ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಮುಂಬೈ ಪಂದ್ಯಕ್ಕೂ ಮುನ್ನ ರೋಹಿತ್ ಜತೆಗಿನ ಒಡನಾಟ ಬಿಚ್ಚಿಟ್ಟ ಕೊಹ್ಲಿ

'ತಂಡದ ನಾಯಕತ್ವದ ವಿಚಾರದಲ್ಲಿ ನಾವಿಬ್ಬರೂ ಬಹಳ ನಿಕಟವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ, ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದೇವೆ. ಯಾವುದೇ ನಿರ್ದಿಷ್ಠ ಪರಿಸ್ಥಿತಿ ಅಥವಾ ಪಂದ್ಯದ ಸಂದರ್ಭದಲ್ಲಿ ನಮ್ಮಿಬ್ಬರ ನಿಲುವುಗಳು ಹೆಚ್ಚೂ ಕಡಿಮೆ ಒಂದೇ ಆಗಿರುತ್ತವೆ' ಎಂದು ರೋಹಿತ್‌ ಜತೆಗಿನ ಒಡನಾಟವನ್ನು ಕೊಹ್ಲಿ ತೆರೆದಿಟ್ಟರು.

ರೋಹಿತ್ ಜತೆಗಿನ ಒಡನಾಟ ಬಿಚ್ಚಿಟ್ಟ ಕೊಹ್ಲಿ

Profile Abhilash BC Apr 6, 2025 3:13 PM

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಸೋಮವಾರ ನಡೆಯಲಿದ್ದು, ಭಾರತೀಯ ಕ್ರಿಕೆಟ್‌ನ ಎರಡು ಐಕಾನಿಕ್‌ ಆಟಗಾರರಾದ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ(Rohit Sharma) ಮುಖಾಮುಖಿಯಾಗಲಿದ್ದಾರೆ. ಪಂದ್ಯಕ್ಕೂ ಮುನ್ನ ವಿರಾಟ್ ಅವರು ರೋಹಿತ್ ಜತೆಗಿನ ತಮ್ಮ ಒಡನಾಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೊಹ್ಲಿ ಮಾತನಾಡಿರುವ ಒಂದೂವರೆ ನಿಮಿಷದ ವಿಡಿಯೊವನ್ನುಆರ್‌ಸಿಬಿ ತನ್ನ ಟ್ವಿಟರ್ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

'ತಂಡದ ನಾಯಕತ್ವದ ವಿಚಾರದಲ್ಲಿ ನಾವಿಬ್ಬರೂ ಬಹಳ ನಿಕಟವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ, ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದೇವೆ. ಯಾವುದೇ ನಿರ್ದಿಷ್ಠ ಪರಿಸ್ಥಿತಿ ಅಥವಾ ಪಂದ್ಯದ ಸಂದರ್ಭದಲ್ಲಿ ನಮ್ಮಿಬ್ಬರ ನಿಲುವುಗಳು ಹೆಚ್ಚೂ ಕಡಿಮೆ ಒಂದೇ ಆಗಿರುತ್ತವೆ' ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ IPL 2025 Points Table: ಡೆಲ್ಲಿಗೆ ಅಗ್ರಸ್ಥಾನ, ಏಳಕ್ಕೇರಿದ ರಾಜಸ್ಥಾನ್‌

'ನಾವಿಬ್ಬರು ಒಟ್ಟಿಗೆ ಆಡಿದ ಸಮಯವನ್ನು ಖಂಡಿತಾ ಸಂಭ್ರಮಿಸಿದ್ದೇವೆ. ಹಾಗಾಗಿಯೇ ದೀರ್ಘಕಾಲ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ನಾವು ಯುವಕರಾಗಿದ್ದಾಗ, ಭಾರತ ಪರ 15 ವರ್ಷ ಆಡುತ್ತೇವೆಯೇ ಎಂಬುದು ಖಾತ್ರಿ ಇರಲಿಲ್ಲ. ಇಷ್ಟು ದೀರ್ಘ ಮತ್ತು ನಿರಂತರ ಪ್ರಯಾಣ, ನಾವು ಹಂಚಿಕೊಂಡ ಎಲ್ಲಾ ನೆನಪುಗಳು, ಪ್ರತಿ ಕ್ಷಣಗಳಿಗೆ ಕೃತಜ್ಞರಾಗಿದ್ದೇವೆ' ಎಂದು ರೋಹಿತ್‌ ಜತೆಗಿನ ಒಡನಾಟವನ್ನು ಕೊಹ್ಲಿ ತೆರೆದಿಟ್ಟರು.



ರೋಹಿತ್‌ ಮತ್ತು ಕೊಹ್ಲಿ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ಗೆಲುವಿನ ಬಳಿಕ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಸದ್ಯ ಉಭಯ ಆಟಗಾರರು ಏಕದಿನ ಮತ್ತು ಟೆಸ್ಟ್‌ ಮಾತ್ರ ಮಾಡುತ್ತಿದ್ದಾರೆ.

ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ರೋಹಿತ್‌ ಶರ್ಮಾ ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ದದ ಪಂದ್ಯದಿಂದ ಹೊರಗುಳಿದಿದ್ದರು. ಸೋಮವಾರ ನಡೆಯುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.