IND vs AUS: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು!
IND vs AUS Semifinal: ಮಂಗಳವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡಯುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ದುಬೈ ಕ್ರೀಡಾಂಗಣದಲ್ಲಿ ಕಳೆದ 3 ಪಂದ್ಯಗಳಲ್ಲಿ ಭಾರತ ತಂಡ ಅದ್ಭುತ ಗೆಲುವು ಸಾಧಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.

ಭಾರತ vs ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ ಸಂಬಂಧ ಪ್ರಮುಖ ಸಂಗತಿಗಳು

ದುಬೈ: ಪ್ರಸಕ್ತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯ ಮಾರ್ಚ್ 4ರಂದು ಮಂಗಳವಾರ ದುಬೈನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಮತ್ತು ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ನಡುವೆ ಜರುಗಲಿದೆ. 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಈ ಎರಡೂ ತಂಡಗಳು 50 ಓವರ್‌ಗಳ ಸ್ವರೂಪದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ.
ದುಬೈನ ಈ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಸತತ 3 ಪಂದ್ಯಗಳನ್ನು ಗೆದ್ದಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸುವಲ್ಲಿ ರೋಹಿತ್ ಶರ್ಮಾ ಪಡೆ ಯಶಸ್ವಿಯಾಗಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿಯೂ ಗೆದ್ದು ಸತತ ಎರಡನೇ ವರ್ಷದಲ್ಲಿ ಮತ್ತೊಂದು ಐಸಿಸಿ ಟ್ರೋಫಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.
IND vs AUS: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಪಿಚ್ ರಿಪೋರ್ಟ್
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದೆ. ದುಬೈನಲ್ಲಿ ಹವಾಮಾನ ಅದ್ಭುತವಾಗಿದೆ. ತಾಪಮಾನವು ಸುಮಾರು 24 ಡಿಗ್ರಿಗಳಷ್ಟು ಮಾತ್ರ ಇರಬಹುದೆಂದು ನಿರೀಕ್ಷಿಸಲಾಗಿದೆ. ಈ ಪಿಚ್ ಪಾಕಿಸ್ತಾನದ ಕಪ್ಪು ಮಣ್ಣಿನಿಂದ ಮಾಡಲ್ಪಟ್ಟಿದ್ದು, ಇದು ಸಾಕಷ್ಟು ಒಣಗಿದೆ. ಆರಂಭದಲ್ಲಿ ಫಾಸ್ಟ್ ಬೌಲರ್‌ಗಳು ಸ್ವಿಂಗ್ ಮಾಡಬಹುದು. ಒಮ್ಮೆ ಪಂದ್ಯ ಸಾಗುತ್ತಿದ್ದಂತೆ ಪಿಚ್ ಸ್ಪಿನ್ ಸ್ನೇಹಿಯಾಗಿ ಬದಲಾಗಿದೆ. ಆದಾಗ್ಯೂ, ಬ್ಯಾಟಿಂಗ್ ಸ್ವಲ್ಪ ಅನುಕೂಲಕರವಾಗುತ್ತದೆ. ಸ್ಪಿನ್ನರ್‌ಗಳ ಎಕಾನಮಿ ರೇಟ್ ಉತ್ತಮವಾಗಿದೆ. ಪ್ರಸ್ತುತ ಆಡಿದ ಕಳೆದ 3 ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತ ಪರ ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರೆ, ಕಿವೀಸ್ ಪರ ಮ್ಯಾಟ್ ಹೆನ್ರಿ 5 ವಿಕೆಟ್ ಪಡೆದಿದ್ದರು.
IND vs AUS ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಏನು? ಫೈನಲ್‌ಗೆ ಯಾವ ತಂಡ?
ದುಬೈನಲ್ಲಿ ಏಕದಿನ ಪಂದ್ಯಗಳ ಅಂಕಿಅಂಶ
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 3 ಪಂದ್ಯಗಳು ಸೇರಿದಂತೆ ಇಲ್ಲಿಯವರೆಗೂ 61 ಪಂದ್ಯಗಳನ್ನು ನಡೆದಿದೆ. ಈ ಕ್ರೀಡಾಂಗಣವು ಚೇಸಿಂಗ್‌ಗೆ ಅತ್ಯುತ್ತಮವಾಗಿದೆ. 36 ಬಾರಿ ಚೇಸಿಂಗ್ ತಂಡಗಳು ಇಲ್ಲಿ ಗೆಲುವು ಪಡೆದಿವೆ. ಮೊದಲು ಬ್ಯಾಟ್ ಮಾಡಿದ ತಂಡಗಳು 23 ಬಾರಿ ಜಯಿಸಿವೆ. ಈ ಕ್ರೀಡಾಂಗಣದಲ್ಲಿನ ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತ 230 ಆಗಿದೆ. ಆದರೆ, ಭಾರತ ಕಳೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಗೆದ್ದಿತ್ತು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮ್‌ನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ
ಆಸ್ಟ್ರೇಲಿಯಾ: ಜೇಕ್ ಫ್ರೇಸರ್-ಮೆಗರ್ಕ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಾಬುಶೇನ್, ಜಾಶ್ ಇಂಗ್ಲಿಸ್ (ವಿಕೆಟ್ ಕೀಪರ್), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ನೇಥನ್ ಎಲ್ಲಿಸ್, ಆಡಮ್ ಝಂಪಾ, ಸ್ಪೆನ್ಸರ್ ಜಾನ್ಸನ್, ಶಾನ್ ಅಬಾಟ್, ಆರೋನ್ ಹಾರ್ಡಿ, ತನ್ವೀರ್ ಸಂಘ, ಕೂಪರ್ ಕಾನೊಲ್ಲಿ
IND vs AUS ನಡುವೆ ಸೆಮಿಫೈನಲ್ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಸುನೀಲ್ ಗವಾಸ್ಕರ್!
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಬಗ್ಗೆ ವಿಶೇಷ ವಿಷಯಗಳು
- ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಅತ್ಯಧಿಕ ಏಕದಿನ ಸ್ಕೋರ್ 2015 ರಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ 5 ವಿಕೆಟ್‌ಗೆ 355 ರನ್ ಗಳಿಸಿತ್ತು.
- 2023ರಲ್ಲಿ ಯುಎಇ ವಿರುದ್ಧ ನಮೀಬಿಯಾ ಕೇವಲ 91 ರನ್‌ಗಳಿಗೆ ಆಲೌಟ್ ಆಗಿದ್ದು, ಈ ಮೈದಾನದಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದೆ.
- ಬಾಂಗ್ಲಾದೇಶದ ಮುಷ್ಫಿಕರ್ ರಹೀಮ್ 2018 ರಲ್ಲಿ ಶ್ರೀಲಂಕಾ ವಿರುದ್ಧ 144 ರನ್ ಗಳಿಸಿದ್ದರು.
- 2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಶಾಹಿದ್ ಅಫ್ರಿದಿ (38ಕ್ಕೆ 6) ಅತ್ಯುತ್ತಮ ಬೌಲಿಂಗ್ ಸ್ಪೆಲ್ ಮಾಡಿದ್ದರು.
- ಪಾಕಿಸ್ತಾನದ ಆಲ್‌ರೌಂಡರ್ ಅಫ್ರಿದಿ 14 ಪಂದ್ಯಗಳಲ್ಲಿ 25 ವಿಕೆಟ್‌ಗಳೊಂದಿಗೆ ವಿಕೆಟ್ ಪಡೆದವರ ಈ ಅಂಗಣದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.
ಪಂದ್ಯದ ವಿವರ
ಭಾರತ vs ಆಸ್ಟ್ರೇಲಿಯಾ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025
ದಿನಾಂಕ: ಮಾರ್ಚ್ 4, 2024
ಸಮಯ: ಮಧ್ಯಾಹ್ನ 02:30ಕ್ಕೆ
ಸ್ಥಳ: ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ, ದುಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟೀಮಿಂಗ್: ಡಿಸ್ನಿ ಹಾಟ್‌ಸ್ಟಾರ್