ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Ravi Hunj Column: ಹಿಂದೂ ಪ್ರಭೇದಗಳ ಒಗ್ಗೂಡಿಸುವಿಕೆ ಒಡೆಯುವಿಕೆ !

ಹದಿಮೂರನೇ ಶತಮಾನದ ವೇದಾಂತದೇಶಿಕನು, “ಮಾಧ್ಯಮಿಕ ಬೌದ್ಧಶಾಲೆಯಲ್ಲಿ ವೇದ ವನ್ನು ಕಲಿತವನು ಛದ್ಮವೇಷಧಾರಿ ಶಂಕರಾಚಾರ್ಯ" ಎನ್ನುತ್ತ ಮಾಯಾವಾದದ ನೂರು ತಪ್ಪುಗಳನ್ನೊಪ್ಪಿಸುವ ‘ಶತದೂಷಿಣಿ’ ಸೂತ್ರವನ್ನೇ ರಚಿಸಿದ್ದಾನೆ. ಕೇವಲ ಶತದೂಷಿಣಿಯನ್ನು ಗಿಳಿಪಾಠ ಮಾಡಿಕೊಂಡು ಈ ಅದ್ವೈತ ವೇಷಧಾರಿ ಬೌದ್ಧರನ್ನು ಸೋಲಿಸ ಬಹುದೆಂದು ಹೀಗಳೆದಿದ್ದಾನೆ

ಹಿಂದೂ ಪ್ರಭೇದಗಳ ಒಗ್ಗೂಡಿಸುವಿಕೆ ಒಡೆಯುವಿಕೆ !

ಅಂಕಣಕಾರ ರವಿ ಹಂಜ್

Profile Ashok Nayak Mar 4, 2025 6:04 AM

ಬಸವ ಮಂಟಪ (ಭಾಗ-೧)

ರವಿ ಹಂಜ್

ಕಾಲಚಕ್ರವು ಉರುಳಿದಂತೆ ಯಾವುದು ಮೇಲಿರುತ್ತದೋ ಅದು ಕೆಳಗೆ ಬರಲೇಬೇಕೆಂಬುದು ವಿಧಿನಿಯಮವೇ ಆಗಿರಬಹುದು! ಬೌದ್ಧಧರ್ಮ ಕೂಡಾ ಇದಕ್ಕೆ ಹೊರತಾಗಲಿಲ್ಲ. ಜ್ಞಾನಿ ಗಳಾಗಿದ್ದ ಬೌದ್ಧಭಿಕ್ಷುಗಳು ಕ್ರಮೇಣವಾಗಿ ಸೋಮಾರಿಗಳಾಗುತ್ತ ತಮ್ಮ ತಿಳಿವಳಿಕೆಯನ್ನು ಕೇವಲ ಕಂಠಪಾಠಕ್ಕೆ ಸೀಮಿತಗೊಳಿಸಿಕೊಂಡಿದ್ದರು ಎಂದು ಹುಯೆನ್ ತ್ಸಾಂಗ್ ದಾಖಲಿ‌ ಸಿದ್ದಾನೆ. ಬೌದ್ಧಜ್ಞಾನವನ್ನು ಕಂಠಪಾಠ ಮಾಡಿಕೊಳ್ಳುತ್ತ, ಸೂತ್ರಗಳನ್ನು ಪಠಿಸುತ್ತ, ಸಮಾಜದಿಂದ ದೂರವಿರುವ ಬೌದ್ಧಮಠಗಳಲ್ಲಿರುತ್ತಿದ್ದ ಈ ಬೌದ್ಧಭಿಕ್ಷುಗಳಿಗೆ ಸಮಾಜ ದಲ್ಲಿನ ಆಗು ಹೋಗುಗಳಿಗೆ ತಕ್ಕನಾಗಿ ವ್ಯವಹರಿಸುವ ಕುಶಲತೆ ಇರಲಿಲ್ಲ. ಸಾಕಷ್ಟು ಬ್ರಾಹ್ಮಣರು ಬೌದ್ಧರಾದರೂ ಹಿಂದೂ ದೇವತೆಗಳ ಪೂಜೆಯನ್ನೂ ಮಾಡುತ್ತಿದ್ದರು. ಈ ಮೊದಲೇ ಹೇಳಿದಂತೆ ಬುದ್ಧ, ಮಹಾವೀರರನ್ನು ಅಂದಿನ ಜನಾಂಗವು ದಾರ್ಶನಿಕರೆಂದು ಕಂಡಿತ್ತೇ ಹೊರತು ಬೇರೆ ಧರ್ಮ ಸಂಸ್ಥಾಪಕರೆಂದಲ್ಲ.

ಇದನ್ನೂ ಓದಿ: Ravi Hunj Column: ಶಾಸ್ತ್ರಗಳಲ್ಲಿಯೂ ರೋಚಕತೆ, ಭಾವಾವೇಶಗಳನ್ನು ತುರುಕಲಾಯಿತು...!

ಹಾಗಾಗಿ ಬೌದ್ಧ ತತ್ವವನ್ನು ಒಪ್ಪಿದ್ದರೂ ಅವರೆ ಹಿಂದೂ ದೇವತೆಗಳನ್ನೇ ಆರಾಧಿಸು ತ್ತಿದ್ದರು. ಹೀಗೆ ಬೌದ್ಧಧರ್ಮವು ಅಧೋಗತಿಯ ಹಾದಿಯಲ್ಲಿದ್ದ ಸಂದರ್ಭವನ್ನು ಬಳಸಿ ಶಂಕರಾಚಾರ್ಯರು ಬೌದ್ಧರನ್ನು ಸುಲಭವಾಗಿ ವಾದದಲ್ಲಿ ಸೋಲಿಸಿ ಹಿಂದೂ ಪಂಥ ಗಳನ್ನು ಒಗ್ಗೂಡಿಸಿದರು. ಹಾಗಾಗಿಯೇ ಶಂಕರರ ನಂತರದ ಕಾಲದ ವೈಷ್ಣವ ಪಂಥದ ಭಾಸ್ಕರಾಚಾರ್ಯ, ಯಮುನಾಚಾರ್ಯ ಮತ್ತು ರಾಮಾನುಜಾಚಾರ್ಯರು ಶಂಕರರನ್ನು ನೇರವಾಗಿ ಮತ್ತು ಪರೋಕ್ಷವಾಗಿ ಹೀಗಳೆದಿದ್ದಾರೆ.

‘ಬುದ್ಧತತ್ವಗಳನ್ನೇ ಮಾಯಾವಾದ ಮತ್ತು ಅದ್ವೈತ ಸಿದ್ಧಾಂತದ ರೂಪದಲ್ಲಿ ಮಂಕು ಮಾಡಿದ ಚಾಣಾಕ್ಷ ಪ್ರಚ್ಛನ್ನಬುದ್ಧ’ ಎಂದು ಶಂಕರರನ್ನು ಹೀಗಳೆದು ತಮ್ಮ ಪಂಥ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಭಾಸ್ಕರಾಚಾರ್ಯರು “ಬೌದ್ಧಮತಾವಲಂಬಿ ಅದ್ವೈತದ ಮಾಯಾವಾದವನ್ನು ಒಂದು ಸಿದ್ಧಾಂತವೆಂದು ಕೇವಲ ಒಬ್ಬ ಕುಡುಕನಾದವನು ಮಾತ್ರ ವಾದಿಸಬಲ್ಲನು" ಎಂದು ಶಂಕರಾಚಾರ್ಯರನ್ನು ಹೀಗಳೆಯುತ್ತಾ ತಮ್ಮ ಪಂಥವೇ ವೇದಾಂತದ ನಿಜ ಪಂಥವೆನ್ನುತ್ತಾರೆ.

ಹದಿಮೂರನೇ ಶತಮಾನದ ವೇದಾಂತದೇಶಿಕನು, “ಮಾಧ್ಯಮಿಕ ಬೌದ್ಧಶಾಲೆಯಲ್ಲಿ ವೇದವನ್ನು ಕಲಿತವನು ಛದ್ಮವೇಷಧಾರಿ ಶಂಕರಾಚಾರ್ಯ" ಎನ್ನುತ್ತ ಮಾಯಾವಾದದ ನೂರು ತಪ್ಪುಗಳನ್ನೊಪ್ಪಿಸುವ ‘ಶತದೂಷಿಣಿ’ ಸೂತ್ರವನ್ನೇ ರಚಿಸಿದ್ದಾನೆ. ಕೇವಲ ಶತದೂ ಷಿಣಿಯನ್ನು ಗಿಳಿಪಾಠ ಮಾಡಿಕೊಂಡು ಈ ಅದ್ವೈತ ವೇಷಧಾರಿ ಬೌದ್ಧರನ್ನು ಸೋಲಿಸ ಬಹುದೆಂದು ಹೀಗಳೆದಿದ್ದಾನೆ.

ಮಹಾಯಾನದ ಬೌದ್ಧಸೂತ್ರಗಳಿಗೂ, ಅದ್ವೈತಕ್ಕೂ ಸಾಕಷ್ಟು ಸಾಮ್ಯತೆಯಿರುವುದು ಸತ್ಯವೆಂದು ಸಾಕಷ್ಟು ತತ್ವeನಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಶಂಕರಾಚಾರ್ಯರ ಗುರುವಿನ (ಗೋವಿಂದ ಭಾಗವತ್ಪಾದ) ಗುರು ಗೌಡಪದಾಚಾರ್ಯರು ರಚಿಸಿದ ಗೌಡ ಪದಕಾರಿಕವು ಬೌದ್ಧಗುರು ನಾಗಾರ್ಜುನನು ರಚಿಸಿದ್ದ ‘ಅಸಂಗ’ದ ತಿರುಚಿದ ಚನೆಯಾಗಿದೆ ಎಂದು ಸಾಕಷ್ಟು ಇತಿಹಾಸಜ್ಞರು ಪ್ರಮಾಣಿಸಿದ್ದಾರೆ.

ವಿಪರ್ಯಾಸವೆಂದರೆ ಶಂಕರರ ಅದ್ವೈತವನ್ನು ಬೌದ್ಧಧರ್ಮದ ನಕಲೆಂದು ಹೀಯಾ ಳಿಸುವ ವೈಷ್ಣವರು ತಮ್ಮ ಮೂಲ ಕೂಡಾ ಬೌದ್ಧಧರ್ಮವೇ ಆಗಿತ್ತೆಂಬುದನ್ನೇ ಮರೆತು ಬಿಟ್ಟಿದ್ದರು. ಬೌದ್ಧಧರ್ಮದ ನಿದ್ದೇಶದಲ್ಲಿನ ಜಾತಕ ಕತೆಗಳಿಂದ ಮೈದಾಳಿದ ಯವನರ (ಗ್ರೀಕರ) ವೈಷ್ಣವ ಕೂಡಾ ಮೂಲದಲ್ಲಿ ಬೌದ್ಧವೇ ಆಗಿದ್ದಿತು.

ಒಟ್ಟಾರೆ ಶಂಕರರು ಒಗ್ಗೂಡಿಸಿದ್ದ ಹಿಂದೂ ಧರ್ಮ ಹೀಗೆ ಮತ್ತೊಮ್ಮೆ ಸಮಯಭೇದಕ್ಕೆ ಒಳಗಾಯಿತು. ಆದರೂ ಈ ಭೇದವು ತಾರ್ಕಿಕವಾಗಿದ್ದಿತೇ ಹೊರತು ಪರಸ್ಪರ ನಾಶ ಮಾಡು ವ ಹಂತಕ್ಕೆ ಇರಲಿಲ್ಲ. ಆದರೆ ಶಂಕರರ ನಂತರ ಹಿಂದೂ ಧರ್ಮಕ್ಕೆ ಮರ್ಮಾಘಾತವೇ ಕಾದಿತ್ತು!

ಮೊದಲ ಹಂತದಲ್ಲಿ ಪಾರ್ಶ್ವ, ಪಾರ್ಥೇನಿಯನ್, ಪಹಲ್ವರಾಗಿ ಬಂದಿದ್ದ ಇಲ್ಲಿನ ಅಗ್ನಿ ಆರಾಧಕರೇ ಶತಮಾನಗಳ ನಂತರದಲ್ಲಿ ಇಸ್ಲಾಮಿಗೆ ಪರಿವರ್ತಿತರಾಗಿ ಬಂಡುಕೋರರಾಗಿ ಆಗಮಿಸಿದರು. ನಂತರದ್ದು ಇತಿಹಾಸ!

ಇಸ್ಲಾಂ ಆಡಳಿತದಲ್ಲಿ ಮುಸ್ಲಿಮರಲ್ಲದವರನ್ನು ಎರಡನೇ ದರ್ಜೆಯ ನಾಗರಿಕರಂತೆ ಕಾಣುವ ಆಡಳಿತಾತ್ಮಕ ವ್ಯವಸ್ಥೆ ಜನಾಂಗೀಯ ದ್ವೇಷವನ್ನು ಹುಟ್ಟುಹಾಕಿತು. ಈ ಪಲ್ಲಟ ದಿಂದ ‘ಹುಟ್ಟಿನಿಂದ ಜಾತಿ’ಯನ್ನು ಅಪ್ಪಿಕೊಂಡ ಹಿಂದೂಗಳಿಗೆ ಇಸ್ಲಾಂ ಆಡಳಿತದ ಮೊದಲ ದರ್ಜೆ/ ಎರಡನೇ ದರ್ಜೆಯೆಂಬ ಭೇದವು ಗರ್ವದ ಸಂಕೇತವೆನಿಸಿತು. ತಮ್ಮ ಎರಡನೇ ದರ್ಜೆಯ ಅವಮಾನವನ್ನು ಮುಸ್ಲಿಮರ ಮೇಲೆ ತೋರಲಾಗದೆ ಅವರು ತಮ್ಮದೇ ಆದ ಕೆಳವರ್ಗಗಳ ಮೇಲೆ ಹೇರಲಾರಂಭಿಸಿದರು. ಕುಲೀನ ಹಿಂದೂಗಳು ತಮಗಿಂತ ಕೆಳಸ್ತರದ ಹಿಂದೂಗಳನ್ನು ಮೂರನೇ ದರ್ಜೆಯ, ನಾಲ್ಕನೇ ದರ್ಜೆಯ ನಾಗರಿಕರಂತೆ ಕಾಣಲಾರಂಭಿಸಿದರು.

ಈ ದರ್ಪದ ಹೇರಿಕೆಗೆ ತಕ್ಕಂತೆ ಸಮಾಜ, ವೇದ, ಧರ್ಮ, ಆಚರಣೆ, ವರ್ಣಗಳೆ ತಿರುಚ ಲ್ಪಟ್ಟವು. ಮುಸಲ್ಮಾನರು ತಮ್ಮ ಆಚರಣೆಗೆ ಕುರಾನ್ ಕಡೆ ಬೆರಳು ತೋರಿಸಿದಂತೆ, ಹಿಂದೂಗಳು ವೇದೋಪನಿಷತ್ತು, ವರ್ಣಗಳೆಡೆ ಬೆರಳು ತೋರಲಾರಂಭಿಸಿದರು. ಅಲ್ಲಿಯ ವರೆಗೆ ಆಳುವವರ ಮಟ್ಟದಲ್ಲಿದ್ದ ಅಸಮಾನತೆ, ಹೀಗೆ ಹಿಂದೂ ಸಮಾಜದ ಕಟ್ಟಕಡೆಯ ವರ್ಗದವರೆಗೆ ಹೇರಲ್ಪಟ್ಟಿತು. ಅದಲ್ಲದೇ ಈ ಎಲ್ಲಾ ವರ್ಗಗಳಲ್ಲಿ ಮಹಿಳೆಯು ಭೋಗ ವಸ್ತುವಾಗುತ್ತ ಅಸ್ತಿತ್ವವನ್ನು ಕಳೆದುಕೊಳ್ಳಲಾರಂಭಿಸಿದಳು.

ಜಗತ್ತಿನ ಇಲ್ಲಿನವರೆಗಿನ ಕ್ರಾಂತಿಗಳನ್ನು ಗಮನಿಸಿದಾಗ ಯಾವಾಗ ಸಮಾಜದಲ್ಲಿ ಕ್ಷಿಪ್ರ ಬದಲಾವಣೆಗಳು ಆಗುತ್ತವೆಯೋ ಆಗಲೇ ಕ್ರಾಂತಿಗಳು ಸಂಭವಿಸಿರುವುದು ಎಂದು ತಿಳಿದು ಬರುತ್ತದೆ. ಇಸ್ಲಾಂ ಆಡಳಿತ ತಂಡ ಕ್ಷಿಪ್ರ ಸಾಮಾಜಿಕ ಪಲ್ಲಟಗಳನ್ನು ಪೂರ್ವಗ್ರಹವಿಲ್ಲದೆ ತುಸು ಒರೆಹಚ್ಚಿ ವಾಸ್ತವದ ಹಿನ್ನೆಲೆಯಲ್ಲಿ ವಿಶ್ಲೇಷಣಾತ್ಮಕವಾಗಿ ನೋಡಿದಾಗ ಈ ಪಲ್ಲಟ ಗಳು ಸುಸ್ಪಷ್ಟವಾಗಿ ಗೋಚರಿಸುತ್ತವೆ.

ಸಮಾಜದಲ್ಲಿ ಕುಲೀನ-ಮಲಿನ, ಉಚ್ಚ-ನೀಚ, ಬಡವ-ಬಲ್ಲಿದ ಎಂಬ ವರ್ಗ ಜಾತಿ ಸಂಘರ್ಷಗಳನ್ನು ನಿಗ್ರಹಿಸಲು ಕ್ರಾಂತಿ ಅಂದು ಅವಶ್ಯವೆನಿಸಿತು. ಕೇವಲ ಕಿಚ್ಚು ರೊಚ್ಚಿ ನಿಂದ ಜನ ಸಂಘಟನೆಯ ಕ್ರಾಂತಿಯು ಅಂದಿನ ಆಡಳಿತಗಳಲ್ಲಿ ಕಷ್ಟವಾದ ಕಾರಣವೇ ಭಕ್ತಿ ಮಾರ್ಗ ಸುಲಭದ ಹಾದಿ ಎನಿಸಿತ್ತು.

ಹಾಗಾಗಿ ಭಕ್ತಿಮಾರ್ಗದಲ್ಲಿ ಉದಯಗೊಂಡುದೇ ಸಮಾನತೆಯನ್ನು ಪ್ರತಿಪಾದಿಸುವ ಭಕ್ತಿಪಂಥವೆಂಬ ಕ್ರಾಂತಿ. ಇದರ ಪರಿಣಾಮವಾಗಿ ಶಾಸ್ತ್ರ, ಕ್ರಮ, ಕ್ಲಿಷ್ಟ ಪದ್ಧತಿಗಳನ್ನು ಸರಳೀಕರಿಸಿ ಭಾವನಾತ್ಮಕ ಸಾಹಿತ್ಯ ರಚನೆಗೊಂಡಿತು. ಕೆಲವು ಪಂಥಗಳು ವೇದೋ ಪನಿಷತ್ತುಗಳ ಸಾರವನ್ನೇ ಸರಳಗೊಳಿಸಿದರೆ, ಕೆಲವು ಪಂಥಗಳು ವೇದೋಪನಿಷತ್ತು ಗಳನ್ನು ಧಿಕ್ಕರಿಸಿದವು. ಆದರೆ ತುಸು ವಾಸ್ತವದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಈ ಧಿಕ್ಕರಿ ಸುವಿಕೆಗೆ ಕಾರಣ ಇವುಗಳದ ತಿದ್ದುಪಡಿಗಳು!

ಹಾಗಾಗಿಯೇ ಬಸವಣ್ಣ ‘ವೇದಕ್ಕೆ ಒರೆಯ ಕಟ್ಟುವೆ’ ಎಂದಿರುವುದು. ಅಂದರೆ ವೇದವನ್ನು ಈ ತಿದ್ದುಪಡಿಗಳಿಂದ ಮುಕ್ತಗೊಳಿಸುವೆ ಎಂದು! ಇದನ್ನೇ ವಚನ ಚಳವಳಿಯಲ್ಲದೇ ಭಕ್ತಿಪಂಥದ ಎಲ್ಲಾ ಪ್ರಭೇದಗಳೂ ಅನುಸರಿಸಿದ್ದು. ಹೀಗೆ ಸಮಗ್ರವನ್ನು ಗ್ರಹಿಸದೆ ಸಂಕು ಚಿತವ ವಿಶ್ಲೇಷಿಸಿ ಸಂಕಥನ ಕಟ್ಟಿ ಸಂಕುಚಿತ ಮನೋಭಾವವನ್ನು ಹೇರಿದ ಕಮ್ಯುನಿ ಪ್ರಣೀತರು ಇಂದು ಉದಾರವಾದಿಗಳು ಎನಿಸಿರುವುದು ದೇಶದ ದುರಂತ.

ಇರಲಿ, ತರ್ಕವಿಲ್ಲದ ಕಂಠಪಾಠದ ತಾತ್ವಿಕತೆಯ ವಿರುದ್ಧ ಶಂಕರರು ಕಟ್ಟಿದ ಧರ್ಮ ಸಂಘಟನೆಯನ್ನು ಬ್ರಾಹ್ಮಣ ಭಕ್ತಿಪಂಥ ಎಂದರೆ, ಇಸ್ಲಾಂ ಆಡಳಿತದದ ಸಾಮಾಜಿಕ ಪಲ್ಲಟದ ವಿರುದ್ಧದ ಭಕ್ತಿಪಂಥವನ್ನು ಶೂದ್ರ ಭಕ್ತಿಪಂಥ ಎನ್ನಬಹುದು. ಒಟ್ಟಾರೆ ಹಿಂದೂ ಧರ್ಮ ಯದಾಯದಾಹಿ ಸಂಕಷ್ಟ ಬಂದಾಗ ಹೀಗೆ ಒಗ್ಗೂಡಿದೆ ಎನ್ನುವುದು ಐತಿಹಾಸಿಕ ವಾಗಿ ದಾಖಲಾಗಿರುವ ಒಂದು mZಠಿಠಿಛ್ಟ್ಞಿ, ನಮೂನೆ.

ಈ ಎರಡೂ ಭಕ್ತಿಪಂಥಗಳಲ್ಲಿ ವೀರಶೈವವು ಕೈಜೋಡಿಸಿತ್ತು. ಭಕ್ತಿಪಂಥದ ಜಂಗಮಪುರುಷ (ನವಲಿಂಗಾಯತರು ಕರೆಯುವ ವೀರಶೈವ ಆರಾಧ್ಯ ಬ್ರಾಹ್ಮಣ, ಲಿಂಗಿ ಬ್ರಾಹ್ಮಣ) ಬಸವ ಣ್ಣನ ಕ್ರಾಂತಿಯನ್ನು ಜಗತ್ತೇ ಬಲ್ಲದು. ಅದೇ ರೀತಿ ಶಂಕರರ ಕಾಲದ ಭಕ್ತಿಪಂಥದಲ್ಲಿ ಶಂಕರರಿಗೆ ವೀರಶೈವರ ರೇವಣಸಿದ್ಧ ಶಿವಯೋಗಿಯು ಚಂದ್ರಮೌಳೀಶ್ವರ ಲಿಂಗವನ್ನು ಕೊಟ್ಟು ಹರಸಿದ್ದನು. ಈ ಕುರಿತು ಶಂಕರ ಮಠದ ದಾಖಲೆಯೇ ಇದೆ.

ಆದರೆ ನಂತರದ ಪಂಥ ಶ್ರೇಷ್ಠತೆಯ ವ್ಯಸನ ವೀರಶೈವವನ್ನೂ ಶಂಕರಮಠವನ್ನು ವಿಭಜಿ ಸಿತು. ಹೇಗೆ ಎನ್ನುವ ಸತ್ಯಶೋಧನೆಯನ್ನು ಮೊದಲು ಇಂದಿನ ವಿಭಜಕ ಜಾಗತಿಕ ಲಿಂಗಾ ಯತ ಸಂಚಾಲಕರ ಅಭಿಪ್ರಾಯದಿಂದ ಆರಂಭಿಸೋಣ.

(ಮುಂದುವರಿಯುವುದು)

ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)