ENG vs SA: ಆಫ್ಘಾನ್ ತಂಡದ ಸೆಮಿಸ್ ಲೆಕ್ಕಾಚಾರ ಹೇಗಿದೆ?
champions trophy semi final scenario: ಅಫಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ, ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ನಡೆಸಿದರೆ, ದಕ್ಷಿಣ ಆಫ್ರಿಕಾವನ್ನು ಕನಿಷ್ಠ 207 ರನ್ ಅಂತರದಿಂದ ಸಫಲಿಸಬೇಕು. ಒಂದೊಮ್ಮೆ ಇಂಗ್ಲೆಂಡ್ ಚೇಸಿಂಗ್ ನಡೆಸಿದರೆ, ಎಷ್ಟೇ ಮೊತ್ತವನ್ನಾದರೂ 11.1 ಓವರ್‌ಗಳಲ್ಲೇ ಪಂದ್ಯ ಗೆಲ್ಲಬೇಕು. ಹೀಗಾದರೆ ಮಾತ್ರ ಅಫ್ಘಾನಿಸ್ತಾನದ ನೆಟ್ ರನ್‌ರೇಟ್ ದ.ಆಫ್ರಿಕಾಕ್ಕಿಂತ ಹೆಚ್ಚಾಗಿ ಸೆಮಿಫೈನಲ್‌ಗೇರಲಿದೆ.


ಕರಾಚಿ: ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಶುಕ್ರವಾರ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ(ICC Champions Trophy 2025) ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಕಾರಣ ಎರಡೂ ತಂಡಗಳಿಗೆ ತಲಾ 1 ಅಂಕ ಲಭಿಸಿತ್ತು. 3 ಪಂದ್ಯಗಳಲ್ಲಿ 4 ಅಂಕ ಸಂಪಾದಿಸಿದ ಆಸ್ಟ್ರೇಲಿಯಾ ‘ಬಿ’ ಗುಂಪಿನ ಮೊದಲ ತಂಡವಾಗಿ ಸೆಮಿಫೈನಲ್‌ಗೇರಿತು. ಸೋಲಿನಿಂದ ಪಾರಾದ ಅಫ್ಘಾನಿಸ್ತಾನಕ್ಕೂ ಸೆಮಿಫೈನಲ್‌ಗೇರುವ ಕ್ಷೀಣ ಅವಕಾಶವೊಂದು ಲಭಿಸಿತು. ಈ ಸೆಮಿ ಪ್ರವೇಶದ ಲೆಕ್ಕಾಚಾರ ಇಲ್ಲಿದೆ.
ಸದ್ಯ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ತಂಡ ತಲಾ 3 ಅಂಕ ಹೊಂದಿದೆ. ಈ ಎರಡು ತಂಡಗಳ ಪೈಕಿ ಒಂದು ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಶನಿವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ.
ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ(ENG vs SA) ಸೋತರೆ, ಅಂಕಗಳು ತಲಾ 3ರಲ್ಲೇ ಇರುತ್ತವೆ. ಆಗ ನೆಟ್ ರನ್ ರೇಟ್ ಲೆಕ್ಕಾಚಾರ ಎದುರಾಗುತ್ತದೆ. ಸದ್ಯ ದ.ಆಫ್ರಿಕಾ +2.140, ಅಫ್ಘಾನಿಸ್ತಾನ -0.990 ನೆಟ್ ರನ್‌ರೇಟ್ ಹೊಂದಿದೆ.
ಇದನ್ನೂ ಓದಿ AFG vs AUS: ಮಳೆಯಿಂದ ಪಂದ್ಯ ರದ್ದು; ಸೆಮಿಫೈನಲ್ ಪ್ರವೇಶಿಸಿದ ಆಸೀಸ್
ಅಫಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ, ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ನಡೆಸಿದರೆ, ದಕ್ಷಿಣ ಆಫ್ರಿಕಾವನ್ನು ಕನಿಷ್ಠ 207 ರನ್ ಅಂತರದಿಂದ ಸಫಲಿಸಬೇಕು. ಒಂದೊಮ್ಮೆ ಇಂಗ್ಲೆಂಡ್ ಚೇಸಿಂಗ್ ನಡೆಸಿದರೆ, ಎಷ್ಟೇ ಮೊತ್ತವನ್ನಾದರೂ 11.1 ಓವರ್‌ಗಳಲ್ಲೇ ಪಂದ್ಯ ಗೆಲ್ಲಬೇಕು. ಹೀಗಾದರೆ ಮಾತ್ರ ಅಫ್ಘಾನಿಸ್ತಾನದ ನೆಟ್ ರನ್‌ರೇಟ್ ದ.ಆಫ್ರಿಕಾಕ್ಕಿಂತ ಹೆಚ್ಚಾಗಿ ಸೆಮಿಫೈನಲ್‌ಗೇರಲಿದೆ. ಅಲ್ಲದಿದ್ದರೆ, ದಕ್ಷಿಣ ಆಫ್ರಿಕಾ ಸೋತರೂ ಸೆಮಿಗೆ ಲಗ್ಗೆ ಇಡಲಿದೆ. ಒಂದೊಮ್ಮೆ ಇಂದಿನ ಪಂದ್ಯ ಮಳೆಯಿಂದ ರದ್ದಾದರೂ ಹರಿಣ ಪಡೆ ನಾಲ್ಕು ಅಂಕದೊಂದಿಗೆ ಸೆಮಿಗೆ ನೇರವಾಗಿ ಪ್ರವೇಶ ಪಡೆಯಲಿದೆ.
ಶುಕ್ರವಾರ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಫಘಾನಿಸ್ತಾನ 273ರನ್‌ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 12.5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 109 ರನ್ ಗಳಿಸಿದ್ದ ವೇಳೆ ಮಳೆ ಬಂದು ಪಂದ್ಯ ರದ್ದಾಯಿತು. ಟ್ರಾವಿಸ್ ಹೆಡ್(59) ಮತ್ತು ನಾಯಕ ಸ್ವೀವನ್ ಸ್ಮಿತ್(19) ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಸುಮಾರು ಒಂದುವರೆ ಗಂಟೆ ಕಾದರೂ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದ ಕಾರಣ ಮೈದಾನದಲ್ಲೂ ನೀರು ನಿಂತಿತ್ತು. ಬಳಿಕ ಮಳೆ ನಿಂತರೂ ನೀರು ತುಂಬಿದ್ದ ಕಾರಣ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಭಾರತೀಯ ಕಾಲಮಾನ ರಾತ್ರಿ 9.20ರ ವೇಳೆಗೆ ರೆಫ್ರಿಗಳು ಪಂದ್ಯವನ್ನು ರದ್ದು ಎಂದು ಘೋಷಿಸಿದ್ದರು.