Honey Singh Concert: ಬೆಂಗಳೂರಿನಲ್ಲಿ ಹನಿ ಸಿಂಗ್ ಕಾನ್ಸರ್ಟ್; ಕನ್ನಡದಲ್ಲೇ ಸ್ವಾಗತಿಸಿದ ರಾಕಿಂಗ್ ಸ್ಟಾರ್ ಯಶ್ ಮುಂದಿಟ್ಟ ಬೇಡಿಕೆ ಏನು?
Millionaire India Tour 2025: ಬೆಂಗಳೂರಿನಲ್ಲಿ ಭಾನುವಾರ (ಮಾ. 22) ನಡೆದ ʼಮಿಲಿಯನೇರ್ ಇಂಡಿಯಾ ಟೂರ್ʼ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ಹನಿ ಸಿಂಗ್ ಜತೆ ರಾಕಿಂಗ್ ಸ್ಟಾರ್ ಯಶ್ ವೇದಿಕೆ ಹಂಚಿಕೊಂಡಿದ್ದಾರೆ. ಜತೆಗೆ ಯಶ್ ಕನ್ನಡದಲ್ಲಿಯೇ ಮಾತನಾಡಿ ನೆಟ್ಟಿಗರ ಮನ ಗೆದ್ದಿದ್ದಾರೆ. ಸದ್ಯ ಈ ಕಾರ್ಯಕ್ರಮದ ವಿಡಿಯೊ ವೂರಲ್ ಆಗಿದೆ.

ಯಶ್ ಮತ್ತು ಹನಿ ಸಿಂಗ್.

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ (ಮಾ. 22) ನಡೆದ ʼಮಿಲಿಯನೇರ್ ಇಂಡಿಯಾ ಟೂರ್ʼ (Millionaire India Tour 2025) ಮ್ಯೂಸಿಕ್ ಕಾನ್ಸರ್ಟ್ ದಿಗ್ಗಜರ ಒಂದು ಅಪರೂಪದ ಸಮಾಗಮಕ್ಕೆ ಸಾಕ್ಷಿಯಾಯಿತು. ಈ ಕಾರ್ಯಕ್ರಮದಲ್ಲಿ 'ಕೆಜಿಎಫ್' ಸರಣಿ ಚಿತ್ರಗಳ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಬೆಳೆದ ಸ್ಯಾಂಡಲ್‌ವುಡ್ ರಾಕಿ ಭಾಯ್ ಯಶ್ (Yash) ಮತ್ತು ಬಾಲಿವುಡ್ ರ‍್ಯಾಪರ್ ಯೋ ಯೋ ಹನಿ ಸಿಂಗ್ (Honey Singh) ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು (Honey Singh Concert). ಹೌದು, ಹನಿ ಸಿಂಗ್ ಅವರ ʼಮಿಲಿಯನೇರ್ ಇಂಡಿಯಾ ಟೂರ್ʼ ಮ್ಯೂಸಿಕ್ ಕಾನ್ಸರ್ಟ್ ವೇದಿಕೆಗೆ ಯಶ್ ಸರ್‌ಪ್ರೈಸ್ ಆಗಿ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಅಲ್ಲದೆ ಕನ್ನಡದಲ್ಲೇ ಹನಿ ಸಿಂಗ್ ಅವರಿಗೆ ಸ್ವಾಗತ ಕೋರಿದರು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಯಶ್ ಕನ್ನಡದಲ್ಲೇ ಮಾತು ಆರಂಭಿಸಿದರು. ʼ‘ಎಲ್ಲರಿಗೂ ನಮಸ್ಕಾರ, ಮೊದಲು ಇವರಿಗೆ ಸ್ವಾಗತ ಕೋರೋಣ. ನಿಮಗೆ ಬೆಂಗಳೂರಿಗೆ ಸ್ವಾಗತʼ’ ಎಂದು ಹನಿ ಸಿಂಗ್ ಅವರಿಗೆ ಕನ್ನಡದಲ್ಲೇ ಸ್ವಾಗತ ಕೋರಿದರು.
ಹನಿ ಸಿಂಗ್ ಅವರ ಪೋಸ್ಟ್ ಇಲ್ಲಿದೆ:
ಹನಿ ಸಿಂಗ್‌ಗೆ ಬೇಡಿಕೆ ಇಟ್ಟ ಯಶ್
ಇದೇ ವೇಳೆ ಯಶ್ ಅವರು ಹನಿ ಸಿಂಗ್ ಬಳಿ ಒಂದು ವಿಶಿಷ್ಟ ಬೇಡಿಕೆಯನ್ನೂ ಇಟ್ಟರು. ಕನ್ನಡದಲ್ಲಿಯೂ ಹಾಡಬೇಕೆಂದು ಮನವಿ ಮಾಡಿದರು. ʼʼನೀವು ಕನ್ನಡದಲ್ಲಿಯೂ ಹಾಡು ಹಾಡಬೇಕುʼʼ ಎಂದು ಹೇಳಿದರು. ಅದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಹನಿ ಸಿಂಗ್, ‘ʼಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡುತ್ತೇನೆʼʼ ಎಂದು ಭರವಸೆ ನೀಡಿದರು. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Exclusive 🚨
— Adheera (@adheeraeditz) March 22, 2025
YashBOSS x Yo Yo Honey Singh 💥❤️🔥#YashBOSS #ToxicTheMovie
pic.twitter.com/KllJ3rfnGq
ಈ ಸುದ್ದಿಯನ್ನೂ ಓದಿ: ದಿಲ್ಜಿತ್ ಸಿಂಗ್‌ಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ; ಮಗು ಜನಿಸಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ನಟಿಗೆ ಸಿಕ್ತು ನೆಟ್ಟಿಗರ ಮೆಚ್ಚುಗೆ
ಯಶ್ ಅವರನ್ನು ಸಹೋದರ ಎಂದ ಹನಿ ಸಿಂಗ್
ತಮ್ಮ ಬೆಂಗಳೂರು ಕಾರ್ಯಕ್ರಮದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಹನಿ ಸಿಂಗ್ ಯಶ್ ಅವರನ್ನು ಸಹೋದರ ಎಂದು ಕರೆದಿದ್ದಾರೆ. ʼʼನನ್ನ ಬೆಂಗಳೂರು ಕಾನ್ಸರ್ಟ್ಗೆ ಬಂದು ಹರಸಿದ್ದಕ್ಕೆ ಸಹೋದರ ಯಶ್ಗೆ ಧನ್ಯವಾದ’ʼ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಯಶ್ ಪ್ರತ್ರಿಕ್ರಿಯಿಸಿ, ʼʼಸಹೋದರ ಹನಿ ಸಿಂಗ್ ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೂ ಖುಷಿ ತಂದುಕೊಟ್ಟಿದೆ. ನಿಮ್ಮ ಎನರ್ಜಿ ಅದ್ಭುತʼʼ ಎಂದಿದ್ದಾರೆ. ಯಶ್ ಅವರು ಅಷ್ಟು ದೊಡ್ಡ ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡಿದ್ದಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ಅವರ ಕಾನ್ಸರ್ಟ್‌ನಲ್ಲಿ ಬಾಲಿವುಡ್ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಕೂಡ ಭಾಗವಹಿಸಿದ್ದರು. ಈ ವೇಳೆ ಅವರು ದಿಲ್ಜಿತ್ ದೋಸಾಂಜ್‌ಗೆ ಕನ್ನಡ ಹೇಳಿಕೊಟ್ಟಿದ್ದರು.
ಏನಿದು ʼಮಿಲಿಯನೇರ್ ಇಂಡಿಯಾ ಟೂರ್ʼ ಮ್ಯೂಸಿಕ್ ಕಾನ್ಸರ್ಟ್?
ಹನಿ ಸಿಂಗ್ ʼಮಿಲಿಯನೇರ್ ಇಂಡಿಯಾ ಟೂರ್ʼ ಹೆಸರಿನಲ್ಲಿ ಮ್ಯೂಸಿಕ್ ಕಾನ್ಸೆರ್ಟ್ ಆಯೋಜಿಸಿದ್ದು, ದೇಶದ 10 ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಫೆ. 22ರಂದು ಆರಂಭವಾದ ಈ ಪಯಣ ಈಗಾಗಲೇ ಲಖನೌ, ದಿಲ್ಲಿ, ಇಂದೋರ್, ಪುಣೆ, ಅಹಮದಾಬಾದ್ ಮತ್ತು ಬೆಂಳೂರಿನಲ್ಲಿ ಕಾರ್ಯಕ್ರಮ ನೀಡಿದೆ. ಮುಂದೆ ಚಂಡೀಗಢ, ಜೈಪುರ ಮತ್ತು ಕೋಲ್ಕತಾಕ್ಕೆ ಕಾನ್ಸೆರ್ಟ್ ನಡೆಯಲಿದೆ. ಏ. 5ರಂದು ಕೋಲ್ಕತಾದಲ್ಲಿ ತೆರೆ ಬೀಳಲಿದೆ.