Prof V S Nayak Column: ನೇಪಥ್ಯಕ್ಕೆ ಸರಿಯುತ್ತಿರುವ ಕಾವಿ ಕಲೆ
ಕಾವಿ ಕಲೆಯು ಕರಾವಳಿಯ ದೇಗುಲಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿದೆ. ಕಾವಿ ಬಣ್ಣವನ್ನು ಬಳಸಿ ಪುರಾಣದ ಮತ್ತು ಇತರ ಸನ್ನಿವೇಶಗಳನ್ನು ಚಿತ್ರಿಸುವ ಈ ಕಲೆಯು, ಸಾಂಪ್ರದಾಯಿಕ ಶೈಲಿ ಯನ್ನು ಅನುಸರಿಸುತ್ತದೆ. ಇದನ್ನು ಇಂದಿನ ದಿನಗಳಲ್ಲಿ ಚಿತ್ರಿಸು ತ್ತಿರುವ ಕಲಾವಿದರೊಬ್ಬರ ಪರಿಚಯ ಇಲ್ಲಿದೆ.
![ನೇಪಥ್ಯಕ್ಕೆ ಸರಿಯುತ್ತಿರುವ ಕಾವಿ ಕಲೆ](https://cdn-vishwavani-prod.hindverse.com/media/original_images/kavi_art.jpg)
![Profile](https://vishwavani.news/static/img/user.png)
ಪ್ರೊ. ವಿ. ಎಸ್. ನಾಯಕ ಬಳಕೂರು
ಕಲೆ ಎಂಬುದು ಹೇಗೆಲ್ಲಾ ಜನರನ್ನು ಆಕರ್ಷಿಸುತ್ತದೆ ಎಂಬುದಕ್ಕೆ ನಮ್ಮ ನಾಡಿನ ಪ್ರಾಚೀನ ಕಲೆ ಗಳಲ್ಲಿ ಒಂದಾದ ಕಾವಿ ಕಲೆಯೇ ಸಾಕ್ಷಿ. ಇದು ಸುಮಾರು 16ನೇ ಶತಮಾನದಲ್ಲಿ ಗೋವಾದಲ್ಲಿ ಬಹಳ ಪ್ರಚಲಿತದಲ್ಲಿತ್ತು. ಸಾಮಾನ್ಯವಾಗಿ ಸಾರಸ್ವತ ದೇವಾಲಯ ಗಳಲ್ಲಿ ಮತ್ತು ಮನೆಮಠಗಳಲ್ಲಿ ಇದು ಬಹಳ ಪ್ರಚಲಿತ ದಲ್ಲಿ ಇತ್ತು. ಆದರೆ ವರ್ಷ ಗತಿಸಿದ ಹಾಗೆ ಹೊಸ ವಿಭಿನ್ನ ಕಲಾ ಪ್ರಕಾರಗಳು ಬಂದ ನಂತರ ಈ ಪ್ರಾಚೀನ ಕಲಾ ಪ್ರಕಾರವಾದ ಖಾವಿ ಕಲೆಯು ನಮ್ಮಿಂದ ಮರೆಯಾಗುತ್ತಿರು ವುದು ಬಹಳ ಬೇಸರದ ಸಂಗತಿಯಾಗಿದೆ.
ನಮ್ಮ ನಾಡಿನ ಪ್ರಖ್ಯಾತ ಕಲಾವಿದರಲ್ಲಿ ಒಬ್ಬರಾದ ರವಿ ಗುನುಗಾ ರವರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಇವರು ಇಂದಿನ ದಿನಗಳಲ್ಲಿ ಕಾವಿ ಕಲೆಯನ್ನು ಬೇರೆ ಬೇರೆ ಕಡೆ ಚಿತ್ರಿಸಿ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೊಡ್ಲ ಮನೆ ಮಹಾ ವಿಷ್ಣು ದೇವಾಲಯ ಬಳಕೂರು ಇಲ್ಲಿ ಇವರು ರಚಿಸಿರುವ ಕಾವಿ ಕಲೆಯ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.
ಇದನ್ನೂ ಓದಿ: Yagati Raghu Nadig Column: ಸುದ್ದಿಗಿಷ್ಟು ಒಗ್ಗರಣೆ
ವಿವಿಧ ಅವತಾರಗಳ ಚಿತ್ರ: ದೇವಾಲಯವನ್ನು ಪ್ರವೇಶ ಮಾಡುತ್ತಿದ್ದಂತೆ ಅಲ್ಲಿನ ಗೋಡೆಗಳ ಮೇಲೆ ದಶಾವತಾರ ದೃಶ್ಯಗಳು ಒಂದು ವಿಸ್ಮಯಕಾರಿ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಇದರಲ್ಲಿ ಮತ್ಸ್ಯ ಅವತಾರ, ಕೂರ್ಮ ಅವತಾರ, ವರಾಹ ಅವತಾರ, ನರಸಿಂಹ ಅವತಾರ, ವಾಮನ ಅವತಾರ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿಯ ಅವತಾರಗಳು ತಕ್ಷಣ ಗಮನ ಸೆಳೆಯು ತ್ತವೆ.
ಸಾಮಾನ್ಯವಾಗಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ದೇವಾಲಯಗಳ ಗೋಡೆಗಳ ಮೇಲೆ ಕಾವಿ ಕಲೆಯನ್ನು ಇಂದಿಗೂ ಕೂಡ ನೋಡಬಹುದು. ಇದರ ಜೊತೆಗೆ ಸಾಮಾನ್ಯವಾಗಿ ನಾವು ಕಾವಿಕಲೆ ಯಲ್ಲಿ ಸೂರ್ಯ ಮಂಡಲ, ಚಂದ್ರಮಂಡಲ, ಸಪ್ತ ಮಾತೃಕೆಯರು, ನಾಟ್ಯ ಗಣೇಶ, ಮೂಷಿಕ ವಾಹನ, ಇದರ ಜೊತೆಗೆ ಪುರಾಣ ಪುಣ್ಯ ಕಥೆಗಳಲ್ಲಿ ಬರುವ ವಿಭಿನ್ನ ಸನ್ನಿವೇಶಗಳನ್ನು ನೋಡಬಹುದು.
ಕಲಾವಿದ ರವಿ ಗುನಗ ರವರು ರಚಿಸಿರುವ ಕಾವಿ ಕಲೆ ಚಿತ್ರಗಳು ನಮ್ಮ ನಾಡಿನ ಹಲವಾರು ದೇವಾ ಲಯಗಳಲ್ಲಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಕಾವಿ ಕಲೆಯು ಪ್ರಾಚೀನ ವಿಭಿ ನ್ನ ಶೈಲಿಯ ಕಲಾ ಪ್ರಕಾರವಾಗಿದ್ದು ಈ ಚಿತ್ರಗಳಲ್ಲಿ ಅದ್ಭುತ ಬಣ್ಣಗಳ ಸಂಯೋಜನೆ, ಅರ್ಥ ಪೂರ್ಣ ವಿನ್ಯಾಸ, ಮನ ಸೆಳೆಯುವ ರೀತಿಗಳ ಮೋಡಿ, ಚಿತ್ರಗಳಿಗೆ ತಕ್ಕಂತೆ ಚೌಕಟ್ಟಿನ ರಚನೆ, ಕಲಾಕೃತಿಗಳಿಗೆ ತಕ್ಕಂತೆ ಬಣ್ಣಗಳ ಲೇಪನ, ಚಿತ್ತಾಕರ್ಷಕ ಬಣ್ಣಗಳ ಪ್ರತಿಫಲನ, ಪುರಾಣ ಪುಣ್ಯ ಕಥೆಗಳನ್ನು ತೆರೆದಿಟ್ಟಂತೆ ಕಾಣುವ ಅದ್ಭುತ ಶೈಲಿ, ಗಮನ ಸೆಳೆಯುವ ಕಲಾಕೃತಿಗಳ ಸೆಳೆತ, ಎಲ್ಲವೂ ಈ ಕಾವಿ ಕಲೆಯಲ್ಲಿ ಎದ್ದು ಕಾಣುತ್ತದೆ.
ಕಲಾವಿದ ರವಿ ಗುನಗರವರು ಹೇಳುವ ಪ್ರಕಾರ ‘ಪ್ರಾಚೀನ ಕಲಾ ಪ್ರಕಾರವಾದ ಕಾವಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನನ್ನ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಿದ್ದೇನೆ. ಪುರಾಣ ಪುಣ್ಯ ಕಥೆಗಳಲ್ಲಿ ಬರುವ ಸನ್ನಿವೇಶಗಳನ್ನು ಕಾವಿ ಕಲೆಗಳ ಮೂಲಕವಾಗಿ ಚಿತ್ರಿಸುವುದರಿಂದ ಎಲ್ಲಾ ವಿಷಯಗಳನ್ನು ಜನಮಾನಸದಲ್ಲಿ ತುಂಬ ಕೆಲಸ ಮಾಡಬಹುದು. ಇದರಿಂದ ನನಗೆ ಬಹಳ ಸಂತೃಪ್ತಿ ಇದೆ’ ಎಂದು ಹೇಳುತ್ತಾರೆ.
ದೇಗುಲಗಳ ಭಿತ್ತಿಗಳಲಿ!
ಕಾವಿ ಕಲೆಯ ಶೈಲಿಯಲ್ಲಿ ಹಲವು ಚಿತ್ರಗಳನ್ನು ದೇಗುಲಗಳ ಭಿತ್ತಿಗಳಲ್ಲಿ ರಚಿಸಿರುವುದನ್ನು ಕಾಣಬಹುದು. ಮುಖ್ಯವಾಗಿ ಪೌರಾಣಿಕ ಸನ್ನಿವೇಶಗಳನ್ನು ಚಿತ್ರಿಸಲು ಈ ಕಲೆ ಬಳಕೆಯಾಗುತ್ತದೆ. ಕರಾವಳಿಯ ಹಲವು ದೇಗುಲಗಳ ಭಿತ್ತಿಗಳಲ್ಲಿ ಕಾವಿ ಕಲೆಯನ್ನು ಕಾಣಬಹುದು. ಇಂದಿನ ತಲೆ ಮಾರಿನ ಕಲಾವಿದರು, ಈ ಕಲೆಯನ್ನು ಉಪಯೋಗಿಸಿ ಆಧುನಿಕ ಚಿತ್ರಗಳನ್ನು ರಚಿಸುವ ಪ್ರಯೋಗ ವನ್ನು ಅಲ್ಲಲ್ಲಿ ಮಾಡಿದ್ದುಂಟು.