Beauty Tips: ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಬಾಳೆಹಣ್ಣಿನ ಸಿಪ್ಪೆ ಬಹಳಷ್ಟು ಪ್ರಯೋಜನಕಾರಿ
ಬಾಳೆಹಣ್ಣಿನ ಸಿಪ್ಪೆಗಳು ಅಮೂಲ್ಯವಾದ ಪೋಷಕಾಂಶಗಳು ಮತ್ತು ಫೈಟೊ ನ್ಯೂಟ್ರಿ ಯೆಂಟ್‌ಗಳನ್ನು ಒಳಗೊಂಡಿದ್ದು, ಬಾಳೆಹಣ್ಣಿನ ಸಿಪ್ಪೆಯು ಚರ್ಮವನ್ನು ಸ್ವತಂತ್ರ ರಾಡಿಕಲ್ ಮತ್ತು ಸೂರ್ಯನ ಹಾನಿಯಿಂದ ರಕ್ಷಿಸುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಸಮೃದ್ಧ ಮೂಲವಾಗಿದೆ. ಇದು ನಿಮ್ಮ ಚರ್ಮವು ತಾರುಣ್ಯ ಭರಿತವಾಗಿರಲು ಮತ್ತು ಕೂದಲಿನ ಹೊಳಪಿಗೆ ಬಹಳಷ್ಟು ಉಪಯೋಗಕಾರಿ. ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ಎನ್ನುವ ಮಾಹಿತಿ ಇಲ್ಲಿದೆ.

banana peel

ನವದೆಹಲಿ: ನಾವು ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಡಸ್ಟ್ ಬಿನ್‌ನಲ್ಲಿ ಎಸೆಯುತ್ತೇವೆ, ಆದರೆ ಬಾಳೆಹಣ್ಣಿನಂತೆಯೇ ಅದರ ಸಿಪ್ಪೆ ಯಲ್ಲಿಯೂ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚು ಇರಲಿದ್ದು ಇದು ನಮ್ಮ ಚರ್ಮ ಮತ್ತು ಕೂದಲಿನ ಆರೈಕೆಗೆ(Beauty Tips) ಬಹಳಷ್ಟು ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣಿನ ಸಿಪ್ಪೆಗಳು ಅಮೂಲ್ಯವಾದ ಪೋಷ ಕಾಂಶಗಳು ಮತ್ತು ಫೈಟೊ ನ್ಯೂಟ್ರಿ ಯೆಂಟ್‌ಗಳನ್ನು ಒಳಗೊಂಡಿ ದ್ದು ಬಾಳೆಹಣ್ಣಿನ ಸಿಪ್ಪೆಯು ಚರ್ಮವನ್ನು ಸ್ವತಂತ್ರ ರಾಡಿಕಲ್ ಮತ್ತು ಸೂರ್ಯನ ಹಾನಿಯಿಂದ ರಕ್ಷಿಸುವ ಉತ್ಕರ್ಷಣ ನಿರೋಧಕ ಗುಣ ಲಕ್ಷಣ ಗಳ ಸಮೃದ್ಧ ಮೂಲವಾಗಿದೆ. ಇದು ನಿಮ್ಮ ಚರ್ಮವು ತಾರುಣ್ಯ ಭರಿತ ವಾಗಿರಲು ಮತ್ತು ಕೂದಲಿನ ಹೊಳಪಿಗೆ ಬಹಳಷ್ಟು ಉಪ ಯೋಗಕಾರಿ ಯಾಗಿದ್ದು ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ಎನ್ನುವ ಮಾಹಿತಿ ಇಲ್ಲಿದೆ.
ಕೊಬ್ಬಿನಾಮ್ಲದ ಸಮೃದ್ಧ ಮೂಲವಾಗಿರುವ ಬಾಳೆಹಣ್ಣಿನ ಸಿಪ್ಪೆಗಳು ತಲೆಹೊಟ್ಟು ಮತ್ತು ನೆತ್ತಿಯ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಬಾಳೆ ಹಣ್ಣಿನ ಸಿಪ್ಪೆಯಲ್ಲಿ ತೇವಾಂಶ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ಚರ್ಮ ಮತ್ತು ಕೂದಲಿನ ಮೇಲೆ ಜಲಸಂಚಯನ ಮತ್ತು ತೇವಾಂಶದ ಪರಿಣಾಮವನ್ನು ನೀಡುತ್ತದೆ.
ಚರ್ಮದ ಆರೈಕೆಗೆ: ಬಾಳೆ ಹಣ್ಣಿನ ಸಿಪ್ಪೆಯು ನಮ್ಮ ಚರ್ಮದ ಮೇಲೆ ಅದ್ಭುತ ಪರಿಣಾಮ ಬೀರಲಿದೆ. ವಯಸ್ಸಾದ ಚಿಹ್ನೆಗಳ ನಿವಾರಣೆ, ಮೊಡವೆಗಳ ನಿವಾರಣೆ, ಶುಷ್ಕ ತೆಯ ಚರ್ಮ, ಮುಂತಾದ ಚರ್ಮದ ಸಮಸ್ಯೆ ನಿವಾರಣೆ ಮಾಡ ಲಿದೆ. ಬಾಳೆ ಹಣ್ಣಿನ ಸಿಪ್ಪೆಯಿಂದ ಚರ್ಮವನ್ನು ಉಜ್ಜುವುದರಿಂದ ಒಣ ಚರ್ಮಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಇದು ಚರ್ಮದಲ್ಲಿ ಇರುವ ಶುಷ್ಕತೆಯನ್ನು ನಿವಾರಿಸಿ, ಚರ್ಮವು ತೇವಾಂಶದಿಂದ ಕೂಡಿರುವಂತೆ ಮಾಡಲು ಸಹಾಯಕವಾಗಲಿದೆ.
ಕೂದಲ ಬೆಳವಣಿಗೆ: ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ಕೂದಲಿನ ಆರೋಗ್ಯಕ್ಕೂ ಬಹಳಷ್ಟು ಒಳ್ಳೆಯದು. ಬಾಳೆ ಹಣ್ಣಿ ನ ಸಿಪ್ಪೆಯ ಲೇಪನವನ್ನು ಕೂದಲಿಗೆ ಅನ್ವಯಿಸುವುದರಿಂದ ತಲೆಯಲ್ಲಿ ಉಂಟಾಗುವ ಕಿರಿಕಿರಿ, ಶುಷ್ಕತೆ, ಶಿಲೀಂಧ್ರಗಳ ಸಮಸ್ಯೆ ಹಾಗೂ ತಲೆ ಹೊಟ್ಟು ನಿವಾರಣೆಗೆ ಸಹಕಾರಿಯಾಗಲಿದೆ. ಬಾಳೆಹಣ್ಣಿನಲ್ಲಿ ಸಿಲಿಕಾ ಅಂಶ ಅಧಿಕವಾಗಿ ಇರಲಿದ್ದು ಇದು ಕೂದಲು ಒಡೆಯುವುದು, ಕೂದಲು ಉದು ರುವ ಸಮಸ್ಯೆಗಳ ನಿವಾರಣೆಗೆ ಬಹಳಷ್ಟು ಒಳಿತು.
ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ: ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಲು ಸುಲಭವಾದ ವಿಧಾನ ಎಂದರೆ ಸಿಪ್ಪೆಯ ಒಳಭಾಗವನ್ನು ನಿಮ್ಮ ಚರ್ಮಕ್ಕೆ ನೇರವಾಗಿ ಮಸಾಜ್ ಮಾಡುವುದು ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಶುಷ್ಕ ಅಥವಾ ಕಿರಿಕಿರಿ ಚರ್ಮವನ್ನು ಶಮನಗೊಳಿಸಲು ಸಹಕಾರಿ ಯಾಗಲಿದೆ.
ಬಾಳೆಹಣ್ಣಿನ ಸಿಪ್ಪೆ ಮತ್ತು ಜೇನುತುಪ್ಪದೊಂದಿಗೆ ಸ್ಕ್ರಬ್ ಮಾಡಿ: ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಒಂದು ಚಮಚ ಅರಿಶಿನ ಪುಡಿಯನ್ನು ಮತ್ತು ಸಕ್ಕರೆಯನ್ನು ಸೇರಿಸಿ ಜೇನು ತುಪ್ಪದೊಂದಿಗೆ ಸೇರಿಸಿ, ಅದನ್ನು ಚೆನ್ನಾಗಿ ಮಿಶ್ರಣ ಮಾಡಿ, ಬಳಿಕ ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಅರ್ಧ ಘಂಟೆ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಇದನ್ನು ಓದಿ: Jewel Fashion 2025: ಸೆಲೆಬ್ರಿಟಿ ಲುಕ್‌ಗಾಗಿ ಶಾಂಡೆಲಿಯರ್ ಇಯರಿಂಗ್ಸ್ ಧರಿಸಿ
ಕೂದಲಿಗೆ ಬಾಳೆಹಣ್ಣಿನ ಸಿಪ್ಪೆ: ನೀವು ತಲೆಹೊಟ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಬಾಳೆಹಣ್ಣಿನ ಸಿಪ್ಪೆಯ ಮಾಸ್ಕ್ ಅನ್ನು ನೆತ್ತಿಯ ಮೇಲೆ ಹಚ್ಚಿ, ಇದು ನೆತ್ತಿಗೆ ತೇವಾಂಶ ವನ್ನು ನೀಡುವ ಜೊತೆಗೆ ಡ್ಯಾಂಡ್ರಫ್ ಅನ್ನು ಹೋಗಲಾಡಿಸುತ್ತದೆ.ಸ್ವಲ್ಪ ಬಾಳೆಹಣ್ಣಿನ ಸಿಪ್ಪೆಗೆ ಮೊಸರು ಸೇರಿಸಿ ಈ ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿಗೆ ಸಂಪೂರ್ಣವಾಗಿ ಅನ್ವಯಿಸಿ ಮತ್ತು ಅರ್ಧ ಘಂಟೆಯವರೆಗೆ ಇರಿಸಿ ಶಾಂಪೂ ಮತ್ತು ಮಾಯಿಶ್ಚರೈಸರ್‌ನಿಂದ ತೊಳೆಯಿರಿ.