#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Anna Hazare: ವ್ಯಕ್ತಿಯ ನಡತೆ ಮತ್ತು ವಿಚಾರ ಶುದ್ಧವಾಗಿರಬೇಕು: ಅಣ್ಣಾ ಹಜಾರೆ ಟಾಂಗ್!

ಬಹು ನಿರೀಕ್ಷಿತ ದೆಹಲಿ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು,ಬಿಜೆಪಿ ಭಾರೀ ಮುನ್ನಡೆಯನ್ನು ಸಾಧಿಸಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಆಪ್ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಮ್‌ ಆದ್ಮಿ ಸೋಲಿನತ್ತ ಮುಖ ಮಾಡುತ್ತಿರುವ ಬೆನ್ನಲ್ಲೇ ಅಣ್ಣಾ ಹಜಾರೆ ಆಪ್‌ ಪಕ್ಷವನ್ನು ಟೀಕಿಸಿದ್ದು,ಕೇಜ್ರಿವಾಲ್‌ ವಿರುದ್ಧ ಗುಡುಗಿದ್ದಾರೆ.

ದೆಹಲಿ ಚುನಾವಣೆ: ಆಪ್‌ ವಿರುದ್ಧ ಗುಡುಗಿದ ಅಣ್ಣಾ ಹಜಾರೆ!

Anna Hazare

Profile Deekshith Nair Feb 8, 2025 12:03 PM

ನವದೆಹಲಿ: ಬಹು ನಿರೀಕ್ಷಿತ ದೆಹಲಿ ಚುನಾವಣೆಯ (Delhi Election 2025) ಮತ ಎಣಿಕೆ ಪ್ರಾರಂಭವಾಗಿದ್ದು,ಬಿಜೆಪಿ(BJP) ಭಾರೀ ಮುನ್ನಡೆಯನ್ನು ಸಾಧಿಸಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಆಪ್(AAP) 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಮ್‌ ಆದ್ಮಿ ಸೋಲಿನತ್ತ ಮುಖ ಮಾಡುತ್ತಿರುವ ಬೆನ್ನಲ್ಲೇ ಅಣ್ಣಾ ಹಜಾರೆ(Anna Hazare) ಆಪ್‌ ಪಕ್ಷವನ್ನು ಟೀಕಿಸಿದ್ದು, ಅರವಿಂದ್ ಕೇಜ್ರಿವಾಲ್‌ ವಿರುದ್ಧ ಗುಡುಗಿದ್ದಾರೆ.‌ ವ್ಯಕ್ತಿಯ ನಡತೆ ಮತ್ತು ವಿಚಾರ ಶುದ್ಧವಾಗಿರಬೇಕು. ಕೇಜ್ರಿವಾಲ್‌ ನನ್ನ ಮಾತು ಕೇಳಲಿಲ್ಲ. ಹಣ ಮತ್ತು ಲಿಕ್ಕರ್‌ ಹಿಂದೆ ಹೋದರು. ಅವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಟಾಂಗ್‌ ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಮತ್ತು ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಭಾರಿ ಮುನ್ನಡೆ ಸಾಧಿಸುತ್ತಿದ್ದಂತೆ ಹಜಾರೆ ಹಣದ ಹೊಳೆಯಲ್ಲಿ ಮುಳುಗಿ ಹೋಗಿದ್ದ ಅರವಿಂದ್ ಕೇಜ್ರಿವಾಲ್ ಮದ್ಯದತ್ತ ಗಮನಹರಿಸಿದರು. ನನ್ನ ಮಾತು ಕೇಳಲಿಲ್ಲ. ಇಂದು ಮತದಾದರು ಪಾಠ ಕಲಿಸುತ್ತಿದ್ದಾರೆ. ಕೇಜ್ರಿವಾಲ್‌ ನನ್ನ ತತ್ವ ಮತ್ತು ಸಿದ್ಧಾಂತವನ್ನು ತಲೆ ಕೆಳಗೆ ಮಾಡಿದರು. ವ್ಯಕ್ತಿಯ ಆಲೋಚನೆ ಮತ್ತು ನಡವಳಿಕೆ ಶುದ್ಧವಾಗಿರಬೇಕು. ತ್ಯಾಗದ ಗುಣವಿರಬೇಕು ಎಂದು ಹೇಳಿರುವ ಅವರು ಪರೋಕ್ಷವಾಗಿ ಆಪ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



ವ್ಯಂಗ್ಯವಾಡಿದ ಒಮರ್‌ ಅಬ್ದುಲ್ಲಾ

ದೆಹಲಿ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಮತ ಎಣಿಕೆಯಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಇದರ ನಡುವೆ ಇಂಡಿ ಒಕ್ಕೂಟದ ಮಿತ್ರಪಕ್ಷ ನ್ಯಾಷನಲ್​​ ಕಾನ್ಫರೆನ್ಸ್​ ಪಕ್ಷದ ಮುಖ್ಯಸ್ಥ ಮತ್ತು ಜಮ್ಮು ಕಾಶ್ಮೀರ್​ದ ಮುಖ್ಯಮಂತ್ರಿ ಒಮರ್​ ಅಬ್ದುಲ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು. ಇಂಡಿ ಒಕ್ಕೂಟದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Delhi Election 2025: ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ? ಆಪ್‌ಗೆ ಭ್ರಷ್ಟಾಚಾರವೇ ಮುಳುವಾಯ್ತ?

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಭಾರತದ ಮಿತ್ರಪಕ್ಷ ಒಮರ್ ಅಬ್ದುಲ್ಲಾ ಅವರು ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್‌ ಖಾತೆಯಲ್ಲಿ ಆಪ್ ಮತ್ತು ಕಾಂಗ್ರೆಸ್​ ಪಕ್ಷದ ವಿರುದ್ಧ ಕಿಡಿಕಾರಿದರು. . ಸಂತರೊಬ್ಬರ ಮೀಮ್​ ಶೇರ್​ ಮಾಡಿರುವ ಒಮರ್ ಅಬ್ದುಲ್ಲಾ  “ಔರ್ ಲಡೋ ಆಪಾಸ್ ಮೇ!!!” (ಇನ್ನು ಒಳ ಜಗಳ ಮಾಡಿಕೊಳ್ಳಿ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಇಂಡಿಯಾ ಒಕ್ಕೂಟದಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದ ಮತ್ತೊಬ್ಬರಿಗೆ ಲಾಭವಾಗುತ್ತಿದೆ ಎಂದು ಹೇಳಿದ್ದಾರೆ.