ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Freedom Fighter: ಅಂದು ಭಗತ್ ಸಿಂಗ್, ಬೋಸ್ ಜತೆ ಸ್ವಾತಂತ್ರ್ಯಕ್ಕಾಗಿ ಹೋರಾಟ; ಇಂದು ಆಶ್ರಮದಲ್ಲಿ ದಿನ ದೂಡುತ್ತಿರುವ 107 ವರ್ಷದ ವೃದ್ಧ!

ಹರಿಯಾಣದ ಫರಿದಾಬಾದ್‌ನಲ್ಲಿರುವ ತೌ ದೇವಿ ಲಾಲ್ ವೃದ್ಧಾಶ್ರಮದ ಒಂದು ಮೂಲೆಯಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟದಿಂದ ಹರಿದುಹೋದ ಅಧ್ಯಾಯದಂತೆ ಕಾಣಸಿಗುವ ವ್ಯಕ್ತಿಯೊಬ್ಬರು ವಾಸಿಸುತ್ತಿದ್ದಾರೆ. ಈಗ ತನ್ನವರು ಯಾರೂ ಇಲ್ಲದೆ ಈ ವೃದ್ಧಾಶ್ರಮವನ್ನು ತಮ್ಮ ಏಕೈಕ ಆಶ್ರಯವೆಂದು ಕರೆಯುತ್ತಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಬದುಕು ಸವಿಸಿದ ಜೀವಕ್ಕಿಲ್ಲ ಇಂದು ಆಧಾರ

ರಾಮ್ ಜೈಸ್ವಾಲ್

Profile Sushmitha Jain Jul 10, 2025 7:26 PM

ಚಂಡೀಗಢ: ಹರಿಯಾಣದ (Haryana) ಫರಿದಾಬಾದ್‌ನಲ್ಲಿರುವ (Faridabad) ತೌ ದೇವಿ ಲಾಲ್ ವೃದ್ಧಾಶ್ರಮದ ಒಂದು ಮೂಲೆಯಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟದಿಂದ ಹರಿದುಹೋದ ಅಧ್ಯಾಯದಂತೆ ಕಾಣುವ ವ್ಯಕ್ತಿಯೊಬ್ಬರು ವಾಸಿಸುತ್ತಿದ್ದಾರೆ. ಆದರೆ ಇಂದು ಅವರು ಏಕಾಂಗಿಯಾಗಿ ಕುಳಿತಿದ್ದಾರೆ. 107 ವರ್ಷದ ಸಂತ ರಾಮ್ ಜೈಸ್ವಾಲ್ (Sant Ram Jaiswal) ಅವರು ಭಗತ್ ಸಿಂಗ್ (Bhagat Singh), ಸುಭಾಷ್ ಚಂದ್ರ ಬೋಸ್ (Subhash Chandra Bose), ಚಂದ್ರಶೇಖರ್ ಆಜಾದ್ (Chandrashekhar Azad), ಉಧಮ್ ಸಿಂಗ್ ಮತ್ತು ರಾಜಗುರು ಅವರೊಂದಿಗೆ ಸ್ವಾತಂತ್ರ್ಯ ಚಳವಳಿಗಾಗಿ ಹೋರಾಡಿದರು. ಈಗ ತನ್ನವರು ಯಾರೂ ಇಲ್ಲದೆ ಈ ವೃದ್ಧಾಶ್ರಮವನ್ನು ತಮ್ಮ ಏಕೈಕ ಆಶ್ರಯವೆಂದು ಕರೆಯುತ್ತಾರೆ.

“ನಾನು 1917ರ ಡಿಸೆಂಬರ್ 8ರಂದು ಅಮೃತಸರದಲ್ಲಿ ಜನಿಸಿದೆ. ಸ್ವಾತಂತ್ರ್ಯಕ್ಕೂ ಮುನ್ನ ಅಲ್ಲಿದ್ದೆ. ನಂತರ ಸೇನೆಗೆ ಸೇರಿದೆ. ಪಾಕಿಸ್ತಾನದ ವಿರುದ್ಧ ಎರಡು ಬಾರಿ ಯುದ್ಧ ಮಾಡಿದೆ. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ರಾಜಗುರು ನನ್ನ ಸ್ನೇಹಿತರಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ ಹೋರಾಡಿದೆವು” ಎಂದು ಜೈಸ್ವಾಲ್ ತಿಳಿಸಿದ್ದಾರೆ.

1980ರಲ್ಲಿ ಸೇನೆಯಿಂದ ನಿವೃತ್ತರಾದ ಬಳಿಕ, ಜೈಸ್ವಾಲ್ ಫರಿದಾಬಾದ್‌ನ ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡಿ ಜೀವನ ನಿರ್ವಹಿಸಿದರು. “1980ರ ನಂತರ, ಜೀವನ ಸಾಗಿಸಲೆಂದು ಗಿರಣಿಯಲ್ಲಿ ಕೆಲಸ ಮಾಡಿದೆ” ಎಂದು ಅವರು ನೆನಪಿಸಿಕೊಂಡರು. ಆದರೆ ವೈಯಕ್ತಿಕ ಜೀವನದಲ್ಲಿ ದೊಡ್ಡ ನಷ್ಟವನ್ನು ಎದುರಿಸಿದರು. ಅವರ ಪತ್ನಿ ಹಲವು ವರ್ಷಗಳ ಹಿಂದೆ ನಿಧನರಾದರು ಮತ್ತು ಏಕೈಕ ಮಗ ಒಂದು ಅಪಘಾತದಲ್ಲಿ ಮೃತಪಟ್ಟ. “ನನ್ನ ಮಗ ಅಪಘಾತದಲ್ಲಿ ಮೃತಪಟ್ಟ. ಪತ್ನಿಯೂ ಈ ಲೋಕದಲ್ಲಿ ಇಲ್ಲ, ಈಗ ನನಗೆ ಯಾರೂ ಇಲ್ಲ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: ‌Viral Video: ಲಿಫ್ಟ್‌ನೊಳಗೆ ಬಾಲಕನಿಗೆ ಹಿಗ್ಗಾಮಗ್ಗಾ ಥಳಿಸಿದ ವ್ಯಕ್ತಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಜೈಸ್ವಾಲ್‌ ಅವರ ಇತಿಹಾಸವನ್ನು ಗೌರವದಿಂದ ಹಂಚಿಕೊಂಡ ವೃದ್ಧಾಶ್ರಮದ ನಿರ್ದೇಶಕ ಕೃಷ್ಣ ಲಾಲ್ ಬಜಾಜ್, ʼʼಬಾಬಾ ತುಂಬಾ ಹಿಂದಿನಿಂದ ಇಲ್ಲಿಯೇ ಇಲ್ಲಿಯೇ ಇದ್ದಾರೆ. ಪತ್ನಿಯ ನಿಧನದ ನಂತರ ಅಂತಿಮ ವಿಧಿಗಳನ್ನು ಪೂರೈಲು ಹೋದ ನಂತರ ಮತ್ತೆ ಬರಲಿಲ್ಲ. ಅವರ ಮಗ ಕೂಡ ಮೃತಪಟ್ಟರು ಎಂದು ತಿಳಿದುಬಂದಿತು. ಈಗ ಅವರು ವಾಪಸ್ ಬಂದಿದ್ದಾರೆ. ಇದು ನಿಮ್ಮ ಮನೆ, ಎಲ್ಲಿಯೂ ಹೋಗಬೇಡಿ ಎಂದು ಹೇಳಿದ್ದೇವೆʼʼ ಎಂದಿದ್ದಾರೆ.

ಜೈಸ್ವಾಲ್ ಅವರು ಸುಭಾಷ್ ಚಂದ್ರ ಬೋಸ್‌ ತಂಡದಲ್ಲಿದ್ದವರು. ಅಲ್ಲದೆ ಸ್ವಯಂಪ್ರೇರಿತವಾಗಿ ಸೇನೆಯ ಪಿಂಚಣಿಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ ಎಂದು ಬಜಾಜ್ ತಿಳಿಸಿದ್ದಾರೆ. ಇದು ಅವ ಸ್ವಾವಲಂಬನೆ ಮತ್ತು ವಿನಯವನ್ನು ತೋರಿಸುತ್ತದೆ.