ಕರ್ನಾಟಕ ರಾಜ್ಯದ ಆರ್ಥಿಕತೆ ಭಯ ಹುಟ್ಟಿಸುವ ದಿಕ್ಕಿನತ್ತ ಸಾಗುತ್ತಿದೆ: ಸಂಸದ ಸುಧಾಕರ್ ಭವಿಷ್ಯ
ಗ್ಯಾರೆಂಟಿ ಕೊಡಿರಪ್ಪಾ ಇಲ್ಲದಿದ್ದರೆ ಬೆಳಕಾಗೊಲ್ಲ ಎಂದು ಯಾರೂ ಕೂಡ ಇವರನ್ನು ಕೇಳಿರಲಿಲ್ಲ.ರೈತರಿಗೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಹೀಗೆ ಈ ಸರಕಾರ ನಿತ್ಯವೂ ಎಲ್ಲವರ್ಗದ ತಲೆಯ ಮೇಲೆ ತೆರಿಗೆಯ ಭಾರ ಹಾಕುತ್ತಿದ್ದಾರೆ.ರೈತರಿಗೆ ಕೊಡುವ ಹಾಲಿನ ಬೆಲೆ ಇಳಿಸಿ, ಗ್ರಾಹಕರು ಕುಡಿಯುವ ಹಾಲಿಗೆ ಬೆಲೆ ಏರಿಸಿದ್ದಾರೆ.


ಚಿಕ್ಕಬಳ್ಳಾಪುರ : ನಮ್ಮದು ಜನಪರ ಸರಕಾರ ಗ್ಯಾರೆಂಟಿಗಳ ಸರಕಾರ ಎಂದು ಬೀಗುತ್ತಿ ರುವ ಕರ್ನಾಟಕ ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿಲ್ಲ. ಗ್ಯಾರೆಂಟಿ ಹೆಸರಲ್ಲಿ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ.ಈ ಸರಕಾರಕ್ಕೆ ಇನ್ನೂ 3 ವರ್ಷ ಸಮಯವಿದ್ದು ಅಲ್ಲಿಯವರೆಗೆ ಪಾಪಿ ಚಿರಾಯು ಎಂಬಂತೆ ಎಷ್ಟು ಪಾಪ ಮಾಡುತ್ತಾರೋ ಮಾಡಲಿ ಎಂದು ಸಂಸದ ಸುಧಾಕರ್ ವ್ಯಂಗ್ಯವಾಡಿದರು. ನಗರದ ನಗರಸಭೆ ಅವರಣ ದಲ್ಲಿ ಶನಿವಾರ ನಡೆದ ಬಜೆಟ್ ಸಭೆಯ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿ ದರು.
ಪಾಪಿಗಳಗೆ ದೀರ್ಘಾಯಸ್ಸು ಎಂಬಂತೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇನ್ನೂ 3 ವರ್ಷಗಳ ಕಾಲ ಪಾಪಗಳನ್ನು ಮಾಡುತ್ತಲೇ ಇರಲಿ ಎಂದು ದೇವರಲ್ಲಿ ಬೇಡು ತ್ತೇನೆ. ರಾಜ್ಯದ ಜನರಿಗೆ ಇವರು ಇನ್ನೂ ಏನೇನು ಅವಾಂತರ ಮಾಡುತ್ತಾರೋ ಎಂಬು ದನ್ನು ಅವರು ಕಣ್ತುಂಬ ನೋಡಬೇಕು ಎಂದರು.
ಗ್ಯಾರೆAಟಿಗಳ ಭಾರಕ್ಕೆ ರಾಜ್ಯ ಸರಕಾರ ದಿವಾಳಿಯತ್ತ ಸಾಗಿದ್ದು ಆರ್ಥಿಕ ಸ್ಥಿತಿಗತಿಗಳನ್ನು ಯಾವ ರೀತಿ ನಿಭಾಯಿಸಬೇಕಿತ್ತು, ಯಾವ ರೀತಿ ಆಡಳಿತ ನಡೆಸಬೇಕಿತ್ತೋ ಹಾಗೆ ಮಾಡು ವುದರಲ್ಲಿ ಎಡವಿದ್ದಾರೆ, ಎಡವುತ್ತಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಭಯ ಹುಟ್ಟಿಸುವ ದಿಕ್ಕಿನತ್ತ ಸಾಗುತ್ತಿದೆ ಎಂದರು.
ಇದನ್ನೂ ಓದಿ: Chikkaballapur News: ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮ್ ಜನ್ಮದಿನ: ಸೇವಾಕಾರ್ಯಗಳ ಮೂಲಕ ಆಚರಣೆ
ಬೆಲೆಯೇರಿಕೆ
ಗ್ಯಾರೆಂಟಿ ಕೊಡಿರಪ್ಪಾ ಇಲ್ಲದಿದ್ದರೆ ಬೆಳಕಾಗೊಲ್ಲ ಎಂದು ಯಾರೂ ಕೂಡ ಇವರನ್ನು ಕೇಳಿರಲಿಲ್ಲ.ರೈತರಿಗೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಹೀಗೆ ಈ ಸರಕಾರ ನಿತ್ಯವೂ ಎಲ್ಲವರ್ಗದ ತಲೆಯ ಮೇಲೆ ತೆರಿಗೆಯ ಭಾರ ಹಾಕುತ್ತಿದ್ದಾರೆ.ರೈತರಿಗೆ ಕೊಡುವ ಹಾಲಿನ ಬೆಲೆ ಇಳಿಸಿ,ಗ್ರಾಹಕರು ಕುಡಿಯುವ ಹಾಲಿಗೆ ಬೆಲೆ ಏರಿಸಿದ್ದಾರೆ. ೧೮ ತಿಂಗಳಲ್ಲಿ ೪ ಸಾರಿ ಹಾಳಿನ ಬೆಲೆ ಏರಿಕೆ ಮಾಡುತ್ತೀರಿ?ಇಲ್ಲಿ ಬಂದ ಹಣವನ್ನು ರೈತರಿಗೆ ಏನಾದರೂ ಕೊಡುತ್ತಿದ್ಧೀರಾ? ಅದೂ ಕೂಡ ಇಲ್ಲ.ರೈತರಿಗೆ ಕೊಡುವುದರಲ್ಲೇ ೩ ರೂಪಾಯಿ ಕಡಿಮೆ ಮಾಡಿದ್ದಾರೆ.ಟಿ.ಸಿ ಬೆಲೆ ೨೫ ಸಾವಿರ ಇದ್ದಿದ್ದು ೩ ಲಕ್ಷಕ್ಕೆ ಏರಿಕೆ ಮಾಡಿದ್ದಾರೆ.ಸ್ಮಾರ್ಟ್ ಮೀಟರ್ ಅಳವಡಿಸಿ ಸ್ಮಾರ್ಟಾಗಿ ಈ ಸರಕಾರ ಹಣ ದೋಚುತ್ತಿದೆ ಎಂದು ಕುಟುಕಿದರು.
ವಕ್ಫ್ ಕಾಯ್ದೆ ಐತಿಹಾಸಿಕ ತೀರ್ಮಾನ
ಕೇಂದ್ರ ಸರಕಾರ ವಕ್ಫ್ ಕಾಯ್ದೆ ಸಂಬAಧ ತೆಗೆದುಕೊಂಡಿರುವ ನಿರ್ಣಯ ಐತಿಹಾಸಿಕವಾದ ನಿರ್ಣಯವಾಗಿದೆ.ಇದರಿಂದಾಗಿ ಬಡ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯಕ್ಕೆ ಮುಕ್ತಿ ಸಿಕ್ಕಿದೆ. ದೇಶದಲ್ಲಿ ರೈಲ್ವೆ, ರಕ್ಷಣಾ ಇಲಾಖೆ ಜಮೀನು ಬಿಟ್ಟರೆ ಮೂರನೆಯದಾಗಿ ಅತಿಹೆಚ್ಚು ಭೂಮಿ ಹೊಂದಿರುವ ಯಾರಾದರೂ ಇದ್ದರೆ ಅದು ವಕ್ಫ್ ಬೋರ್ಡ್ ಆಸ್ತಿಯಾಗಿದೆ.ಸುಮಾರು ೨೩-೨೪ ಲಕ್ಷ ಎಕರೆ ಆಸ್ತಿ ಇದರ ಸುಪರ್ದಿ ಯಲ್ಲಿದೆ. ಆದರೆ ಅವರು ತೋರಿಸುತ್ತಿರುವ ಆದಾಯ ೧೬೧ ಕೋಟಿ ಲಾಭ ತೋರಿಸು ತ್ತಿದ್ದಾರೆ. ಕೆಲವರೇ ಕೆಲವರು ಇದರಲ್ಲಿ ಕೋಟ್ಯಾಂತರ ಆಸ್ತಿಯನ್ನು ಗುಳುಂ ಮಾಡಿದ್ದಾರೆ. ಈ ಸಂಪತ್ತು ಅವರಿಗೆ ಸೇರಬೇಕು ಎಂದು ರಾಜ್ಯಸಭೆಯಲ್ಲಿ ೧೪ ಗಂಟೆ, ಲೋಕಸಭೆಯಲ್ಲಿ ೧೨ ಗಂಟೆಗೂ ಹೆಚ್ಚು ಚರ್ಚೆ ಮಾಡಿ ಬೆಳಗಿನ ಜಾವ ೨.೪೫ರಲ್ಲಿ ನಿರ್ಣಯ ಅಂಗೀಕರಿಸಿ ದ್ದಾರೆ ಎಂದರು.
ಪ್ರಜ್ಞೆಯಿಲ್ಲದ ಮಾತು
ಡೀಮ್ಡ್ ಫಾರೆಸ್ಟ್ಗೆ ಡಾ.ಕೆ.ಸುಧಾಕರ್ ರೈತರ ಜಮೀನುಗಳನ್ನು ಸೇರಿಸಿಬಿಟ್ಟಿದ್ದಾರೆ ಎಂದು ಹೇಳುವವರಿಗೆ ಯಾವ ವರ್ಷದಲ್ಲಿ ಕೊಟ್ಟಿದ್ದಾರೆ,ಆಗ ಯಾವ ಸರಕಾರ ಇತ್ತು, ಯಾರು ಮುಖ್ಯಮಂತ್ರಿಗಳು ಇದ್ದರು ಎಂಬುದನ್ನು ಹೇಳಲು ಹೇಳಿ ಎಂದು ಪ್ರಶ್ನಿಸಿದ ಅವರು ಇಡೀ ರಾಜ್ಯದಲ್ಲಿ ಎಷ್ಟು ರೈತರ ಭೂಮಿಯನ್ನು ಡೀಮ್ಡ್ ಫಾರೆಸ್ಟ್ಗೆ ಸೇರಿಸಿದ್ದಾರೆ ಎಂಬುದನ್ನು ಜಿಲ್ಲಾವಾರು ಮಾಹಿತಿ ಕೊಡಲು ಹೇಳಿ ಎಂದು ಗರಂ ಆದರು.
ಎಂಎಲ್‌ಎ ಹಂತದಲ್ಲಿ ರೈತರ ಜಮೀನುಗಳನ್ನು ಡೀಮ್ಡ್ ಫಾರೆಸ್ಟ್ಗೆ ಸೇರಿಸಲು ಆಗುತ್ತದೆ ಎಂದು ಹೇಳುವವರಿಗೆ ಒಂದು ರಾಜಕಾರಣವೂ ಗೊತ್ತಿಲ್ಲ,ಅಥವಾ ಅವರಿಗೆ ಪ್ರಜ್ಞೆಯೂ ಇಲ್ಲ ಎಂದು ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಹರಿಹಾಯ್ದರು.
ಉಳಿತಾಯ ಬಜೆಟ್
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇಂದು ನಡೆದ ಆಯವ್ಯಯದ ಮಂಡನೆ ಸಭೆಯಲ್ಲಿ ಸಹಸದಸ್ಯನಾಗಿ ನಾನು ಭಾಗಿಯಾಗಿದ್ದೇನೆ.ಅಧ್ಯಕ್ಷ ಎ.ಗಜೇಂದ್ರ ನೇತೃತ್ವದ ನಗರಾಡಳಿತವು ಒಳ್ಳೆಯ ಬಜೆಟ್ ಮಂಡಿಸಿದೆ.೨,೭೭,೪೯,೩೯೦ ಕೋಟಿಯ ಉಳಿತಾಯ ಬಜೆಟ್ ಮಂಡಿಸಿ ದ್ದಾರೆ. ಇದಕ್ಕಾಗಿ ಮೊದಲನೆಯದಾಗಿ ಅವರನ್ನು ನಾನು ಅಭಿನಂದಿಸುತ್ತೇನೆ. ಹಿರಿಯ ಸದಸ್ಯರ ಅನುಭವ ಪಡೆದುಕೊಂಡು ಚಿಕ್ಕಬಳ್ಳಾಪುರ ನಗರಸಭೆಯನ್ನು ಒಂದು ಸುಸಜ್ಜಿತ ನಗರಸಭೆಯನ್ನಾಗಿ ಮಾಡಲು ನಾನೂ ಕೂಡ ಅವರೊಂದಿಗೆ ಕೈಜೋಡಿಸುತ್ತೇನೆ ಎಂದರು.
ಉತ್ತಮ ಆಡಳಿತ
ನನ್ನ ಕನಸು ಚಿಕ್ಕಬಳ್ಳಾಪುರ ನಗರವನ್ನು ಸುಸಜ್ಜಿತ ಸುಂದರ ಸುರಕ್ಷಿತ ನಗರವನ್ನಾಗಿ ಮಾಡುವುದೇ ಆಗಿzತೀ ನಿಟ್ಟಿನಲ್ಲಿ ಗಜೇಂದ್ರ ಅವರ ಆಡಳಿತ ಮುಂದುವರೆಯಲಿ, ಜನ ಸಾಮಾನ್ಯರಿಗೆ ಯಾವುದೇ ರೀತಿ ಕಚೇರಿಗೆ ಅಲೆದಾಡಿಸದೆ ಸುಗಮವಾಗಿ ಸುಲಭವಾಗಿ ಅವರ ಕೆಲಸ ಆಗಬೇಕು.ಭ್ರಷ್ಟಾಚಾರಕ್ಕೆ ಆಸ್ಪಧ ಇಲ್ಲದಂತೆ ಆಡಳಿತ ನಡೆಸುವಂತೆ ಅಧ್ಯಕ್ಷರು ಉಪಾಧ್ಯಕ್ಷರಿಗೆ ಸೂಚನೆ ನೀಡಿದ್ದೇನೆ ಎಂದರು.
ಇದು ಸರಿಯಲ್ಲ
ನಾನು ಸಚಿವನಾಗಿದ್ದಾಗ ತಂದಿದ್ದ ನಗರೋತ್ಥಾನದ ಅನುದಾನವನ್ನು ತರಲಾಗಿತ್ತು.ರಸ್ತೆ ಅಭಿವೃದ್ಧಿಗೆ ೩೧ ವಾರ್ಡುಗಳಿಗೆ ಸದಸ್ಯರನ್ನು ಕೇಳಿ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿತ್ತು.ಈ ಸಂಬAಧ ನಮ್ಮ ಕಾಲದಲ್ಲಿಯೇ ಟೆಂಡರ್ ಆಗಿತ್ತು. ಆದರೆ ಈಗಿನ ಶಾಸಕರು ೨ ವರ್ಷವಾದರೂ ಅದನ್ನು ತಡೆಹಿಡಿದಿದ್ದಾರೆ ಇದು ಸರಿಯಲ್ಲ.ಅವರಿಗೆ ಬೇಕಾದ ಗುತ್ತಿಗೆದಾರರಿಗೆ ಕೋಟಿಗಟ್ಟಲೆ ಗುತ್ತಿಗೆ ನೀಡಿ ಲಾಭ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ತಡೆ ಹಿಡಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇಲ್ಲಿನ ಶಾಸಕರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಾಗಲಿ, ನಗರಸಭೆ ಉದ್ದಾರವಾಗಲಿ ಬೇಕಿಲ್ಲ. ಡಲ್ಟ್ ಗ್ರಾಂಟ್ ತರುವಲ್ಲಿ ಕೂಡ ಸಂಪೂರ್ಣ ವಿಫಲವಾಗಿದ್ದಾರೆ. ಉಸ್ತುವಾರಿ ಸಚಿವರು ಚಿಂತಾಮಣಿಗೆ ೨೦ ಕೋಟಿ ತಂದಿದ್ದರೆ, ಚಿಕ್ಕಬಳ್ಳಾಪುರಕ್ಕೆ ಕೇವಲ ೨ ಕೋಟಿ ಮಾತ್ರ ತಂದಿದ್ದಾರೆ.ನನ್ನ ಅವಧಿಯಲ್ಲಿ 9.75 ಕೋಟಿಗೆ ಕಾರ್ಯಯೋಜನೆ ಮಾಡಿ ಸಿದ್ದೆ.ಈ ಪೈಕಿ ಈಗ ೨ಕೋಟಿ ಬಂದಿದೆ.ಇಷ್ಟು ಅನ್ಯಾಯ ಆದರೂ ಕೂಡ ಶಾಸಕರು ಆರಾಮಾಗಿ ಇದ್ದಾರೆ ಎಂದರೆ ಅವರಿಗೆ ಒಂದು ಈ ಕ್ಷೇತ್ರದ ಬಗ್ಗೆ ಬದ್ಧತೆಯಿಲ್ಲ.ಅಥವಾ ಮಾಡಬೇಕು ಎಂಬ ಕಾಳಜಿಯಿಲ್ಲ. ಅಥವಾ ಏನು ಮಾಡಬೇಕು ಎಂಬ ಅರಿವಿಲ್ಲ ಎಂದು ಕಾಲೆಳೆದರು.
೧೮ ತಿಂಗಳಿಂದ ನೋಡುತ್ತಿದ್ದಾರೆ ಅಷ್ಟೇ?
೧೦ ವರ್ಷದ ಹಿಂದೆ ಕೇತೇನಹಳ್ಳಿ ರಸ್ತೆ ಹೇಗಿತ್ತು ಎಂಬುದನ್ನು ಅಲ್ಲಿನ ಜನರನ್ನು ಕೇಳಿ, ಕೇತೇನಹಳ್ಳಿಗೆ ಹೋಗಲು ೨ಗಂಟೆ ಬೇಕಿತ್ತು .ಇವರಿಗೇನು ಗೊತ್ತು.ಪಾಪ ಇವರು ೧೮ ತಿಂಗಳಿAದ ಇದನ್ನು ನೋಡುತ್ತಿದ್ದಾರೆ.ಹಾಳಾಗಿದ್ದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ರೀತಿ ಮಾಡಿಸಿದ್ದೇನೆ.ಅದಕ್ಕೂ ಮೊದಲು ಅವರು ಎಲ್ಲಿದ್ದರೂ ಯಾವೂರು ನೋಡಿದ್ದಾರೆ? ಯಾರ ಕಷ್ಟ ಕೇಳಿದ್ದಾರೆ? ಯಾರ ಪರಿಚಯವಿತ್ತು ಇವರಿಗೆ? ಎಂದು ಪ್ರಶ್ನೆಗಳ ಸುರಿಮಳೆ ಗರೆದರು.
ಮಳಿಗೆ ಹರಾಜಾಗಲಿ?
ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಹರಾಜು ಪ್ರಕ್ರಿಯೆ ನಡೆಯಲಿ, ನಗರಸಭೆಗೆ ಲಾಭ ಬರಲಿ ಎಂದು ಹೇಳಿದ್ದಾರೆ.ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಎಲ್ಲಾ ಸದಸ್ಯರು ವಾಣಿಜ್ಯ ಮಳಿಗೆಗಳ ಹರಾಜಿನ ಪರವಾಗಿದ್ದಾರೆ. ಸ್ವಹಿತಾಸಕ್ತಿ, ರಾಜ ಕೀಯ ಹಿತಾಸಕ್ತಿ ಇದ್ದಿದ್ದರೆ ಬೇರೆ ಬೇರೆ ವಾದಗಳು ಮಂಡನೆ ಆಗಬೇಕಿತ್ತು. ಹರಾಜು ಪ್ರಕ್ರಿಯೆ ಆದರೆ ನಗರಸಭೆಗೆ ವರಮಾನ ಬರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ದಿನಾಂಕ ಹಿಂದೆ ಮುಂದೆ ಆಗಿರಬಹುದು ಆಗುತ್ತದೆ ಎಂದರು.