Pat Cummins: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಆಸೀಸ್ ನಾಯಕ ಕಮಿನ್ಸ್
Pat Cummins: ಕಮಿನ್ಸ್ ಮತ್ತು ಬೆಕಿ ಆಗಸ್ಟ್ 2022 ರಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ 2021 ರಲ್ಲಿ ಆಲ್ಬಿ ಎಂಬ ಮಗಳಿಗೆ ಜನ್ಮ ನೀಡಿದ್ದರು. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಪ್ಯಾಟ್ ಕಮಿನ್ಸ್ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್(Pat Cummins) ಎರಡನೇ ಮಗುವಿನ ತಂದೆಯಾಗಿದ್ದಾರೆ. ಅವರ ಪತ್ನಿ ಬೆಕಿ(Becky) ಕಮಿನ್ಸ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ವಿಷಯವನ್ನು ಸಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಮುದ್ದಾದ ಮಗಳ ಫೋಟೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ. 'ನಾವು ಅತ್ಯಂತ ಖುಷಿಯಾಗಿದ್ದೇವೆ. ಇವಳೇ ನಮ್ಮ ಮುದ್ದಾದ ಮಗಳು 'ಇಡಿ' ಎಂದು ಕಮಿನ್ಸ್ ಬರೆದುಕೊಂಡಿದ್ದಾರೆ.
ಕಮಿನ್ಸ್ ಮತ್ತು ಬೆಕಿ ಆಗಸ್ಟ್ 2022 ರಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ 2021 ರಲ್ಲಿ, ಆಲ್ಬಿ ಎಂಬ ಮಗಳಿಗೆ ಜನ್ಮ ನೀಡಿದ್ದರು. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಪ್ಯಾಟ್ ಕಮಿನ್ಸ್ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.
ಕಮಿನ್ಸ್ ಭಾರತ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ಪಾದದ ನೋವಿಗೆ ಸಿಲುಕಿದ್ದರು. ಶ್ರೀಲಂಕಾ ಪ್ರವಾಸದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು. ಕಮಿನ್ಸ್ ಜತೆಗೆ ಜೋಶ್ ಹ್ಯಾಜಲ್‌ವುಡ್ ಕೂಡ ಗಾಯದಿಂದ ಅಲಭ್ಯರಾಗಿದ್ದಾರೆ. ಬೌಲಿಂಗ್ ವಿಭಾಗದ ಎಲ್ಲ ಹೊಣೆ ಮಿಚೆಲ್ ಸ್ಟಾರ್ಕ್ ಹೆಗಲೇರಿದೆ. ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ದಿಢೀರ್ ನಿವೃತ್ತಿ ಕೂಡ ಆಸೀಸ್‌ಗೆ ದೊಡ್ಡ ಆಘಾತ ತಂದಿದೆ.
ಇದನ್ನೂ ಓದಿ Pat Cummins: ರೋಹಿತ್ ಅಲ್ಲ, ವಿಶ್ವದ ನಂ1 ನಾಯಕನನ್ನು ಹೆಸರಿಸಿದ ದಿನೇಶ್ ಕಾರ್ತಿಕ್!
ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಏಕದಿನ ಮತ್ತು ಟೆಸ್ಟ್ ವಿಶ್ವಕಪ್ ಗೆದ್ದು ಬೀಗಿತ್ತು. ಈ ಬಾರಿ ಅವರ ಅಲಭ್ಯತೆಯಲ್ಲಿ ಸ್ಟೀವನ್ ಸ್ಮಿತ್ ಅಥವಾ ಟ್ರಾವಿಸ್ ಹೆಡ್ ತಂಡವನ್ನು ಮುನ್ನಡೆಸಬಹುದು. ಆಸ್ಟ್ರೇಲಿಯ ತಂಡ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನದೊಂದಿಗೆ ಬಿ ಗುಂಪಿನಲ್ಲಿ ಕಾಣಿಸಿಕೊಂಡಿದೆ. ತನ್ನ ಮೊದಲ ಪಂದ್ಯವನ್ನು ಫೆ.22 ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ.