#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಜತೆಗಿನ ಬ್ಯಾಟಿಂಗ್‌ ಅನುಭವ ತೆರೆದಿಟ್ಟ ಶುಭಮನ್‌ ಗಿಲ್‌!

Shubman Gill shares his experience with Rohit-Kohli: ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರೊಂದಿಗಿನ ಬ್ಯಾಟಿಂಗ್‌ ಅನುಭವನ್ನು ಶುಭಮನ್ ಗಿಲ್ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಶುಭಮನ್‌ ಗಿಲ್‌ ಉಪನಾಯಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಕೊಹ್ಲಿ, ರೋಹಿತ್‌ ಜತೆಗಿನ ಬ್ಯಾಟಿಂಗ್‌ ಅನುಭವ ತೆರೆದಿಟ್ಟ ಶುಭಮನ್‌ ಗಿಲ್‌!

Shubman Gill-Rohit Shrma

Profile Ramesh Kote Feb 8, 2025 4:57 PM

ನವದೆಹಲಿ: ಆಧುನಿಕ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರೊಂದಿಗೆ ಬ್ಯಾಟಿಂಗ್ ಅನುಭವವನ್ನು ಯುವ ಬ್ಯಾಟರ್ ಶುಭಮನ್ ಗಿಲ್ (Shubman Gill) ಹಂಚಿಕೊಂಡಿದ್ದಾರೆ. ಡಿಸ್ನಿ ಹಾಟ್‌ಸ್ಟಾರ್‌ನ ಇನ್‌ ಸೈಡ್ ಔಟ್ ವಿಥ್ ಗಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪ ನಾಯಕ, ಟೀಮ್ ಇಂಡಿಯಾದ ದಿಗ್ಗಜರೊಂದಿಗಿನ ಜೊತೆಯಾಟವನ್ನು ಆನಂದಿಸಿದ್ದೇನೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿರುವ ಶುಭಮನ್ ಗಿಲ್, ನಾಗ್ಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 87 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

IND vs ENG 2nd ODI: ಕಟಕ್‌ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ

ತಮ್ಮ ಬ್ಯಾಟಿಂಗ್‌ ಶ್ರೆಯ ರೋಹಿತ್ -ಕೊಹ್ಲಿಗೆ ಸಲ್ಲಬೇಕು: ಗಿಲ್

"ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್‌ ಯಶಸ್ಸಿನ ಶ್ರೇಯ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಸಲ್ಲಬೇಕು. ನಾನು ಯಾವಾಗ ರೋಹಿತ್ ಭಾಯ್ ಜೊತೆಗೆ ಆಡುತ್ತೆನೋ ಆಗ ಚೆಂಡನ್ನು ನೇರವಾಗಿ ಬಾರಿಸಬೇಕೆಂದು ಸಂಭಾಷಣೆ ನಡೆಸುತ್ತೇವೆ. ಪಂದ್ಯದ ಪರಿಸ್ಥಿತಿ ಹಾಗೂ ಪಿಚ್‌ನ ಗುಣದ ಕುರಿತು ಸಾಕಷ್ಟು ಚರ್ಚಿಸುತ್ತೇವೆ. ಆದ್ದರಿಂದ ಯಾವ ಬೌಲರ್ ಮೇಲೆ ಪ್ರಾಬಲ್ಯ ಸಾಧಿಸಬೇಕೆಂದು ಸುಲಭವಾಗಿ ಅರಿವಾಗುತ್ತದೆ. ಸಾಕಷ್ಟು ಸಮಯದಲ್ಲಿ ರೋಹಿತ್ ಭಾಯ್ ಜೊತೆಗೆ ಆಡುವುದು ಸಾಕಷ್ಟು ಸೂಕ್ತವೆನಿಸುತ್ತದೆ. ಆಟಗಾರರ ನಡುವೆ ಈ ರೀತಿಯ ಬಾಂಧವ್ಯ ಪಂದ್ಯ ಗೆಲ್ಲಲು ನಿರ್ಣಾಯಕವಾಗಿರುತ್ತದೆ," ಎಂದು ಶುಭಮನ್‌ ಗಿಲ್‌ ತಿಳಿಸಿದ್ದಾರೆ.



ಕೊಹ್ಲಿ ಜತೆ ಆಡುವುದು ನಿಜಕ್ಕೂ ಅದ್ಭುತ ಅನುಭವ

"ವಿರಾಟ್ ಕೊಹ್ಲಿ ಜೊತೆಗೆ ಆಡುವಾಗ ಸದಾ ಸ್ಟ್ರೆಕ್ ಬದಲಾಯಿಸುತ್ತಿರಬೇಕು. ಸಿಂಗಲ್‌ ರನ್ ಕದಿಯುವ ಮೂಲಕ ತಮ್ಮ ಫಾರ್ಮ್ ಉತ್ತಮವಾಗಿಟ್ಟುಕೊಂಡು ಪಂದ್ಯದಲ್ಲಿ ತಮ್ಮ ವಿಕೆಟ್ ಉಳಿಸಿಕೊಳ್ಳಬೇಕು. ಇಬ್ಬರು ದಿಗ್ಗಜರೊಂದಿಗೆ ಆಡುವುದು ವಿಭಿನ್ನ ಅನುಭವವಾಗಿದೆ. ಆದರೆ ಕೆಲವೊಮ್ಮೆ ಅವರೊಂದಿಗಿನ ಜೊತೆಯಾಟ ಸಾಕಷ್ಟು ಆನಂದ ತಂದಿದೆ," ಎಂದು ಶುಭಮನ್ ಗಿಲ್ ಹೇಳಿದ್ದಾರೆ.

2019ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶುಭಮನ್ ಗಿಲ್, ಮೂರು ಮಾದರಿ ಕ್ರಿಕೆಟ್‌ನಲ್ಲಿ 42.85ರ ಸರಾಸರಿಯಲ್ಲಿ 24 ಅರ್ಧಶತಕ ಹಾಗೂ 12 ಶತಕಗಳ ನೆರವಿನಿಂದ 4886 ರನ್ ಗಳಿಸಿದ್ದಾರೆ.

IND vs ENG 2nd ODI: ದ್ವಿತೀಯ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಏಕದಿನ ಸರಣಿಯಲ್ಲಿ ಭಾರತ ಶುಭಾರಂಭ

ನಾಗ್ಪುರ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ತಂಡ, 4 ವಿಕೆಟ್‌ಗಳ ಗೆಲುವು ಪಡೆದಿತ್ತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಇನ್ನು ಎರಡನೇ ಏಕದಿನ ಪಂದ್ಯ ಫೆಬ್ರವರಿ 9 ರಂದು ಭಾನುವಾರ ಕಟಕ್‌ಕ ಬಾರಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಮ್‌ ಇಂಡಿಯಾ ಸಜ್ಜಾಗುತ್ತಿದೆ.