ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಿಪೋಸ್ ಮ್ಯಾಟ್ರೆಸ್ ಭಾರತೀಯ ಮ್ಯಾಟ್ರೆಸ್ ಮಾರ್ಕೆಟ್‌ನಲ್ಲಿ ಅಪಾರ ಬೆಳವಣಿಗೆ ಸಾಧ್ಯತೆ

ಉತ್ಪನ್ನ ತಂತ್ರಜ್ಞಾನ, ಮಾರಾಟ, ಮಾರ್ಕೆಟಿಂಗ್, ವಿತರಣೆ ಮತ್ತು ಹಣಕಾಸು ಯೋಜನೆಯಲ್ಲಿ ಮಹತ್ವದ ಅನ್ವೇಷಣೆಗಳನ್ನು ಮಾಡಲು ಇದು ನೆರವಾಗಿದೆ. ಈ ಪಾಲುದಾರಿಕೆಯಿಂದಾಗಿ ತನ್ನ ಕಾರ್ಯಾಚರಣೆಯನ್ನು ಮತ್ತು ಮಾರ್ಕೆಟ್‌ನ ಪ್ರಸ್ತುತತೆಯನ್ನು ವಿಸ್ತರಿಸಲು ಯುಕೆ & ಕಂ. ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ರಿಪೋಸ್ ಮ್ಯಾಟ್ರೆಸ್ ಹೊಂದಿದೆ

ಬೆಳವಣಿಗೆ ಮತ್ತು ವಿಸ್ತರಣೆಗಾಗಿ ಯುಕೆ & ಕಂ. ಜೊತೆಗೆ ರಿಪೋಸ್ ಮ್ಯಾಟ್ರೆಸ್

Profile Ashok Nayak Mar 24, 2025 9:09 PM

ಮಧ್ಯಮದಿಂದ ಪ್ರೀಮಿಯಂ ಮ್ಯಾಟ್ರೆಸ್ ಉದ್ಯಮದಲ್ಲಿ ಪ್ರಮುಖ ಸಂಸ್ಥೆಯಾಗಿರುವ ರಿಪೋಸ್ ಮ್ಯಾಟ್ರೆಸ್ ಇದೀಗ ಜನಪ್ರಿಯ ಕೌಟುಂಬಿಕ ವಹಿವಾಟು ಸಲಹಾ ಸಂಸ್ಥೆ ಯುಕೆ & ಕಂ. ಜೊತೆಗೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಈ ಪಾಲುದಾರಿಕೆಯು ವಹಿವಾಟನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಮ್ಯಾಟ್ರೆಸ್ ಉದ್ಯಮದಲ್ಲಿ ದಶಕಗಳಷ್ಟು ಅನುಭವವನ್ನು ಹೊಂದಿರುವ ಮತ್ತು ಹದಿನೇಳು ರಾಜ್ಯ ಗಳಲ್ಲಿ ಕಾರ್ಯಾಚರಣೆಯನ್ನು ಹೊಂದಿರುವ ರಿಪೋಸ್ ಮ್ಯಾಟ್ರೆಸ್ಸಸ್‌ ಮುಂದಿನ ಹಂತದ ಬೆಳವಣಿಗೆ ಮತ್ತು ವಿಸ್ತರಣೆಯ ಪ್ರಯಾಣವನ್ನು ಆರಂಭಿಸಿದೆ.

ಯುಕೆ & ಕಂ ಸಂಸ್ಥಾಪಕ ಹಾಗೂ ಜನಪ್ರಿ ಬ್ಯುಸಿನೆಸ್ ಸಲಹೆಗಾರ ಉಲ್ಲಾಸ್ ಕಾಮತ್ ಅವರ ನೇತೃತ್ವದಲ್ಲಿ ಸಹಭಾಗಿತ್ವ ಮುನ್ನಡೆಯಲಿದೆ. ಅವರ ನಾಯಕತ್ವದಲ್ಲಿ ಹಲವು ಉದ್ಯಮಗಳಿಗೆ ಹೊಸ ಎತ್ತರಕ್ಕೆ ಏರಲು ಯುಕೆ & ಕಂ. ನೆರವಾಗಿದೆ. ಉತ್ಪನ್ನ ತಂತ್ರಜ್ಞಾನ, ಮಾರಾಟ, ಮಾರ್ಕೆಟಿಂಗ್, ವಿತರಣೆ ಮತ್ತು ಹಣಕಾಸು ಯೋಜನೆಯಲ್ಲಿ ಮಹತ್ವದ ಅನ್ವೇ ಷಣೆಗಳನ್ನು ಮಾಡಲು ಇದು ನೆರವಾಗಿದೆ. ಈ ಪಾಲುದಾರಿಕೆಯಿಂದಾಗಿ ತನ್ನ ಕಾರ್ಯಾ ಚರಣೆಯನ್ನು ಮತ್ತು ಮಾರ್ಕೆಟ್‌ನ ಪ್ರಸ್ತುತತೆಯನ್ನು ವಿಸ್ತರಿಸಲು ಯುಕೆ & ಕಂ. ಪರಿಣತಿ ಯನ್ನು ಬಳಸಿಕೊಳ್ಳುವ ಗುರಿಯನ್ನು ರಿಪೋಸ್ ಮ್ಯಾಟ್ರೆಸ್ ಹೊಂದಿದೆ.

ಇದನ್ನೂ ಓದಿ: Bangalore Accident: ಬಿಎಂಟಿಸಿ ಬಸ್‌ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪಾಲುದಾರಿಕೆಯ ಬಗ್ಗೆ ಮಾತನಾಡಿದ ಯುಕೆ & ಕಂ. ಸಂಸ್ಥಾಪಕ ಉಲ್ಲಾಸ್ ಕಾಮತ್‌ “ರಿಪೋಸ್ ಮ್ಯಾಟ್ರೆಸ್ ಭಾರತೀಯ ಮ್ಯಾಟ್ರೆಸ್ ಮಾರ್ಕೆಟ್‌ನಲ್ಲಿ ಅಪಾರ ಬೆಳವಣಿಗೆ ಸಾಧ್ಯತೆಯನ್ನು ಪ್ರದರ್ಶಿಸಿದೆ. ನಮ್ಮ ಸಹಭಾಗಿತ್ವದಿಂದಾಗಿ ಅವರ ಬ್ಯುಸಿನೆಸ್ ಕಾರ್ಯ ತಂತ್ರವನ್ನು ಇನ್ನಷ್ಟು ಬಲಪಡಿಸಲಾಗುತ್ತದೆ ಮತ್ತು ಇನ್ನಷ್ಟು ಬೆಳವಣಿಗೆ ಕಾಣಲು ಸಹಾಯ ಮಾಡಲಾಗುತ್ತದೆ. ಅನ್ವೇಷಣೆ, ಮಾರುಕಟ್ಟೆ ವಿಸ್ತರಣೆ ಮತ್ತು ಕಾರ್ಯಾಚರಣೆಯ ದಕ್ಷತೆಯ ಮೇಲೆ ಗಮನಹರಿಸುವ ಮೂಲಕ ನಾವು ರಿಪೋಸ್ 2.0 ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಇದು ಉದ್ಯಮದಲ್ಲಿ ಹೊಸ ಮಾನದಂಡವನ್ನು ನಿರ್ಮಿಸುವ ರಿಪೋಸ್‌ನ ಹೊಸ ಅವತಾರವಾಗಿರಲಿದೆ” ಎಂದಿದ್ದಾರೆ.

ಯುಕೆ & ಕಂ. . ಜೊತೆಗೆ ಪಾಲುದಾರಿಕೆ ವಹಿಸಲು ಮತ್ತು ಉಲ್ಲಾಸ್ ಕಾಮತ್ ಅವರ ಅಮೂಲ್ಯ ಒಳನೋಟಗಳನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ” ಎಂದು ರಿಪೋಸ್ ಮ್ಯಾಟ್ರೆಸ್ಸೆಸ್‌ನ ವ್ಯವಸ್ಥಾಪಕ ನಿರ್ದೇಶಕ ಬಾಲಚಂದರ್ ಎಸ್‌ ಹೇಳಿದ್ದಾರೆ.