Ramzan Fashion: ಫ್ಯಾಷನ್‌ಲೋಕದಲ್ಲಿ ಝಗಮಗಿಸುತ್ತಿರುವ ರಂಜಾನ್ ಎಥ್ನಿಕ್ ಡಿಸೈನರ್‌ವೇರ್ಸ್
Ramzan Fashion: ಈಗಾಗಲೇ ರಂಜಾನ್‌ಗೆಂದು ಫ್ಯಾಷನ್ ಲೋಕದಲ್ಲಿ ಝಗಮಗಿಸುವ ಡಿಸೈನರ್‌ವೇರ್‌ಗಳು ಬಿಡುಗಡೆಗೊಂಡಿವೆ. ನೋಡಲು ಅತ್ಯಾಕರ್ಷಕವಾಗಿರುವ ಉಡುಗೆಗಳು, ಮಾನಿನಿಯರು, ಹಿರಿಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲರನ್ನೂ ಸೆಳೆಯುತ್ತಿವೆ. ಯಾವ್ಯಾವ ಡಿಸೈನ್‌ನವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಮಾರಾಟಗಾರರು ಹಾಗೂ ಎಕ್ಸ್‌ಪರ್ಟ್ಸ್ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್ ಫೆಸ್ಟೀವ್ ಸೀಸನ್‌ನಲ್ಲಿ ಝಗಮಗಿಸುವ ಡಿಸೈನರ್‌ವೇರ್‌ಗಳು ಲಗ್ಗೆ ಇಟ್ಟಿವೆ. ನೋಡಲು ಮನಮೋಹಕವಾಗಿರುವ ಈ ಡಿಸೈನರ್‌ವೇರ್‌ಗಳು ವೈವಿಧ್ಯಮಯ ಗ್ರ್ಯಾಂಡ್‌ಲುಕ್‌ನಲ್ಲಿ ಹಾಗೂ ಆಕರ್ಷಕ ಲುಕ್‌ನಲ್ಲಿ ಬಿಡುಗಡೆಗೊಂಡಿವೆ. ಊಹೆಗೂ ನಿಲುಕದ ಗ್ರ್ಯಾಂಡ್ ಡಿಸೈನರ್‌ವೇರ್‌ಗಳು ರಂಜಾನ್ ಹಬ್ಬದ ಸೀಸನ್‌ನಲ್ಲಿ (Ramzan Fashion) ಎಂಟ್ರಿ ಕೊಟ್ಟಿದ್ದು, ಶಾಪ್‌ಗಳಲ್ಲಿ ರಾರಾಜಿಸುತ್ತಿವೆ. ದೊಡ್ಡ ದೊಡ್ಡ ಬ್ರಾಂಡ್‌ಗಳ ಡಿಸೈನರ್‌ವೇರ್‌ಗಳಿಂದಿಡಿದು, ಚಿಕ್ಕ ಪುಟ್ಟ ಬೋಟಿಕ್‌ಗಳಲ್ಲೂ ಹೆವ್ವಿ ಡಿಸೈನ್‌ನ ಅತ್ಯಾಕರ್ಷಕ ಡಿಸೈನರ್‌ವೇರ್‌ಗಳು ಅಲಂಕೃತಗೊಂಡು, ಮಾನಿನಿಯರನ್ನು ಸೆಳೆಯುತ್ತಿವೆ. ಇನ್ನು, ಸ್ಲೀವ್, ಶೋಲ್ಡರ್ ಹಾಗೂ ಲೆಹೆಂಗಾದಲ್ಲೂ ಹ್ಯಾಂಡ್ ಎಂಬ್ರಾಯ್ಡರಿ, ಕಲಾಂಕಾರಿ ಡಿಸೈನ್ ಹಾಗೂ ಮೆಷಿನ್ ಡಿಸೈನ್ ಇರುವಂತವು ಹೆಚ್ಚು ಎಂದಿನಂತೆ ಹೆಚ್ಚು ಪಾಪುಲರ್ ಆಗಿವೆ. ಅದರಲ್ಲೂ ಪಿಂಕ್, ಗೋಲ್ಡನ್ ಯೆಲ್ಲೋ ಹಾಗೂ ಪಾಸ್ಟೆಲ್ ಶೇಡ್‌ನ ಶರಾರ, ಗಾಗ್ರಾ, ಲೆಹೆಂಗಾದಂತಹ ಗ್ರ್ಯಾಂಡ್ ಡ್ರೆಸ್‌ಗಳು ವಿನೂತನ ವಿನ್ಯಾಸದಲ್ಲಿ ಆಗಮಿಸಿವೆ ಎನ್ನುತ್ತಾರೆ ಶೋರೂಮ್‌ವೊಂದರ ಡಿಸೈನರ್.

ಮಿನುಗುವ ಉಡುಗೆಗಳ ಮಾರಾಟ
ರಂಜಾನ್ ಹಬ್ಬದಲ್ಲಿ ಅತಿ ಹೆಚ್ಚಾಗಿ ಟ್ರೆಂಡಿಯಾಗುವ ಉಡುಪುಗಳಲ್ಲಿ ಜಗಮಗಿಸುವ ಉಡುಪುಗಳು ಸೇರಿವೆ. ಕ್ರಿಸ್ಟಲ್, ಸ್ಟೋನ್, ಸಿಕ್ವೀನ್ಸ್ ಹೀಗೆ ನಾನಾ ಡಿಸೈನ್‌ನಲ್ಲಿ ಎಂಟ್ರಿ ನೀಡಿರುವ ಇವು, ಈಗಾಗಲೇ ಎಲ್ಲಾ ಮಾಲ್‌ಗಳ ಶಾಪ್‌ಗಳಲ್ಲೂ ಸ್ಟ್ರೀಟ್ ಶಾಪ್‌ಗಳಲ್ಲೂ ರಾರಾಜಿಸುತ್ತಿವೆ. ಧರಿಸಿದಾಗ ಎದ್ದು ಕಾಣುವ ಈ ಉಡುಗೆಗಳು ಸಖತ್ ಮಾರಾಟವಾಗುತ್ತಿವೆ. ಬೇಡಿಕೆ ಕೂಡ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಕಮರ್ಷಿಯಲ್ ಸ್ಟ್ರೀಟ್ ಶಾಪ್‌ವೊಂದರ ಮುಮ್ತಾಜ್ ಹಾಗೂ ರಿಯಾಜ್.

ದುಬಾರಿ ಬೆಲೆಯ ಜುವೆಲ್ ಡ್ರೆಸ್ ಫ್ಯಾಷನ್‌ವೇರ್ಸ್
ಇನ್ನು, ಹೈ ಕ್ಲಾಸ್ ಜನರ ಆಯ್ಕೆ ಜ್ಯುವೆಲ್ ಡ್ರೆಸ್‌ಗಳು ಕೂಡ ಈ ರಂಜಾನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಅಲ್ಲದೇ ಅತಿ ಹೆಚ್ಚು ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಈ ಡ್ರೆಸ್‌ಗಳನ್ನು ಧರಿಸಿದಲ್ಲಿ ಜುವೆಲ್ ಧರಿಸುವುದೇ ಬೇಡ. ಜುವೆಲ್‌ನಂತಹ ರೆಡಿಮೇಡ್ ಇಲ್ಲವೇ ಹ್ಯಾಂಡ್ ಎಂಬ್ರಾಯ್ಡರಿ ಡಿಸೈನ್‌ಗಳನ್ನು ಉಡುಪಿನ ನೆಕ್‌ಲೈನ್ ಡಿಸೈನ್ ಮಾಡಲಾಗಿರುತ್ತದೆ. ಇವು ಕೂಡ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

ರಂಜಾನ್ ಡಿಸೈನರ್‌ವೇರ್‌ಗಳ ಆಯ್ಕೆಗೆ 5 ಸಿಂಪಲ್ ಟಿಪ್ಸ್
- ಈ ಸೀಸನ್‌ನಲ್ಲಿ ಅತ್ಯಾಕರ್ಷಕ ಔಟ್‌ಫಿಟ್‌ಗಳು ಲಭ್ಯ. ಇದಕ್ಕಾಗಿ ನೀವು ಅದೇ ಕಮ್ಯೂನಿಟಿಯವರಾಗಿರಬೇಕು ಎಂಬುದಿಲ್ಲ. ಯಾರೂ ಬೇಕಾದರೂ ಖರೀದಿಸಿ, ಧರಿಸಬಹುದು.
- ರಂಜಾನ್ ಟ್ರೆಂಡ್‌ನಲ್ಲಿ ವಿನೂತನ ಡಿಸೈನ್‌ಗಳು ದೊರಕುತ್ತವೆ. ಈ ಸಮಯದಲ್ಲೆ ಗ್ರ್ಯಾಂಡ್ ಔಟ್‌ಫಿಟ್ಸ್ ಕೊಂಡು ಧರಿಸುವುದು ಉತ್ತಮ.
- ಆದಷ್ಟೂ ಡಿಸ್ಕೌಂಟ್ಸ್ ನೀಡುವೆಡೆ ಮೊದಲೇ ಕನ್‌ಫರ್ಮ್ ಮಾಡಿಕೊಂಡು ಶಾಪಿಂಗ್ ಮಾಡಿ.
- ರೆಡಿಮೇಡ್ ಔಟ್‌ಫಿಟ್‌ಗಳು ಲೆಕ್ಕವಿಲ್ಲದಷ್ಟೂ ಡಿಸೈನ್‌ನಲ್ಲಿ ಲಭ್ಯ.
- ಬೋಟಿಕ್‌ಗಳಲ್ಲಾದಲ್ಲಿ ಸಮಯ ಕಡಿಮೆ ಇರುವುದರಿಂದ ಮೊದಲೇ ಪ್ಲಾನ್ ಮಾಡಿ ಸ್ಟಿಚ್ಚಿಂಗ್ ಆರ್ಡರ್ ಮಾಡಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Reliance Trends: ರಿಲಯನ್ಸ್ ಟ್ರೆಂಡ್ಸ್ ಸಮ್ಮರ್ ಕಲೆಕ್ಷನ್ ಬಿಡುಗಡೆ; ಹೊಸ ಕಲೆಕ್ಷನ್‌ನಲ್ಲಿ ಮಿಂಚಿದ ಮಹೇಶ್ ಬಾಬು, ಪುತ್ರಿ