ಸೊನಾಲಿಕಾದಿಂದ ಜನವರಿ ತಿಂಗಳಲ್ಲಿ ಅತ್ಯಂತ ಹೆಚ್ಚು 10,350 ಟ್ರಾಕ್ಟರ್ ಮಾರಾಟದ ಮೂಲಕ 2025ರ ಯಶಸ್ವಿ ಪ್ರಾರಂಭ
ಭಾರತದ ಕೃಷಿ ವಲಯವು ಸುಸ್ಥಿರತೆಯ ಯುಗದತ್ತ ಮುನ್ನಡೆಯುತ್ತಿದೆ ಮತ್ತು ಕೃಷಿ ರೂಢಿಗಳಲ್ಲಿ ವಿಕಾಸಗೊಳ್ಳುತ್ತಿದೆ. ಕೃಷಿ ವಲಯಕ್ಕೆ ಆರ್ಥಿಕತೆಯ ಪ್ರಗತಿಯ ಶಕ್ತಿಯಾಗಿ ಸರ್ಕಾರದ ಬಜೆಟ್ ಆದ್ಯತೆ ನೀಡಿರುವುದರಿಂದ ಟ್ರಾಕ್ಟರ್ ಉದ್ಯಮವು ದೇಶವನ್ನು ಮುನ್ನಡೆಸಲು ಪ್ರಮುಖ ಶಕ್ತಿಯಾಗಿದೆ. ಸೊನಾ ಲಿಕಾ ಟ್ರಾಕ್ಟರ್ ಉದ್ಯಮದಲ್ಲಿ ಸದಾ ಹೊಸ ಮಾನದಂಡಗಳನ್ನು ನಿರ್ಮಿಸುತ್ತಿದ್ದು ಪ್ರತಿ ರೈತನಿಗೂ ಶಕ್ತಿಯುತ, ದಕ್ಷ ಮತ್ತು ವಿಶ್ವಾಸಾರ್ಹ ಕೃಷಿ ಯಂತ್ರೋಪಕರಣದ ಲಭ್ಯತೆ ನೀಡುವ ಮೂಲಕ ಅವರ ಕೃಷಿ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ
![tractor](https://cdn-vishwavani-prod.hindverse.com/media/images/tractor.max-1280x720.jpg)
![Profile](https://vishwavani.news/static/img/user.png)
ಬೆಂಗಳೂರು: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ಟ್ರಾಕ್ಟರ್ಸ್ ಹೊಸ ವರ್ಷ 2025 ಅನ್ನು ಜನವರಿ ತಿಂಗಳ ಒಟ್ಟಾರೆ ಅತ್ಯಂತ ಹೆಚ್ಚು 10,350 ಟ್ರಾಕ್ಟರ್ ಮಾರಾಟದ ಮೂಲಕ ಸ್ಫೂರ್ತಿದಾಯಕ ರೀತಿಯಲ್ಲಿ ಪ್ರಾರಂಭಿಸಿದೆ. ಈ ಹೊಸ ಹಂತವು ಸೊನಾಲಿಕಾದ ಪ್ರಯಾಣದಲ್ಲಿ ಉತ್ಸಾಹಕರವಾಗಿದ್ದು ಇದರಲ್ಲಿ ಕಂಪನಿಯ ಸ್ಥಿರವಾದ ಪ್ರಗತಿ ಒಳಗೊಂಡಿದೆ ಮತ್ತು ರೈತರ ಯಶಸ್ಸಿಗೆ ಕೃಷಿ ಆವಿಷ್ಕಾರಗಳನ್ನು ಪೂರೈಸುವಲ್ಲಿ ತನ್ನ ಸದೃಢ ಪ್ರಯತ್ನದಿಂದ ಸ್ಥಳೀಯ ಮಾರು ಕಟ್ಟೆಯಲ್ಲಿ ಉದ್ಯಮದ ಕಾರ್ಯಕ್ಷಮತೆ ಮೀರಿದೆ. ಕಂಪನಿಯು ಜನವರಿ 2024ರಲ್ಲಿ 9,769 ಒಟ್ಟಾರೆ ಟ್ರಾಕ್ಟರ್ ಮಾರಾಟ ಮಾಡಿತ್ತು.
ಭಾರತದ ಕೃಷಿ ವಲಯವು ಸುಸ್ಥಿರತೆಯ ಯುಗದತ್ತ ಮುನ್ನಡೆಯುತ್ತಿದೆ ಮತ್ತು ಕೃಷಿ ರೂಢಿಗಳಲ್ಲಿ ವಿಕಾಸಗೊಳ್ಳುತ್ತಿದೆ. ಕೃಷಿ ವಲಯಕ್ಕೆ ಆರ್ಥಿಕತೆಯ ಪ್ರಗತಿಯ ಶಕ್ತಿಯಾಗಿ ಸರ್ಕಾರದ ಬಜೆಟ್ ಆದ್ಯತೆ ನೀಡಿರುವುದರಿಂದ ಟ್ರಾಕ್ಟರ್ ಉದ್ಯಮವು ದೇಶವನ್ನು ಮುನ್ನಡೆಸಲು ಪ್ರಮುಖ ಶಕ್ತಿಯಾ ಗಿದೆ. ಸೊನಾಲಿಕಾ ಟ್ರಾಕ್ಟರ್ ಉದ್ಯಮದಲ್ಲಿ ಸದಾ ಹೊಸ ಮಾನದಂಡಗಳನ್ನು ನಿರ್ಮಿಸುತ್ತಿದ್ದು ಪ್ರತಿ ರೈತನಿಗೂ ಶಕ್ತಿಯುತ, ದಕ್ಷ ಮತ್ತು ವಿಶ್ವಾಸಾರ್ಹ ಕೃಷಿ ಯಂತ್ರೋಪಕರಣದ ಲಭ್ಯತೆ ನೀಡುವ ಮೂಲಕ ಅವರ ಕೃಷಿ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. 150+ ದೇಶಗಳಲ್ಲಿ ವಿಶ್ವಾಸಾರ್ಹ ಬ್ರಾಂಡ್ ಆಗಿ ಸೊನಾಲಿಕಾ ಗ್ರಾಹಕರ ಸಂತೃಪ್ತಿ ನೀಡುವಲ್ಲಿ ತನ್ನ ಬದ್ಧತೆಗೆ ದೃಢ ವಾಗಿದ್ದು ಅಸಾಧಾರಣ ಸಾಧನೆಗಳಿಗೆ ಸ್ಫೂರ್ತಿ ತುಂಬುತ್ತದೆ.
ಈ ಮಹತ್ತರ ಸಾಧನೆ ಕುರಿತು ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮನ್ ಮಿಟ್ಟಲ್, “ನಾವು ಅತ್ಯುತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವುದು, ನಮ್ಮ ಪಾಲುದಾರರ ಹಿತಾಸಕ್ತಿ ಕಾಪಾಡುವುದು ಮತ್ತು ಯಾವುದೇ ಅಡ್ಡದಾರಿ ಗಳಿಲ್ಲದೆ ನೈತಿಕವಾಗಿ ಉದ್ಯಮ ನಡೆಸುವುದು ಈ ಮೂರು ಪ್ರಮುಖ ತತ್ವಗಳನ್ನು ಆಚರಿಸುತ್ತೇವೆ. ಇದು ನಮಗೆ ಸದಾ ನಮ್ಮ ಮಿತಿಗಳನ್ನು ಮೀರಲು ಟ್ರಾಕ್ಟರ್ ಉದ್ಯಮದಲ್ಲಿ ಹೊಸ ಕಾರ್ಯ ಕ್ಷಮತೆಯ ಮಾನದಂಡಗಳನ್ನು ನಿಗದಿಪಡಿಸಲು ಮತ್ತು 2025ರ ಪ್ರಯಾಣವನ್ನು ನಮ್ಮ ಅತ್ಯಂತ ಹೆಚ್ಚು ಜನವರಿ ತಿಂಗಳ 10,350 ಟ್ರಾಕ್ಟರ್ ಮಾರಾಟದ ಮೂಲಕ ಪ್ರಾರಂಭಿಸಲು ನೆರವಾಗಿದೆ. ನಾವು ಪ್ರಮಾಣದಲ್ಲಿ ಪ್ರಗತಿಯನ್ನು ಮುಂದುವರಿಸುತ್ತಿದ್ದೇವೆ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಉದ್ಯಮದ ಪ್ರಗತಿಯನ್ನು ಜನವರಿ 2025ರಲ್ಲಿ ಮೀರಿದ್ದೇವೆ” ಎಂದರು.