Valentine's Week 2025: ವಾಲೈಂಟೆನ್ ವಾರದ ಎರಡನೇ ದಿನ – ಪ್ರಪೋಸ್ ಮಾಡೋ ದಿನ
ವಾಲೈಂಟೈನ್ಸ್ ಡೇ ಹತ್ತಿರವಾಗುತ್ತಿದೆ. ಪ್ರೇಮಿಗಳು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ತಮ್ಮ ಸಂಗಾತಿಗೆ ತಿಳಿಸುವ ಮೂಲಕ ಪ್ರಣಯ ಪಕ್ಷಿಗಳು ಒಂದಾಗುವ ಮಹತ್ವದ ಘಟ್ಟವೇ ಪ್ರಪೋಸ್ ಮಾಡುವುದು. ವಾಲೈಂಟೆನ್ ವಾರದ ಎರಡನೇ ದಿನವನ್ನು ಪ್ರಪೋಸ್ ಡೇ ಎಂದು ಕರೆಯುತ್ತಾರೆ. ಹಾಗಾದ್ರೆ ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ..!
![ಪ್ರಪೋಸ್ ಡೇ ಬಗ್ಗೆ ನಿಮಗೆಷ್ಟು ಗೊತ್ತು..?](https://cdn-vishwavani-prod.hindverse.com/media/original_images/propose_day.jpg)
ಇಂದು ಪ್ರೇಮಿಗಳ ವಾರದ ಎರಡನೇ ದಿನವಾಗಿದ್ದು, ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ.
![Profile](https://vishwavani.news/static/img/user.png)
ವ್ಯಾಲೆಂಟೈನ್ ವೀಕ್ ನ (Valentine's Week) ಎರಡನೇ ದಿನವಾದ ಇಂದು ಪ್ರೊಪೋಸ್ ಡೇ (Propose Day) ಎಂದು ಆಚರಿಸಲಾಗುತ್ತದೆ. ಮೊದಲ ದಿನ ಪ್ರೀತಿಯ ಸಂಕೇತವಾಗಿರುವ ಗುಲಾಬಿ ನೀಡಿ ಪ್ರಣಯದ ಜೀವನಕ್ಕೆ ಅಡಿಪಾಯ ಹಾಕುವ ಪ್ರೇಮಿಗಳು ಇಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ತಮ್ಮ ಸಂಗಾತಿಗೆ ತಿಳಿಸುವ ಮೂಲಕ ಒಲವಿನ ಹೊಸ ಭಾಷ್ಯ ಬರೆಯುತ್ತಾರೆ.
ಮನಸ್ಸಿನಲ್ಲೇ ಪ್ರೀತಿಯ ಹೂ ಬೆಳೆಸಿಕೊಂಡ ಪ್ರೇಮಿಗಳು ಅದನ್ನು ತಮ್ಮ ಪ್ರೀತಿಪಾತ್ರರಿಗೆ ತಿಳಿಸಲು ಒಳ್ಳೆಯ ಕ್ಷಣ ಅಥವಾ ಸಂದರ್ಭಕ್ಕಾಗಿ ಕಾಯುತ್ತಿರುತ್ತಾರೆ. ಅಂತವರಿಗೆ ಈ ಪ್ರಪೋಸ್ ಡೇ ವರದಾನ. ಬರೀ ಪ್ರೇಮಿಗಳೆಂದಲ್ಲ, ಒಂಟಿಯಾಗಿರುವವರು ಕೂಡಾ ಈ ದಿನ ಪ್ರೀತಿ ನಿವೇದಿಸಿಕೊಳ್ಳುತ್ತಾರೆ. ಭವಿಷ್ಯದ ಸುದೀರ್ಘ ಕ್ಷಣಗಳನ್ನು ಜೊತೆಯಾಗಿ ಕಳೆಯುವ ವಾಗ್ದಾನದೊಂದಿಗೆ ಈ ಪ್ರಪೋಸ್ ಡೇ ಹೊಸ ಮೆರುಗನ್ನು ಪಡೆದುಕೊಳ್ಳುತ್ತದೆ.
ಇದನ್ನೂ ಓದಿ: Valentines Week Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ರೋಸ್ ಪ್ರಿಂಟೆಡ್ ಔಟ್‌ಫಿಟ್ಸ್
ಹಾಗದ್ರೆ ಬನ್ನಿ ಈ ದಿನ ಹೇಗೆ ಪ್ರಾರಂಭವಾಯಿತು, ಇದರ ಹಿನ್ನಲೆ ಏನು ಎಂಬುದನ್ನು ತಿಳಿದುಕೊಳ್ಳೋಣ:
ಪ್ರಪೋಸ್ ಡೇ ಪ್ರಾರಂಭದ ಹಿಂದೆ ಹಲವು ಕಾರಣಗಳಿವೆ. 1477 ರಲ್ಲಿ, ಆಸ್ಟ್ರಿಯಾದ ಆರ್ಚ್ ಡ್ಯೂಕ್ ಮ್ಯಾಕ್ಸಿಮಿಲಿಯನ್ , ತನ್ನ ಪ್ರೀತಿಯ ಬರ್ಗಂಡಿಯ ಮೇರಿಗೆ ವಜ್ರದ ಉಂಗುರವನ್ನು ನೀಡಿ ಪ್ರಪೋಸ್ ಮಾಡಿದರು ಎಂದು ಹೇಳಲಾಗುತ್ತದೆ. 1816 ರಲ್ಲಿ, ರಾಜಕುಮಾರಿ ಷಾರ್ಲೆಟ್ ತನ್ನ ಭಾವಿ ಪತಿಗೆ ಪ್ರಪೋಸ್ ಮಾಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಅಂದಿನಿಂದ, ವ್ಯಾಲೆಂಟೈನ್ಸ್ ವೀಕ್ ನ ಎರಡನೇ ದಿನವನ್ನು ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ. ಇನ್ನೊಂದು ದಂತಕಥೆಯ ಪ್ರಕಾರ 1816ರಲ್ಲಿ ರಾಜಕುಮಾರಿ ಷಾರ್ಲೆಟ್ ಅವರೊಂದಿಗೆ ವಿವಾಹ ನಿಶ್ಚಯವಾದ ದಿನ ಇದು ಎಂದು ಹೇಳಲಾಗುತ್ತದೆ.
ಪ್ರಪೋಸ್ ಡೇ ಆಚರಿಸುವ ಹಿಂದಿನ ಉದ್ದೇಶವೆಂದರೆ ನಿಮ್ಮ ಪ್ರೀತಿಯನ್ನು ಯಾರ ಮುಂದೆಯಾದರೂ ವ್ಯಕ್ತಪಡಿಸುವುದು. ಯಾವುದೇ ಹೊಸ ಸಂಬಂಧವನ್ನು ಪ್ರಾರಂಭಿಸಲು ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲು ಇದು ಕಾರಣವಾಗಿದೆ. ಅದೇ ಸಮಯದಲ್ಲಿ, ಸಂಬಂಧವನ್ನು ಬಲಪಡಿಸಲು ಮತ್ತು ಸಂಗಾತಿಗೆ ವಿಶೇಷವಾದದ್ದನ್ನು ಮಾಡಲು ಈ ದಿನ ತುಂಬಾ ಮಹತ್ವದ್ದಾಗಿದೆ.
ಅದೇನೇ ಇರಲಿ, ಪ್ರಪೋಸ್ ಡೇ ಎಂಬುದು ಒಂದು ಅದ್ಭುತ ದಿನ. ಮನ ಭಾವನೆಗಳನ್ನು ಮನಸ್ಸಿನಲ್ಲೇ ಹುದುಗಿಟ್ಟುಕೊಳ್ಳುವ ಬದಲು ನೇರವಾಗಿ ನಿಮ್ಮ ಮನ ಮೆಚ್ಚಿದ ವ್ಯಕ್ತಿ ಎದುರು ನಿಮ್ಮ ಪ್ರೇಮವನ್ನು ವ್ಯಕ್ತಪಡಿಸಿ. ನಿಮ್ಮ ಪ್ರೇಮ ಪಯಣಕ್ಕೆ ನಾಳೆ ಎಂಬುದು ಹೊಸ ಹಾದಿ ಬರೆಯುವಂತಾಗಲಿ. ಹ್ಯಾಪಿ ಪ್ರಪೋಸ್ ಡೇ.