ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻW, 0, 1, W..ʼ: ನಾಲ್ಕು ಎಸೆತಗಳ ಅಂತರದಲ್ಲಿ ಎರಡು ವಿಕೆಟ್‌ ಕಿತ್ತ ನಿತೀಶ್‌ ರೆಡ್ಡಿ!

ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಕಳೆದ ಪಂದ್ಯದಲ್ಲಿ ನಿರಾಶೆ ಮೂಡಿಸಿದ್ದ ನಿತೀಶ್‌ ಕುಮಾರ್‌ ರೆಡ್ಡಿ, ಮೂರನೇ ಟೆಸ್ಟ್‌ ಪಂದ್ಯದಲ್ಲಿಆರಂಭಿಕ ದಿನ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟರು.

ನಾಲ್ಕು ಎಸೆತಗಳ ಅಂತರದಲ್ಲಿ ಎರಡು ವಿಕೆಟ್‌ ಕಿತ್ತ ನಿತೀಶ್‌ ರೆಡ್ಡಿ!

ತನ್ನ ಮೊದಲನೇ ಓವರ್‌ನಲ್ಲಿಯೇ ಎರಡು ವಿಕೆಟ್‌ ಕಿತ್ತ ನಿತೀಶ್‌ ರೆಡ್ಡಿ.

Profile Ramesh Kote Jul 10, 2025 7:23 PM

ಲಂಡನ್: ಎಜ್‌ಬಾಸ್ಟನ್‌ನಲ್ಲಿ ದೊಡ್ಡ ಜಯ ಸಾಧಿಸಿದ ನಂತರ ಭಾರತ ತಂಡ (India) ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದರು. ಆದರೆ, ಈ ಬಾರಿ ಅವರು ಬ್ಯಾಟ್‌ ಮಾಡಲು ನಿರ್ಧರಿಸಿದರು. ಆದರೆ, ಇಂಗ್ಲೆಂಡ್‌ ಪ್ರವಾಸದಲ್ಲಿ ಇದೇ ಮೊದಲ ಬಾರಿ ಭಾರತ ತಂಡ ಮೊದಲು ಬೌಲಿಂಗ್‌ ನಡೆಸಿತು. ಕಳೆದ ಪಂದ್ಯದಲ್ಲಿ ನಿರಾಶೆ ಮೂಡಿಸಿದ್ದ ನಿತೀಶ್‌ಕುಮಾರ್‌ ರೆಡ್ಡಿ (Nitish kumar Reddy) ಈ ಪಂದ್ಯದ ಆರಂಭಿಕ ದಿನ ಬೌಲಿಂಗ್‌ ಮಿಂಚಿದರು ಹಾಗೂ ಎರಡು ವಿಕೆಟ್‌ ಕಿತ್ತು ಭಾರತ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದರು.

ಇಂಗ್ಲೆಂಡ್‌ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಬೆನ್‌ ಡಕೆಟ್‌ ಹಾಗೂ ಝ್ಯಾಕ್‌ ಕ್ರಾವ್ಲಿ ಅವರು ಎಚ್ಚರಿಕೆಯಿಂದ ಬ್ಯಾಟ್‌ ಮಾಡುತ್ತಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು, ಜಸ್‌ಪ್ರೀತ್‌ ಬುಮ್ರಾ, ಆಕಾಶ್‌ ದೀಪ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಅವರನ್ನು ಸಮರ್ಥವಾಗಿ ಎದುರಿಸಿದ್ದರು. ಈ ಮೂವರು ಬೌಲರ್‌ಗಳ ರಣತಂತ್ರವನ್ನು ಇವರು ಮೆಟ್ಟಿ ನಿಂತಿದ್ದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 43 ರನ್‌ಗಳನ್ನು ಆಡಿತ್ತು. 13 ಓವರ್‌ಗಳವರೆಗೂ ಇಂಗ್ಲೆಂಡ್‌ ಒಂದೇ ಒಂದು ವಿಕೆಟ್‌ ಕಳೆದುಕೊಂಡಿರಲಿಲ್ಲ.

IND vs ENG: ಲಾರ್ಡ್ಸ್‌ ಅಂಗಣಕ್ಕೆ ಮೊದಲ ಪ್ರವೇಶದ ಘಟನೆಯನ್ನು ನೆನೆದ ಸಚಿನ್‌ ತೆಂಡೂಲ್ಕರ್‌!

ಆದರೆ 14ನೇ ಓವರ್‌ನಲ್ಲಿ ಇಂಗ್ಲೆಂಡ್ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. 14 ಓವರ್‌ಗಳ ನಂತರ ಇಂಗ್ಲೆಂಡ್‌ನ ಸ್ಕೋರ್ 44 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಪಂದ್ಯದ ಮೊದಲ ಗಂಟೆಯವರೆಗೆ ಇಂಗ್ಲೆಂಡ್‌ನ ಇಬ್ಬರೂ ಆರಂಭಿಕರು ಎಚ್ಚರಿಕೆಯಿಂದ ಆಡುತ್ತಿದ್ದರು, ಆದರೆ ನಂತರ ನಿತೀಶ್ ರೆಡ್ಡಿ ಪಂದ್ಯವನ್ನು ತಿರುಗಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಅವರು ಮೊದಲಿಗೆ ಬೆನ್‌ ಡಕೆಟ್‌ ಅವರನ್ನು ಔಟ್‌ ಮಾಡಿದರೆ, ನಂತರ ಮತ್ತೊರ್ವ ಆರಂಭಿಕ ಝ್ಯಾಕ್‌ ಕ್ರಾವ್ಲಿ ಅವರನ್ನು ಔಟ್‌ ಮಾಡಿದರು.



ಬುಮ್ರಾ, ಸಿರಾಜ್‌ ಹಾಗೂ ಆಕಾಶ ದೀಪ್‌ ಅವರಿಂದ ವಿಕೆಟ್‌ ಪಡೆಯಲು ಸಾಧ್ಯವಾಗದ ಬಳಿಕ ನಾಯಕ ಶುಭಮನ್‌ ಗಿಲ್‌, ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಕರೆ ತಂದರು. ಇಂಗ್ಲೆಂಡ್‌ ತಂಡದ ಪ್ರಥಮ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಬೌಲ್‌ ಮಾಡಲು ನಿತೀಶ್ ಕುಮಾರ್ ರೆಡ್ಡಿ ಬಂದರು. ಈ ಓವರ್‌ನ ಮೂರನೇ ಎಸೆತದಲ್ಲಿ ಅವರು ಶಾರ್ಟ್ ಬಾಲ್ ಎಸೆದರು. ಬೆನ್ ಡಕೆಟ್ ಈ ಚೆಂಡಿನಲ್ಲಿ ಪುಲ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ಅವರ ಗ್ಲೌಸ್‌ನ ಅಂಚನ್ನು ತಾಗಿ ನೇರವಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಗ್ಲೌಸ್‌ಗೆ ಸೇರಿತು.

IND vs ENG: ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಕ್ರಿಕೆಟ್‌ ದೇವರು!

ಇದಾದ ಬಳಿಕ ನಿತೀಶ್ ಕುಮಾರ್ ರೆಡ್ಡಿ ನಿಲ್ಲಲಿಲ್ಲ ಮತ್ತು ಕೇವಲ ಎರಡು ಎಸೆತಗಳ ನಂತರ ಎರಡನೇ ಆರಂಭಿಕ ಬ್ಯಾಟ್ಸ್‌ಮನ್ ಜ್ಯಾಕ್ ಕ್ರಾವ್ಲಿ ಅವರನ್ನು ಔಟ್ ಮಾಡಿದರು. ಅವರು ಆಫ್ ಸ್ಟಂಪ್ ಹೊರಗೆ ಕ್ರಾವ್ಲಿಗೆ ಬೌಲ್‌ ಮಾಡಿದರು. ಚೆಂಡು ಅವರ ಬ್ಯಾಟ್‌ನ ಅಂಚನ್ನು ತೆಗೆದುಕೊಂಡು ರಿಷಭ್ ಪಂತ್‌ಗೆ ಕಳುಹಿಸಿದರು. ಇದರೊಂದಿಗೆ ಇಂಗ್ಲೆಂಡ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು.