Rose Day: ಬರ್ಫಿಯಿಂದ ಹಲ್ವಾದವರೆಗೆ ರೋಸ್ ರೆಸಿಪಿ ಟ್ರೈ ಮಾಡಿ... ಸಂಗಾತಿ ಇಂಪ್ರೆಸ್ ಆಗೋದ್ರಲ್ಲಿ ಡೌಟೇ ಇಲ್ಲ
ನೀವು ಪ್ರೀತಿಸುವವರನ್ನು ಪದಗಳ ಮೂಲಕ ಏನೂ ಹೇಳದೆ ತಮ್ಮ ಪ್ರೀತಿಯನ್ನು ಗುಲಾಬಿ ಹೂವಿನ ಮೂಲಕ ಹೇಳುವ ದಿನವಾಗಿದ್ದು ಈ ದಿನವನ್ನು ಬಹಳಷ್ಟು ಮೆಮೊರೆಬಲ್ ಆಗಿ ನೀವು ಆಚರಣೆ ಮಾಡಬಹುದು. ಗುಲಾಬಿ ಹೂವುಗಳು ಕೇವಲ ಸೌಂದರ್ಯ, ಪ್ರೀತಿ ಮತ್ತು ಭಾವೋದ್ರೇಕದ ಸಂಕೇತ ಮಾತ್ರವಲ್ಲ. ಗುಲಾಬಿ ಹೂವನ್ನು ಬಳಸಿ ರುಚಿಕರವಾದ ಪಾಕ ವಿಧಾನವನ್ನು ಕೂಡ ತಯಾರಿಸಬಹುದು. ನಿಮ್ಮ ಪ್ರೀತಿ ಪಾತ್ರರೊಂದಿಗೆ ರೋಸ್ ಡೇಯಂದು ರುಚಿ ರುಚಿಯಾದ ಸಿಹಿ ಪಾಕ ತಯಾರಿಸಿ ರುಚಿ ಸವಿಯುವ ಮೂಲಕ ರೋಸ್ ಡೇಯನ್ನು ಆಚರಣೆ ಮಾಡಬಹುದು.
![rose day](https://cdn-vishwavani-prod.hindverse.com/media/images/rose_day.max-1280x720.jpg)
![Profile](https://vishwavani.news/static/img/user.png)
ನವದೆಹಲಿ: ಫೆಬ್ರವರಿ ತಿಂಗಳನ್ನು ಪ್ರೇಮಿಗಳ ತಿಂಗಳು(Valentine's Day) ಎಂದು ಕರೆಯಲಾಗುತ್ತದೆ. ಅದರಲ್ಲಿಯೂ ಫೆಬ್ರವರಿ 7 ರಿಂದ 14ರವರೆಗೂ ಪ್ರೇಮಿಗಳಿಗೆ ಪ್ರತಿದಿನ ಹಬ್ಬವಿದ್ದಂತೆ. ಪ್ರೇಮಿಗಳ ದಿನ ಎಂದರೆ ಕೇವಲ ಫೆಬ್ರವರಿ 14 ಮಾತ್ರವಲ್ಲ, ಇದು ಆರಂಭವಾಗುವುದೇ ಫೆಬ್ರುವರಿ 7ರ ರೋಸ್ ಡೇಯಿಂದ (Rose Day).ಈ ದಿನವನ್ನು ಪ್ರತಿ ವರ್ಷವೂ ಫೆಬ್ರವರಿ 7ರಂದು ಆಚರಿಸಲಾಗುತ್ತಿದ್ದು ನೀವು ಪ್ರೀತಿಸುವವರನ್ನು ಪದಗಳ ಮೂಲಕ ಏನೂ ಹೇಳದೆ ತಮ್ಮ ಪ್ರೀತಿಯನ್ನು ಗುಲಾಬಿ ಹೂವಿನ ಮೂಲಕ ಹೇಳುವ ದಿನವಾಗಿದ್ದು ಈ ದಿನವನ್ನು ಬಹಳಷ್ಟು ಮೆಮೊರೆಬಲ್ ಆಗಿ ನೀವು ಆಚರಣೆ ಮಾಡಬಹುದು.
ಗುಲಾಬಿ ಹೂವುಗಳು ಕೇವಲ ಸೌಂದರ್ಯ, ಪ್ರೀತಿ ಮತ್ತು ಭಾವೋದ್ರೇಕದ ಸಂಕೇತ ಮಾತ್ರವಲ್ಲ. ಗುಲಾಬಿ ಹೂವನ್ನು ಬಳಸಿ ರುಚಿಕರವಾದ ಖಾದ್ಯವನ್ನೂ ತಯಾರಿಸಬಹುದು. ನಿಮ್ಮ ಪ್ರೀತಿ ಪಾತ್ರರೊಂದಿಗೆ ರೋಸ್ ಡೇ ಯಂದು ರುಚಿ ರುಚಿಯಾದ ಸಿಹಿ ಪಾಕ ತಯಾರಿಸಿ ರುಚಿ ಸವಿಯುವ ಮೂಲಕ ರೋಸ್ ಡೇಯನ್ನು ಆಚರಣೆ ಮಾಡಬಹುದು.
ರೋಸ್ ಬರ್ಫಿ:
![rose burfy](https://cdn-vishwavani-prod.hindverse.com/media/images/rose_burfy.width-800.jpg)
ಬೇಕಾಗುವ ಪದಾರ್ಥಗಳು: ಕಾಟೇಜ್ ಚೀಸ್, ಸಕ್ಕರೆ, ಅಗತ್ಯಕ್ಕೆ ತಕ್ಕಂತೆ ಪಿಸ್ತಾ, ನಾಲ್ಕು ಹನಿ ಗುಲಾಬಿ ಸಾರ, ಒಂದು ಕಪ್ ಖೋಯಾ, ಒಣಗಿದ ಗುಲಾಬಿ ದಳಗಳು.
ರುಚಿಕರ ಸಿಹಿ ಪಾಕ ವಿಧಾನ ತಯಾರಿಸಲು ಮೊದಲಿಗೆ ಪನೀರ್ ಅನ್ನು ಕಟ್ ಮಾಡಿ ಇಡಿ. ನಂತರ ಒಂದು ಬೌಲ್ ತೆಗೆದುಕೊಂಡು ಪುಡಿ ಮಾಡಿದ ಪನೀರ್ ಗೆ ಖೋಯಾ ಪುಡಿ, ತೆಂಗಿನ ಸಕ್ಕರೆ ಮತ್ತು ರೋಸ್ ಎಸೆನ್ಸ್ ಸೇರಿಸಿ. ನಂತರ ಈ ಮಿಶ್ರಣಕ್ಕೆ ಒಂದಕ್ಕೆ ತಿಳಿ ಗುಲಾಬಿ ಆಹಾರ ಬಣ್ಣ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣವನ್ನು ಫ್ರಿಜ್‌ನಲ್ಲಿ ಸುಮಾರು ಒಂದು ಗಂಟೆ ಇರಿಸಿ ನಂತರ ಬರ್ಫಿಯನ್ನು ಬೇಕಾದ ಆಕಾರದಲ್ಲಿ ಕತ್ತರಿಸಿ. ನಂತರ ಒಣ ಗುಲಾಬಿ ದಳಗಳು, ಮತ್ತು ಪಿಸ್ತಾಗಳಿಂದ ಅಲಂಕರಿಸಿ.
ರೋಸ್ ಕುಕೀಸ್:
![Rose Cookies](https://cdn-vishwavani-prod.hindverse.com/media/images/Rose_Cookies.width-800.jpg)
ಬೇಕಾಗುವ ಪದಾರ್ಥಗಳು: ಮೈದಾ,ತೆಂಗಿನ ಹಾಲು,ಅಕ್ಕಿ ಹಿಟ್ಟು,ಸಕ್ಕರೆ,ಮೊಟ್ಟೆ,ಉಪ್ಪು ,ವೆನಿಲ್ಲಾ ಎಸೆನ್ಸ್ 1 ಟೀಸ್ಪೂನ್ ,ಬೇಕಿಂಗ್ ಪೌಡರ್,ಎಣ್ಣೆ,
ಮೊದಲಿಗೆ ಮೈದಾ, ಅಕ್ಕಿ ಹಿಟ್ಟು, ತೆಂಗಿನ ಹಾಲು, ಸಕ್ಕರೆ, ಮೊಟ್ಟೆ, ಉಪ್ಪು, ವೆನಿಲ್ಲಾ ಎಸೆನ್ಸ್ ಮತ್ತು ಬೇಕಿಂಗ್ ಪೌಡರ್ ಸೇರಿಸಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಸಾಕಷ್ಟು ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿ ಆದಾಗ ರೋಸ್ ಕುಕೀಸ್ ಅಚ್ಚನ್ನು ಎಣ್ಣೆ ಒಳಗೆ ಕಾಯಲು ಇಡಿ.ಬಳಿಕ ಕುಕೀಸ್, ಅಚ್ಚಿನಿಂದ ಬಿಡುವರೆಗೂ ಕಾಯಿರಿ, ಎರಡೂ ಕಡೆ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿದರೆ ರೋಸ್ ಕುಕೀಸ್ ರೆಡಿ.
ರೋಸ್ ಫಿರ್ನಿ ಟಾರ್ಟ್:
![Rose Phirni Tart](https://cdn-vishwavani-prod.hindverse.com/media/images/Rose_Phirni_Tart.width-800.jpg)
ಬೇಕಾಗುವ ಪದಾರ್ಥಗಳು: ಗುಲಾಬಿ ಸಿರಪ್,ಒಣಗಿದ ಗುಲಾಬಿ ದಳಗಳು, ನೆನೆಸಿದ ಅಕ್ಕಿ, ಹಾಲು ಸಕ್ಕರೆ, ಬಾದಾಮಿ, ಏಲಕ್ಕಿ ಪುಡಿ,ಪಿಸ್ತಾ
ಮೊದಲಿಗೆ ನೆನೆಸಿದ ಅಕ್ಕಿಯನ್ನು ಬ್ಲೆಂಡರ್ ಜಾರ್‌ಗೆ ಹಾಕಿ ರುಬ್ಬಿ ಕೊಳ್ಳಿ.ಬಳಿಕ ರುಬ್ಬಿದ ಅಕ್ಕಿಯನ್ನು ಸೇರಿಸಿ ಮತ್ತು 8-10 ನಿಮಿಷಗಳ ಕಾಲ ನಿರಂತರವಾಗಿ ಬೇಯಿಸಿ.ಆ ಮಿಶ್ರಣಕ್ಕೆ ರೋಸ್ ಸಿರಪ್ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಕರಗುವ ತನಕ ಬೇಯಿಸಿ.ಬಳಿಕ ಅದಕ್ಕೆ ಒಣಗಿದ ಗುಲಾಬಿ ದಳ ಬಾದಾಮಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತಣ್ಣಗಾಗಲು ಪಕ್ಕಕ್ಕೆ ಇರಿಸಿ.ಬಳಿಕ ತಯಾರಾದ ಈ ಮಿಶ್ರಣಕ್ಕೆ ಪಿಸ್ತಾ, ಗುಲ್ಕಂಡ್ ಬಾಲ್, ಬಾದಾಮಿ, ಗೋಲ್ಡ್ ವರ್ಕ್ ನಿಂದ ಅಲಂಕರಿಸಿ ಸರ್ವ್ ಮಾಡಿ.
ರೋಸ್ ಖೀರ್:
![Rose Kheer](https://cdn-vishwavani-prod.hindverse.com/media/images/Rose_Kheer.width-800.jpg)
ಬೇಕಾಗುವ ಪದಾರ್ಥಗಳು: ಹಾಲು,ಅಕ್ಕಿ, ತುಪ್ಪ, ಖೋಯಾ/ಮಾವಾ, ಏಲಕ್ಕಿ ಪುಡಿ, ಸಕ್ಕರೆ, ಗುಲಾಬಿ ಸಿರಪ್, ಗುಲಾಬಿ ದಳದ ಜಾಮ್
ಮೊದಲು ಅಕ್ಕಿಯನ್ನು ನೆನೆಹಾಕಿ ಬೇಯಿಸಿ. ಬಳಿಕ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಹಾಲನ್ನು ಕುದಿಸಿ,ಅದಕ್ಕೆ ಮಾಡಿದ ಅನ್ನವನ್ನು ಸೇರಿಸಿ ಮತ್ತು ಅನ್ನ ಸಿದ್ಧವಾಗುವವರೆಗೆ ಬೇಯಿಸಿ.ನಂತರದಲ್ಲಿ ಹಾಲು, ಖೋಯಾ/ಮಾವಾ, ಏಲಕ್ಕಿ ಪುಡಿ ಮತ್ತು ಸಕ್ಕರೆಯನ್ನು ಸೇರಿಸುವ ಮೂಲಕ ರುಚಿ ಹೆಚ್ಚಿಸಿ.ನಂತರದಲ್ಲಿ ಗುಲಾಬಿ ಬಣ್ಣ ಮತ್ತು ಸುವಾಸನೆಗಾಗಿ ರೋಸ್ ಫ್ಲೇವರ್ ಸಿರಪ್ ಮತ್ತು ರೋಸ್ ಪೆಟಲ್ ಜಾಮ್ ಅನ್ನು ಬೆರೆಸಿ. ಗುಲಾಬಿ ಹೂವುಗಳಿಂದ ಅಲಂಕರಿಸಿ.
ಇದನ್ನು ಓದಿ:Health Tips: ನೀರು ಕುಡಿದ ಕೂಡಲೇ ಈ ತೊಂದರೆ ಕಾಣಿಸ್ತಿದ್ಯಾ? ಕಿಡ್ನಿ ಸಮಸ್ಯೆ ಇವೆ ಎನ್ನುವ ಲಕ್ಷಣಗಳಿವು!
ಗುಲಾಬಿ ಹಲ್ವಾ:
![rose halwa](https://cdn-vishwavani-prod.hindverse.com/media/images/rose_halwa.width-800.jpg)
ಬೇಕಾಗುವ ಪದಾರ್ಥಗಳು: ಗುಲಾಬಿ ಸಿರಪ್,ಉಪ್ಪು,ತುಪ್ಪ,ಕಾರ್ನ್ ಕತ್ತರಿಸಿದ ಬಾದಾಮಿ, ಗೋಡಂಬಿ, ಪಿಸ್ತಾ, ತಾಜಾ ಗುಲಾಬಿ ದಳಗಳು,
ಒಂದು ಪಾತ್ರೆಯಲ್ಲಿ ನೀರು, ಜೋಳ ರೋಸ್ ಸಿರಪ್ ಮತ್ತು ಚಿಟಿಕೆ ಯಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ ಮಧ್ಯಮ ಉರಿಯಲ್ಲಿ ಬೇಯಿಸಿ, ಬಳಿಕ ತುಪ್ಪವನ್ನು ಸೇರಿಸಿ ಸಂಪೂರ್ಣವಾಗಿ ಹೀರಿಕೊಳ್ಳುವವರೆಗೆ ಮಿಶ್ರಣ ಮಾಡಿ.ಬಳಿಕ ಗೊಡಂಬಿ ಬೀಜಗಳನ್ನು ಸೇರಿಸಿ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಹಲ್ವಾವನ್ನು ಗ್ರೀಸ್ ಮಾಡಿದ ಟ್ರೇಗೆ ವರ್ಗಾಯಿಸಿ.ಬಳಿಕ ಗುಲಾಬಿ ಹಲ್ವಾವನ್ನು ತುಂಡುಗಳಾಗಿ ಕತ್ತರಿಸಿ ಪಿಸ್ತಾ, ಗುಲಾಬಿ ದಳಗಳಿಂದ ಅಲಂಕರಿಸಿ.