ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಫ್ಲೈಓವರ್‌ನಿಂದ ಕಂತೆ ಕಂತೆ ಹಣ ಎಸೆದ ಯೂಟ್ಯೂಬರ್; ನೆಟ್ಟಿಗರಿಂದ ಹಿಗ್ಗಾ ಮುಗ್ಗಾ ತರಾಟೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೇತುವೆಯ ಮೇಲೆ ನಿಂತು ಯೂಟ್ಯೂಬರ್ ಒಬ್ಬ ಹಣವನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಲು ಆತ ರೀತಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಫ್ಲೈಓವರ್‌ನಿಂದ ಹಣ ಎಸೆದ ಯೂಟ್ಯೂಬರ್; ವಿಡಿಯೋ ನೋಡಿ

ಹಣ ಎಸೆದ ವ್ಯಕ್ತಿ

Profile Vishakha Bhat Mar 2, 2025 10:08 AM

ಲಖನೌ: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಸೇತುವೆಯ ಮೇಲೆ ನಿಂತು ಯೂಟ್ಯೂಬರ್ ಒಬ್ಬ ಹಣವನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದೆ. ಆತ 50 ಸಾವಿರ ರೂ. ಮೌಲ್ಯದ 200 ರೂ. ಗಳನ್ನು ಫ್ಲೈಓವರ್‌ನಿಂದ ಎಸೆದಿದ್ದಾನೆ ಎಂದು ಹೇಳಲಾಗಿದೆ. ಆದರೆ ನಿಖರವಾದ ಮೊತ್ತ ಇನ್ನೂ ತಿಳಿದು ಬಂದಿಲ್ಲ. ಆತ ಮಾಡಿರುವ ವ್ಲಾಗ್‌ನಲ್ಲಿ ಅವನು ಬ್ಯಾಂಕ್‌ನಿಂದ ಹಣ ಹಿಡಿದು ಬರುತ್ತಿರುವುದು ಕಾಣಿಸುತ್ತದೆ. ಆತನ ಬಗ್ಗೆ ನಿಖರ ಮಾಹಿತಿ ಇನ್ನೂ ಪತ್ತೆಯಾಗಿಲ್ಲ.

ಯೂಟ್ಯೂಬರ್ ಸೇತುವೆ ಮೇಲೆ ನಿಂತು ಹಣ ಎಸೆಯುತ್ತಿದ್ದಂತೆ ಜನರು ಹಣ ಆಯ್ದುಕೊಳ್ಳಲು ಮುಗಿಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್‌ ಆಗಲು ಆತ ರೀತಿಯ ಕೃತ್ಯವನ್ನು ಮಾಡಿದ್ದಾನೆ. ಈ ಘಟನೆ ಚಾಕೇರಿ ಫ್ಲೈಓವರ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ ವಿಡಿಯೋವನ್ನು ಫೆಬ್ರವರಿ 22 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಯೂಟ್ಯೂಬರ್ ಹಣವನ್ನು ಎಸೆದಿದ್ದು, ಹಣ ನೆಲಕ್ಕೆ ಬಿದ್ದ ತಕ್ಷಣ ಜನರು ಹಣವನ್ನು ಆರಿಸಲು ಮುಗಿ ಬಿದ್ದಿದ್ದಾರೆ. ಯೂಟ್ಯೂಬರ್ ಹಣವನ್ನು ಗಾಳಿಯಲ್ಲಿ ಎಸೆಯುತ್ತಿರುವುದನ್ನು ಮತ್ತು ಅವರ ಸಹಚರರು ನೆಲದ ಮೇಲೆ ನಿಂತು ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.



ಈ ಸುದ್ದಿಯನ್ನೂ ಓದಿ: Viral Video: ಸಚಿವರ ಸೋದರಳಿಯ & ಹೂ ಅಂಗಡಿ ಮಾರಾಟಗಾರರನ ನಡುವೆ ಮಾರಾಮಾರಿ; ವಿಡಿಯೊ ವೈರಲ್‌

ಸಾಮಾಜಿಕ ಮಾಧ್ಯಮ ಬಳಕೆದಾರರು ಆತನನ್ನು ಝೈದ್ ಹಿಂದೂಸ್ತಾನಿ ಎಂದು ಗುರುತಿಸಿದ್ದು, ಆತ ಜನಪ್ರಿಯತೆ ಗಳಿಸಲು ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಆತನನ್ನು ಟೀಕಿಸಲಾಗುತ್ತಿದೆ. ಹಣವನ್ನು ಎಸೆಯುವ ಬದಲು ಅದನ್ನು ತಮ್ಮ ಕೈಯಿಂದಲೇ ಬಡವರಿಗೆ ನೀಡಬಹುದಿತ್ತು ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಘಟನೆಯ ಬಗ್ಗೆ ಇನ್ನೂ ದೃಢೀಕೃತ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ಆದಾಗ್ಯೂ, ಘಟನೆಯನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.