರ್ 06 | ಮಧ್ಯಾಹ್ನ 1:30 | ವಿಶಾಖಪಟ್ಟಣಂ
ಟಿ20ಐ ಸರಣಿ
ಮೊದಲನೇ ಟಿ20ಐ - ಡಿಸೆಂಬರ್ 09 | ಸಂಜೆ 7:00 | ಕಟಕ್
ಎರಡನೇ ಟಿ20ಐ -ಡಿಸೆಂಬರ್ 11 | ಸಂಜೆ 7:00 | ನ್ಯೂ ಚಂಡೀಗಢ
ಮೂರನೇ ಟಿ20ಐ - ಡಿಸೆಂಬರ್ 14 | ಸಂಜೆ 7:00 | ಧರ್ಮಶಾಲಾ
ನಾಲ್ಕನೇ ಟಿ20ಐ – ಡಿಸೆಂಬರ್ 17 | ಸಂಜೆ 7:00 | ಲಖನೌ
ಐದನೇ ಟಿ20ಐ – ಡಿಸೆಂಬರ್ 19 | ಸಂಜೆ 7:00 | ಅಹಮದಾಬಾದ್