ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

DC-W vs RCB-W: ಡೆಲ್ಲಿ ಸವಾಲಿಗೆ ಆರ್‌ಸಿಬಿ ಸಜ್ಜು

ಡೆಲ್ಲಿ ತಂಡ ಒಬ್ಬರನ್ನೇ ಅವಲಂಬಿತವಾಗಿಲ್ಲ. ಪ್ಲೇಯಿಂಗ್‌ ಇಲೆವೆನ್‌ನ ಎಲ್ಲ ಆಟಗಾರ್ತಿಯರು ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಅಚ್ಚುಕಟ್ಟಾಗಿ ಆಡುವ ಮೂಲಕ ಸಮರ್ಥವಾಗಿ ಗೋಚರಿಸಿದ್ದಾರೆ. ಆರಂಭಿಕರಾದ ಮೆಗ್‌ ಲ್ಯಾನಿಂಗ್‌ ಮತ್ತು ಶಫಾಲಿ ವರ್ಮಾ ಪ್ರಚಂಡ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ.

ತವರಿನ ಕೊನೆಯ ಪಂದ್ಯದಲ್ಲಾದರೂ ಗೆದ್ದೀತೇ ಆರ್‌ಸಿಬಿ?

Profile Abhilash BC Mar 1, 2025 9:34 AM

ಬೆಂಗಳೂರು: ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಇಂದು(ಶನಿವಾರ) ನಡೆಯುವ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಅಗ್ರಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಮೊದಲ ಹಂತದಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಡೆಲ್ಲಿ ಸಜ್ಜಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ವರ್ಷದ ಕೊನೆಯ ಡಬ್ಲ್ಯುಪಿಎಲ್ ಪಂದ್ಯವೂ ಇದಾಗಿದೆ. ತವರಿನಲ್ಲಿ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ಕೊನೆಯ ಪಂದ್ಯದಲ್ಲಾದರೂ ತವರಿನ ಅಭಿಮಾನಿಗಳಿಗೆ ಖುಷಿ ನೀಡೀತೇ? ಎಂದು ಕಾದು ನೋಡಬೇಕಿದೆ.

ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್‌ಸಿಬಿಗೆ ನಾಕೌಟ್‌ ಪ್ರವೇಶಿಸಲು ಇನ್ನುಳಿದ 3 ಪಂದ್ಯಗಳಲ್ಲಿ ಎರಡು ಪಂದ್ಯ ಗೆಲ್ಲಲೇ ಬೇಕು. ಹೀಗಾಗಿ ಡೆಲ್ಲಿ ವಿರುದ್ಧದ ಪಂದ್ಯದಲ್ಲೇ ಗೆಲುವಿನ ಹಳಿ ಏರಬೇಕಿದೆ. ಸತತ ಎರಡು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದ ಎಲಿಸ್ ಪೆರಿ ಅವರ ಮೇಲೆಯೇ ತಂಡದ ಬ್ಯಾಟಿಂಗ್ ಹೆಚ್ಚು ಅವಲಂಬಿತವಾಗಿದೆ. ಕಳೆದ ಗುಜರಾತ್ ಎದುರು ಪೆರಿ ಸೊನ್ನೆಗೆ ಔಟಾದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಲು ವಿಫಲವಾಗಿತ್ತು. ಒಬ್ಬರನ್ನೇ ನಂಬಿ ಕೂರುವುದನ್ನು ಬಿಟ್ಟು ನಾಯಕ ಮಂಧಾನ, ರಿಚಾ ಘೋಷ್‌, ಡೇನಿಯಲ್‌ ಬ್ಯಾಟ್‌ ನಿರೀಕ್ಷಿತ ಪ್ರದರ್ಶನ ತೋರಬೇಕಿದೆ. ಬೌಲಿಂಗ್‌ ಕೂಡ ಕ್ಷಿಪ್ರ ಪ್ರಗತಿ ಕಾಣದ ಹೊರತು ಗೆಲುವು ಅಸಾಧ್ಯ.

ಇದನ್ನೂ ಓದಿ Meg Lanning: ಎಲ್ಲಿಸ್‌ ಪೆರ್ರಿ ದಾಖಲೆ ಹಿಂದಿಕ್ಕಿದ ಮೆಗ್‌ ಲ್ಯಾನಿಂಗ್‌

ಡೆಲ್ಲಿ ಬಲಿಷ್ಠ

ಡೆಲ್ಲಿ ತಂಡ ಒಬ್ಬರನ್ನೇ ಅವಲಂಬಿತವಾಗಿಲ್ಲ. ಪ್ಲೇಯಿಂಗ್‌ ಇಲೆವೆನ್‌ನ ಎಲ್ಲ ಆಟಗಾರ್ತಿಯರು ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಅಚ್ಚುಕಟ್ಟಾಗಿ ಆಡುವ ಮೂಲಕ ಸಮರ್ಥವಾಗಿ ಗೋಚರಿಸಿದ್ದಾರೆ. ಆರಂಭಿಕರಾದ ಮೆಗ್‌ ಲ್ಯಾನಿಂಗ್‌ ಮತ್ತು ಶಫಾಲಿ ವರ್ಮಾ ಪ್ರಚಂಡ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ. ಪವರ್‌ ಪ್ಲೇಯಲ್ಲಿ ಈ ಜೋಡಿ ದೊಡ್ಡ ಮೊತ್ತ ಪೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕುತ್ತಾರೆ.

ಸ್ಪಿನ್‌ ಆಲ್‌ರೌಂಡರ್‌ ಜೆಸ್ ಜೊನಾಸೆನ್ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಜತೆಗೆ ಕರ್ನಾಟಕದ ನಿಕಿ ಪ್ರಸಾದ್ ಕೂಡ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಅನುಭವಿ ಶೀಖಾ ಪಾಂಡೆ ಮತ್ತು ಯುವ ವೇಗಿ ಅರುಂಧತಿ ರೆಡ್ಡಿ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.