Viral News: ಲಿಪ್ ಸ್ಟಡ್ ಮತ್ತು ಕಿವಿಯೋಲೆ ಖರೀದಿಸಲು ತಾಯಿಯ 1.16 ಕೋಟಿ ಮೌಲ್ಯದ ಒಡವೆ ಮಾರಿದ ಕಿʻಲೇಡಿʼ
ಚೀನಾದ ಶಾಂಘೈನಲ್ಲಿ ಹದಿಹರೆಯದ ಹುಡುಗಿಯೊಬ್ಬಳು ಕೇವಲ 680 ರೂಪಾಯಿ ಮೌಲ್ಯದ ಲಿಪ್ ಸ್ಟಡ್ ಹಾಗೂ ಕಿವಿಯೋಲೆ ಖರೀದಿಸಲು ತಾಯಿಯ 1.16 ಕೋಟಿ ಮೌಲ್ಯದ ಆಭರಣಗಳನ್ನು ಮಾರಿದ್ದಾಳಂತೆ. ಈ ವಿಚಾರ ಕೇಳಿ ಆಕೆಯ ತಾಯಿ ಆಘಾತಕ್ಕೊಳಗಾಗಿದ್ದಾರೆ. ಕೊನೆಗೆ ಆ ಚಿನ್ನಾಭರಣಗಳು ತಾಯಿಗೆ ಮರಳಿ ಸಿಕ್ಕಿತೇ? ಇಲ್ಲವೇ? ಎಂಬ ಮಾಹಿತಿ ಇಲ್ಲಿದೆ ನೋಡಿ. ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿದೆ.
![china viral news](https://cdn-vishwavani-prod.hindverse.com/media/images/china_viral_news.max-1280x720.jpg)
![Profile](https://vishwavani.news/static/img/user.png)
ಬೀಜಿಂಗ್: ಫ್ಯಾಶನ್‍ಗಾಗಿ ಹುಡುಗಿಯರು ಎಷ್ಟು ದುಬಾರಿ ವಸ್ತುಗಳನ್ನು ಬೇಕಾದರೂ ಖರೀದಿಸುತ್ತಾರೆ. ಅದರ ಬೆಲೆಯ ಬಗ್ಗೆ ಅವರು ಚಿಂತಿಸುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಚೀನಾದ ಶಾಂಘೈನ ಹುಡುಗಿಯೊಬ್ಬಳು ಕೇವಲ 680 ರೂಪಾಯಿ ಮೌಲ್ಯದ ಲಿಪ್ ಸ್ಟಡ್ ಹಾಗೂ ಕಿವಿಯೋಲೆ ಖರೀದಿಸಲು ತಾಯಿಯ 1.16 ಕೋಟಿ ಮೌಲ್ಯದ ಆಭರಣಗಳನ್ನು ಮಾರಿದ್ದಾಳೆ. ಈ ವಿಚಾರ ಕೇಳಿ ಆಕೆಯ ತಾಯಿ ಆಘಾತಕ್ಕೊಳಗಾಗಿದ್ದಾರೆ. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ವಾಂಗ್ ಎಂಬ ಹೆಸರಿನ ಮಹಿಳೆ ತನ್ನ ಮಗಳು ಲಿ ಒಂದು ಮಿಲಿಯನ್ ಯುವಾನ್ (1.16 ಕೋಟಿ ರೂ.) ಮೌಲ್ಯದ ಆಭರಣಗಳನ್ನು ಕೇವಲ 60 ಯುವಾನ್ (680 ರೂ.) ಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದು ಸಿಕ್ಕಾಪಟ್ಟೆ ಶಾಕ್ ಆಗಿದ್ದಾಳಂತೆ.
ವಾಂಗ್ ತನ್ನ ಜೇಡ್ ಬ್ರೇಸ್ ಲೆಟ್‍ಗಳು, ನೆಕ್ಲೇಸ್‍ಗಳು ಮತ್ತು ಇತರ ಆಭರಣಗಳು ಸೇರಿದಂತೆ ತನ್ನ ದುಬಾರಿ ಚಿನ್ನಾಭರಣಗಳು ಕಣ್ಮರೆಯಾಗಿದೆ ಮನೆತುಂಬಾ ಹುಡುಕಾಡಿದ್ದಾರಂತೆ. ಕೊನೆಗೆ ಸ್ಥಳೀಯ ಮಾರುಕಟ್ಟೆಯಲ್ಲಿನ ಕದ್ದ ಚಿನ್ನಾಭರಣಗಳನ್ನು ರಿಸೈಕ್ಲಿಂಗ್ ಮಾಡುವ ಶಾಂಪ್‍ನಲ್ಲಿ ತನ್ನ ಮಗಳು ಅವುಗಳನ್ನು ಮಾರಾಟ ಮಾಡಿದ್ದಾಳೆ ಎಂಬ ಸತ್ಯ ಆಕೆಗೆ ಗೊತ್ತಾಯಿತಂತೆ. ಗಾಬರಿಗೊಂಡ ವಾಂಗ್ ಈ ಪ್ರಕರಣವನ್ನು ಪುಟುವೊ ಸಾರ್ವಜನಿಕ ಭದ್ರತಾ ಬ್ಯೂರೋದ ವಾನ್ಲಿ ಪೊಲೀಸ್ ಠಾಣೆಗೆ ವರದಿ ಮಾಡಿದ್ದಾಳೆ.
ಏನಿದು ಘಟನೆ?
ಲೀಗೆ ತುಟಿಗಳಿಗೆ ಸ್ಟಡ್ ಮತ್ತು ಫ್ಯಾಶನ್ ಕಿವಿಯೋಲೆಗಳನ್ನು ಹಾಕಬೇಕು ಎನ್ನುವ ಆಸೆ ಇತ್ತಂತೆ. ಇದನ್ನು ತಾಯಿಯ ಬಳಿ ಹೇಳಿದಾಗ ಆಕೆ ಇದನ್ನು ನಿರಾಕರಿಸಿದ್ದಾಳಂತೆ. ಈ ವಿಚಾರಕ್ಕೆ ತಾಯಿ-ಮಗಳ ನಡುವೆ ಗಲಾಟೆ ಕೂಡ ನಡೆದಿತ್ತಂತೆ. ಆದರೆ ಈ ನಡುವೆ ಲೀ ಮಾರುಕಟ್ಟೆಗೆ ಹೋಗಿದ್ದಾಗ ಅಲ್ಲಿ ಲಿಪ್ ಸ್ಟಡ್ ಮತ್ತು ಕಿವಿಯೋಲೆ ಬೆಲೆ 60 ಯುವನ್ ಎಂದು ತಿಳಿದುಕೊಂಡ ಲೀ ತಾನೂ ಲಿಪ್ ಸ್ಟಡ್ ಹಾಕಬೇಕೆಂದು ಪಟ್ಟು ಹಿಡಿದು ತಾಯಿಯ ಚಿನ್ನವನ್ನು ಕದ್ದು ಚಿನ್ನಾಭರಣಗಳನ್ನು ರಿಸೈಕ್ಲಿಂಗ್ ಮಾಡುವ ಶಾಪ್‍ಗೆ ಕೇವಲ 60 ಯುವಾನ್‍ಗೆ ಮಾರಾಟ ಮಾಡಿದ್ದಾಳಂತೆ. ಆದರೆ ಇಲ್ಲಿ ಅವಳು ತಾಯಿಯ ಬಳಿ ಇದಿದ್ದು ರೋಲ್ಡ್ ಗೋಲ್ಡ್ ಎಂದುಕೊಂಡಿದ್ದಳಂತೆ. ಅದು 1.16 ಕೋಟಿ ಮೌಲ್ಯದ ಚಿನ್ನಾಭರಣಗಳು ಎಂಬುದು ಆಕೆಗೆ ತಿಳಿದಿರಲಿಲ್ಲವಂತೆ.
ಈ ಸುದ್ದಿಯನ್ನೂ ಓದಿ: Viral Video: ಚೀನಾದ ಸೂಪರ್ ಮಾರ್ಕೆಟ್‍ನಲ್ಲಿ ಕೇಳಿಬಂತು ಡಾ.ರಾಜ್ ಕುಮಾರ್ ಹಿಟ್ ಹಾಡು!
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಮಾರುಕಟ್ಟೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಾಣೆಯಾದ ಆಭರಣಗಳನ್ನು ಪತ್ತೆಹಚ್ಚಿದ್ದಾರೆ. ಅದೃಷ್ಟವಶಾತ್, ಕೊನೆಗೆ ಆಭರಣಗಳನ್ನು ವಶಪಡಿಸಿಕೊಂಡು ವಾಂಗ್‍ಗೆ ಹಿಂದಿರುಗಿಸಲಾಯಿತು. ಈ ಸುದ್ದಿ ಚೀನಾದ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.