ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raj Kumar Death anniversary: ಇಂದು ಡಾ.ರಾಜ್‌ ಪುಣ್ಯತಿಥಿ; ಅಣ್ಣಾವ್ರ ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ

Raj Kumar Death anniversary:ನಟ ಡಾ.ರಾಜ್ ಕುಮಾರ್ ಅವರು 2006ರ ಏಪ್ರಿಲ್​​ 12ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಆದ್ರೆ ಅವರ ನೆನಪು ಪ್ರತೀ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಕನ್ನಡ ಚಿತ್ರರಂಗದ ಕೀರ್ತಿಯಾಗಿ ಅವರ ನಟಸಾರ್ವಭೌಮನ ಸ್ಮರಣೆಯಾಗುತ್ತಿದೆ. ನಟ ರಾಜ್ ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಕೆ ಮಾಡಿದ್ದಾರೆ.

ಇಂದು ಡಾ.ರಾಜ್‌ ಕುಮಾರ್‌ 19ನೇ ಪುಣ್ಯತಿಥಿ

Profile Rakshita Karkera Apr 12, 2025 11:54 AM

ಬೆಂಗಳೂರು : ಇಂದು ವರನಟ ಡಾ.ರಾಜ್ ಕುಮಾರ್ ಅವರ 19 ನೇ ಪುಣ್ಯತಿಥಿ. ಈ ನಿಟ್ಟಿನಲ್ಲಿ ದೊಡ್ಮನೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್(Dr. Raj Kumar Death anniversary) ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಮಕ್ಕಳು, ನಟ ಶಿವರಾಜ್ ಕುಮಾರ್ ಹಾಗೂ ಅವರ ಮಕ್ಕಳು ಸೇರಿದಂತೆ ಡಾ.ರಾಜ್ ಕುಟುಂಬ ಹಾಜರಿದ್ದರು. ನಟ ಡಾ.ರಾಜ್ ಕುಮಾರ್ ಅವರು 2006ರ ಏಪ್ರಿಲ್​​ 12ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಆದ್ರೆ ಅವರ ನೆನಪು ಪ್ರತೀ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಕನ್ನಡ ಚಿತ್ರರಂಗದ ಕೀರ್ತಿಯಾಗಿ ಅವರ ನಟಸಾರ್ವಭೌಮನ ಸ್ಮರಣೆಯಾಗುತ್ತಿದೆ. ನಟ ರಾಜ್ ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಕೆ ಮಾಡಿದ್ದಾರೆ. ಮೊದಲು ನಟ ದಿ. ಪುನೀತ್ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಅಣ್ಣವ್ರಿಗೆ ಪೂಜೆ ಸಲ್ಲಿಸಿದ್ದಾರೆ.

ಗುಬ್ಬಿ ವೀರಣ್ಣನವರ ಗುಬ್ಬಿ ನಾಟಕ ಕಂಪನಿಯಲ್ಲಿ ನಾಟಕಕಾರನಾಗಿ ದೀರ್ಘ ಕಾಲ ಕೆಲಸ ಮಾಡಿದ ನಂತರ ರಾಜ್‌ಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿದರು , ನಂತರ ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಆ ಕಂಪನಿಯನ್ನು ಸೇರಿಕೊಂಡರು, ನಂತರ 1954 ರಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಮೊದಲ ಅವಕಾಶ ಪಡೆದರು . ಅವರು 205 ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಭಕ್ತ ಕನಕದಾಸ (1960), ರಣಧೀರ ಕಂಠೀರವ (1960), ಸತ್ಯ ಹರಿಶ್ಚಂದ್ರ (1965), ಇಮ್ಮಡಿ ಪುಲಿಕೇಶಿ (1967), ಶ್ರೀ ಕೃಷ್ಣದೇವರಾಯ (1970), ಭಕ್ತ ಕುಂಬಾರ (1974) , ಮಯೂರ (1975) , ಬಬ್ರುವಾಹನ (1977) ಮತ್ತು ಭಕ್ತ ಪ್ರಹ್ಲಾದ (1983) ನಂತಹ ಚಲನಚಿತ್ರಗಳಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. 1954 ರಿಂದ 1968 ರವರೆಗಿನ 15 ವರ್ಷಗಳ ಅವಧಿಯಲ್ಲಿ ಅವರ 13 ಚಲನಚಿತ್ರಗಳು ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (ರಜತ್ ಕಮಲ) ಪಡೆದಿವೆ. ಅವರ 17 ಚಲನಚಿತ್ರಗಳು ಐದು ವಿಭಿನ್ನ ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿವೆ.

ಈ ಸುದ್ದಿಯನ್ನೂ ಓದಿ: Ashwini Puneeth Rajkumar: ಕಾಪು ಮಾರಿಯಮ್ಮ ದೇಗುಲಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

ಸಿನಿಮಾಗಳ ಮೂಲಕ ಮನರಂಜನೆ ಒದಗಿಸಿದ್ದು ಮಾತ್ರವಲ್ಲದೇ, ನಾಡಿನ ನೆಲ ಜಲ ಭಾಷೆ ವಿಷಯ ಬಂದಾಗ ಹೋರಾಟದ ಹಾದಿಯನ್ನೂ ಹಿಡಿಯುತ್ತಿದ್ದರು. ನಾಡಿನ ಸಂರಕ್ಷಣೆ ವಿಷಯದಲ್ಲಿ ಸದಾ ಮುಂದಿರುತ್ತಿದ್ದರು. ಜೊತೆಗೆ ರಾಜಕೀಯದಿಂದ ದೂರವೇ ಉಳಿದರು. ನಟಸಾರ್ವಭೌಮ ಅಂದು ಮನಸ್ಸು ಮಾಡಿದ್ದರೆ ರಾಜಕಾಕೀಯಕ್ಕಿಳಿಯಬಹುದಿತ್ತು. ಅವಕಾಶ, ಅರ್ಹತೆ ಎಲ್ಲವೂ ಇದ್ದರೂ ಅಣ್ಣಾವ್ರು ರಾಜಕೀಯಕ್ಕೆ ಬರಲಿಲ್ಲ. ಉಸಿರಿರುವವರೆಗೂ ಕಲಾ ಸೇವೆಗೆ ತಮ್ಮನ್ನು ಸಮರ್ಪಿಸಿದ್ದರು.