#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

MahaKumbh 2025: ಮಹಾಕುಂಭ ಮೇಳದ ಮೊದಲ ದಿನ 1.60 ಕೋಟಿ ಭಕ್ತರಿಂದ ಪುಣ್ಯ ಸ್ನಾನ; ಭಕ್ತಿ ಭಾವದ ಪರವಶ ಕ್ಷಣ!

Maha Kumbh: ಇಂದು ಮಹಾ ಕುಂಭಮೇಳದಲ್ಲಿ 1.60 ಕೋಟಿ ಭಕ್ತಾದಿಗಳು ಪುಣ್ಯ ಸ್ನಾನ ಮಾಡಿದ್ದಾರೆ.

MahaKumbh 2025: ಮಹಾಕುಂಭ ಮೇಳದ ಮೊದಲ ದಿನ 1.60 ಕೋಟಿ ಭಕ್ತರಿಂದ ಪುಣ್ಯ ಸ್ನಾನ; ಭಕ್ತಿ ಭಾವದ ಪರವಶ ಕ್ಷಣ!

Profile Deekshith Nair Jan 13, 2025 6:52 PM
ಲಖನೌ: ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳ (MahaKumbh 2025) ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್ (‌Prayagraj) ನಗರದ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸೋಮವಾರ (ಜ. 13) ಬೆಳಗ್ಗೆ ಆರಂಭವಾಗಿದೆ.
ಈ ಮಹಾ ಕುಂಭಮೇಳವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತದೆ. ಬರೋಬ್ಬರಿ ಹತ್ತು ಸಾವಿರ ಎಕರೆಯಲ್ಲಿ ಕುಂಭಮೇಳಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಂದಿನಿಂದ ಫೆ. 26ರವರೆಗೆ ಅಂದರೆ 45 ದಿನಗಳ ಕಾಲ ಕುಂಭಮೇಳ ನಡೆಯಲಿದ್ದು, 45 ಕೋಟಿಗೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕುಂಭಮೇಳದ ಮೊದಲ ದಿನವಾದ ಇಂದು ಸಂಜೆ 4 ಗಂಟೆಯವರೆಗೆ ಸರಿ ಸುಮಾರು 1.6 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ (Holy Dip).
"Bread more imp than religion"- Akhikesh Yadav.Meantime- 40 Lakh devotees took holy dip at #MahaKumbh2025 till 8:00 AM today.Min 40 Crore Sanatanis expected to attend #एकता_का_महाकुम्भ in 45 days. Means 1% of total in just 2-3 hrs.Some want to eradicate THIS Sanatan Dharm😂 pic.twitter.com/CbCsIytxr8— BhikuMhatre (@MumbaichaDon) January 13, 2025
ಬಹುದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಪ್ರಯಾಗ್‌ರಾಜ್‌ನತ್ತ ಕೋಟ್ಯಂತರ ಭಕ್ತರು, ಸಾಧು ಸಂತರು ಜಗತ್ತಿನ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದಾರೆ. ಮಹಾಕುಂಭ 2025ರ ಮೊದಲ ಸ್ನಾನದ ಹಬ್ಬವಾದ ಪೌಶ್ ಪೂರ್ಣಿಮೆಯ ಸಂದರ್ಭದಲ್ಲಿ ಸುಮಾರು 1 ಕೋಟಿ 60 ಲಕ್ಷ ಭಕ್ತರು ಇಂದು ಸಂಜೆ 4 ಗಂಟೆಯವರೆಗೆ ಪವಿತ್ರ ಸ್ನಾನ ಮಾಡಿದ್ದಾರೆ.
ಇದೇ ವೇಳೆ 250ಕ್ಕೂ ಹೆಚ್ಚು ಜನರು ಅಪಾರ ಜನಸ್ತೋಮದಲ್ಲಿ ತಮ್ಮ ಕುಟುಂಬದಿಂದ ಬೇರ್ಪಟ್ಟಿದ್ದರು. ನಂತರ ಅವರು ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ.
ಮಹಾ ಕುಂಭಮೇಳವನ್ನು ಹಾಡಿ ಹೊಗಳಿದ ಮುಸ್ಲಿಂ ಧರ್ಮಗುರು
ಮಹಾಕುಂಭಮೇಳವನ್ನು ಕಣ್ತುಂಬಿಕೊಂಡಿರುವ ಮುಸ್ಲಿಂ ಧರ್ಮ ಗುರುಗಳು ವ್ಯವಸ್ಥೆಯ ಅಚ್ಚುಕಟ್ಟುತನವನ್ನು ಹಾಡಿ ಹೊಗಳಿದ್ದಾರೆ. ಕುಂಭಮೇಳ ನಡೆಯುತ್ತಿರುವ ಅಷ್ಟೂ ಜಾಗ ಮುಸ್ಲಿಂ ವಕ್ಫ್‌ ಬೋರ್ಡಿಗೆ ಸೇರಿದ್ದು ಎಂಬ ಸಾಕಷ್ಟು ವಿವಾದಗಳ ಮಧ್ಯೆಯೇ ಕುಂಭಮೇಳವನ್ನು ಮುಸ್ಲಿಂ ಧರ್ಮ ಗುರುವೊಬ್ಬರು ಶ್ಲಾಘಿಸಿದ್ದಾರೆ. ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ( Barelvi) ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಪ್ರಶಂಸಿಸಿದ್ದು, ಭಕ್ತರಿಗೆ ಊಟ, ವಸತಿ ಮತ್ತು ಸ್ನಾನಕ್ಕೆ ಅತ್ಯುತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದಿದ್ದಾರೆ.
ವಕ್ಫ್ ಭೂಮಿಯಲ್ಲಿ ಮಹಾಕುಂಭವನ್ನು ನಡೆಸಲಾಗುತ್ತಿದೆ ಎಂದು ಪ್ರತಿಪಾದಿಸಿದ್ದ ಪ್ರಮುಖ ಮುಸ್ಲಿಂ ಧರ್ಮಗುರು ಭಾನುವಾರ (ಜ.12) ಕುಂಭಮೇಳದ ವ್ಯವಸ್ಥೆಗಳನ್ನು ಶ್ಲಾಘಿಸಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಮೂಲಕ ಮಾತನಾಡಿರುವ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ “ಈ ಅದ್ಧೂರಿ ಕಾರ್ಯಕ್ರಮವು ದೇಶದ ಜನರನ್ನು ಮಾತ್ರವಲ್ಲದೆ ಇಡೀ ವಿಶ್ವವನ್ನು ಮೆಚ್ಚಿಸುತ್ತದೆ. ಭಾರತವನ್ನು ಆಗಾಗ್ಗೆ ಟೀಕಿಸುವ ಪಾಕಿಸ್ತಾನ ಕೂಡ ಮಹಾಕುಂಭದ ಸಿದ್ಧತೆಗಳನ್ನು ವಿಶೇಷವಾಗಿ ಪ್ರಶಂಸಿಸುತ್ತಿದೆ. ಯೋಗಿ ಆದಿತ್ಯನಾಥ್ ಅವರು ಭಕ್ತರಿಗೆ ಊಟ, ವಸತಿ, ಸ್ನಾನದ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಕಾರ್ಯಕ್ರಮದ ಭವ್ಯತೆ ಮತ್ತು ಸುಗಮ ನಿರ್ವಹಣೆಯು ಅವರ ದೂರದೃಷ್ಟಿಯ ಯೋಜನೆಯ ಫಲಿತಾಂಶ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Mahakumbh 2025: AI ಕ್ಯಾಮರಾ, NSG ಕಮಾಂಡೋ, ಡ್ರೋನ್‌ಗಳು- ಮಹಾಕುಂಭಮೇಳಕ್ಕೆ ಭದ್ರತಾ ವ್ಯವಸ್ಥೆ ಹೇಗಿದೆ ಗೊತ್ತಾ?