Rishabh Pant: ಪ್ರತಿಷ್ಠಿತ ಲಾರೆಸ್ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿ ರಿಷಭ್ ಪಂತ್
ಪಂತ್ ಜತೆ ಬ್ರೆಜಿಲ್‌ನ ಜಿಮ್ನಾಸ್ಟಿಕ್ ಪಟು ರೆಬೆಕಾ ಆ್ಯಂಡ್ರಾಡೆ, ಆಸ್ಟ್ರೇಲಿಯಾದ ಈಜುಪಟು ಆರಿಯಾರ್ನೆ ಟಿಟ್ಮಸ್, ಸ್ವಿಟ್ಜರ್‌ಲೆಂಡ್‌ನ ಸ್ಕೀ-ರೇಸರ್ ಲಾರಾ ಬೆಹ್ರಾಮಿ, ಅಮೆರಿಕದ ಈಜುಪಟು ಕಾಲಿಬ್ ಡ್ರೆಸ್ಸೆಲ್, ಸ್ಪೇನ್‌ನ ಮೋಟೋ ಜಿಪಿ ಚಾಲಕ ಮಾರ್ಕ್ ಮಾರ್ಕೆಝ್ ಸ್ಪರ್ಧೆಯಲ್ಲಿ ಇದ್ದಾರೆ. ಎಫ್ರಿಲ್ 21ರಂದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಪ್ರಶಸ್ತಿ ಘೋಷಣೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ.

ನವದೆಹಲಿ: ಪ್ರತಿಷ್ಠಿತ ಲಾರೆಸ್ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಭ್ ಪಂತ್(Rishabh Pant) ಸ್ಥಾನ ಪಡೆದಿದ್ದಾರೆ. 2024ನೇ ಸಾಲಿನ ‘ವರ್ಷದ ಶ್ರೇಷ್ಠ ಕಮ್‌ಬ್ಯಾಕ್’ ಪ್ರಶಸ್ತಿ ವಿಭಾಗದಲ್ಲಿ ಪಂತ್ ಹೆಸರು ನಾಮ ನಿರ್ದೇಶನಗೊಂಡಿದೆ. 2022ರ ಡಿಸೆಂಬರ್‌ನಲ್ಲಿ ಪಂತ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು. ಆ ಬಳಿಕ ಹಲವು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಪಂತ್, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿ 2024ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಸದ್ಯ ಪಂತ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ.
ಪಂತ್ ಜತೆ ಬ್ರೆಜಿಲ್‌ನ ಜಿಮ್ನಾಸ್ಟಿಕ್ ಪಟು ರೆಬೆಕಾ ಆ್ಯಂಡ್ರಾಡೆ, ಆಸ್ಟ್ರೇಲಿಯಾದ ಈಜುಪಟು ಆರಿಯಾರ್ನೆ ಟಿಟ್ಮಸ್, ಸ್ವಿಟ್ಜರ್‌ಲೆಂಡ್‌ನ ಸ್ಕೀ-ರೇಸರ್ ಲಾರಾ ಬೆಹ್ರಾಮಿ, ಅಮೆರಿಕದ ಈಜುಪಟು ಕಾಲಿಬ್ ಡ್ರೆಸ್ಸೆಲ್, ಸ್ಪೇನ್‌ನ ಮೋಟೋ ಜಿಪಿ ಚಾಲಕ ಮಾರ್ಕ್ ಮಾರ್ಕೆಝ್ ಸ್ಪರ್ಧೆಯಲ್ಲಿ ಇದ್ದಾರೆ. ಎಫ್ರಿಲ್ 21ರಂದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಪ್ರಶಸ್ತಿ ಘೋಷಣೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ.
ಐಪಿಎಲ್‌ನಲ್ಲಿ ರಿಷಭ್ ಪಂತ್ ಲಕ್ನೋ ತಂಡದ ನಾಯಕನಾಗಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ಅವರನ್ನು ದಾಖಲೆಯ 27 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿ ಮಾಡಿತ್ತು. ಕಳೆದ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂತ್ ಸಾರಥ್ಯದಲ್ಲಿ ಡೆಲ್ಲಿ ತಂಡ ಆಡಿದ 14 ಪಂದ್ಯಗಳಲ್ಲಿ ತಲಾ 7 ಗೆಲುವು ಮತ್ತು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. 2021ರಲ್ಲಿ ಪಂತ್ ನಾಯಕತ್ವದಲ್ಲಿ ಡೆಲ್ಲಿ ತಂಡ ಪ್ಲೇ ಆಫ್‌ಗೆ ಪ್ರವೇಶ ಪಡೆದಿತ್ತು.
ಇದನ್ನೂ ಓದಿ IND vs AUS: ಏಕದಿನ ವಿಶ್ವಕಪ್ ಸೋಲಿಗೆ ಸೇಡು ತೀರಿಸಲು ಭಾರತ ಸಜ್ಜು
ಇಂದು ಭಾರತ-ಆಸೀಸ್ ಸೆಮಿ ಕಾದಾಟ
ಇಂದು(ಮಂಗಳವಾರ) ನಡೆಯುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಸೆಮಿ ಪಂದ್ಯದಲ್ಲಿ ರಿಷಭ್ ಪಂತ್‌ಗೂ ಆಡುವ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಲೀಗ್ ಪಂದ್ಯಗಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಹೊಣೆ ಹೊತ್ತಿದ್ದರು. ಅಲ್ಲದೆ ಪಂತ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಅವರು ಸಂಪೂರ್ಣ ಫಿಟ್ ಆಗಿದ್ದಾರೆ.