ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Droupadi Murmu: ರಾಷ್ಟ್ರಪತಿ ಮುರ್ಮು ಪೋರ್ಚುಗೀಸ್‌ ಪ್ರವಾಸ; ಪಾಕ್‌ ವಾಯುಪ್ರದೇಶದ ಮೂಲಕ ಹಾದು ಹೋಗಲು ಅನುಮತಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್‌ 7 ಮತ್ತು 8 ರಂದು ಪೋರ್ಚುಗಲ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಉನ್ನತ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.

ರಾಷ್ಟ್ರಪತಿ ಮುರ್ಮು ಪೋರ್ಚುಗೀಸ್‌ ಭೇಟಿ;ಪಾಕ್‌ ವಾಯುಪ್ರದೇಶ ಬಳಸಲು ಅನುಮತಿ

Profile Vishakha Bhat Apr 6, 2025 3:46 PM

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು( Droupadi Murmu) ಅವರು ಏಪ್ರಿಲ್‌ 7 ಮತ್ತು 8 ರಂದು ಪೋರ್ಚುಗಲ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಉನ್ನತ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. ಕಳೆದ 29 ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ರಾಷ್ಟ್ರಪತಿಗಳು ಪೋರ್ಚುಗಲ್‌ಗೆ ತೆರಳಲಿದ್ದಾರೆ. ನಂತರ ಮುರ್ಮು ಅವರು ಎರಡು ದಿನಗಳ ಕಾಲ ಸ್ಲೋವಾಕಿಯಾಕ್ಕೆ ತೆರಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಯುರೋಪ್ ಜೊತೆ ಭಾರತದ ಬೆಳೆಯುತ್ತಿರುವ ಸಂಬಂಧದ ಮಧ್ಯೆ ಈ ಎರಡು ರಾಷ್ಟ್ರಗಳ ಭೇಟಿ ನಡೆಯುತ್ತಿದೆ.

ಇದಕ್ಕೂ ಮೊದಲು 2024 ರಲ್ಲಿ ಮುರ್ಮು ಅಲ್ಜೀರಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ತಪ್ಪಿಸಿ , ಓಮನ್ ಮತ್ತು ಇರಾನ್ ಮೇಲಿನ ಪರ್ಯಾಯ ಮಾರ್ಗಗಳನ್ನು ಬಳಸಿದ್ದವು. 2019 ರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಐಸ್ಲ್ಯಾಂಡ್ ಪ್ರಯಾಣದಲ್ಲಿ ಪಾಕಿಸ್ತಾನವು ರಾಷ್ಟ್ರಪತಿಯವರ ವಿಮಾನ ಹಾರಟವನ್ನು ನಿರಾಕರಿಸಿತ್ತು. ಇದಕ್ಕೂ ಮೊದಲು, 2019 ರಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಜರ್ಮನಿ ಭೇಟಿಗೆ ಪಾಕಿಸ್ತಾನ ಅನುಮತಿ ನಿರಾಕರಿಸಿತ್ತು, ಆದರೆ 2021 ರ ಅಮೆರಿಕ ಭೇಟಿ ಸಂದರ್ಭದಲ್ಲಿ ಸಮ್ಮತಿ ಸೂಚಿಸಿತ್ತು. ಇದೀಗ ಮುರ್ಮು ಅವರ ವಿಮಾನ ಹಾರಾಟಕ್ಕೆ ಪಾಕಿಸ್ತಾನ ಒಪ್ಪಿಗೆ ನೀಡಿದೆ.

ಪೋರ್ಚುಗಲ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೌಸಾ ಅವರ ಆಹ್ವಾನದ ಮೇರೆಗೆ ಮುರ್ಮು ಏಪ್ರಿಲ್ 7-8 ರವರೆಗೆ ಪೋರ್ಚುಗಲ್‌ಗೆ ಭೇಟಿ ನೀಡಲಿದ್ದಾರೆ. 27 ವರ್ಷಗಳ ನಂತರ ಈ ಭೇಟಿ ನಡೆಯುತ್ತಿದ್ದು, ಭಾರತ ಮತ್ತು ಪೋರ್ಚುಗಲ್ ರಾಜತಾಂತ್ರಿಕ ಸಂಬಂಧಗಳ ಪುನಃಸ್ಥಾಪನೆಯ 50 ವರ್ಷಗಳನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರಪತಿಯವರು ಈ ಪ್ರವಾಸ ಕೈಗೊಂಡಿದ್ದಾರೆ. ವಿದೇಶಾಂಗ ಸಚಿವಾಲಯದ ಪ್ರಕಾರ, 1998 ರಲ್ಲಿ ಆಗಿನ ರಷ್ಟ್ರಪತಿಗಳಾಗಿದ್ದ ಕೆ.ಆರ್. ನಾರಾಯಣನ್ ಪೋರ್ಚುಗಲ್‌ಗೆ ಭೇಟಿ ನೀಡಿದ್ದರು. ಆದಾದ ಬಳಿಕ ಯಾರೂ ಪೋರ್ಚುಗೀಸ್‌ ಪ್ರವಾಸ ಕೈಗೊಂಡಿರಲಿಲ್ಲ.

ಈ ಸುದ್ದಿಯನ್ನೂ ಓದಿ: Youtuber Mahabala Ram: ಗ್ಲೋಬಲ್' ಲೆವೆಲ್ ನಲ್ಲಿ ಕನ್ನಡಿಗ ಮಹಾಬಲ ರಾಮ್ ಹವಾ..ಪಾಕಿಸ್ತಾನ ಪ್ರವಾಸದ ಮಾಡಿದ ಮೊದಲ ಯೂಟ್ಯೂಬರ್!

ಮುರ್ಮು ಅವರು ಸೌಸಾ ಅವರನ್ನು ಭೇಟಿ ಮಾಡಿ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಅವರು ಪೋರ್ಚುಗಲ್ ಪ್ರಧಾನಿ ಲೂಯಿಸ್ ಮಾಂಟೆನೆಗ್ರೊ ಮತ್ತು ರಾಷ್ಟ್ರೀಯ ಅಸೆಂಬ್ಲಿಯ (ಸಂಸತ್ತು) ಅಧ್ಯಕ್ಷ ಜೋಸ್ ಪೆಡ್ರೊ ಅಗ್ಯುಯರ್-ಬ್ರಾಂಕೊ ಅವರನ್ನು ಸಹ ಭೇಟಿ ಮಾಡಲಿದ್ದಾರೆ.ಸ್ಲೋವಾಕಿಯಾ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಅವರ ಆಹ್ವಾನದ ಮೇರೆಗೆ, ಮುರ್ಮು ಏಪ್ರಿಲ್ 9-10 ರಿಂದ ಸ್ಲೋವಾಕ್ ಗಣರಾಜ್ಯಕ್ಕೂ ಭೇಟಿ ನೀಡಲಿದ್ದಾರೆ. 29 ವರ್ಷಗಳಲ್ಲಿ ಭಾರತದ ರಾಷ್ಟ್ರಪತಿಗಳು ಸ್ಲೋವಾಕಿಯಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.