ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fishermen Release: 11 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

ಮೀನುಗಾರರೊಂದಿಗೆ ಮಾನವೀಯವಾಗಿ ವರ್ತಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಬಳಿಕ ಶ್ರೀಲಂಕಾ 11 ಭಾರತೀಯ ಮೀನುಗಾರರನ್ನು ಭಾನುವಾರ ಬಿಡುಗಡೆ ಮಾಡಿದೆ. ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ನಡುವಿನ ಮಾತುಕತೆಯ ಸಂದರ್ಭದಲ್ಲಿ ಮೀನುಗಾರರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಲಾಗಿತ್ತು.

ಮೋದಿ ಶ್ರೀಲಂಕಾ ಭೇಟಿ ಬೆನ್ನಲ್ಲೇ 11 ಭಾರತೀಯ ಮೀನುಗಾರರ ಬಿಡುಗಡೆ

ಕೊಲಂಬೊ: ಶ್ರೀಲಂಕಾ (Srilanka) ಪ್ರವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೀನುಗಾರರೊಂದಿಗೆ (Fishermen) ಮಾನವೀಯವಾಗಿ ವರ್ತಿಸುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಶ್ರೀಲಂಕಾ 11 ಭಾರತೀಯ ಮೀನುಗಾರರನ್ನು ಭಾನುವಾರ ಬಿಡುಗಡೆ (Fishermen Release) ಮಾಡಿದೆ. ಥಾಯ್ಲೆಂಡ್‌ನಲ್ಲಿ ನಡೆದ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಂಡ ಮೋದಿ ಬಳಿಕ ಅಲ್ಲಿಂದ ನೇರವಾಗಿ ಶ್ರೀಲಂಕಾಕ್ಕೆ ಶುಕ್ರವಾರ ಆಗಮಿಸಿದ್ದರು.

ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ (Anura Kumara Dissanayake) ಜತೆಗಿನ ಮಾತುಕತೆಯ ಸಂದರ್ಭದಲ್ಲಿ ಮೀನುಗಾರರ ಸಮಸ್ಯೆ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಈ ವೇಳೆ ಮೀನುಗಾರರೊಂದಿಗೆ ಮಾನವೀಯವಾಗಿ ವರ್ತಿಸುವಂತೆ ಮೋದಿ ಅವರು ಅನುರ ಕುಮಾರ ದಿಸ್ಸಾನಾಯಕೆ ಅವರಲ್ಲಿ ಮನವಿ ಮಾಡಿದ್ದರು.

ತೊಂದರೆಗೊಳಗಾದ ಮೀನುಗಾರರೊಡನೆ ಮಾನವೀಯ ಮನೋಭಾವದಿಂದ ವರ್ತಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ ಬೆನ್ನಲ್ಲೇ ಈ ಸಮಸ್ಯೆಯನ್ನು ಬಗೆ ಹರಿಸಲು ಶ್ರೀಲಂಕಾ ಮುಂದಾಗಿದೆ. ಭಾನುವಾರ 11 ಭಾರತೀಯ ಮೀನುಗಾರರನ್ನು ವಿಶೇಷ ಸೂಚನೆಯಡಿ ಬಿಡುಗಡೆ ಮಾಡಿದೆ.



ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರೊಂದಿಗಿನ ಮಾತುಕತೆ ಬಳಿಕ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ನಾವು ಮೀನುಗಾರರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ವಿಷಯದಲ್ಲಿ ಮಾನವೀಯತೆಯಿಂದ ಮುಂದುವರಿಯಬೇಕು ಎಂದು ಹೇಳಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ಮೀನುಗಾರರು ಮತ್ತು ಅವರ ದೋಣಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆಯೂ ಅವರಲ್ಲಿ ಮನವಿ ಮಾಡಿರುವುದಾಗಿ ಹೇಳಿದ್ದರು.

ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಭಾರತ- ಶ್ರೀಲಂಕಾ ನಡುವೆ 10 ಒಪ್ಪಂದ

ಎರಡು ರಾಷ್ಟ್ರಗಳ ಸಂಬಂಧಗಳಲ್ಲಿ ಮೀನುಗಾರರ ವಿಷಯವು ಅನೇಕ ವರ್ಷಗಳಿಂದ ವಿವಾದಾತ್ಮಕವಾಗಿಯೇ ಉಳಿದಿದ್ದು, ಇದೀಗ ಈ ಸಮಸ್ಯೆ ಪರಿಹಾರವಾಗುವ ಲಕ್ಷಣಗಳು ಕಂಡು ಬರುತ್ತಿವೆ.

ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ಕಿರಿದಾದ ಪ್ರದೇಶವಾಗಿರುವ ಪಾಕ್ ಜಲಸಂಧಿಯಲ್ಲಿ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಭಾರತೀಯ ಮೀನುಗಾರರ ವಿರುದ್ಧ ಬಲಪ್ರಯೋಗ ಮಾಡಿದ ಹಲವಾರು ಘಟನೆಗಳು ಈ ಹಿಂದೆ ನಡೆದಿದ್ದವು ಎನ್ನುವ ಆರೋಪಗಳಿವೆ.