300 ಆಸನಗಳುಳ್ಳ ಹೊಸ ಕಚೇರಿಯೊಂದಿಗೆ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಮತ್ತಷ್ಟು ಬಲಪಡಿಸಿದ ಯು ಎಸ್ ಟಿ
ನಗರದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಉಪಗ್ರಹ ಕಚೇರಿಗಳೊಂದಿಗೆ, ನಾವು ನಮ್ಮ ಉದ್ಯೋಗಿ ಗಳಿಗೆ ಅವರ ಮನೆಗೆ ಸಮೀಪದಲ್ಲಿ ಅನುಕೂಲಕರ ಕೆಲಸದ ಸ್ಥಳ ಒದಗಿಸುವ ಗುರಿ ಹೊಂದಿದ್ದೇವೆ, ಪ್ರಯಾಣದ ಆಯಾಸವನ್ನು ಕಡಿಮೆ ಮಾಡುತ್ತೇವೆ ಮತ್ತು ಅವರು ನಾವೀನ್ಯತೆ ಮತ್ತು ಉತ್ಪಾದಕತೆಯ ಮೇಲೆ ಹೆಚ್ಚು ಗಮನ ಹರಿಸಲು ಅನುವು ಮಾಡಿಕೊಡುತ್ತೇವೆ


6,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬೆಂಗಳೂರು, ಜಾಗತಿಕವಾಗಿ ಯು ಎಸ್ ಟಿ ಯ 2ನೇ ಅತಿದೊಡ್ಡ ಅಭಿವೃದ್ಧಿ ಕೇಂದ್ರವಾಗಿದೆ.
ಬೆಂಗಳೂರು: ಡಿಜಿಟಲ್ ಪರಿವರ್ತನೆಗಳಿಗೆ ಪರಿಹಾರ ಪ್ರಮುಖ ಕಂಪನಿಯಾದ ಯು ಎಸ್ ಟಿ (UST), ಕರ್ನಾಟಕದ ಬೆಂಗಳೂರಿನಲ್ಲಿ 4ನೇ ಕಚೇರಿ ಸೌಲಭ್ಯ ಉದ್ಘಾಟಿಸುವ ಮೂಲಕ ತನ್ನ ಭಾರತದ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. 300ಕ್ಕೂ ಹೆಚ್ಚು ಆಸನಗಳನ್ನು ಹೊಂದಿ ರುವ ಹೊಸ ಕಚೇರಿಯು ಉತ್ತರ ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಎಂಎಸ್ಆರ್ ನಾರ್ತ್ ಟವರ್‌ನಲ್ಲಿದೆ. ಈ ಕಚೇರಿಯು ಬೆಂಗಳೂರಿನ ಪ್ರೆಸ್ಟೀಜ್ ಶಾಂತಿನಿಕೇತನ, ಐಟಿಪಿಬಿ ಮತ್ತು ಹೆಲಿಯೊಸ್ ಬಿಸಿನೆಸ್ ಪಾರ್ಕ್‌ನಾದ್ಯಂತ ಇರುವ ಸೌಲಭ್ಯಗಳಿಗೆ ಯು ಎಸ್ ಟಿ ಯ ಸೌಲಭ್ಯಗಳು ಪೂರಕವಾಗಿದೆ, ಇದು ನಗರದ ಉತ್ತರ ಭಾಗದ ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ.
ಯು ಎಸ್ ಟಿ ಯ ಮುಖ್ಯ ಮೌಲ್ಯ ಅಧಿಕಾರಿ ಮತ್ತು ಅಭಿವೃದ್ಧಿ ಕೇಂದ್ರ ಕಾರ್ಯಾಚರಣೆಗಳ ಜಾಗತಿಕ ಮುಖ್ಯಸ್ಥ ಸುನಿಲ್ ಬಾಲಕೃಷ್ಣನ್ ಅವರು ಬೆಂಗಳೂರಿನ ಹೊಸ ಕಚೇರಿ ಸ್ಥಳವನ್ನು ಉದ್ಘಾಟಿಸಿದರು. ಬೆಂಗಳೂರಿನ ಉಪಾಧ್ಯಕ್ಷ ಮತ್ತು ಕೇಂದ್ರದ ಮುಖ್ಯಸ್ಥ ಕಿರಣ್‌ಕುಮಾರ್ ದೊರೆ ಸ್ವಾಮಿ, ಹೈಟೆಕ್ ವರ್ಟಿಕಲ್ ನ ಜನರಲ್ ಮ್ಯಾನೇಜರ್ ಲಕ್ಷ್ಮಣ್ ಮುತ್ತಯ್ಯ, ವಿತರಣಾ ನಾಯ ಕತ್ವದ ಉಪಾಧ್ಯಕ್ಷ ಜಾರ್ಜ್ ಜೋಸ್, ಎಚ್ಆರ್ ಬಿಎಸ್ಇ ಮುಖ್ಯಸ್ಥ ಶರತ್ ರಾಜ್, ಗ್ಲೋಬಲ್ ಪಿಆರ್ & ಮೀಡಿಯಾ ರಿಲೇಶನ್ಸ್ ನಿರ್ದೇಶಕ ಮತ್ತು ಮುಖ್ಯಸ್ಥ ಟಿನು ಚೆರಿಯನ್ ಅಬ್ರಹಾಂ ಮತ್ತು ಯು ಎಸ್ ಟಿ ಯ ಇತರೆ ಹಿರಿಯ ನಾಯಕರು ಮತ್ತು ಸಹವರ್ತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: Bangalore News: ಮೊಬೈಲ್ ನೋಡಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಈ ಸಂದರ್ಭದಲ್ಲಿ ಬೆಂಗಳೂರಿನ ಉಪಾಧ್ಯಕ್ಷ ಮತ್ತು ಕೇಂದ್ರದ ಮುಖ್ಯಸ್ಥ ಕಿರಣ್‌ಕುಮಾರ್ ದೊರೆ ಸ್ವಾಮಿ ಮಾತನಾಡಿ, "ಹೊಸ ಸೌಲಭ್ಯದ ಉದ್ಘಾಟನೆಯು ಭಾರತದಲ್ಲಿ ಯು ಎಸ್ ಟಿ ಯ ನಿರಂತರ ಬೆಳವಣಿಗೆಗೆ ಬೆಂಗಳೂರಿನಲ್ಲಿ ಕೊಡುಗೆ ನೀಡಲು ಈ ಕಚೇರಿಯು ಮಹತ್ವದ ಮೈಲಿಗಲ್ಲಾಗಿದೆ. ನಗರದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಉಪಗ್ರಹ ಕಚೇರಿಗಳೊಂದಿಗೆ, ನಾವು ನಮ್ಮ ಉದ್ಯೋಗಿಗಳಿಗೆ ಅವರ ಮನೆಗೆ ಸಮೀಪದಲ್ಲಿ ಅನುಕೂಲಕರ ಕೆಲಸದ ಸ್ಥಳ ಒದಗಿಸುವ ಗುರಿ ಹೊಂದಿದ್ದೇವೆ, ಪ್ರಯಾಣದ ಆಯಾಸವನ್ನು ಕಡಿಮೆ ಮಾಡುತ್ತೇವೆ ಮತ್ತು ಅವರು ನಾವೀನ್ಯತೆ ಮತ್ತು ಉತ್ಪಾದಕತೆಯ ಮೇಲೆ ಹೆಚ್ಚು ಗಮನ ಹರಿಸಲು ಅನುವು ಮಾಡಿಕೊಡುತ್ತೇವೆ. ಈ ವಿಸ್ತರಣೆಯು ನಮ್ಮ ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ಪರಿಹಾರಗಳನ್ನು ನೀಡುವುದನ್ನು ಮುಂದು ವರಿಸುವಾಗ ಕ್ರಿಯಾಶೀಲ ಮತ್ತು ಉದ್ಯೋಗಿ ಕೇಂದ್ರಿತ ಕೆಲಸದ ವಾತಾವರಣ ಬೆಳೆಸುವ ನಮ್ಮ ಸಮರ್ಪಣೆಯನ್ನು ಇದು ಬಲಪಡಿಸುತ್ತದೆ" ಎಂದರು.
ಬೆಂಗಳೂರಿನ ಉತ್ತರ ಭಾಗದ ಟೆಕ್ ಹಬ್‌ನಲ್ಲಿರುವ ಈ ಹೊಸ ಸೌಲಭ್ಯವು ಉದ್ಯೋಗಿಗಳ ಅನುಕೂಲ ಹೆಚ್ಚಿಸಲು ಒಂದು ಶಿಶುವಿಹಾರ ಮತ್ತು ಕೆಫೆಯನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಪ್ರಮುಖ ಸಾರಿಗೆ ಕೇಂದ್ರಗಳಿಂದ 100 ಮೀಟರ್ ಒಳಗೆ ಇದರ ಸಾಮೀಪ್ಯವು ಪ್ರಯಾಣಿಕರಿಗೆ ಸುಗಮ ಸಂಪರ್ಕವನ್ನು ಖಚಿತಪಡಿಸುತ್ತದೆ.
ಯು ಎಸ್ ಟಿ 2012ರಲ್ಲಿ ಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆ ಪ್ರಾರಂಭಿಸಿತು. ಪ್ರಸ್ತುತ, ಬೆಂಗಳೂರು ಮಹಾನಗರವು ಯು ಎಸ್ ಟಿ ಯ ಯ 2ನೇ ಅತಿದೊಡ್ಡ ಜಾಗತಿಕ ವಿತರಣಾ ಕೇಂದ್ರವಾಗಿ ನೆಲೆ ನಿಂತಿದೆ. ಸೆಮಿಕಂಡಕ್ಟರ್, ಆರೋಗ್ಯ ರಕ್ಷಣೆ, ತಂತ್ರಜ್ಞಾನ, ಸರಕು ಸಾಗಣೆ, ಹೈಟೆಕ್, ಬಿಡಿ ಮಾರಾಟ ಮತ್ತು ಬಿಎಫ್ಎಸ್ಐಗಳಲ್ಲಿ ನವೀನ ಪರಿಹಾರಗಳನ್ನು ನೀಡುವ 6,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿದೆ.
ಡಿಜಿಟಲ್ ಪರಿವರ್ತನೆ ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಜಾಗತಿಕ ಸರದಾರನಾಗಿ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳುವ ಮೂಲಕ ಯು ಎಸ್ ಟಿ, ಭಾರತದಾದ್ಯಂತ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವು ದನ್ನು ಮುಂದುವರೆಸಿದೆ. 2025 ಮಾರ್ಚ್ ನಲ್ಲಿ ಯು ಎಸ್ ಟಿ ಪುಣೆಯಲ್ಲಿ 1,000 ಆಸನಗಳ ಕಚೇರಿ ಉದ್ಘಾಟಿಸಿತು, ಮುಂದಿನ 5 ವರ್ಷಗಳಲ್ಲಿ ಈ ನಗರದಲ್ಲಿ 6,000 ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ಹೊಂದಿದೆ. ಕಳೆದ ವರ್ಷ ಯು ಎಸ್ ಟಿ ಬೆಂಗಳೂರಿನಲ್ಲಿ 2ನೇ ಕಚೇರಿ ತೆರೆಯಿತು, ಜತೆಗೆ ವಿನ್ಯಾಸ ಅನುಭವ ಕೇಂದ್ರವನ್ನು ಸಹ ತೆರೆಯಿತು. ಕಂಪನಿಯು ಕೇರಳದ ಕೊಚ್ಚಿಯಲ್ಲಿ ತನ್ನ 2ನೇ ಒಡೆತನದ ಕ್ಯಾಂಪಸ್‌ಗೆ ಶಂಕುಸ್ಥಾಪನೆ ನೆರವೇರಿಸಿದೆ. ಮುಂದಿನ 5 ವರ್ಷಗಳಲ್ಲಿ ಕೊಚ್ಚಿಯಲ್ಲಿ 3,000 ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಯೊಂದಿಗೆ, ಈ ಪ್ರದೇಶದಲ್ಲಿ ಬೆಳವಣಿಗೆ ಮತ್ತು ಹೂಡಿಕೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. 2023ರಲ್ಲಿ ಯುಎಸ್ಟಿ, ಹೈದರಾಬಾದ್‌ನಲ್ಲಿರುವ ಅಂತಾರಾಷ್ಟ್ರೀಯ ಟೆಕ್ ಪಾರ್ಕ್‌ನಲ್ಲಿ ಅತ್ಯಾಧುನಿಕ ಮತ್ತು ಸುಸಜ್ಜಿತ ಕಚೇರಿ ಉದ್ಘಾಟಿಸಿತು, ಇದು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ನವೀನ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಯು ಎಸ್ ಟಿ, 1999ರಲ್ಲಿ ಸ್ಥಾಪನೆಯಾಯಿತು, ಇದರ ಭಾರತದ ಪ್ರಧಾನ ಕಚೇರಿ ತಿರುವನಂತಪುರಂನಲ್ಲಿದೆ. ಬೆಂಗಳೂರು, ತಿರುವನಂತಪುರಂ, ಹೈದರಾಬಾದ್, ಕೊಚ್ಚಿ, ಪುಣೆ, ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ ಎನ್ ಸಿಆರ್, ಅಹಮದಾಬಾದ್, ಹೊಸೂರು ಸೇರಿದಂತೆ ಭಾರತದ ಪ್ರಮುಖ ಸ್ಥಳಗಳಲ್ಲಿ ಕಚೇರಿಗಳನ್ನು ಹೊಂದಿದ್ದು, ಭಾರತದಲ್ಲಿ 20,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿ ಸಿಕೊಂಡಿದೆ.