Kanwar Yatra: ಹಿಂದೂಗಳ ಕನ್ವರ್ ಯಾತ್ರೆ ವೇಳೆ ಗಲಾಟೆ; ಪವಿತ್ರ ಕಲಶದ ಮೇಲೆ 'ಉಗುಳಿದ' ಮುಸ್ಲಿಂ
ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಪುರ್ಕಾಜಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆಯುತ್ತಿರುವ ಕನ್ವರ್ ಯಾತ್ರೆಯ ವೇಳೆ ಗಲಾಟೆ ನಡೆದಿದೆ. ಓರ್ವ ಯುವಕ ಕನ್ವರ್ (ಗಂಗೆಯ ಪವಿತ್ರ ನೀರನ್ನು ಒಯ್ಯುವ ಅಲಂಕೃತ ಬಿದಿರಿನ ರಚನೆ) ಮೇಲೆ ಉಗುಳಿದ ಆರೋಪ ಕೇಳಿಬಂದಿದ್ದು, ಈ ಘಟನೆಯಿಂದ ಆಕ್ರೋಶಗೊಂಡ ಯಾತ್ರಿಕರು ಪ್ರತಿಭಟನೆ ನಡೆಸಿದ್ದಾರೆ.

ಘಟನೆಯ ದೃಶ್ಯ.

ಲಖನೌ: ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರ (Muzaffarnagar) ಜಿಲ್ಲೆಯ ಪುರ್ಕಾಜಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆಯುತ್ತಿರುವ ಕನ್ವರ್ ಯಾತ್ರೆಯ (Kanwar Yatra) ವೇಳೆ ಗಲಾಟೆ ನಡೆದಿದೆ. ಓರ್ವ ಯುವಕ ಕನ್ವರ್ (ಗಂಗೆಯ ಪವಿತ್ರ ನೀರನ್ನು ಒಯ್ಯುವ ಅಲಂಕೃತ ಬಿದಿರಿನ ರಚನೆ) ಮೇಲೆ ಉಗುಳಿದ ಆರೋಪ ಕೇಳಿಬಂದಿದ್ದು, ಈ ಘಟನೆಯಿಂದ ಆಕ್ರೋಶಗೊಂಡ ಯಾತ್ರಿಕರು ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ದೆಹಲಿಯ ಮುಸ್ಕಾನ್ ಎಂಬ ಯಾತ್ರಿಕ ಮಹಿಳೆ ವಿಶ್ರಾಂತಿಗಾಗಿ ತಾತ್ಕಾಲಿಕವಾಗಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಅವರು 31 ಲೀಟರ್ ಗಂಗೆಯ ಪವಿತ್ರ ನೀರಿನ ಕನ್ವರ್‌ನನ್ನು ಹೊತ್ತಿದ್ದರು. ಅವರ ಸಹೋದರ ಆನ್ಶುಲ್ ಶರ್ಮಾ 101 ಲೀಟರ್ ಕನ್ವರ್ ಒಯ್ಯುತ್ತಿದ್ದರು. ಇವರು ಹರಿದ್ವಾರದಿಂದ ಕಾಲ್ನಡಿಗೆಯಲ್ಲಿ ಇತರ ಯಾತ್ರಿಕರೊಂದಿಗೆ ವಾಪಸಾಗುತ್ತಿದ್ದಾಗ, ಪುರ್ಕಾಜಿಯಲ್ಲಿ ಈ ಘಟನೆ ನಡೆದಿದೆ.
ಆರೋಪಿಯನ್ನು ಉಸ್ಮಾನ್ ಎಂದು ಗುರುತಿಸಲಾಗಿದ್ದು, ಘಟನೆಯ ನಂತರ ತಕ್ಷಣವೇ ಆತನನ್ನು ವಶಕ್ಕೆ ಪಡೆಯಲಾಗಿದೆ. ಕೋಪಗೊಂಡ ಯಾತ್ರಿಕರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಹಲವು ಗಂಟೆಗಳ ಬಳಿಕ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಈ ಸುದ್ದಿಯನ್ನು ಓದಿ: Viral Video: ಬೈಕ್ ಎಗರಿಸಿ ಎಸ್ಕೇಪ್ ಆಗ್ತಿದ್ದ ಕಿಲಾಡಿ ಕಳ್ಳ ಬಲೆಗೆ ಬಿದ್ದಿದ್ದು ಹೇಗೆ ಗೊತ್ತಾ? ಈ ವಿಡಿಯೊ ನೋಡಿ
ಉಸ್ಮಾನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ನಗರ) ಸತ್ಯನಾರಾಯಣ ಪ್ರಜಾಪತ್ ತಿಳಿಸಿದ್ದಾರೆ. ಮುಸ್ಕಾನ್ ಅವರಿಗೆ ಯಾತ್ರೆಯನ್ನು ಮುಂದುವರಿಸಲು ಹರಿದ್ವಾರದಿಂದ ಹೊಸ ಕನ್ವರ್ ಒದಗಿಸಲಾಗಿದೆ ಎಂದು ಹೇಲಿದ್ದಾರೆ. ಉಸ್ಮಾನ್‌ನ ಕುಟುಂಬವು ಆತ ಕಿವುಡ, ಮೂಕ ಮತ್ತು ಮಾನಸಿಕವಾಗಿ ಅಸ್ವಸ್ಥನೆಂದು ಹೇಳಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಯಾತ್ರೆಯ ಸಮಯದಲ್ಲಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಕ್ರಮ ಕೈಗೊಂಡಿದ್ದಾರೆ.
ಕನ್ವರ್ ಯಾತ್ರೆಯು ವಾರ್ಷಿಕ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಭಕ್ತರು ಗಂಗೆಯ ಪವಿತ್ರ ನೀರನ್ನು ಶಿವಾಲಯಗಳಿಗೆ ಸಮರ್ಪಿಸುತ್ತಾರೆ. ಈ ಸಮಯದಲ್ಲಿ ಲಕ್ಷಾಂತರ ಜನರು ಕಾಲ್ನಡಿಗೆಯಲ್ಲಿ ಭಾಗವಹಿಸುತ್ತಾರೆ. ಹೀಗೆ ಬರುವವರಿಗೆ ರಸ್ತೆಯಲ್ಲಿ ಕಟ್ಟುನಿಟ್ಟಾದ ಭದ್ರತೆಯನ್ನು ಒದಗಿಸಲಾಗುತ್ತದೆ.