Champions trophy: ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಸುರೇಶ್ ರೈನಾ!
Suresh Raina on Rohit Sharma's form: ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡು ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಈ ಕುರಿತು ಮಾತನಾಡಿರುವ ಸುರೇಶ್ ರೈನಾ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆಗೆ ರೋಹಿತ್ ಶರ್ಮಾ ಲಯ ಕಂಡುಕೊಂಡರೆ ಅವರು ವಿಭಿನ್ನ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
![IND vs ENG: ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಬೇಕೆಂದ ಸುರೇಶ್ ರೈನಾ!](https://cdn-vishwavani-prod.hindverse.com/media/original_images/Suresh_Raina-Rohit_Sharma.jpg)
Suresh Raina on Rohit Sharma's form
![Profile](https://vishwavani.news/static/img/user.png)
ನವದೆಹಲಿ: ಚಾಂಪಿಯನ್ ಟ್ರೋಫಿ ಟೂರ್ನಿಯ ವೇಳೆಗೆ ರೋಹಿತ್ ಶರ್ಮಾ (Rohit Sharma) ತಮ್ಮ ಫಾರ್ಮ್ ಕಂಡುಕೊಂಡರೆ ವಿಭಿನ್ನ ನಾಯಕರಾಗಿ ಕಾಣಿಸುತ್ತಾರೆ ಎಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ (Suresh Raina) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2024ರ ಟಿ20ಐ ವಿಶ್ವಕಪ್ ಟೂರ್ನಿಯ ನಂತರ ತಮ್ಮ ಫಾರ್ಮ್ ಕಳೆದುಕೊಂಡಿರುವ ರೋಹಿತ್ ಶರ್ಮಾ, ಲಯಕ್ಕೆ ಮರಳಲು ಸಾಕಷ್ಟು ತಿಣುಕಾಡುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 5 ಇನಿಂಗ್ಸ್‌ಗಳಿಂದ ರೋಹಿತ್ ಶರ್ಮಾ ಕೇವಲ 31 ರನ್ ಗಳಿಸಿದ್ದರು. ಈ ಕಾರಣದಿಂದ ಅವರು ಕೊನೆಯ ಪಂದ್ಯದಿಂದ ಹಿಂದೆ ಸರಿದಿದ್ದರು. ಪರಿಣಾಮವಾಗಿ ಭಾರತ 1-3 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತು. ತಮ್ಮ ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿ ಟೂರ್ನಿಯಲ್ಲಿಯೂ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದರು. ಆದರೂ ಇಲ್ಲಿಯೂ ಅವರು ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ದ ಮುಂಬೈ ತಂಡ ಸೋಲು ನುಭವಿಸಿತ್ತು.
ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದರೂ ಕೂಡ ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿ ಯುವ ವೇಗಿ ಸಾಕಿಬ್ ಮಹಮೂದ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಮಯೋಚಿತ ಬ್ಯಾಟಿಂಗ್ ಬಲದಿಂದ ಭಾರತ 4 ವಿಕೆಟ್ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
IND vs ENG 2nd ODI: ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?
ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಬೇಕು: ಸುರೇಶ್ ರೈನಾ
ನಾಗ್ಪುರ ಏಕದಿನ ಪಂದ್ಯದ ನಂತರ ಸ್ಪೋರ್ಟ್ಸ್ 18 ಜೊತೆ ಮಾತನಾಡಿರುವ ಸುರೇಶ್ ರೈನಾ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾ ಫಾರ್ಮ್ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
"ರೋಹಿತ್ ಶರ್ಮಾ ಮತ್ತೆ ತಮ್ಮ ಸ್ಫೋಟಕ ಫಾರ್ಮ್‌ಗೆ ಮರಳಲು ನಾಗ್ಪುರ ಪಿಚ್ ಉತ್ತಮ ವೇದಿಕೆಯಾಗಿತ್ತು. ಆದರೆ ಅವರು ಸ್ವಲ್ಪ ಶ್ರಮ ಹಾಕಬೇಕಿತ್ತು. ಈಗ ತಂಡ ಕಟಕ್ ತಲುಪಿದೆ. ಈ ಪಿಚ್ ಕೂಡ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಲು ನೆರವಾಗಲಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾ ತಮ್ಮ ಎಂದಿನ ಲಯಕ್ಕೆ ಮರಳಿದರೆ ನಾವು ರೋಹಿತ್ ಶರ್ಮಾ ಅವರಲ್ಲಿ ವಿಭಿನ್ನ ನಾಯಕ ಹಾಗೂ ಸ್ಫೋಟಕ ಪ್ರದರ್ಶನ ನೋಡಬಹುದು," ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
IND vs ENG: ರೋಹಿತ್-ಕೊಹ್ಲಿಯಿಂದ ಸಾಧ್ಯವಾಗದ ಅಪರೂಪದ ದಾಖಲೆ ಬರೆದ ಶುಭಮನ್ ಗಿಲ್!
ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ರನ್ ಗಳಿಸಬೇಕು
ರೋಹಿತ್ ಶರ್ಮಾ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಕಳೆದ 16 ಇನಿಂಗ್ಸ್‌ಗಳಿಂದ ಕೇವಲ 166 ರನ್ ಗಳಿಸಿದ್ದಾರೆ. ಎಡಮೊಣಕಾಲಿನ ನೋವಿನ ಸಮಸ್ಯೆಯಿಂದ ನಾಗ್ಪುರ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, ಮುಂದಿನ ಎರಡು ಪಂದ್ಯಗಳಲ್ಲಿ ಆಡಬೇಕು ಎಂದು ಸುರೇಶ್ ರೈನಾ ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್‌ನೆಸ್‌ಗೆ ಮರಳುತ್ತಾರೆಯೇ ಎಂಬುದು ಇದೀಗ ಮುಖ್ಯ ಪ್ರಶ್ನೆಯಾಗಿದೆ. ಏಕೆಂದರೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳಲ್ಲಿ ಭಾರತ ತಂಡದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಿಂದ ದೊಡ್ಡ ಮೊತ್ತ ಹರಿದು ಬರುವುದು ಮುಖ್ಯವಾಗಿದೆ," ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
IND vs ENG: 2 ರನ್‌ಗೆ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ!
ಇಂಗ್ಲೆಂಡ್ ವಿರುದ್ಧ ಕಾನ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ 4 ವಿಕೆಟ್ ಗೆಲುವು ಪಡೆದಿರುವ ಭಾರತ ತಂಡ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಕಟಕ್ ಪಂದ್ಯ ಗೆದ್ದು 2-0 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವತ್ತ ಗಮನ ಹರಿಸಿದ್ದರೆ, ಇಂಗ್ಲೆಂಡ್ ಕಮ್ ಬ್ಯಾಕ್ ಮಾಡಿ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಎದುರು ನೋಡುತ್ತಿದೆ.