GT vs PBKS: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್!
GT vs PBKS Match Toss: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಐದನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಗುಜರಾತ್ ಟೈಟನ್ಸ್ vs ಪಂಜಾಬ್ ಕಿಂಗ್ಸ್

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಐದನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ (GT vs PBKS) ತಂಡಗಳು ಸೆಣಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ (Shubman Gill), ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದಾರೆ. ಆ ಮೂಲಕ ಚೇಸ್ ಮಾಡಲು ಎದುರು ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಮೊದಲು ಬ್ಯಾಟ್ ಮಾಡುತ್ತಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಶುಭಮನ್ ಗಿಲ್, ನಾವು ಬೌಲಿಂಗ್ ಮಾಡುತ್ತೇವೆ. ಇದು ಒಳ್ಳೆಯ ಕ್ರಿಕೆಟಿಂಗ್ ವಿಕೆಟ್. ಇಲ್ಲಿ ಸ್ವಲ್ಪ ಇಬ್ಬನಿ ಕೂಡ ಇರಲಿದೆ. ಇದನ್ನು ಮನಸಿನಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇಲ್ಲಿ ಇಬ್ಬನಿ ದೊಡ್ಡ ಪಾತ್ರವನ್ನು ವಹಿಸಲಿದೆ. ದೊಡ್ಡ ಗುರಿಯನ್ನು ಕೂಡ ಇಲ್ಲಿ ಚೇಸ್ ಮಾಡಬಹುದು. ನಮ್ಮ ಸಿದ್ದತೆ ಅದ್ಭುತವಾಗಿದೆ. ನಮ್ಮ ಬೌಲಿಂಗ್ ವಿಭಾಗ ಚೆನ್ನಾಗಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಆಡುವುದು ನಿಜಕ್ಕೂ ಸಂತಸದ ವಿಷಯ. ನಮ್ಮ ಆಡುವ ಬಳಗದಲ್ಲಿ ನಾಲ್ವರು ವೇಗಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳಿದ್ದಾರೆಂದು ತಿಳಿಸಿದ್ದಾರೆ.
IPL 2025: ʻಅದನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲʼ-ಮೊಹಮ್ಮದ್ ಸಿರಾಜ್ ಹೀಗೆನ್ನಲು ಕಾರಣವೇನು?
ಶ್ರೇಯಸ್ ಅಯ್ಯರ್ ಹೇಳಿದ್ದೇನು?
ಈ ವೇಳೆ ಮಾತನಾಡಿದ ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ನಾವು ಕೂಡ ಬೌಲ್ ಮಾಡಲು ಬಯಸಿದ್ದೆವು. ನಾನು ಚೇಸ್ ಮಾಡುವುದನ್ನು ಯಾವಾಗಲೂ ಇಷ್ಟಪಡುತ್ತೇನೆ. ಸವಾಲನ್ನು ತೆಗೆದುಕೊಳ್ಳುತ್ತೇವೆ. ನಮ್ಮ ತಂಡದಲ್ಲಿ ದಿಗ್ಗಜರು ಇದ್ದಾರೆ. ರಿಕಿ ಪಾಟಿಂಗ್ ಇದ್ದಾರೆ. ನಮ್ಮಲ್ಲಿ ಆಲ್‌ರೌಂಡರ್‌ಗಳು ಕೂಡ ಇದ್ದಾರೆ. ನಮ್ಮ ಆಡುವ ಬಳಗದಲ್ಲಿ ಒಬ್ಬರು ಸ್ಪಿನ್ನರ್ ಹಾಗೂ ಮೂವರು ವೇಗಿಗಳು ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
🚨 Toss 🚨@gujarat_titans have won the toss and opted to bowl first against @PunjabKingsIPL.
— IndianPremierLeague (@IPL) March 25, 2025
Updates ▶️ https://t.co/PYWUriwSzY#TATAIPL | #GTvPBKS pic.twitter.com/7GUAOWuOeR
ಉಭಯ ತಂಡಗಳ ಪ್ಲೇಯಿಂಗ್ XI
ಗುಜರಾತ್ ಟೈಟನ್ಸ್: ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ) ಸಾಯ್ ಸುದರ್ಶನ್, ಶಾರೂಖ್ ಖಾನ್, ರಾಹುಲ್ ತೆವಾಟಿಯಾ, ಸಾಯ್ ಕಿಶೋರ್, ಅರ್ಷದ್ ಖಾನ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ
Our XI for the first game 💪 pic.twitter.com/LRsiPuUcvz
— Gujarat Titans (@gujarat_titans) March 25, 2025
ಪಂಜಾಬ್ ಕಿಂಗ್ಸ್: ಪ್ರಭಸಿಮ್ರಾನ್ ಸಿಂಗ್ (ವಿ.ಕೀ), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸೂರ್ಯಾಂಶ್ ಶೆಡ್ಜ್, ಅಝಮತ್‌ವುಲ್ಲಾ ಒಮರ್ಜಾಯ್, ಮಾರ್ಕೊ ಯೆನ್ಸನ್, ಅರ್ಷದೀಪ್ ಸಿಂಗ್ ಯುಜ್ವೇಂದ್ರ ಚಹಲ್
Our 𝐒𝐡𝐞𝐫𝐬 for the first game of the season! 🦁
— Punjab Kings (@PunjabKingsIPL) March 25, 2025
Let's kick off the campaign with a 𝐖 🤞#PunjabKings #IPL2025 #GTvPBKS #BasJeetnaHai pic.twitter.com/S7eeqvpbA0
ತಂಡಗಳು
ಗುಜರಾತ್ ಟೈಟನ್ಸ್: ಜೋಸ್ ಬಟ್ಲರ್ (ವಿ.ಕೀ), ಶುಭಮನ್ ಗಿಲ್(ಸಿ), ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಇಶಾಂತ್ ಶರ್ಮಾ, ಜಯಂತ್ ಯಾದವ್, ಮಹಿಪಾಲ್ ಲೊಮ್ರೊರ್, ಕರಿಮ್ ಜನತ್, ಕುಲ್ವಂತ್ ಖೆಜ್ರೋಲಿಯಾ, ಕೆರ್ವಾನ್ ಲೊ ಯಾದವ್ ಖೆಜ್ರೋಲಿಯಾ, ಅನುಜ್ ರಾವತ್, ಜೆರಾಲ್ಡ್ ಕೋಯೆಟ್ಜೀ, ಶೆರ್ಫೇನ್ ರುದರ್ಫೋರ್ಡ್, ಮಾನವ್ ಸುತಾರ್, ಕುಮಾರ್ ಕುಶಾಗ್ರಾ, ಅರ್ಷದ್ ಖಾನ್, ಗುರ್ನೂರ್ ಬ್ರಾರ್, ನಿಶಾಂತ್ ಸಿಂಧು
ಪಂಜಾಬ್ ಕಿಂಗ್ಸ್: ಜಾಶ್ ಇಂಗ್ಲಿಸ್ (ವಿ.ಕೀ), ಪ್ರಭ್‌ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್(ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯ್ನಿಸ್, ಶಶಾಂಕ್ ಸಿಂಗ್, ಮಾರ್ಕೊ ಯೆನ್ಸೆನ್, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್, ವಿಜಯ್‌ಕುಮಾರ್ ವೈಶಾಕ್, ಪ್ರವೀಣ್ ದುಬೆ, ಲಾಕಿ ಫರ್ಗ್ಯೂಸನ್, ಕ್ಸೀವಿಯರ್ ಬಾರ್ಟಲೆಟ್, ವಿಷ್ಣು ವಿನೋದ್, ಅಜಮತ್‌ವುಲ್ಲಾ ಒಮರ್ಜಾಯ್, ಕುಲ್‌ದೀಪ್ ಸೇನ್, ಪ್ರಿಯಾಂಶ್ ಆರ್ಯ, ಸೂರ್ಯಾಂಶ್ ಶೆಡ್ಜ್, ಹರ್ನೂರ್ ಸಿಂಗ್, ಮುಶೀರ್ ಖಾನ್, ಪೈಲಾ ಅವಿನಾಶ್