ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Shivanna 131 Movie: ಮತ್ತೆ ಶೂಟಿಂಗ್ ಅಖಾಡಕ್ಕೆ ಕರುನಾಡ ಚಕ್ರವರ್ತಿ- ಶಿವಣ್ಣನ 131 ಸಿನಿಮಾದ ಚಿತ್ರೀಕರಣ ಶುರು

Shivanna 131 Movie: ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಸಾರಥ್ಯದಲ್ಲಿ 'ಶಿವಣ್ಣ 131ʼ ಚಿತ್ರ ತಯಾರಾಗುತ್ತಿದೆ. ಚಿತ್ರದಲ್ಲಿ ಹ್ರ್ಯಾಟ್ರಿಕ್ ಶಿವರಾಜ್‌ಕುಮಾರ್ ಹಿಂದೆಂದೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ದೇವ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಮತ್ತೆ ಶೂಟಿಂಗ್ ಅಖಾಡಕ್ಕೆ ಕರುನಾಡ ಚಕ್ರವರ್ತಿ

Profile Siddalinga Swamy Mar 3, 2025 4:32 PM

ಬೆಂಗಳೂರು: ಕ್ಯಾನ್ಸರ್ ಮುಕ್ತರಾಗಿರುವ ದೊಡ್ಮನೆ ದೊರೆ ಡಾ. ಶಿವರಾಜ್ ಕುಮಾರ್ (Shivaraj Kumar), ರೆಸ್ಟ್ ಮೂಡ್ ನಿಂದ ಈಗ ವರ್ಕ್ ಮೂಡ್‌ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದಿದ್ದ ಶಿವಣ್ಣ ಇಷ್ಟು ದಿನ ವಿಶ್ರಾಂತಿಯಲ್ಲಿದ್ದರು. ವಿಶ್ರಾಂತಿಗೆ ವಿರಾಮ ಹಾಕಿ ಈಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇಂದಿನಿಂದ ಶಿವಣ್ಣ ನಟಿಸುತ್ತಿರುವ 131 ಚಿತ್ರೀಕರಣ (Shivanna 131 Movie) ಮತ್ತೆ ಪ್ರಾರಂಭವಾಗುತ್ತಿದೆ. ಈಗಾಗಲೇ 131 ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಂಡಿದ್ದು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು.‌ಇದೀಗ ಎರಡನೇ ಹಂತದ ಚಿತ್ರೀಕರಣ ನಾಳೆಯಿಂದ ಮತ್ತೆ ಆರಂಭವಾಗುತ್ತಿದೆ. ಶಿವಣ್ಣ ಅದೇ ಉತ್ಸಾಹ, ಎನರ್ಜಿಯಿಂದ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದ್ದಾರೆ.



ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಸಾರಥ್ಯದಲ್ಲಿ 'ಶಿವಣ್ಣ 131' ತಯಾರಾಗುತ್ತಿದೆ. ಚಿತ್ರದಲ್ಲಿ ಹ್ರ್ಯಾಟ್ರಿಕ್ ಶಿವರಾಜ್‌ಕುಮಾರ್ ಹಿಂದೆಂದೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ದೇವ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಗುಳ್ಟೂ ಖ್ಯಾತಿಯ ನವೀನ್ ಶಂಕರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಘೋಸ್ಟ್ ಖ್ಯಾತಿಯ ವಿ.ಎಂ. ಪ್ರಸನ್ನ ಮತ್ತು ಸೀತಾರಾಮಂ ಜನಪ್ರಿಯತೆಯ ಜಯಕೃಷ್ಣ ಬರಹಗಾರರಾಗಿ ಚಿತ್ರತಂಡದ ಭಾಗವಾಗಿದ್ದಾರೆ. ವಿಕ್ರಂ, ವೇದ, ಆರ್ಡಿಎಕ್ಸ್, ಖೈದಿ ಸಿನಿಮಾಗಳ ಖ್ಯಾತಿಯ ಸ್ಯಾಮ್ ಸಿ.ಎಸ್. ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ದೀಪು ಎಸ್. ಕುಮಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಜತೆಗೆ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.

ಈ ಸುದ್ದಿಯನ್ನೂ ಓದಿ | Winter Cape Dress Fashion: ಹೊಸ ವಿನ್ಯಾಸದಲ್ಲಿ ಎಂಟ್ರಿ ಕೊಟ್ಟ ಕೇಪ್ ಡಿಸೈನರ್‌ವೇರ್ಸ್

ಮಹೇನ್ ಸಿಂಹ ಕ್ಯಾಮೆರಾ ಮೋಡಿ

ಶಿವಣ್ಣನ 131 ಸಿನಿಮಾದ ಪ್ರಮುಖ ಆಕರ್ಷಣೆ ಮಹೇನ್ ಸಿಂಹ ಕ್ಯಾಮೆರಾ ವರ್ಕ್. ಈಗಾಗಲೇ ಶಿವಣ್ಣ ಜತೆ ಟಗರು, ಘೋಸ್ಟ್ ಚಿತ್ರಗಳಲ್ಲಿ ಅದ್ಭುತ ಕ್ಯಾಮೆರಾ ಕೈಚಳಕ ತೋರಿಸಿರುವ ಮಹೇಂದ್ರ ಸಿಂಹ ಮತ್ತೊಮ್ಮೆ ದೊಡ್ಮನೆ ದೊರೆ ಚಿತ್ರದಲ್ಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಮಹೇನ್ ಸಿಂಹ ಶಿವಣ್ಣನ 131 ಚಿತ್ರದಲ್ಲಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.