ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಫೆಬ್ರವರಿ 24ರಿಂದ ಮುದ್ದೇನಹಳ್ಳಿಯಲ್ಲಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ 2025ನೇ ಸಾಲಿನ ಅಖಿಲ ಭಾರತ ಕುಲಪತಿಗಳ ಸಮ್ಮೇಳನ

ತಾಂತ್ರಿಕ ಶಿಕ್ಷಣ ಮತ್ತು ನೈತಿಕ ಮೌಲ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸಲು ವಾಗಿ ಅತ್ಯವಶ್ಯಕ ಎಂದೆನಿಸುವ, ಧರ್ಮ (ಸದಾಚಾರದ ಪಾಲನೆ), ವಿದ್ಯೆ ಮತ್ತು ಸಮಾಜ ಸೇವೆ ಗಳಂತಹ ಈ ಮೂರು ಪ್ರಮುಖ ವಿಚಾರಗಳ ಕುರಿತಾಗಿ ಅನೇಕ ಶಿಕ್ಷಣ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮಗಳೇ ಮೊದಲಾದ ವಿಶೇಷಗಳು ಜರುಗಲಿವೆ.

ಭಾರತೀಯ ಮೌಲ್ಯಾಧಾರಿತ ಶಿಕ್ಷಣ ಪದ್ಧತಿ ಪರಿಕಲ್ಪನೆಯ ಅಡಿಯಲ್ಲಿ ಸಮಾವೇಶ

ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಚಿತ್ರ.

Profile Ashok Nayak Feb 23, 2025 9:15 PM

ಚಿಕ್ಕಬಳ್ಳಾಪುರ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶ್ರೀಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಅಖಿಲ ಭಾರತ ಕುಲಪತಿಗಳ ಸಮ್ಮೇಳನವನ್ನು ಆಯೋಜಿಸಿದ್ದು ಭಾರತೀಯ ಮೌಲ್ಯಾಧಾರಿತ ಶಿಕ್ಷಣ ಪದ್ಧತಿ ಪರಿಕಲ್ಪನೆಯ ಅಡಿಯಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಐತಿಹಾಸಿಕ ಸಮ್ಮೇಳನದಲ್ಲಿ 15 ರಾಜ್ಯಗಳ ಸುಮಾರು 50 ಕುಲಪತಿಗಳು ಭಾಗವಹಿಸಲಿದ್ದಾರೆ. ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ 2025 ರ ಫೆಬ್ರವರಿ 24 ಸೋಮವಾರದಂದು ಅಖಿಲ ಭಾರತ ಕುಲಪತಿಗಳ ಸಮ್ಮೇಳನ ನಡೆಯು ತ್ತಿದ್ದು ಭಾರತೀಯ ಉನ್ನತ ಶಿಕ್ಷಣ ರಂಗವನ್ನು ಮರು ರೂಪಿಸುವ ಪರಿವರ್ತಕ ಉಪಕ್ರಮ ವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: Chikkaballapur News: ರೈತರಿಗೆ ಸದಸ್ಯತ್ವ ನೀಡದೆ ಏಕಪಕ್ಷ ಧೋರಣೆ

ತಾಂತ್ರಿಕ ಶಿಕ್ಷಣ ಮತ್ತು ನೈತಿಕ ಮೌಲ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಅತ್ಯವಶ್ಯಕ ಎಂದೆನಿಸುವ, ಧರ್ಮ (ಸದಾಚಾರದ ಪಾಲನೆ), ವಿದ್ಯೆ ಮತ್ತು ಸಮಾಜ ಸೇವೆಗಳಂತಹ ಈ ಮೂರು ಪ್ರಮುಖ ವಿಚಾರಗಳ ಕುರಿತಾಗಿ ಅನೇಕ ಶಿಕ್ಷಣ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮಗಳೇ ಮೊದಲಾದ ವಿಶೇಷಗಳು ಜರುಗಲಿವೆ. ಈ ಸಮ್ಮೇಳನವನ್ನು ಭಾರತೀಯ ಜ್ಞಾನ ವ್ಯವಸ್ಥೆಗಳ ಕಾರ್ಯಕ್ರಮ, ದೀಕ್ಷಾರಂಭ, ವಿದ್ಯಾರ್ಥಿಳ ಆಯ್ಕಾ ಪ್ರಕ್ರಿಯೆ ಕಾರ್ಯಕ್ರಮ, ಜೀವನ ಕೌಶಲ್ಯ ಕಾರ್ಯಕ್ರಮದಂತಹ ಹಲವಾರು ಸರ್ಕಾರಿ ಕಾರ್ಯಕ್ರಮಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

೧೯೪೮-೪೯ ರ ವಿಶ್ವವಿದ್ಯಾನಿಲಯ ಶಿಕ್ಷಣ ಆಯೋಗದ ಅದ್ಭುತ ಶಿಫಾರಸುಗಳಿಂದ ಮೊದಲ್ಗೊಂಡು ೨೦೨೦ ರ ರಾಷ್ಟ್ರೀಯ ಶಿಕ್ಷಣ ನೀತಿಯ ಕ್ರಾಂತಿಕಾರಿ ಧೋರಣೆಯವರೆಗೆ  ಭಾರತದಲ್ಲಿ ದಶಕಗಳ ಶೈಕ್ಷಣಿಕ ಸುಧಾರಣಾ ಉಪಕ್ರಮಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಆಯೋಜಿಸಿರುವ ಈ ಸಮ್ಮೇಳನವು ಕೂಡ ಆ ವಿಶೇಷತೆಯ ಮಹತ್ವವನ್ನು ವಿಶ್ಲೇಷಿಸುವ ಗುರುತರ ಹೊಣೆ ಯನ್ನೂ ಹೊಂದಿರುತ್ತದೆ.

ಖ್ಯಾತ ಸಂಖ್ಯಾಶಾಸ್ತ್ರಜ್ಞ ಜೊತೆಗೆ ಅರ್ಥಶಾಸ್ತ್ರಜ್ಞರೂ ಆಗಿರುವ ಇ ಎಫ್ ಶೂಮಾಕ ಅವರ ಅಭಿಪ್ರಾಯದಂತೆ “ಉನ್ನತ ಶಿಕ್ಷಣವು ಅಧಿಕ ಜ್ಞಾನ ಸಂಪಾದನೆ ಮಾಡಿದರೆ ಮಾತ್ರವೇ ಅದು ನಮಗೆ ಸಹಾಯಕವಾಗುತ್ತದೆ.”  ಆಳವಾದ ಅವಲೋಕನ ಮತ್ತು ಈ ರೀತಿಯ ಶಕ್ತಿಶಾಲಿ ಸೂಕ್ತಿಗಳ ಆಧಾರದಲ್ಲಿ ಈ ಸಮ್ಮೇಳನವು ಪ್ರೇರಣೆಗೊಂಡಿದೆ, ಎಂದು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ಬಿ ಎನ್ ನರಸಿಂಹ ಮೂರ್ತಿ ಅವರು ಹೇಳಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ಅರ್ಧ ಶತಮಾನ ಗಳ ಅಪಾರ ಅನುಭವವಿರುವ  ಮಾನ್ಯ ಕುಲಾಧಿಪತಿಗಳು, "ಶಿಕ್ಷಣದಲ್ಲಿನ ಪ್ರಸ್ತುತ ಸವಾಲು ಗಳು, ಕೇವಲ ಆಡಳಿತಾತ್ಮಕ ಅಥವಾ ಆರ್ಥಿಕ ಪರಿಹಾರಗಳ ಜೊತೆಗೆ ಆಧ್ಯಾತ್ಮಿಕ ಪರಿಹಾರಗಳ ಅನಿವಾರ್ಯತೆಯನ್ನೂ ಪ್ರತಿಬಿಂಬಿಸುತ್ತಿವೆ" ಎಂಬುದಾಗಿ ವ್ಯಾಖ್ಯಾನ ಮಾಡಿರುತ್ತಾರೆ.

ಈ ಸಮ್ಮೇಳನದ ಪ್ರಮುಖ ಉದ್ದೇಶ, ಶೈಕ್ಷಣಿಕ ರಂಗದಲ್ಲಿ ಉತ್ಕೃಷ್ಟ ಮೌಲ್ಯವನ್ನು ಅಳವಡಿಸಿ ಆ ಮೂಲಕ ಮೌಲ್ಯಾಧಾರಿತ ಶಿಕ್ಷಣವನ್ನು ಅನುಷ್ಠಾನಗೊಳಿಸುವ ನಿರ್ಧಾರ ವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಾಗಿದೆ. ಅದರ ಸಲುವಾಗಿ ದೇಶದ ಪ್ರತಿಷ್ಠಿತ ಭಾಷಣಕಾರರು,  ಶಿಕ್ಷಣ ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಇದರಲ್ಲಿ ಭಾಗವಹಿಸ ಲಿದ್ದಾರೆ. ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಹಿಂದಿನ ಪ್ರೇರಕ ಶಕ್ತಿಯಾದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ಹೇಳುವಂತೆ, “ಚಾರಿತ್ರ‍್ಯ ನಿರ್ಮಾ ಣವೇ ಶಿಕ್ಷಣದ ಅಂತಿಮ ಗುರಿ” ಎಂಬ ಬೋಧನೆಗೆ ಪೂರಕವಾಗಿ ಈ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ.

ಈ ಸಮ್ಮೇಳನವು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಸಂಸ್ಥಾ ಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇರ ಮಾರ್ಗದರ್ಶನದಲ್ಲಿಯೇ ಆಯೋಜಿಸ ಲಾಗಿದೆ. ವಿವಿಧ ನೀತಿ ನಿರೂಪಕರು, ಚಿಂತಕರು, ಗಣ್ಯ ವ್ಯಕ್ತಿಗಳನ್ನು ಒಳ ಗೊಂಡಂತೆ ಭಾರತದಲ್ಲಿನ ಮೌಲ್ಯಾಧಾರಿತ ಶಿಕ್ಷಣದ ವಿವಿಧ ವಾಸ್ತವಗಳನ್ನು ವಿಮರ್ಶಿಸಿ, ಪರಿಗಣನೆಗೆ ತೆಗೆದುಕೊಂಡು  ಉನ್ನತ ಶಿಕ್ಷಣ ರಂಗದಲ್ಲಿ ಕಾರ್ಯ ಸಾಧ್ಯವಾದ ಮಾನವ ಶಿಕ್ಷಣದ ಅನುಷ್ಠಾನಕ್ಕಾಗಿ ಬೇಕಾದ ಅಗತ್ಯ ಪ್ರಾಯೋಗಿಕ ಯೋಜನೆಯನ್ನು ರೂಪಿಸುವ ಉಪಕ್ರಮದ ಭಾಗವಾಗಿ ಈ ಸಮ್ಮೇಳನ ನೆರವಾಗಲಿದೆ. ಮೌಲ್ಯಾಧಾರಿತ ಶಿಕ್ಷಣದ ಮೂರು ಪ್ರಮುಖ ಅಂಶಗಳಾದ ಪಠ್ಯಕ್ರಮ, ಶಿಕ್ಷಣ ಶಾಸ್ತ್ರ ಮತ್ತು ಮೌಲ್ಯಮಾಪನ ಚೌಕಟ್ಟು ಅಭಿವೃದ್ಧಿಪಡಿಸುವುದರ ಮೇಲೆ ಈ ಸಮ್ಮೇಳನವು ಬೆಳಕು ಚೆಲ್ಲಲಿದೆ.

ಈ ಸಮ್ಮೇಳನವು ಮೌಲ್ಯಾಧಾರಿತ ಶಿಕ್ಷಣದ ಪರಿಕಲ್ಪನೆಯನ್ನು ರಾಷ್ಟ್ರೀಯ ಆಂದೋಲನ ವನ್ನಾಗಿ ಪರಿವರ್ತಿಸಿ, ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸುವಲ್ಲಿ ದಾರಿ ದೀಪವಾಗಿ ಕಾರ್ಯನಿರ್ವಹಿಸುವ ಪ್ರಯೋಗಕ್ಕೆ ನಾಂದಿ ಹಾಡಲಿದೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ದಿವ್ಯ ಸಾರಥ್ಯದಲ್ಲಿ ಈ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಮೌಲ್ಯಾಧಾರಿತ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿ ಸಿದೆ. ಕಳೆದ ೨೦೨೩ ಮಾರ್ಚ್ ತಿಂಗಳಿನಲ್ಲಿ, ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳು ಭಾರತದ ಮೊದಲ ಉಚಿತ ಖಾಸಗಿ ಗ್ರಾಮೀಣ ವೈದ್ಯಕೀಯ ಮಹಾವಿದ್ಯಾಲಯವಾದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಅಧಿಕೃತವಾಗಿ ಉದ್ಘಾಟಿಸುವ ಮೂಲಕ ವಿಶ್ವವಿದ್ಯಾಲಯದ ಕಾರ್ಯಬದ್ಧತೆಯನ್ನು ಪ್ರದರ್ಶಿಸಿದರು.

ಕೇವಲ ವೃತ್ತಿಪರ ತರಬೇತಿಯನ್ನು ಮೀರಿ, ವೈದ್ಯಕೀಯ ಶಿಕ್ಷಣದ ಆಧ್ಯಾತ್ಮಿಕ ಧ್ಯೇಯವನ್ನು ಒತ್ತಿಹೇಳುವ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಪರಿಕಲ್ಪನೆಯಲ್ಲಿ ವಿಶ್ವವಿದ್ಯಾಲಯದ ಈ ಪ್ರಯತ್ನದಿಂದ ಸಾಕಾರಗೊಂಡಿದೆ.