ಟಿ20 ವಿಶ್ವಕಪ್ ವಿಜೇತ ಆಟಗಾರರಿಗೆ ವಜ್ರದುಂಗುರ ನೀಡಿದ ಬಿಸಿಸಿಐ
Team India: ಈ ಉಂಗುರವನ್ನು ಶುದ್ಧ ಚಿನ್ನ, ವಜ್ರದ ಮೂಲಕ ಸಿದ್ಧಪಡಿಸಲಾಗಿದೆ. ಇದರಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಉಂಗುರದ ಮಧ್ಯಭಾಗದಲ್ಲಿ ಅಶೋಕ ಚಕ್ರದ ಚಿತ್ರವಿದೆ. ಇದರ ಸುತ್ತ 'ಇಂಡಿಯಾ ಟಿ20 ವರ್ಲ್ಡ್ ಚಾಂಪಿಯನ್ಸ್ 2024' ಎಂದು ಇಂಗ್ಲಿಷ್‌ನಲ್ಲಿ ಕೆತ್ತಲಾಗಿದೆ.
![ಟಿ20 ವಿಶ್ವಕಪ್ ವಿಜೇತ ಆಟಗಾರರಿಗೆ ವಜ್ರದುಂಗುರ ನೀಡಿದ ಬಿಸಿಸಿಐ](https://cdn-vishwavani-prod.hindverse.com/media/original_images/Team_India_20.jpg)
Team India
![Profile](https://vishwavani.news/static/img/user.png)
ಮುಂಬಯಿ: ಫೆ.1ರಂದು ಬಿಸಿಸಿಐ(BCCI) ನೀಡಿದ್ದ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ವೇಳೆ 2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ(Team India) ಸದಸ್ಯರಿಗೆ ಬಿಸಿಸಿಐ ವಿಶೇಷ ವಜ್ರದುಂಗುರವನ್ನೂ ನೀಡಿತ್ತು. ಈ ಮಾಹಿತಿಯನ್ನು ಬಿಸಿಸಿಐ ತಡವಾಗಿ ರಿವೀಲ್ ಮಾಡಿದೆ. ತನ್ನ ಟ್ವಿಟರ್ ಎಕ್ಸ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದೆ. ಈ ಉಂಗುರವನ್ನು ಶುದ್ಧ ಚಿನ್ನ, ವಜ್ರದ ಮೂಲಕ ಸಿದ್ಧಪಡಿಸಲಾಗಿದೆ. ಇದರಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಉಂಗುರದ ಮಧ್ಯಭಾಗದಲ್ಲಿ ಅಶೋಕ ಚಕ್ರದ ಚಿತ್ರವಿದೆ. ಇದರ ಸುತ್ತ 'ಇಂಡಿಯಾ ಟಿ20 ವರ್ಲ್ಡ್ ಚಾಂಪಿಯನ್ಸ್ 2024' ಎಂದು ಇಂಗ್ಲಿಷ್‌ನಲ್ಲಿ ಕೆತ್ತಲಾಗಿದೆ.
ಕಳೆದ ವರ್ಷ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ,13 ವರ್ಷಗಳ ಬಳಿಕ ಟ್ರೋಫಿ ಎತ್ತಿ ಹಿಡಿದಿತ್ತು. ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ಗಳನ್ನು ಕಲೆಹಾಕುವ ಮೂಲಕ 7 ರನ್ಗಳ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತ್ತು.
Presenting #TeamIndia with their CHAMPIONS RING to honour their flawless campaign in the #T20WorldCup 🏆
— BCCI (@BCCI) February 7, 2025
Diamonds may be forever, but this win certainly is immortalised in a billion hearts. These memories will 'Ring' loud and live with us forever ✨#NamanAwards pic.twitter.com/SKK9gkq4JR
ಇಂದು ಬುಮ್ರಾ ಫಿಟ್‌ನೆಸ್ ಅಂತಿಮ ವರದಿ ಪ್ರಕಟ!
ಬೆಂಗಳೂರು: ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ನುನೋವಿನ ಗಾಯಕ್ಕೆ ತುತ್ತಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ತಪಾಸಣೆ, ಸ್ಕ್ಯಾನಿಂಗ್ ಪ್ರಕ್ರಿಯೆ ಸಂಪೂರ್ಣ ಮುಗಿದಿದ್ದು ಇಂದು(ಶನಿವಾರ) ಬಿಸಿಸಿಐ ವೈದ್ಯಕೀಯ ತಂಡ ಅವರ ಫಿಟ್‌ನೆಸ್ ವರದಿಯನ್ನು ಪರಿಶೀಲಿಸಿ ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ಭವಿಷ್ಯ ನಿರ್ಧಾರ? ಹೊಸ ನಾಯಕನ ಹುಡುಕಾಟದಲ್ಲಿ ಬಿಸಿಸಿಐ!
2021ರಲ್ಲಿ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆಯೂ ಬುಮ್ರಾ ಬೆನ್ನುನೋವಿಗೆ ಸಿಲುಕಿ ಟೂರ್ನಿಗೆ ಅಲಭ್ಯರಾಗಿದ್ದರು. ಈ ವೇಳೆ ಭಾರತ ಲೀಗ್ ಹಂತದಲ್ಲೇ ಮುಗ್ಗರಿಸಿತ್ತು. ಅದರಲ್ಲೂ ಪಾಕಿಸ್ತಾನ ವಿರುದ್ಧ 10 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತ್ತು. ಈ ಬಾರಿಯೂ ಬುಮ್ರಾ ಇಲ್ಲದಿದ್ದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕಾದರೆ ಬುಮ್ರಾ ಅವರ ಫಿಟ್‌ನೆಸ್ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.
ಒಂದು ವೇಳೆ ಬುಮ್ರಾ ಫಿಟ್ ಆಗದೇ ಹೋದರೆ ಅವರ ಜಾಗದಲ್ಲಿ ವರುಣ್ ಚಕ್ರವರ್ತಿ ಅಥವಾ ಹರ್ಷಿತ್ ರಾಣಾ ಆಡುವ ಸಾಧ್ಯತೆಯಿದೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಬದಲಾವಣೆ ಗಳಿದ್ದರೆ ತಿಳಿಸಲು ಫೆ. 12 ಅಂತಿಮ ಗಡುವಾಗಿದೆ.