Virat Kohli: ಸಚಿನ್ ದಾಖಲೆ ಮುರಿದ ಕೊಹ್ಲಿ
Virat Kohli: ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 14 ಸಾವಿರ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಹೆಸರಿನಲ್ಲಿತ್ತು. ಸಚಿನ್ 350 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಕೊಹ್ಲಿ ಕೇವಲ 287 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನಿರ್ಮಿಸಿ ಸಚಿನ್ ದಾಖಲೆ ಮುರಿದರು.


ದುಬೈ: ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಪ್ರತೀ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ಬರೆಯುತ್ತಾರೆ. ಇದೀಗ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ 15 ರನ್ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 14 ಸಾವಿರ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಹೆಸರಿನಲ್ಲಿತ್ತು. ಸಚಿನ್ 350 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಕೊಹ್ಲಿ ಕೇವಲ 287 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನಿರ್ಮಿಸಿ ಸಚಿನ್ ದಾಖಲೆ ಮುರಿದರು. ಶ್ರೀಲಂಕಾದ ಕುಮಾರ ಸಂಗಕ್ಕರ(378 ಇನಿಂಗ್ಸ್) ಮೂರನೇ ಸ್ಥಾನದಲ್ಲಿದ್ದಾರೆ. ಅತ್ಯಧಿಕ ಏಕದಿನ ರನ್ ದಾಖಲೆ ಸಚಿನ್(18426) ಹೆಸರಿನಲ್ಲಿದೆ. ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅತಿ ವೇಗವಾಗಿ ಏಕದಿನದಲ್ಲಿ 14 ಸಾವಿರ ರನ್ ಬಾರಿಸಿದವರು
ವಿರಾಟ್ ಕೊಹ್ಲಿ-287 ಇನಿಂಗ್ಸ್
ಸಚಿನ್ ತೆಂಡೂಲ್ಕರ್-350 ಇನಿಂಗ್ಸ್
ಕುಮಾರ ಸಂಗಕ್ಕರ-378 ಇನಿಂಗ್ಸ್
1⃣4⃣0⃣0⃣0⃣ ODI RUNS for Virat Kohli 🫡🫡
— BCCI (@BCCI) February 23, 2025
And what better way to get to that extraordinary milestone 🤌✨
Live ▶️ https://t.co/llR6bWyvZN#TeamIndia | #PAKvIND | #ChampionsTrophy | @imVkohli pic.twitter.com/JKg0fbhElj
ಇದೇ ಪಂದ್ಯದಲ್ಲಿ ಕೊಹ್ಲಿ ಪಾಕ್‌ನ ನಸೀಮ್ ಶಾ ಅವರ ಕ್ಯಾಚ್ ಪಡೆಯುತ್ತಿದ್ದಂತೆ, ವಿಕೆಟ್ ಕೀಪರ್ ಹೊರತುಪಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ ಮೂರನೇ ಫೀಲ್ಡರ್ ಎನಿಸಿಕೊಂಡರು. ಇದೇ ವೇಳೆ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಅಜರುದ್ದೀನ್(156) ದಾಖಲೆ ಪತನಗೊಂಡಿತು.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್ ಹಿಡಿದಿದ್ದ ವಿರಾಟ್ ಕೊಹ್ಲಿ, ಅಜರುದ್ದೀನ್ ದಾಖಲೆ ಸರಿಗಟ್ಟಿದ್ದರು. ಇದೀಗ ಪಾಕ್ ವಿರುದ್ಧ ಒಟ್ಟು 2 ಕ್ಯಾಚ್ ಪಡೆದು ಅಜರುದ್ದೀನ್ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯ ಕೊಹ್ಲಿ 158* ಕ್ಯಾಚ್ ಹಿಡಿದಿದ್ದಾರೆ. ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಅವರು 218 ಕ್ಯಾಚ್ ಹಿಡಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸೀಸ್‌ನ ರಿಕಿ ಪಾಂಟಿಂಗ್(160) ಕಾಣಿಸಿಕೊಂಡಿದ್ದಾರೆ. ಪಾಂಟಿಂಗ್ ದಾಖಲೆ ಮುರಿಯಲು ಕೊಹ್ಲಿಗೆ ಮೂರು ಕ್ಯಾಚ್‌ಗಳ ಅಗತ್ಯವಿದೆ.
ಇದನ್ನೂ ಓದಿ IND vs PAK: ಐಸಿಸಿ ಟೂರ್ನಿಯಲ್ಲಿ ದಾಖಲೆ ಬರೆದ ಬಾಬರ್ ಅಜಂ
ಏಕದಿನದಲ್ಲಿ ಅತ್ಯಧಿಕ ಕ್ಯಾಚ್ ಹಿಡಿದವರು
ಮಹೇಲಾ ಜಯವರ್ಧನೆ-448 ಪಂದ್ಯ, 218 ಕ್ಯಾಚ್
ರಿಕಿ ಪಾಂಟಿಂಗ್- 375 ಪಂದ್ಯ, 160 ಕ್ಯಾಚ್
ವಿರಾಟ್ ಕೊಹ್ಲಿ- 299 ಪಂದ್ಯ, 158* ಕ್ಯಾಚ್
ಮೊಹಮ್ಮದ್ ಅಜರುದ್ದೀನ್- 334 ಪಂದ್ಯ, 156 ಕ್ಯಾಚ್
ರಾಸ್ ಟೇಲರ್- 236 ಪಂದ್ಯ,142 ಕ್ಯಾಚ್