Betting app: ನಟ ವಿಜಯ್ ದೇವರಕೊಂಡ ಸೇರಿದಂತೆ 29 ಸೆಲೆಬ್ರಿಟಿಗಳ ಮೇಲೆ ಇಡಿ ಕಣ್ಣು; ಕೇಸ್ ದಾಖಲು- ಏನಿದು ಪ್ರಕರಣ?
Betting App Scam Case: ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿರುವ 29 ಸೆಲೆಬ್ರಿಟಿಗಳಲ್ಲಿ ನಟರಾದ ವಿಜಯ್ ದೇವರಕೊಂಡ ಮತ್ತು ರಾಣಾ ದಗ್ಗುಬಾಟಿ ಸೇರಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.


ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ(Betting App Scam Case) ಸಂಬಂಧಿಸಿದಂತೆ ವಿಜಯ್ ದೇವರಕೊಂಡ(Vijay Deverakonda) ಮತ್ತು ರಾಣಾ ದಗ್ಗುಬಾಟಿ(Rana Daggubati) ಸೇರಿದಂತೆ ಬರೋಬ್ಬರಿ 29ಸೆಲೆಬ್ರಿಟಿಗಳ ವಿರುದ್ಧ ಇಡಿ ಕೇಸ್ ದಾಖಲಿಸಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿರುವ 29 ಸೆಲೆಬ್ರಿಟಿಗಳಲ್ಲಿ ನಟರಾದ ವಿಜಯ್ ದೇವರಕೊಂಡ ಮತ್ತು ರಾಣಾ ದಗ್ಗುಬಾಟಿ ಸೇರಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾದ ಇತರ ವ್ಯಕ್ತಿಗಳಲ್ಲಿ ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ ಮತ್ತು ಶ್ರೀಮುಖಿ ಸೇರಿದ್ದಾರೆ.
ಹೈದರಾಬಾದ್ ಸೈಬರಾಬಾದ್ ಪೊಲೀಸರು ಸಲ್ಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ಪರವಾಗಿ ಪ್ರಚಾರ ಮಾಡಿರುವ ಆರೋಪದ ಮೇಲೆ ತೆಲಂಗಾಣದಲ್ಲಿ ಜನಪ್ರಿಯ ನಟರುಹಲವಾರು ಸೆಲೆಬ್ರಿಟಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಉದ್ಯಮಿ ಫಣೀಂದ್ರ ಶರ್ಮಾ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Betting App : ಬೆಟ್ಟಿಂಗ್ ಆ್ಯಪ್ ಪ್ರಮೋಷನ್; ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಸೇರಿ 25 ಕ್ಕೂ ಹೆಚ್ಚು ಸೆಲೆಬ್ರಿಟಿಗಳ ವಿರುದ್ಧ FIR!
ಜಂಗ್ಲೀ ರಮ್ಮಿಯ ಪ್ರಚಾರಕ್ಕೆ ಸಂಬಂಧಿಸಿದಂತೆ ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಾದರೆ, ವಿಜಯ್ ದೇವರಕೊಂಡ A23 ಗೆ, ಮಂಚು ಲಕ್ಷ್ಮಿ ಯೋಲೋ 247 ಗೆ, ಪ್ರಣಿತಾ ಫೇರ್‌ಪ್ಲೇಗೆ ಮತ್ತು ನಿಧಿ ಅಗರ್ವಾಲ್ ಜೀತ್ ವಿನ್ ಪ್ರಚಾರ ಮಾಡಿದ್ದಾರೆ ಹಾಗೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು ಆಕರ್ಷಕ ಕಮಿಷನ್‌ಗಳಿಗಾಗಿ ಈ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುತ್ತಾರೆ. ಇದು ಜನರನ್ನು, ವಿಶೇಷವಾಗಿ ಹಣದ ಅವಶ್ಯಕತೆಯಿರುವವರನ್ನು, ಅಪ್ಲಿಕೇಶನ್‌ಗಳಲ್ಲಿ ಹಣ ಹೂಡಲು ಮತ್ತು ವ್ಯಸನಕ್ಕೆ ಬೀಳಲು ಪ್ರೇರೇಪಿಸುತ್ತದೆ ಎನ್ನಲಾಗಿದೆ.