ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyank Kharge: ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಕಡಿವಾಣಕ್ಕೆ ನೂತನ ಕಾನೂನು: ಪ್ರಿಯಾಂಕ್‌ ಖರ್ಗೆ

ಗೇಮಿಂಗ್ ಫೆಡರೇಷನ್ಸ್, ಇಂಡಸ್ಟ್ರೀಸ್‌ನವರು ಹಾಗೂ ಗೃಹ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸೇರಿ ಜಂಟಿಯಾಗಿ ಆನ್ ಲೈನ್ ಬೆಟ್ಟಿಂಗ್ ತಡೆಗೆ ಯಾವುದಾದರೂ ಹೊಸ ಕಾನೂನು ಜಾರಿಗೆ ತರಬಹುದಾ ಎಂದು ನೋಡುತ್ತಾ ಇದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಕಾನೂನು ತರಲು ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ಜನರಿಗೆ ಒಳ್ಳೆದಾಗುವಂತೆ ಒಂದು ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.

ಆನ್‌ಲೈನ್‌ ಬೆಟ್ಟಿಂಗ್‌ ಕಡಿವಾಣಕ್ಕೆ ನೂತನ ಕಾನೂನು: ಪ್ರಿಯಾಂಕ್‌ ಖರ್ಗೆ

ಸಚಿವ ಪ್ರಿಯಾಂಕ್‌ ಖರ್ಗೆ

ಹರೀಶ್‌ ಕೇರ ಹರೀಶ್‌ ಕೇರ Apr 10, 2025 7:23 AM

ಬೆಂಗಳೂರು : ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್‌ಗೆ (‌Online betting) ಕಡಿವಾಣ ಹಾಕಲು ನೂತನ ಕಾನೂನು ಜಾರಿ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್ ಲೈನ್ ಬೆಟ್ಟಿಂಗ್ ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತ ಅಲ್ಲದೇ ಗ್ರಾಮೀಣ ಪ್ರದೇಶದಲ್ಲೂ ಹರಡುತ್ತಾ ಇದೆ. ಆನ್ ಲೈನ್ ಗೇಮ್‌ನಿಂದ (Online game) ಜನರನ್ನು ಹೇಗೆ ಕಾನೂನಾತ್ಮಕವಾಗಿ (legal framework) ರಕ್ಷಣೆ ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ ಎಂದರು.

ಗೇಮಿಂಗ್ ಫೆಡರೇಷನ್ಸ್, ಇಂಡಸ್ಟ್ರೀಸ್‌ನವರು ಹಾಗೂ ಗೃಹ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸೇರಿ ಜಂಟಿಯಾಗಿ ಆನ್ ಲೈನ್ ಬೆಟ್ಟಿಂಗ್ ತಡೆಗೆ ಯಾವುದಾದರೂ ಹೊಸ ಕಾನೂನು ಜಾರಿಗೆ ತರಬಹುದಾ ಎಂದು ನೋಡುತ್ತಾ ಇದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಕಾನೂನು ತರಲು ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ಜನರಿಗೆ ಒಳ್ಳೆದಾಗುವಂತೆ ಒಂದು ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು, ಆನ್‌ಲೈನ್ ಗೇಮಿಂಗ್ ಫೆಡರೇಶನ್‌ಗಳ ಸದಸ್ಯರು ಮತ್ತು ಉದ್ಯಮ ತಜ್ಞರೊಂದಿಗೆ ಉನ್ನತ ಮಟ್ಟದ ವಿಸ್ತೃತ ಸಭೆ ನಡೆಸಲಾಗಿದೆ. ಭಾರತದಲ್ಲಿ ಕಾನೂನುಬದ್ಧ ಆನ್‌ಲೈನ್ ಕೌಶಲ್ಯ ಆಧಾರಿತ ಗೇಮಿಂಗ್ ಉದ್ಯಮವು $4 ಬಿಲಿಯ ಮೌಲ್ಯದ ಉದಯೋನ್ಮುಖ ವಲಯವಾಗಿದ್ದು, ₹12,000 ಕೋಟಿ ತೆರಿಗೆ ಪಾವತಿಸುತ್ತಿದೆ ಮತ್ತು 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಕರ್ನಾಟಕವು ಮಾರುಕಟ್ಟೆಯ 25% ಮತ್ತು ವಾರ್ಷಿಕ ತೆರಿಗೆ ಕೊಡುಗೆಗಳಲ್ಲಿ ₹1,350 ಕೋಟಿಯಷ್ಟು ಪಾಲನ್ನು ಹೊಂದಿದ್ದು, ರಾಜ್ಯವನ್ನು ಪ್ರಮುಖ ಕೇಂದ್ರವನ್ನಾಗಿಸಿದೆ ಎಂದರು.

ಆದರೆ ಈ ಕಾನೂನುಬದ್ಧ ವಲಯದ ಜೊತೆಗೆ, ಗಡಿಯಾಚೆಗಿನ ಜೂಜಾಟ ಮತ್ತು ಅಕ್ರಮ ಬೆಟ್ಟಿಂಗ್‌ನ ಸದೃಶ ಭೂಗತ ಮಾರುಕಟ್ಟೆಯೂ ಇದೆ. ಇದು ಅನೈತಿಕ ಹಣ ಸಂಗ್ರಹ ಪದ್ಧತಿಗಳು, ಸಂಶಯಾಸ್ಪದ ನಕಲಿ ಕಂಪನಿಗಳು, ಹಣಕಾಸು ವಂಚನೆ, ಡೇಟಾ ಉಲ್ಲಂಘನೆ ಮತ್ತು ಸೈಬರ್ ಅಪರಾಧಗಳಂತಹ ಅಪಾಯಗಳನ್ನು ಇನ್ನಷ್ಟು ವೇಗವಾಗಿ ಹೆಚ್ಚಿಸುತ್ತಿದೆ. ಆನ್‌ಲೈನ್ ಜೂಜಾಟ/ಬೆಟ್ಟಿಂಗ್ ಮತ್ತು ಅದೃಷ್ಟದ ಆಟಗಳನ್ನು ನಿಗ್ರಹಿಸುವುದು ಮತ್ತು ಗ್ರಾಹಕರನ್ನು ವಂಚನೆಯಿಂದ ರಕ್ಷಿಸುವುದು, ಕೌಶಲ್ಯ ಆಧಾರಿತ ಗೇಮಿಂಗ್ ಉದ್ಯಮದ ನಾವೀನ್ಯತೆ ಹಾಗೂ ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುವುದು ಈ ಶಾಸನದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮಲ್ಲಿಕಾರ್ಜುನ ಖರ್ಗೆಗೆ ಪ್ರತ್ಯೇಕ ಕುರ್ಚಿ ಇಟ್ಟು ಟೀಕೆಗೆ ಗುರಿಯಾದ ಕಾಂಗ್ರೆಸ್