IPL 2025: ಇಬ್ಬರು ದಿಗ್ಗಜ ಆಟಗಾರರ ದಾಖಲೆ ಸರಿಗಟ್ಟಿದ ಭುವನೇಶ್ವರ್
ಭುವನೇಶ್ವರ್ ಅವರಿಗೆ ಚಾವ್ಲಾ ದಾಖಲೆ ಮುರಿಯಲು ಇನ್ನು 10 ವಿಕೆಟ್ ಅಗತ್ಯವಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಭುವಿ ಒಂದು ವಿಕೆಟ್ ಪಡೆದರೆ ಬ್ರಾವೊ ದಾಖಲೆ ಪತನಗೊಳ್ಳಲಿದೆ. ಅಶ್ವಿನ್ ಪ್ರಸಕ್ತ ಐಪಿಎಲ್ ಆಡುತ್ತಿರುವ ಕಾರಣ ಭುವಿ ಜತೆ ಅವರು ಕೂಡ ತೀವ್ರ ಪೈಪೋಟಿ ನಡೆಸಲಿದ್ದಾರೆ.


ಬೆಂಗಳೂರು: ಗುಜರಾತ್ ಟೈಟಾನ್ಸ್(RCB vs GT) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ(RCB) ಸೋಲು ಕಂಡರೂ ವೇಗಿ ಭುವನೇಶ್ವರ್ ಕುಮಾರ್(Bhuvneshwar Kumar) ಒಂದು ವಿಕೆಟ್ ಕೀಳುವ ಮೂಲಕ ದಿಗ್ಗಜರಾದ ಆರ್.ಅಶ್ವಿನ್ ಮತ್ತು ಡ್ವೇನ್ ಬ್ರಾವೊ ಅವರ ಐಪಿಎಲ್ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ವಿಕೆಟ್ ಕೀಳುವ ಮೂಲಕ ಭವನೇಶ್ವರ್ ಅವರು ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಜಂಟಿ ಮೂರನೇ ಬೌಲರ್ ಎನಿಸಿಕೊಂಡರು.
ಸದ್ಯ ಭುವನೇಶ್ವರ್, ಮಾಜಿ ಆಟಗಾರ ಡ್ವೇನ್ ಬ್ರಾವೊ ಮತ್ತು ಆರ್ ಅಶ್ವಿನ್ ತಲಾ 183 ವಿಕೆಟ್ ಕಡೆವಿದ್ದಾರೆ. ದಾಖಲೆ ಯುಜವೇಂದ್ರ ಚಹಲ್ ಹೆಸರಿನಲ್ಲಿದೆ. ಚಹಲ್ 206 ವಿಕೆಟ್ ಕಿತ್ತಿದ್ದಾರೆ. 192 ವಿಕೆಟ್ ಕಿತ್ತಿರುವ ಪಿಯೂಷ್ ಚಾವ್ಲಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಭುವನೇಶ್ವರ್ ಅವರಿಗೆ ಚಾವ್ಲಾ ದಾಖಲೆ ಮುರಿಯಲು ಇನ್ನು 10 ವಿಕೆಟ್ ಅಗತ್ಯವಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಭುವಿ ಒಂದು ವಿಕೆಟ್ ಪಡೆದರೆ ಬ್ರಾವೊ ದಾಖಲೆ ಪತನಗೊಳ್ಳಲಿದೆ. ಅಶ್ವಿನ್ ಪ್ರಸಕ್ತ ಐಪಿಎಲ್ ಆಡುತ್ತಿರುವ ಕಾರಣ ಭುವಿ ಜತೆ ಅವರು ಕೂಡ ತೀವ್ರ ಪೈಪೋಟಿ ನಡೆಸಲಿದ್ದಾರೆ.
ಅತ್ಯಧಿಕ ಐಪಿಎಲ್ ವಿಕೆಟ್ ಕಿತ್ತ ಟಾಪ್ 10 ಬೌಲರ್
ಯಜುವೇಂದ್ರ ಚಹಲ್-206*
ಪಿಯೂಷ್ ಚಾವ್ಲಾ-192
ಭುವನೇಶ್ವರ್ ಕುಮಾರ್-183 *
ಡ್ವೇನ್ ಬ್ರಾವೊ-183
ಆರ್ ಅಶ್ವಿನ್-183*
ಸುನೀಲ್ ನಾರಾಯಣ್-181*
ಅಮೀತ್ ಮಿಶ್ರಾ-174
ಲಸೀತ್ ಮಾಲಿಂಗ-170
ಜಸ್‌ಪ್ರೀತ್ ಬುಮ್ರಾ-165*
ರವೀಂದ್ರ ಜಡೇಜಾ-161*
ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ
8 ವಿಕೆಟ್ ಸೋಲು
ಬುಧವಾರ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ(M Chinnaswamy Stadium)ನಲ್ಲಿ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(RCB vs GT) ವಿರುದ್ಧ ಆರ್‌ಸಿಬಿ 8 ವಿಕೆಟ್ ಅಂತರದ ಸೋಲು ಕಂಡಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಆರಂಭಿಕ ಆಘಾತದ ಹೊರತಾಗಿಯೂ 169 ರನ್ ಬಾರಿಸಿತು. ಗುರಿ ಬೆನ್ಬಟ್ಟಿದ ಗುಜರಾತ್ 17.5 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ನಷ್ಟಕ್ಕೆ 170 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತ್ತು. ಭುವನೇಶ್ವರ್ 4 ಓವರ್ ಬೌಲಿಂಗ್ ನಡೆಸಿ 23ರನ್‌ಗೆ ಒಂದು ವಿಕೆಟ್ ಕಿತ್ತರು.