ಧೋನಿ ಮನೆಯ ಗೋಡೆಯಲ್ಲಿ ಹೆಲಿಕಾಪ್ಟರ್ ಶಾಟ್ ವಿನ್ಯಾಸ
MS Dhoni House: 18ನೇ ಆವೃತ್ತಿಯ ಐಪಿಎಲ್ ಮಾರ್ಚ್ 23 ರಿಂದ ಆರಂಭವಾಗಲಿದೆ. ಅದಾಗಲೇ ಧೋನಿ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಪ್ರತಿ ದಿನ ಸುಮಾರು 4-ರಿಂದ 5 ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಧೋನಿ ಅಭ್ಯಾಸ ವಿಡಿಯೊ ಕೂಡ ಪ್ರತಿ ದಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಂಚಿ: ಹೆಲಿಕಾಪ್ಟರ್ ಶಾಟ್!(MS Dhoni, helicopter shot) ಮೂಲಕ ಕ್ರಿಕೆಟ್ ಲೋಕದಲ್ಲಿ ಮೋಡಿ ಮಾಡಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಇದೀಗ ಈ ಹೊಡೆತವನ್ನು ತಮ್ಮ ಮನೆಯ(MS Dhoni House) ಒಂದು ಬದಿಯ ಗೋಡೆಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಜತೆಗೆ ಇದರ ಪಕ್ಕದಲ್ಲೇ ಧೋನಿ ಜೆರ್ಸಿ ಸಂಖ್ಯೆ '7' ರ ವಿನ್ಯಾಸವೂ ಇದೆ. ಸದ್ಯ ಧೋನಿ ಮನೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಸೆಲ್ಫಿ ಸ್ಟಾಟ್ ಆಗಿ ಬದಲಾಗಿದೆ.
18ನೇ ಆವೃತ್ತಿಯ ಐಪಿಎಲ್ ಮಾರ್ಚ್ 23 ರಿಂದ ಆರಂಭವಾಗಲಿದೆ. ಅದಾಗಲೇ ಧೋನಿ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಪ್ರತಿ ದಿನ ಸುಮಾರು 4-ರಿಂದ 5 ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಧೋನಿ ಅಭ್ಯಾಸ ವಿಡಿಯೊ ಕೂಡ ಪ್ರತಿ ದಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನನ್ನಾಗಿ ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಂಡಿದೆ. ಆದರೆ, ಧೋನಿ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಮೂಲಗಳ ಪ್ರಕಾರ ಧೋನಿ ಈ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟ್ ಬೀಸಲಿದ್ದಾರೆ ಎಂದು ತಿಳಿದುಬಂದಿದೆ.
MS Dhoni's old bungalow gets iconic makeover featuring jersey number '7'
— Spark Plug (@Versesnvisions) February 8, 2025
A silhouette of the legendary Indian captain is designed into a paneled glass. pic.twitter.com/oDWULCVb7m
ಕಳೆದ 2 ಆವೃತ್ತಿಯಲ್ಲಿ ಧೋನಿ ತಂಡಕ್ಕೆ ಪರ್ಯಾಯ ವಿಕೆಟ್ ಕೀಪರ್ ಇಲ್ಲದ ಕಾರಣ ಮೊಣಕಾಲಿಗೆ ನೋವು ನಿವಾರಕ ಪ್ಲಾಸ್ಟರ್ ಕಟ್ಟಿಕೊಂಡು ಕೀಪಿಂಗ್ ನಡೆಸಿದ್ದರು. ಗಾಯದ ಕಾರಣ ಐಪಿಎಲ್‌ಗೂ ನಿವೃತ್ತಿ ಘೋಷಿಸಲು ಮುಂದಾಗಿದ್ದರು. ಈ ಬಾರಿ ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ. ಈ ಬಾರಿ ತಂಡದಲ್ಲಿ ಪರಿಣಿತ ಕೀಪರ್ ಡೆವೋನ್ ಕಾನ್ವೆ ಇರುವ ಕಾರಣ ಇವರು ಕೀಪಿಂಗ್ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ Champions Trophy: 'ಅಭಿಮಾನಿಯಾಗಿ ತಾಳ್ಮೆಯಿಂದ ಇರುವುದು ಅಸಾಧ್ಯ'- ಎಂಎಸ್ ಧೋನಿ!
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್ ಅಹ್ಮದ್, ಆರ್. ಅಶ್ವಿನ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಖಲೀಲ್ ಅಹ್ಮದ್, ವಿಜಯ್ ಶಂಕರ್, ಸ್ಯಾಮ್ ಕರನ್, ಅಂಶುಲ್ ಕಂಬೋಜ್, ಶೇಕ್ ರಶೀದ್, ಮುಕೇಶ್ ಚೌಧರಿ, ದೀಪಕ್ ಹೂಡಾ, ಗುರುಜಪ್ನೀತ್ ಸಿಂಗ್ ,ನಾಥನ್ ಎಲ್ಲಿಸ್, ಜೇಮಿ ಓವರ್ಟನ್, ಕಮಲೇಶ್ ನಾಗರಕೋಟಿ, ರಾಮಕೃಷ್ಣ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.