PM Modi: ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಭಾರತ- ಶ್ರೀಲಂಕಾ ನಡುವೆ 10 ಒಪ್ಪಂದ
ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಒಪ್ಪಂದ ಸೇರಿ 10 ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶನಿವಾರ ಭಾರತ ಮತ್ತು ಶ್ರೀಲಂಕಾ ನಡುವೆ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ರಾಷ್ಟ್ರಗಳ ನಡುವೆ ಬಲವಾದ ಸಂಬಂಧಕ್ಕಾಗಿ ವಿಶಾಲವಾದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದರು.


ಕೊಲಂಬೊ: ಥೈಲ್ಯಾಂಡ್‌ನಲ್ಲಿ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ (Narendra Modi) ಬಳಿಕ ನೇರವಾಗಿ ಶ್ರೀಲಂಕಾಕ್ಕೆ ತೆರಳಿ ರಾಷ್ಟ್ರಾಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ (Anura Kumara Dissanayake) ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಭಾರತ- ಶ್ರೀಲಂಕಾ ರಕ್ಷಣಾ ಒಪ್ಪಂದ ಸೇರಿ 10 ಒಪ್ಪಂದಗಳಿಗೆ ಸಹಿ ಹಾಕಿವೆ. ಶನಿವಾರ ಭಾರತ ಮತ್ತು ಶ್ರೀಲಂಕಾ ನಡುವೆ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ರಾಷ್ಟ್ರಗಳ ನಡುವೆ ಬಲವಾದ ಸಂಬಂಧಕ್ಕಾಗಿ ವಿಶಾಲವಾದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದರು. ಎರಡೂ ರಾಷ್ಟ್ರಗಳ ಭದ್ರತೆ ಹೆಚು ನಿಕಟ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರ ನಡುವಿನ ಸಮಗ್ರ ಚರ್ಚೆಗಳ ಅನಂತರ ಸಹಿ ಹಾಕಲಾದ ಪ್ರಮುಖ ಒಪ್ಪಂದಗಳಲ್ಲಿ ರಕ್ಷಣಾ ಒಪ್ಪಂದವೂ ಸೇರಿದೆ. ಶ್ರೀಲಂಕಾದಲ್ಲಿ ಭಾರತದ ಶಾಂತಿಪಾಲನಾ ಪಡೆ ನಿಯೋಜಿಸಲ್ಪಟ್ಟ ಸುಮಾರು ನಾಲ್ಕು ದಶಕಗಳ ಅನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದು ಮಹತ್ವದ ಬೆಳವಣಿಗೆ ಎಂದು ಬಣ್ಣಿಸಲಾಗಿದೆ.
ಎರಡು ದೇಶಗಳ ಭದ್ರತಾ ಹಿತಾಸಕ್ತಿಗಳು ಪರಸ್ಪರ ಹೋಲಿಕೆ ಹೊಂದಿವೆ. ಹೀಗಾಗಿ ಪರಸ್ಪರ ಅವಲಂಬಿತವಾಗಿದೆ ಎಂದು ಅವರು ಮೋದಿ ತಿಳಿಸಿದ್ದಾರೆ.
India & Sri Lanka strengthen ties with 7 MoUs signed across energy, digital, defence & health.
— Dr. Shahid Siddiqui (@shahidsiddiqui) April 5, 2025
Major infra projects launched, including rail upgrades & #Solar power.
PM Modi announces cultural grants & training for 700 Lankans annually.
MoUs, Development Projects, and Key… pic.twitter.com/11Miar3awc
ಭಾರತದ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸಿರುವ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ರಕ್ಷಣಾ ಸಹಕಾರದಲ್ಲಿ ತೀರ್ಮಾನಿಸಲಾದ ಪ್ರಮುಖ ಒಪ್ಪಂದಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ದಿಸ್ಸಾನಾಯಕೆ ಅವರು ತಮ್ಮ ಹೇಳಿಕೆಗಳಲ್ಲಿ, ಭಾರತದ ಭದ್ರತೆಗೆ ಹಾನಿ ಮಾಡುವ ರೀತಿಯಲ್ಲಿ ಶ್ರೀಲಂಕಾ ತನ್ನ ಪ್ರದೇಶವನ್ನು ಬಳಸಲು ಬಿಡುವುದಿಲ್ಲ. ಅಗತ್ಯದ ವೇಳೆ ಶ್ರೀಲಂಕಾಕ್ಕೆ ಭಾರತ ನೀಡಿದ ಸಹಾಯ ಮತ್ತು ನಿರಂತರ ಒಗ್ಗಟ್ಟನ್ನು ನಾವು ಗೌರವಿಸುತ್ತೇವೆ ಎಂದು ಮೋದಿಗೆ ತಿಳಿಸಿದ್ದಾರೆ
ಭಾರತ ಮತ್ತು ಶ್ರೀಲಂಕಾ ನಡುವಿನ ಇತರ ಒಪ್ಪಂದಗಳು
- ತ್ರಿಕೋನಮಲಿಯನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿ. ಭಾರತದ ಬೆಂಬಲದೊಂದಿಗೆ ಇಲ್ಲಿ ನಿರ್ಮಿಸಲಾಗುವ ಸಂಪೂರ್ ವಿದ್ಯುತ್ ಯೋಜನೆಗೆ ಇಬ್ಬರು ನಾಯಕರು ಚಾಲನೆ ನೀಡಿದ್ದಾರೆ. ಸಂಪೂರ್ ಸೌರ ವಿದ್ಯುತ್ ಸ್ಥಾವರವು ಶ್ರೀಲಂಕಾದ ಇಂಧನ ಭದ್ರತೆಗೆ ಸಹಾಯ ಮಾಡುತ್ತದೆ. ಈ ಒಪ್ಪಂದದಿಂದ ಶ್ರೀಲಂಕಾದ ಜನತೆ ಪ್ರಯೋಜನ ಪಡೆಯಲಿದ್ದಾರೆ.
- ಗ್ರಿಡ್ ಅಂತರಸಂಪರ್ಕ ಒಪ್ಪಂದವು ಶ್ರೀಲಂಕಾಕ್ಕೆ ವಿದ್ಯುತ್ ರಫ್ತಿಗೆ ಅವಕಾಶ ಸೃಷ್ಟಿಸಲಿದೆ.
- ವಿದ್ಯುತ್ ವ್ಯಾಪಾರವನ್ನು ಸುಗಮಗೊಳಿಸಲು ಎರಡು ದೇಶಗಳ ವಿದ್ಯುತ್ ಗ್ರಿಡ್‌ಗಳನ್ನು ಪರಸ್ಪರ ಸಂಪರ್ಕಿಸಲು ಸಹಿ ಹಾಕಲಾಯಿತು.
- ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಳಗೊಂಡ ತ್ರಿಪಕ್ಷೀಯ ಒಪ್ಪಂದಕ್ಕೂ ಈ ಸಂದರ್ಭದಲ್ಲಿ ಸಹಿ ಹಾಕಲಾಗಿದ್ದು, ಇದು ತ್ರಿಕೋನಮಲಿಯನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ಒಪ್ಪಂದದಡಿಯಲ್ಲಿ ಬಹು-ಉತ್ಪನ್ನ ಇಂಧನ ಪೈಪ್‌ಲೈನ್ ಅನ್ನು ನಿರ್ಮಿಸಲಾಗುತ್ತದೆ.
- ಭಾರತವು ತನ್ನ ಡಿಜಿಟಲ್ ರೂಪಾಂತರವನ್ನು ಬೆಂಬಲಿಸಲು ಶ್ರೀಲಂಕಾದೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಂಡಿದೆ.
- ಶ್ರೀಲಂಕಾದ ಪೂರ್ವ ಪ್ರಾಂತ್ಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಮೋದಿ ಸುಮಾರು 2.4 ಶತಕೋಟಿ ಶ್ರೀಲಂಕಾದ ರೂಪಾಯಿಗಳ ಬೆಂಬಲ ಪ್ಯಾಕೇಜ್ ಅನ್ನು ಘೋಷಿಸಿದರು.
- ಶ್ರೀಲಂಕಾದಾದ್ಯಂತ 5,000 ಧಾರ್ಮಿಕ ಸಂಸ್ಥೆಗಳಿಗೆ ಸೌರ ಮೇಲ್ಛಾವಣಿ ವ್ಯವಸ್ಥೆಗಳನ್ನು ಪೂರೈಸುವ ಯೋಜನೆಯನ್ನು ಎರಡು ದೇಶಗಳ ನಾಯಕರು ಉದ್ಘಾಟಿಸಿದರು. ಭಾರತದ 17 ಕೋಟಿ ಡಾಲರ್ ಸಾಲದ ನೆರವಿನೊಂದಿಗೆ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ದೇವಾಲಯಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಯೋಜನೆಯಡಿ 25 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ.
ಇದನ್ನೂ ಓದಿ: Viral Video: ಘಿಬ್ಲಿ ಎಡವಟ್ಟು; ಯುವತಿಯ ಫೋಟೊದಲ್ಲಿ 3ನೇ ಕಾಲು ಉದ್ಭವ: ನಕ್ಕು ನಕ್ಕು ಸುಸ್ತಾದ ನೆಟ್ಟಿಗರು
- ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಶ್ರೀಲಂಕಾದ ಆರೋಗ್ಯ ಮತ್ತು ಸಮೂಹ ಮಾಧ್ಯಮ ಸಚಿವಾಲಯವು ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಹಕರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.
- ಭಾರತೀಯ ಫಾರ್ಮಾಕೊಪಿಯಾ ಆಯೋಗ ಮತ್ತು ಶ್ರೀಲಂಕಾದ ರಾಷ್ಟ್ರೀಯ ಔಷಧ ನಿಯಂತ್ರಣ ಪ್ರಾಧಿಕಾರವು ಔಷಧೀಯ ಕ್ಷೇತ್ರದಲ್ಲಿ ಸಹಕಾರವನ್ನು ನೀಡಲು ಒಪ್ಪಂದ ಮಾಡಿಕೊಂಡಿವೆ.