ಗುಬ್ಬಿಯಲ್ಲಿ 21 ಅಡಿ ಎತ್ತರದ ಶ್ರೀ ಪಾಂಡುರಂಗ ಸ್ವಾಮಿ, ರುಖ್ಖುಮಾಯಿ ಕಟೌಟ್ ಗೆ ಹಾಲಿನ ಅಭಿಷೇಕ
ಪಟ್ಟಣದ ಪಾಂಡುರಂಗ ಸ್ವಾಮಿ ಅವರ ದೇವಾಲಯದಿಂದ ಊರಿನ ಪ್ರಮುಖ ರಸ್ತೆಯಲ್ಲಿ ಪ್ರತಿ ವರ್ಷ ಮೆರವಣಿಗೆ ಸೇವೆ ನಡೆಸಿರುವ ದಾನಿಗಳಾದ ನಾಗರತ್ನ ಬಾಯಿ ಹಾಗೂ ಅವರ ಮಕ್ಕಳು ಈ ಬಾರಿ 20 ಲಕ್ಷ ಹಣದಲ್ಲಿ ಅದ್ದೂರಿ ದಿಂಡಿ ಉತ್ಸವ ಅತ್ಯಾಕರ್ಷಕವಾಗಿ ನಡೆಸಿದರು. ಮೆರವಣಿಗೆ ಪಟ್ಟಣದಲ್ಲಿ ಇತಿಹಾಸ ಸೃಷ್ಟಿಸಿದೆ. ಈ ಬಾರಿ 21 ಅಡಿಗಳ ಕಟೌಟ್ ಹಾಗೆಯೇ ಕ್ರೇನ್ ಬಳಸಿ ಹಾಲಿನ ಅಭಿಷೇಕ ಸಾವಿರಾರು ಭಕ್ತರ ಗಮನ ಸೆಳೆಯಿತು.


ಗುಬ್ಬಿ: ಆಷಾಢ ಮಾಸದ ಏಕಾದಶಿ ಹಿನ್ನಲೆ ಗುಬ್ಬಿಯಲ್ಲಿ ನಡೆದ 21 ನೇ ವರ್ಷದ ದಿಂಡಿ ಉತ್ಸವದ ಅಂಗವಾಗಿ ಶ್ರೀ ರುಖ್ಖುಮಾಯಿ, ಶ್ರೀ ಪಾಂಡುರಂಗಸ್ವಾಮಿ ಅವರ 21 ಅಡಿಗಳ ಎತ್ತರದ ಕಟೌಟ್ ಗೆ ಹಾಲಿನ ಅಭಿಷೇಕ ಹಾಗೂ ಪುಷ್ಪಾರ್ಚನೆಯನ್ನು ದಾನಿಗಳಾದ ನಾಗರತ್ನಬಾಯಿ ಜ್ಞಾನೇಶ್ವರ್ ರಾವ್ ಮತ್ತು ಮಕ್ಕಳು ಅವರು ಅದ್ದೂರಿಯಾಗಿ ನಡೆಸಿದರು.
ಪಟ್ಟಣದ ಪಾಂಡುರಂಗ ಸ್ವಾಮಿ ಅವರ ದೇವಾಲಯದಿಂದ ಊರಿನ ಪ್ರಮುಖ ರಸ್ತೆಯಲ್ಲಿ ಪ್ರತಿ ವರ್ಷ ಮೆರವಣಿಗೆ ಸೇವೆ ನಡೆಸಿರುವ ದಾನಿಗಳಾದ ನಾಗರತ್ನ ಬಾಯಿ ಹಾಗೂ ಅವರ ಮಕ್ಕಳು ಈ ಬಾರಿ 20 ಲಕ್ಷ ಹಣದಲ್ಲಿ ಅದ್ದೂರಿ ದಿಂಡಿ ಉತ್ಸವ ಅತ್ಯಾಕರ್ಷಕವಾಗಿ ನಡೆಸಿದರು.
ಇದನ್ನೂ ಓದಿ: Gubbi (Tumkur) News: ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡಲು ಬಿಡುವುದಿಲ್ಲ: ಹೇಮಾವತಿ ಹೋರಾಟ ಸಮಿತಿಯ ನಿರ್ಣಯ
ಮೆರವಣಿಗೆ ಪಟ್ಟಣದಲ್ಲಿ ಇತಿಹಾಸ ಸೃಷ್ಟಿಸಿದೆ. ಈ ಬಾರಿ 21 ಅಡಿಗಳ ಕಟೌಟ್ ಹಾಗೆಯೇ ಕ್ರೇನ್ ಬಳಸಿ ಹಾಲಿನ ಅಭಿಷೇಕ ಸಾವಿರಾರು ಭಕ್ತರ ಗಮನ ಸೆಳೆಯಿತು.
ಬೆಳಿಗ್ಗೆಯಿಂದ ಪೂಜಾ ಕೈಂಕರ್ಯ ನೆರವೇರಿಸಿ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಸಿ ದಾನಿಗಳಿಂದ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ಶ್ರೀ ಪಾಂಡುರಂಗಸ್ವಾಮಿ ಶ್ರೀ ರುಕ್ಮಿಣಿ ದೇವಿಯ ಅದ್ದೂರಿ ಮೆರವಣಿಗೆ ಊರಿನ ರಾಜ ಬೀದಿಗಳಲ್ಲಿ ಹೆಸರಾಂತ ಬೆಳ್ತಂಗಡಿ ಸಾಂಸ್ಕೃತಿಕ ಕಲಾ ಮೇಳದೊಂದಿಗೆ ಜರುಗಿತು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವಾಸುದೇವರಾವ್, ಕಾರ್ಯದರ್ಶಿ ಚಂದನ್, ಗೌರವಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮಹೇಶ್ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.