IPL 2025: ʻನಿರಾಶದಾಯಕ ಫಲಿತಾಂಶʼ: ಲಖನೌ ಸೋಲಿನ ಬಗ್ಗೆ ಸಂಜೀವ್ ಗೋಯಾಂಕಾ ಪ್ರತಿಕ್ರಿಯೆ!
Sanjiv Goenka on LSG's loss against DC: ರೋಚಕ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಒಂದು ವಿಕೆಟ್‌ನಿಂದ ಸೋಲಿಸಿತು. ಈ ಪಂದ್ಯದ ನಂತರ ಲಖನೌ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ ಲಖನೌ ತಂಡದ ಡ್ರೆಸ್ಸಿಂಗ್ ರೂಂಗೆ ತಲುಪಿ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡಿದರು. ಫಲಿತಾಂಶದ ಬಗ್ಗೆ ಬೇಸರವಿದೆ ಆದರೆ, ತಂಡದ ಬಗ್ಗೆ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಲಖನೌ ತಂಡದ ಡ್ರೆಸ್ಸಿಂಗ್ ರೂಂ ನಲ್ಲಿ ಸಜೀವ್ ಗೋಯಾಂಕಾ ಮಾತನಾಡಿದ್ದಾರೆ.

ವಿಶಾಖಪಟ್ಟಣಂ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ನಾಲ್ಕನೇ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಕೊನೆಯ ಓವರ್‌ನಲ್ಲಿ ಲಖನೌ ಸೂಪರ್ ಜಯಂಟ್ಸ್ (LSG) ತಂಡವನ್ನು ಕೇವಲ ಒಂದು ವಿಕೆಟ್‌ನಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಖನೌ ತಂಡ 209 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಓವರ್‌ನಲ್ಲಿ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಗೆದ್ದು ಸಂಭ್ರಮಿಸಿತ್ತು. ಸೋಲಿನ ಬಳಿಕ ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಅವರ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಲಿನ ನಂತರವೂ ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಎಲ್‌ಎಸ್‌ಜಿ ತಂಡವನ್ನು ಪ್ರೋತ್ಸಾಹಿಸಿದರು. ತಂಡ ಉತ್ತಮವಾಗಿ ಆಡಿದ್ದು, ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಅಂದ ಹಾಗೆ ಎದುರಾಳಿ ಡೆಲ್ಲಿ ತಂಡವನ್ನು ಒಂದು ಹಂತದಲ್ಲಿ 65 ರನ್‌ಗಳಿಗೆ 5 ವಿಕೆಟ್ ಕಿತ್ತು ಮೇಲುಗೈ ಸಾಧಿಸಿತ್ತು. ಈ ವೇಳೆ ಲಖನೌ ಸುಲಭವಾಗಿ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಅಶುತೋಷ್ ಶರ್ಮಾ ಅದ್ಭುತ ಇನಿಂಗ್ಸ್ ಆಡಿ ಡೆಲ್ಲಿಗೆ ಜಯ ತಂದುಕೊಟ್ಟರು. ಸಂಜೀವ್ ಗೋಯೆಂಕಾ ಅವರು ಸೋಲನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ಆಟಗಾರರ ಮನೋಬಲವನ್ನು ಹೆಚ್ಚಿಸಿದರು. ನಾಯಕ ಪಂತ್ ಜೊತೆ ಸೋಲಿನ ಬಗ್ಗೆ ಮಾತನಾಡಿದ ಬಳಿಕ ಅವರು ತಂಡದ ಡ್ರೆಸ್ಸಿಂಗ್ ಕೋಣೆಗೂ ಹೋದರು.
IPL 2025: ʻಸೋತ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿʼ-ರಿಷಭ್ ಪಂತ್‌ಗೆ ಸಂದೇಶ ರವಾನಿಸಿದ ಸುನೀಲ್ ಗವಾಸ್ಕರ್!
ಡ್ರೆಸ್ಸಿಂಗ್ ಕೊಠಡಿಯಲ್ಲಿ ಸಂಜೀವ್ ಗೋಯಾಂಕಾ ಹೇಳಿದ್ದೇನು?
ಸಂಜೀವ್ ಗೋಯೆಂಕಾ ಅವರ ಮಾತು ಆಟಗಾರರ ಮುಖದಲ್ಲಿ ಮಂದಹಾಸವನ್ನು ತರಿಸಿತು. ಫಲಿತಾಂಶ ನಿರಾಶಾದಾಯಕವಾಗಿದೆ. ಲಖನೌ ಸೂಪರ್ ಜಯಂಟ್ಸ್ ಈ ಮೊತ್ತದಲ್ಲಿ ಎದುರಾಳಿ ತಂಡವನ್ನು ಕಟ್ಟಿ ಹಾಕಬಹುದಿತ್ತು. ಆದರೆ, ಇದು ಆರಂಭವಷ್ಟೇ ಎಂದು ಅವರು ಆಟಗಾರರಲ್ಲಿ ವಿಶ್ವಾಸವನ್ನು ತುಂಬಿದ್ದಾರೆ.
"𝐿𝑒𝑡'𝑠 𝑙𝑜𝑜𝑘 𝑎𝑡 𝑡ℎ𝑒 𝑝𝑜𝑠𝑖𝑡𝑖𝑣𝑒𝑠, 𝑎𝑛𝑑 𝑙𝑜𝑜𝑘 𝑓𝑜𝑟𝑤𝑎𝑟𝑑" 🙌 pic.twitter.com/AXE8XqiQCo
— Lucknow Super Giants (@LucknowIPL) March 25, 2025
"ನಾನು ಈ ಪಂದ್ಯದಿಂದ ಬಹಳಷ್ಟು ಧನಾತ್ಮಕ ವಿಷಯಗಳನ್ನು ತೆಗೆದುಕೊಳ್ಳುತ್ತೇನೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಮ್ಮ ಪವರ್‌ಪ್ಲೇ ಅತ್ಯುತ್ತಮವಾಗಿತ್ತು. ಪಂದ್ಯ ಎಂದ ಮೇಲೆ ಈ ರೀತಿಯ ಸಂಗತಿಗಳು ನಡೆಯುತ್ತವೆ. ನಮ್ಮದು ಯುವ ತಂಡ. ಸಕಾರಾತ್ಮಕ ಅಂಶಗಳತ್ತ ಗಮನಹರಿಸೋಣ ಮತ್ತು 27 ರಿಂದ ನಾಳೆಯನ್ನು ಎದುರುನೋಡೋಣ. ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ ಎಂದು ಭಾವಿಸುತ್ತೇವೆ. ಇಂದು ರಾತ್ರಿ ನಿರಾಶಾದಾಯಕ ಫಲಿತಾಂಶ, ಹೌದು, ಆದರೆ ಉತ್ತಮ ಪಂದ್ಯ," ಎಂದು ಸಂಜೀವ್ ಗೋಯಾಂಕಾ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
IPL 2025: ಗೋಯೆಂಕಾ ವೈಲೆಂಟ್; ಸಪ್ಪೆ ಮೋರೆ ಹಾಕಿ ನಿಂತ ಪಂತ್
ಪ್ರಸಕ್ತ ಋತುವಿನಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಇದು ಮೊದಲ ಪಂದ್ಯವಾಗಿದೆ. ಕೆಎಲ್ ರಾಹುಲ್ ತಂಡವನ್ನು ತೊರೆದ ಬಳಿಕ ರಿಷಭ್ ಪಂತ್‌ಗೆ ಈ ತಂಡಕ್ಕೆ ನಾಯಕರಾಗಿದ್ದಾರೆ. ತನ್ನ ಮೊದಲನೇ ಪಂದ್ಯದಲ್ಲಿಯೇ ಲಖನೌ ಮೊದಲು ಬ್ಯಾಟ್ ಮಾಡಿ ಉತ್ತಮ ಪ್ರದರ್ಶನ ತೋರಿತ್ತು. ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಬಿರುಸಿನ ಅರ್ಧಶತಕ ಗಳಿಸಿದರು. ಇವರಿಬ್ಬರು 13 ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಲಖನೌ ಸೂಪರ್ ಜಯಂಟ್ಸ್ ತಂಡ 8 ವಿಕೆಟ್ ಕಳೆದುಕೊಂಡು 209 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ರಿಷಭ್ ಪಂತ್ 6 ಎಸೆತಗಳಲ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ.