ತಾಲ್ಲೂಕು ಕಛೇರಿಯತ್ತ ಸುಳಿಯದ ಅಧಿಕಾರಿಗಳು ; ಪ್ರಮಾಣಪತ್ರಗಳಿಗೆ ರೈತರ ಅಲೆದಾಟ
ಗ್ರಾಮಾಡ ಳಿತಾಧಿಕಾರಿಗಳ ಅನಿರ್ದಿಷ್ಟ ಮುಷ್ಕರದಿಂದಾಗಿ ತಾಲೂಕು ಕಚೇರಿಗೆ ನಿತ್ಯವೂ ಒಂದಿ ಲ್ಲೊಂದು ಕೆಲಸಕ್ಕೆ ಬರುವ ಜನಸಾಮಾನ್ಯರಿಗೆ ಭಾರೀ ಕಿರಿಕಿರಿಯಾಗಿದೆ. ಕೋರ್ಟು, ಶಾಲೆ, ರೇಷನ್ ಕಾರ್ಡು, ಖಾತೆ ಪಹಣಿ ಹೀಗೆ ವಿವಿಧ ಕಾರಣಗಳಿಗಾಗಿ ಬೇಕಾ ಗುವ ಪ್ರಮಾಣ ಪತ್ರ ಗಳನ್ನು ಪಡೆಯಲು ಸರಕಾರಕ್ಕೆ ಹಣ ತುಂಬಿದರೂ ದಾಖಲಾತಿ ಪಡೆಯಲಾಗದೆ, ಸುಮ್ಮನಿರ ಲಾಗದ ಪರಿಸ್ಥಿತಿ ಏರ್ಪಟ್ಟಿದೆ

ಮುಷ್ಕರ ನಿರತ ಗ್ರಾಮ ಅಧಿಕಾರಿಗಳ ಚಿತ್ರ

ಚಿಕ್ಕಬಳ್ಳಾಪುರ: ಗ್ರಾಮಾಡಳಿತಾಧಿಕಾರಿಗಳು ಕಳೆದ ಎರಡು ವಾರಗಳಿಂದ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಹೂಡಿರುವ ಪರಿಣಾಮ ಸಾರ್ವಜನಿ ಕರ ಕೆಲಸ ಕಾರ್ಯಗಳು ಪ್ರಗತಿ ಕಾಣದೆ ತುಂಬಾ ತೊಂದರೆಯಾಗಿದೆ. ಹೌದು ಗ್ರಾಮಾಡ ಳಿತಾಧಿಕಾರಿಗಳ ಅನಿರ್ದಿಷ್ಟ ಮುಷ್ಕರದಿಂದಾಗಿ ತಾಲೂಕು ಕಚೇರಿಗೆ ನಿತ್ಯವೂ ಒಂದಿ ಲ್ಲೊಂದು ಕೆಲಸಕ್ಕೆ ಬರುವ ಜನಸಾಮಾನ್ಯರಿಗೆ ಭಾರೀ ಕಿರಿಕಿರಿಯಾಗಿದೆ. ಕೋರ್ಟು, ಶಾಲೆ, ರೇಷನ್ ಕಾರ್ಡು, ಖಾತೆ ಪಹಣಿ ಹೀಗೆ ವಿವಿಧ ಕಾರಣಗಳಿಗಾಗಿ ಬೇಕಾ ಗುವ ಪ್ರಮಾಣ ಪತ್ರಗಳನ್ನು ಪಡೆಯಲು ಸರಕಾರಕ್ಕೆ ಹಣ ತುಂಬಿದರೂ ದಾಖಲಾತಿ ಪಡೆಯಲಾಗದೆ, ಸುಮ್ಮನಿರಲಾಗದ ಪರಿಸ್ಥಿತಿ ಏರ್ಪಟ್ಟಿದೆ.
ಇದನ್ನೂ ಓದಿ:Chikkaballapur News: ಮಂಚನಬಲೆ ಶ್ರೀನಿವಾಸ್ ಎತ್ತರ ಜಿಗಿತದ ತೀರ್ಪುಗಾರರಾಗಿ ಭಾಗಿಯಾಗಿ ರಾಜ್ಯಕ್ಕೆ ಕೀರ್ತಿ
ಸರಕಾರ ಮತ್ತು ಜಿಲ್ಲಾಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸುವ ಮೂಲಕ ಕಂದಾಯ ಇಲಾಖೆಯನ್ನೇ ನಂಬಿ ಬದುಕುತ್ತಿರುವ ರೈತಾಪಿಗಳಿಗೆ, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯಿಂದ ಬಿಡುಗಡೆ ನೀಡಬೇಕಾಗಿದೆ ಎಂಬುದು ಜನತೆಯ ಆಗ್ರಹವಾಗಿದೆ.

ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕು ಕಚೇರಿಯಲ್ಲಿ ಸಿಗಬೇಕಾಗುವ ಜಾತಿ-ಆದಾಯ, ವಾಸಸ್ಥಳ, ವ್ಯವಸಾಯಗಾರ, ವಂಶವೃಕ್ಷ, ಬೆಳೆ ದೃಢೀಕರಣ, ಭೋನೋಫೈಡ್ ಸಣ್ಣರೈತರ ಪ್ರಮಾಣಪತ್ರ. ಭೂರಹಿತ-ಪ್ರಮಾಣಪತ್ರ ಮತ್ತಿತ್ತರ ಪ್ರಮಾಣ ಪತ್ರಗಳಿಗೆ ಗ್ರಾಮ ಆಡಳಿತಾಧಿಕಾರಿಗಳೇ ಸಹಿ ಹಾಕಬೇಕಾಗಿದೆ. ಇವರ ಗೈರು ಹಾಜರಿಯಲ್ಲಿ ಈ ಯಾವ ದಾಖಲೆಗಳು ಜನರ ಕೈಗೆ ದೊರೆಯುತ್ತಿಲ್ಲ.ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇವರು ಮುಷ್ಕರ ಮುಂದುವರೆಸುವುದಾರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಜನದಂಗೆಯೇಳುವ ಕಾಲ ದೂರವಿಲ್ಲ ಎನ್ನುವುದು ರೈತ ಬೈರೇಗೌಡರ ಎಚ್ಚರಿಕೆಯಾಗಿದೆ.
ಮೊದಲೇ ಕಂದಾಯ ಇಲಾಖೆ ಮೇಲೆ ಜನತೆ ನಂಬಿಕೆ ಕಳೆದುಕೊಂಡಿದ್ದಾರೆ.ಮುಷ್ಕರ ಇಲ್ಲದ ಕಾಲದಲ್ಲಿಯೂ ಕೂಡ ಅಧಿಕಾರಿಗಳು ಸಾರ್ವಜನಿಕರ ಕೆಲಸಕ್ಕೆ ಅನಗತ್ಯ ವಿಳಂಭ ಮಾಡುವುದು ಲೋಕಸತ್ಯ.ಇನ್ನು ಮುಷ್ಕರಲ್ಲಿದ್ದರಂತೂ ಹೇಳತೀರದು. ಆದಷ್ಟು ಬೇಗೆ ಸರಕಾರ ಇದಕ್ಕೆ ಇತಿಶ್ರೀ ಹಾಡುವ ಮೂಲಕ ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟ ಗಳಿಂದ ದೂರ ಮಾಡಬೇಕು ಎಂದು ಒತ್ತಾಯಿಸಿದರು.