ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KD Teaser: 'ಕೆಡಿ' ಟೀಸರ್ ರಿಲೀಸ್; ಧ್ರುವ ಸರ್ಜಾ ಖದರ್‌ಗೆ ಫ್ಯಾನ್ಸ್ ಫಿದಾ: 2 ದಶಕಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಬಂದ ಶಿಲ್ಪಾ ಶೆಟ್ಟಿ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಕೆಡಿ' ಸಿನಿಮಾದ ಟೀಸರ್ ಅನ್ನು ಮುಂಬೈಯಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ನಿರ್ದೇಶಕ ಪ್ರೇಮ್, ನಾಯಕ ಧ್ರುವ ಸರ್ಜಾ, ನಟಿ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರತಂಡ ಹಾಜರಿದ್ದು ಲಾಂಚ್ ಮಾಡಿದೆ. ಟೀಸರ್‌ನಲ್ಲಿ ಧ್ರುವ ಸರ್ಜಾ ರೆಬೆಲ್ ಅವತಾರದಲ್ಲಿ ಎಂಟ್ರಿ ‌ಕೊಟ್ಟಿದ್ದಾರೆ..ಆ್ಯಕ್ಷನ್ ದೃಶ್ಯ ಜತೆಗೆ ಪ್ರೇಮ್ ಮೇಕಿಂಗ್, ಸಂಜಯ್‌ ದತ್‌ ಮಾಸ್ ಪರ್ಫಾರ್ಮೆನ್ಸ್, ಶಿಲ್ಪಾ ಶೆಟ್ಟಿ ಖದರ್‌ ನೋಡುಗರಿಗೆ ಸಖತ್ ಕಿಕ್ ಕೊಡ್ತಿದೆ.

'ಕೆಡಿ' ಟೀಸರ್‌ನಲ್ಲಿ ಧ್ರುವ ಸರ್ಜಾ ಅಬ್ಬರ ಜೋರು

KD teaser

Profile Pushpa Kumari Jul 10, 2025 7:15 PM

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ ‘ಕೆಡಿ’ (KD) ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಇದೀಗ ಅಭಿಮಾನಿಗಳ ಕಾಯುವಿಕೆಗೆ ಉತ್ತರ ಸಿಕ್ಕಿದ್ದು ʼಕೆಡಿʼಯ ಟೀಸರ್ ರಿಲೀಸ್ ಆಗಿದೆ. ಟೀಸರ್​​ನಲ್ಲಿ ಧ್ರುವ ಸರ್ಜಾ ಅವರ ಮಸ್ತ್ ಲುಕ್ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದ್ದು ಟೀಸರ್ ನೋಡಿ ಫ್ಯಾನ್ಸ್​ ಮತ್ತಷ್ಟು ಎಕ್ಸೈಟ್ ಆಗಿದ್ದಾರೆ.



ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ʼಕೆಡಿʼ ಸಿನಿಮಾದ ಟೀಸರ್ ಅನ್ನು ಮುಂಬೈಯಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ನಿರ್ದೇಶಕ ಪ್ರೇಮ್​, ನಾಯಕ ಧ್ರುವ ಸರ್ಜಾ, ನಟಿ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರತಂಡ ಜತೆಯಾಗಿ ಲಾಂಚ್ ಮಾಡಿದೆ. ಟೀಸರ್‌ನಲ್ಲಿ ಧ್ರುವ ಸರ್ಜಾ ರೆಬೆಲ್ ಅವತಾರದಲ್ಲಿ ಎಂಟ್ರಿ ‌ಕೊಟ್ಟಿದ್ದಾರೆ. ಆ್ಯಕ್ಷನ್ ದೃಶ್ಯ ಜತೆಗೆ ಪ್ರೇಮ್ ಮೇಕಿಂಗ್, ಸಂಜುಬಾಬಾ ಮಾಸ್ ಪರ್ಫಾರ್ಮೆನ್ಸ್ ನೋಡುಗರಿಗೆ ಸಖತ್ ಕಿಕ್ ಕೊಡ್ತಿದೆ. ಟೀಸರ್‌ನಲ್ಲಿ ಪ್ರಮುಖವಾಗಿ ಧ್ರುವ ಸರ್ಜಾ ಅವರ ಕಾಳಿ ದಾಸ ಅಲಿಯಾಸ್ ಕೆಡಿ ಮತ್ತು ಸಂಜಯ್ ದತ್ ಅವರ ಧಕ್ ದೇವ ಪಾತ್ರಗಳನ್ನು ಪರಿಚಯಿಸಲಾಗಿದೆ. ಉಳಿದ ಪ್ರಮುಖ ಪಾತ್ರಧಾರಿಗಳಾದ ಶಿಲ್ಪಾ ಶೆಟ್ಟಿ, ವಿ.ರವಿಚಂದ್ರನ್, ರೀಷ್ಮಾ ನಾಣಯ್ಯ ಅವರನ್ನೂ ಸಹ ಪರಿಚಯಿಸಲಾಗಿದೆ. 5 ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದ್ದು ಸಖತ್ ಸದ್ದು ಮಾಡ್ತಿದೆ.

ಇದನ್ನು ಓದಿ:Dhruva Sarja: 'KD' ಚಿತ್ರದ ರಿಲೀಸ್‌ಗೂ ಮುನ್ನವೇ ಮತ್ತೊಂದು ಸಿನೆಮಾ ಒಪ್ಪಿಕೊಂಡ ಧ್ರುವ ಸರ್ಜಾ...!

'ಕೆಡಿ' ಸಿನಿಮಾವು ಬೆಂಗಳೂರಿನ ಅಂಡರ್ ವರ್ಲ್ಡ್ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಎದುರು ವಿಲನ್ ಆಗಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಪೈಪೋಟಿ ನೀಡಿದ್ದಾರೆ. ಇನ್ನು ಪ್ರಮುಖ ಕಲಾವಿದರಾದ ರಮೇಶ್ ಅರವಿಂದ್ , ಶಿಲ್ಪಾ ಶೆಟ್ಟಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ನೋರಾ ಫತೇಹಿ ಮೈ ಬಳುಕಿಸಿದ್ದಾರೆ. ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.