ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Chikkaballapur News: ಸರಕಾರ ವಿಶ್ವವಿದ್ಯಾಲಯ ಮುಚ್ಚುವುದರಲ್ಲಿ ನನಗೆ ಆಶ್ಚರ್ಯ ಕಾಣುತ್ತಿಲ್ಲ: ಆರ್ಥಿಕವಾಗಿ ಈ ಸರಕಾರ ದಿವಾಳಿಯಾಗಿದೆ

ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಎಂದು ಪ್ರಚಾರ ಪಡೆಯುವ ಮುಖ್ಯ ಮಂತ್ರಿಗಳು ಮತ್ತು ಅವರ ಸಚಿವ ಮಂಡಲಕ್ಕೆ ಕರ್ನಾ ಟಕದ ಜನ ಹಿಡಿಶಾಪ ಹಾಕುತ್ತಿರು ವುದು ಗಮನಕ್ಕೆ ಬಂದಂತಿಲ್ಲ. ಪಂಚ ಗ್ಯಾರಂಟಿಗಳ ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಕೊಡಲಾಗುತ್ತಿಲ್ಲ. ಆರ್ಥಿಕ ವಾಗಿ ದಿವಾಳಿಯಾಗಿರುವ ಈ ಸರಕಾರ ಇರುವ ಅಧಿಕಾರಿ ಗಳಿಗೆ ಸಂಬಳ ಕೊಡಲು ಹಣವಿಲ್ಲ, ಹೊಸ ಯೋಜನೆ ಮಾಡಲು ಹಣವಿಲ್ಲ. ಪರಿಸ್ಥಿತಿ ಹೀಗಿರುವಲ್ಲಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾ ಗಿರುವುದು ಆಶ್ಚರ್ಯ ತರುವ ವಿಚಾರವೇನೂ ಅಲ್ಲ ಬಿಡಿ.

ಚಿಂತಾಮಣಿಯಿಂದ ಚಿಕ್ಕಬಳ್ಳಾಪುರಕ್ಕೆ ಬಂದು ಮಾಡಿರುವ ಉದ್ಧಾರ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾಧ್ಯಮದೊಂದಿಗೆ ಮಾತನಾಡಿದರು.

Profile Ashok Nayak Mar 3, 2025 11:12 PM

ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಪಂಚಮರ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ: ಸಂಸದ ಡಾ.ಕೆ.ಸುಧಾಕರ್ ಆರೋಪ

ಚಿಕ್ಕಬಳ್ಳಾಪುರ: ನಮ್ಮದು ಜನಪರ ಸರ್ಕಾರ ಎನ್ನುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ೨ ವರ್ಷ ಸಮೀಪಿಸಿದರೂ ಕೂಡ ಅಭಿವೃದ್ಧಿಯ ಪರ್ವ ಆರಂಭವೇ ಆಗಿಲ್ಲ. ಗ್ಯಾರಂಟಿಗಳ ಭಾರದಲ್ಲಿ ನಲುಗುತ್ತಿರುವ ಈ ಸರಕಾರ ಪಂಚಮರ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡು ಆವರ್ಗಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸಂಸದ ಸುಧಾಕರ್ ಕಿಡಿ ಕಾರಿದರು. ನಗರದ ಜಿಲ್ಲಾಡಳಿತ ಭವನ ಸಂಸದರ ಕಚೇರಿಯಲ್ಲಿ ಸೋಮವಾರ ಕ್ಷೇತ್ರದ ಜನರಿಗಾಗಿ ನಡೆಸಿದ ಜನತಾ ದರ್ಶನ ಮತ್ತು ಅಹವಾಲು ಸ್ವೀಕಾರದ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿ ದರು.

ಇದನ್ನೂ ಓದಿ: Chikkaballapur News: ಕೇವಲ 15 ದಿನಗಳಲ್ಲಿ ಇ-ಖಾತೆ ಪಡೆದು ಸದುಪಯೋಗ ಮಾಡಿಕೊಳ್ಳಿ

ಸಾಲಹೊರಿಸುವ ಸರಕಾರ!!
ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಎಂದು ಪ್ರಚಾರ ಪಡೆಯುವ ಮುಖ್ಯ ಮಂತ್ರಿಗಳು ಮತ್ತು ಅವರ ಸಚಿವ ಮಂಡಲಕ್ಕೆ ಕರ್ನಾಟಕದ ಜನ ಹಿಡಿಶಾಪ ಹಾಕುತ್ತಿರು ವುದು ಗಮನಕ್ಕೆ ಬಂದಂತಿಲ್ಲ. ಪಂಚ ಗ್ಯಾರಂಟಿಗಳ ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಕೊಡಲಾಗುತ್ತಿಲ್ಲ. ಆರ್ಥಿಕವಾಗಿ ದಿವಾಳಿಯಾಗಿರುವ ಈ ಸರಕಾರ ಇರುವ ಅಧಿಕಾರಿ ಗಳಿಗೆ ಸಂಬಳ ಕೊಡಲು ಹಣವಿಲ್ಲ, ಹೊಸ ಯೋಜನೆ ಮಾಡಲು ಹಣವಿಲ್ಲ. ಪರಿಸ್ಥಿತಿ ಹೀಗಿರುವಲ್ಲಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವುದು ಆಶ್ಚರ್ಯ ತರುವ ವಿಚಾರವೇನೂ ಅಲ್ಲ ಬಿಡಿ. ಈ ಸರಕಾರ ಕಳೆದ ಎರಡು ವರ್ಷಗಳಲ್ಲಿ ಸರಾಸರಿ ಸುಮಾರು 75 ಸಾವಿರ ಕೋಟಿ ಸಾಲ ಮಾಡಿದೆ. ಈ ವರ್ಷ ಎಷ್ಟು ಮಾಡುತ್ತಾರೆ ನೋಡೋ ಣ. ಕರ್ನಾಟಕದ ಪ್ರತಿ ಪ್ರಜೆಯ ಮೇಲೆ ಎಷ್ಟು ಸಾಲ ಹೊರಿಸುತ್ತಾರೋ ಕಾದು ನೋಡ ಬೇಕಿದೆ. ಸಾಲ ಹೊರಿಸುವುದೇ ಇವರ ಸಾಧನೆ ಎಂದು ವ್ಯಂಗ್ಯ ವಾಡಿದರು.

ಕ್ಷುಲ್ಲಕ ರಾಜಕಾರಣ!!

ನಾನು ಸಚಿವನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಬಡವರಿಗೆ ಹಂಚಿಕೆ ಮಾಡಿದ್ದ ೨೨ ಸಾವಿರ ನಿವೇಶನಗಳನ್ನು ಸರಿಯಾದ ರೀತಿಯಲ್ಲಿ ಅಭಿವೃದ್ದಿ ಪಡಿಸಿ ಜನತೆಗೆ ನೀಡಿದರೆ ಎಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಒಳ್ಳೆಯ ಹೆಸರು ಬರುವುದೋ ಎಂದು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ.ಮಂಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸಬ್ಬೇನಹಳ್ಳಿ ಬಳಿ ಲೇಔಟ್ ಆಗಿ 57 ಸೈಟುಗಳ ವಿಂಗಡಣೆ ಆಗಿದ್ದರೂ ಇವರಿಗೂ ಕೂಡ ಖಾತೆ ನೀಡುತ್ತಿಲ್ಲ. ಕಾರಣ ಸುಧಾ ಕರ್‌ಗೆ ಹೆಸರು ಬರುತ್ತದೆ ಎನ್ನುವುದೇ ಆಗಿದೆ. ಈ 22 ಸಾವಿರ ಸೈಟುಗಳಿಗೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ನಿರ್ಧರಿಸಿದ್ದು, ಹೋರಾಟ ಮಾಡಿಯಾದರೂ ಸರಿಯೇ ಫಲಾನುಭವಿ ಗಳಿಗೆ ನ್ಯಾಯಕೊಡಿಸುತ್ತೇನೆ ಎಂದರು.

ರೋಫ್‌ವೇಗೆ ಸಂಕಲ್ಪ ಮುಖ್ಯ!!
ನಂದಿಬೆಟ್ಟಕ್ಕೆ ರೋಫ್‌ವೇ ನಿರ್ಮಾಣ ಆಗಬೇಕು ಎಂದು ಭಾವಿಸಿ ನಾನು ಸಚಿವನಾಗಿದ್ದ ಅವಧಿಯಲ್ಲಿಯೇ ಭೂಮಿಪೂಜೆ ಮಾಡಲಾಗಿತ್ತು. ಅಷ್ಟರಲ್ಲಿ ನಮ್ಮ ಸರಕಾರ ಅಧಿಕಾರ ಕಳೆದುಕೊಂಡಿತು.
ಅಭಿವೃದ್ಧಿ ಕೆಲಸ ಮಾಡುವಾಗ ಇಚ್ಚಾಶಕ್ತಿ ಮುಖ್ಯ.ಈ ಸರಕಾರ ವೇಗವಾಗಿ ಇದಕ್ಕೆ ಬೇಕಾ ದ ಹಣಕಾಸಿನ ನೆರವನ್ನು ಒದಗಿಸಿದ್ದರೆ ಈ ಕೆಲಸ ಶುರುವಾಗುತ್ತಿತ್ತಲ್ಲ. ಈಗ ನೋಡಿ ಯಾರೋ ಪರಿಸರವಾದಿಗಳು ಕೇಸು ಹಾಕಿದ್ದಾರೆ. ಇಂತಹ ವಿಚಾರಗಳಲ್ಲಿ ವಿಳಂಬ ಮಾಡಿ ದಷ್ಟೂ ಇಲ್ಲದ ಸಮಸ್ಯೆಗಳು ಶುರುವಾಗುತ್ತವೆ. ನಾನು ಈಯೋಜನೆ ಮಾಡಬೇಕು ಎಂದಿ ದ್ದರೆ ಹಲವಾರು ಅಡ್ಡಿ ಆತಂಕಗಳು ಬರುತ್ತವೆ. ರಾಜಕೀಯ ಇಚ್ಚಾಶಕ್ತಿಯಿದ್ದರೆ ಯಾವು ದೂ ಕಷ್ಟವಲ್ಲ ಎಂದರು.

ರಂಗಮಂದಿರ ಬದಲಾಗಿದೆ
ನನ್ನ ಅವಧಿಯಲ್ಲಿ ರಂಗ ಕಲಾವಿಧರಿಗೆ ನೆರವು ನೀಡುವ ಉದ್ದೇಶದಿಂದ ರಂಗಮAದಿರ ಕಟ್ಟಲು ಪ್ರಾರಂಭಿಸಿದೆ. ಈ ವಿಚಾರದಲ್ಲಿ ಅಂದಿನ ಸಂಸದ ಡಾ.ವೀರಪ್ಪ ಮೊಯಿಲಿ ಅವರ ಸಹಕಾರವನ್ನು ನೆನೆಪು ಮಾಡಿಕೊಳ್ಳುತ್ತೇನೆ. ಯಾರು ಸಹಾಯ ಮಾಡಿದ್ದಾರೋ ಅವರನ್ನು ಸ್ಮರಿಸಬೇಕು.ಇದಕ್ಕೆ ರಂಗಮಂದಿರ ಎಂದು ಹೆಸರು ಇಟ್ಟಿದ್ದೆವು. ಈಗ ಕನ್ನಡ ಭವನ ಅಂತ ಹೆಸರಿಟ್ಟಿದ್ದಾರಲ್ಲ ಅಲ್ಲಿನ ಚರಿತ್ರೆ ಗೊತ್ತಾ ಉಸ್ತುವಾರಿ ಮಂತ್ರಿಗಳಿಗೆ? ಬಸಪ್ಪನ ಛತ್ರ ವಾಗಿತ್ತು. ಅನೇಕರು ಅಲ್ಲಿ ವಾಸ ಮಾಡುತ್ತಿದ್ದರು. ಇದರ ಬಗ್ಗೆ ಕೋರ್ಟಿನಲ್ಲಿ ಕೇಸಿತ್ತು. ಇಲ್ಲಿನ ನಿವಾಸಿಗಳಿಗೆ ಪರ್ಯಾಯವಾಗಿ ಕಂದವಾರದಲ್ಲಿ 14-15 ಕೋಟಿ ಅನುದಾನದಲ್ಲಿ ನಿವೇಶನನೀಡಿ ಮನೆಗಳನ್ನು ಕಟ್ಟಿಸಿದ್ದೇವೆ. ಈಗ ಸುಣ್ಣಬಣ್ಣ ಬಳಿದು ನಾವು ಮಾಡಿದ್ದು ಅಂತ ಉದ್ಘಾಟನೆ ಇಟ್ಟುಕೊಂಡಿದ್ದಾರೆ. ಇದು ಇವರು ಚಿಂತಾಮಣಿಯಿಂದ ಬಂದು ಚಿಕ್ಕಬಳ್ಳಾಪುರಕ್ಕೆ ಬಂದು ಮಾಡಿರುವ ಉದ್ಧಾರ ಮಾಡಿ ಎಂದು ಗುಡುಗಿದರು.

ಚುನಾವಣೆ ಭಯವೇಕೆ?
ಪ್ರಜಾಪ್ರಭುತ್ವದಲ್ಲಿ ಸಂವಿಧಾನದಲ್ಲಿ ಈ ಸರಕಾರಕ್ಕೆ ನಂಬಿಕೆಯೇ ಇಲ್ಲ. 2 ವರ್ಷ ಆಗಿದೆ ಇವರು ಅಧಿಕಾರಕ್ಕೆ ಬಂದು ಯಾವ ಚುನಾವಣೆಯನ್ನೂ ನಡೆಸಲ್ಲ. ಟಿಎಪಿಸಿಎಂಸ್ ಅವಧಿ,ಹಾಲು ಉತ್ಪಾದಕ ಸಂಘಗಳ ಅವಧಿ,ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾ ಯಿತಿ, ಡಿಸಿಸಿ ಬ್ಯಾಂಕ್ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ ಈವರೆಗೆ ಚುನಾವಣೆ ಗಳನ್ನು ನಡೆಸಬೇಕು ಎಂದು ಅನ್ನಿಸಿಯೇ ಇಲ್ಲ.ಸೋಲುವ ಭಯದಿಂದ ಹೀಗೆ ಮಾಡುತ್ತಿದ್ದಾರೆ.

ಅನ್ಯಾಯಕ್ಕೆ ಮಿತಿಯಿಲ್ಲ?
ಜಿಲ್ಲಾ ಉಸ್ತುವಾರಿ ಮಂತ್ರಿ ೨ ವರ್ಷದಲ್ಲಿ ಜಿಲ್ಲೆಗೆ ಯಾವ ಹೊಸ ಯೋಜನೆ ತಂದಿದ್ದಾರೆ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಸಂಸದ ಡಾ.ಕೆ.ಸುಧಾಕರ್ ಕೇವಲ ಹೆಸರು ಬದಲಾವಣೆ ಮಾಡುವುದು, ನಾವು ತಂದಿರುವ ಯೋಜನೆಗಳನ್ನು ಉದ್ಘಾಟನೆ ಮಾಡು ವುದು ನಿಮ್ಮ ಸಾಧನೆ. ಮಾಡಿ ಎಷ್ಟೆಷ್ಟು ಅನ್ಯಾಯ ಮಾಡುತ್ತೀರೋ ಮಾಡಿ ಎಂದು ಗರಂ ಆದರು.

ಇಲ್ಲಿನ ಎಂಎಲ್‌ಎ ಮತ್ತು ಮಂತ್ರಿಗೆ ನಗರೋತ್ಥಾನದಲ್ಲಿ ನಮ್ಮ ಕಾಲದಲ್ಲಿ ಅಭಿವೃದ್ದಿಗೆ ಹಣ ನೀಡಿದ್ದರೂ ಈವರೆಗೆ ಕಾಮಗಾರಿ ಪ್ರಾರಂಭಿಸಲಾಗಿಲ್ಲ. ಕಾಮಗಾರಿಗಳಿಗೆ ಡಿಪಿಆರ್ ಮಾಡಿಸಿದ್ದರೂ ಟೆಂಡರ್ ಆಗಿದ್ದರೂ ಅದನ್ನು ವಜಾ ಮಾಡಿಸಿದ್ದೀರಿ? ನಗರೋತ್ಥಾನ ಮಾಡಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಕೇಂದ್ರದ ಸಿಆರ್‌ಎಫ್ ಅನುದಾನದಲ್ಲಿ ಪ್ರತಿ ಕ್ಷೇತ್ರಕ್ಕೆ ೬ಕೋಟಿ ರೂಪಾಯಿ ಅನುದಾನ ಬರುತ್ತದೆ.ಇಲ್ಲಿನ ಶಾಸಕರು ಯಾವುದಾರೂ ಹೊಸ ರಸ್ತೆಗೆ ಅನುದಾನ ಬಳಸಿಕೊಳ್ಳುವ ಬದಲಿಗೆ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಚೆನ್ನಾಗಿರುವ ರಸ್ತೆಗೆ ಮತ್ತೆ ಟಾರು ಹಾಕಲು ಈ ಅನುದಾನ ಬಳಸಲು ಬೇಡಿಕೆ ಸಲ್ಲಿಸಿದ್ದಾರೆ.ಇದು ಇವರ ಅಭಿವೃದ್ದಿಯ ಮಾದರಿ ಎಂದು ಕಿಡಿ ಕಾರಿದರು.ಪುಟ್ಟಸ್ವಾಮಿಗೌಡರು, ಸುಬ್ಬಾರೆಡ್ಡಿ ಅವರು ಹೊಸ ರಸ್ತೆಗಳನ್ನು ಬೇಡಿಕೆ ಸಲ್ಲಿಸಿದ್ದರೆ ಚಿಕ್ಕಬಳ್ಳಾಪುರದ ಶಾಸಕರು ನಾಮಗೊಂಡ್ಲು ಮಂಚೇನ ಹಳ್ಳಿ ಪಟ್ಟಣದವರೆಗೆ ೬ಕೋಟಿ ಅನುದಾನ ನೀಡಿದ್ದು ಗುತ್ತಿಗೆದಾರ ಮತ್ತು ಇವರ ಲಾಭ ಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ದೂರಿದರು.

*
ಹಕ್ಕಿಜ್ವರ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಜನತೆ ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಒಂದು ಟಾಸ್ಕ್ ಪೋರ್ಸ್ ರಚನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಇದು ಆಹಾರದ ವಿಚಾರ ಆಗಿರುವ ಕಾರಣ ತೆಲಂಗಾಣದಿಂದ ಜಿಲ್ಲೆಗೆ ಕೋಳಿಗಳನ್ನು ತರಿಸದಂತೆ ನಿಷೇದ ಹೇರಬೇಕು.ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಸೇರಿ ಟಾಸ್ಕ್ ಪೋರ್ಸ್ಸಮಿತಿ ರಚನೆ ಮಾಡಿ ಎಂದು ಆಗ್ರಹಿಸು ತ್ತೇನೆ. ವರದಹಳ್ಳಿ ಗ್ರಾಮದಲ್ಲಿ ಕೇವಲ 30 ನಾಟಿಕೋಟಿಗಳಲ್ಲಿ ಈ ರೋಗ ಕಾಣಿಸಿ ಕೊಂಡಿತ್ತು ಎಂದು ಲ್ಯಾಬ್ ವರದಿ ತಿಳಿಸಿದೆ. ಕೋಳಿಮಾಂಸ ಬೇಯಿಸಿ ತಿನ್ನುವುದರಿಂದ ಯಾವ ಸಮಸ್ಯೆಯೂ ಇಲ್ಲ.ಆದರೂ ಈ ರೋಗವನ್ನು ನಿರ್ಮೂಲನೆ ಮಾಡಲು ಜಿಲ್ಲಾ ಡಳಿತ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಬೇಕು.ಕೋಳಿಸಾಕಣೆದಾರರಿಗೆ ಸರಿಯಾದ ರೀತಿ ಯಲ್ಲಿ ನಷ್ಟ ಆಗದಂತೆ ಒಂದು ಕೋಳಿಗೆ 400 ರೂಪಾಯಿ ಕೊಡಬೇಕು ಎಂದು ಆಗ್ರಹಿ ಸುತ್ತೇನೆ ಎಂದರು.

ಸಂಸದರಿಗೆ ಬರುವ ಅರ್ಜಿಗಳು
ಜನತಾ ದರ್ಶನದಲ್ಲಿ ಬೋರ್‌ವೆಲ್ ಸಮಸ್ಯೆ, ಅಣ್ಣತಮ್ಮಂದಿರ ವ್ಯಾಜ್ಯಗಳು, ಪೊಲೀಸ್ ಸ್ಟೇಷನ್ ಸಮಸ್ಯೆ,ಭೂಮಿ ಸಮಸ್ಯೆ,ವಸತಿ ಸಮಸ್ಯೆ, ರಸ್ತೆ ಸಮಸ್ಯೆ, ಉದ್ಯೋಗ ಸಮಸ್ಯೆಗಳ ಬಗ್ಗೆ ದೂರುಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ.ಅವರಿಗೆ ಒಬ್ಬ ಸಂಸದನಾಗಿ ಯಾವ ರೀತಿ ಸಹಾಯ ಮಾಡಬಹುದೋ ಅದೆಲ್ಲಾ ರೀತಿಯಲ್ಲಿ ಮಾಡಲು ಮುಂದಾಗಿದ್ದೇನೆ. ಜಿಲ್ಲಾಡಳಿತ ತಾಲೂಕು ಆಡಳಿತದ ಅಧಿಕಾರಿಗಳಿಗೆ ಪೋನ್ ಮಾಡಿಯೂ ಜನರ ಸಮಸ್ಯೆ ಗಳಿಗೆ ಸ್ಪಂದಿಸಲು ಹೇಳಿದ್ದೇನೆ ಎನ್ನುವುದು ಸಂಸದ ಡಾ.ಕೆ.ಸುಧಾಕರ್ ಅವರ ಮಾತು.