ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake IT Raid: ಆದಾಯ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆ ಮೇಲೆ ನಕಲಿ ಐಟಿ ದಾಳಿ; ಐವರು ಸಿಐಎಸ್‌ಎಫ್ ಸಿಬ್ಬಂದಿ ಬಂಧನ

ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಮನೆಯಿಂದ ನಗದು ಮತ್ತು ಆಭರಣಗಳನ್ನು ದೋಚಿದ್ದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಐವರು ಸಿಐಎಸ್‌ಎಫ್ ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ. ಮಾರ್ಚ್ 18 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಾಗುವಿಹಾಟಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನಾರ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

IT ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆ ಮೇಲೆ ಐಟಿ ದಾಳಿ; 5 ಮಂದಿ ಬಂಧನ

Profile Vishakha Bhat Mar 27, 2025 12:20 PM

ಕೊಲ್ಕತ್ತಾ: ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಮನೆಯಿಂದ (Fake IT Raid) ನಗದು ಮತ್ತು ಆಭರಣಗಳನ್ನು ದೋಚಿದ್ದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಐವರು ಸಿಐಎಸ್‌ಎಫ್ ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ. ಮಾರ್ಚ್ 18 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಾಗುವಿಹಾಟಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನಾರ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು ಆರೋಪಿಗಳು ಮಾರ್ಚ್ 18 ರಂದು ಚಿನಾರ್ ಪಾರ್ಕ್ ಪ್ರದೇಶದಲ್ಲಿರುವ ವಿನಿತಾ ಸಿಂಗ್ ಅವರ ನಿವಾಸದಿಂದ ನಗದು ಮತ್ತು ಮೌಲ್ಯದ ಆಭರಣಗಳನ್ನು ಕದ್ದಿದ್ದರು ಎಂದು ತಿಳಿದು ಬಂದಿದೆ. ಬಾಗಿಲು ತೆರೆದ ತಕ್ಷಣ, ಖದೀಮರ ಗ್ಯಾಂಗ್‌ ಮನೆಗೆ ಪ್ರವೇಶಿಸಿ ಮೊದಲು ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡರು" ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಂತರ ಅವರು ಉದ್ಯಮಿಯ ತಾಯಿಯ ಕೋಣೆಗೆ ತೆರಳಿದರು, ಅಲ್ಲಿ ಅವರು ಸುಮಾರು 3 ಲಕ್ಷ ರೂ. ತ್ತು ಸುಮಾರು 25 ಲಕ್ಷ ರೂ. ಮೌಲ್ಯದ ಆಭರಣಗಳನ್ನು ತೆಗೆದುಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಿಗೆ ಲಿಂಕ್ ಮಾಡಲಾದ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಅನ್ನು ಸಹ ಎಗರಿಸಿದ್ದಾರೆ. ನಕಲಿ ಅಧಿಕಾರಿಗಳು ವಿನಿತಾಳ ಮಲತಾಯಿಯ ಕೋಣೆಯಿಂದ ಖಾಲಿ ಕೈಯಲ್ಲಿ ಹೊರಬಂದಾಗ, ಅವರಿಗೆ ಅನುಮಾನ ಬಂದಿದೆ. ವಿನಿತಾ ಐಟಿ ಇಲಾಖೆಯೊಂದಿಗೆ ಪರಿಶೀಲಿಸಿದಾಗ, ಯಾವುದೇ ಅಧಿಕೃತ ದಾಳಿ ನಡೆದಿಲ್ಲ ಎಂದು ತಿಳಿದು ಬಂದಿದೆ.

ವಿನಿತಾ ತಕ್ಷಣವೇ ಬಾಗುಹಾಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಬಿಧಾನ್‌ನಗರ ಪೊಲೀಸರು ತನಿಖೆ ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಶಂಕಿತರು ಬಳಸುತ್ತಿದ್ದ ವಾಹನವನ್ನು ಗುರುತಿಸಿದ್ದಾರೆ. ಅದರ ನೋಂದಣಿ ವಿವರಗಳನ್ನು ಪತ್ತೆಹಚ್ಚಿದಾಗ ಅವರು ಅದರ ಚಾಲಕ ದೀಪಕ್ ರಾಣಾ ಎಂಬಾತನನ್ನು ಪತ್ತೆ ಹಚ್ಚಿದ್ದಾರೆ.

ರಾಣಾನನ್ನು ವಿಚಾರಣೆ ಮಾಡಿದಾಗ ಸಿಐಎಸ್ಎಫ್ ಇನ್ಸ್‌ಪೆಕ್ಟರ್ ಅಮಿತ್ ಕುಮಾರ್ ಸಿಂಗ್, ಮಹಿಳಾ ಕಾನ್‌ಸ್ಟೆಬಲ್ ಲಕ್ಷ್ಮಿ ಕುಮಾರಿ, ಕಾನ್‌ಸ್ಟೆಬಲ್ ಬಿಮಲ್ ಥಾಪಾ, ಹೆಡ್ ಕಾನ್‌ಸ್ಟೆಬಲ್ ರಾಮು ಸರೋಜ್ ಮತ್ತು ಕಾನ್‌ಸ್ಟೆಬಲ್ ಜನಾರ್ದನ್ ಶಾ ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ತನಿಖೆಯಲ್ಲಿ ವಿನಿತಾ ಮತ್ತು ಆಕೆಯ ಮಲತಾಯಿ ಆರತಿ ಅವರ ತಂದೆಯ ಮರಣದ ನಂತರ ಅವರ ನಡುವಿನ ಆಸ್ತಿ ವಿವಾದದಿಂದ ನಕಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Viral News: ಕೆಲ್ಸ ಕೊಡಿಸೋ ನೆಪದಲ್ಲಿ ನಡೆಯುತ್ತಿದೆ ಭಾರೀ ವಂಚನೆ-ಯುವಕರೇ ಎಚ್ಚರ...ಎಚ್ಚರ!

ಐಟಿ ದಾಳಿಯ ಹಿಂದಿನ ಪಿತೂರಿ

ಆರತಿ ಮತ್ತು ಆಕೆಯ ಸಂಬಂಧಿಕರೊಬ್ಬರು ಸಿಐಎಸ್‌ಎಫ್ ಇನ್ಸ್‌ಪೆಕ್ಟರ್ ಅಮಿತ್ ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿ, ವಿನಿತಾ ಅವರ ಮನೆಯಲ್ಲಿ ನಡೆದ ದಾಳಿಯಲ್ಲಿ ವಶಪಡಿಸಿಕೊಂಡ ಯಾವುದೇ ಹಣವನ್ನು 50-50 ಅನುಪಾತದಲ್ಲಿ ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ. ಆರತಿಯೇ ಇದ್ದು ಈ ನಕಲಿ ಐಟಿ ದಾಳಿ ಮಾಡಿಸಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕಳ್ಳತನ, ವಂಚನೆ ಮತ್ತು ನಕಲಿ ದಾಖಲೆಗಳನ್ನು ಬಳಸುವುದು ಸೇರಿದಂತೆ ಆರೋಪ ಹೊರಿಸಲಾಗಿದೆ.