Chinese Hacker: ಕೋವಿಡ್-19 ಡೇಟಾ ಕದ್ದ ಆರೋಪ- ಅಮೆರಿಕಕ್ಕೆ ಬೇಕಾಗಿದ್ದ ಚೀನೀ ಹ್ಯಾಕರ್ ಅರೆಸ್ಟ್
Chinese Hacker: ಇಟಲಿಯ ಅಧಿಕಾರಿಗಳು ಕ್ಸು ಝೆವೆಯ್ ಎಂಬ ಚೀನಾದ ನಾಗರಿಕನಾದ ಬಂಧಿಸಿದ್ದಾರೆ. ಈತ 2020ರ ಆರಂಭದಲ್ಲಿ ಕೋವಿಡ್-19 ಲಸಿಕೆ ರಹಸ್ಯಗಳನ್ನು ಚೀನಾದ ಗುಪ್ತಚರ ಸಂಸ್ಥೆಗಾಗಿ ಕದ್ದ ಹ್ಯಾಕಿಂಗ್ (Hacking) ಗುಂಪಿನ ಸದಸ್ಯನೆಂದು ಅಮೆರಿಕ ಆರೋಪಿಸಿದೆ. ಜುಲೈ 3ರಂದು ಮಿಲನ್‌ನ ಮಲ್ಪೆನ್ಸಾ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಅಂತಾರಾಷ್ಟ್ರೀಯ ವಾರಂಟ್ ಆಧಾರದ ಮೇಲೆ ಝೆವೆಯ್‌ನನ್ನು ಬಂಧಿಸಲಾಗಿದೆ.


ರೋಮ್: ಇಟಲಿಯ (Italy) ಅಧಿಕಾರಿಗಳು ಕ್ಸು ಝೆವೆಯ್ ಎಂಬ ಚೀನಾದ ನಾಗರಿಕನಾದ (Citizen of China) ಬಂಧಿಸಿದ್ದಾರೆ. ಈತ 2020ರ ಆರಂಭದಲ್ಲಿ ಕೋವಿಡ್-19 (COVID-19 ) ಲಸಿಕೆ ರಹಸ್ಯಗಳನ್ನು ಚೀನಾದ ಗುಪ್ತಚರ ಸಂಸ್ಥೆಗಾಗಿ ಕದ್ದ ಹ್ಯಾಕಿಂಗ್ (Hacking) ಗುಂಪಿನ ಸದಸ್ಯನೆಂದು ಅಮೆರಿಕ (America) ಆರೋಪಿಸಿದೆ. ಜುಲೈ 3ರಂದು ಮಿಲನ್‌ನ ಮಲ್ಪೆನ್ಸಾ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಅಂತಾರಾಷ್ಟ್ರೀಯ ವಾರಂಟ್ ಆಧಾರದ ಮೇಲೆ ಝೆವೆಯ್‌ನನ್ನು ಬಂಧಿಸಲಾಗಿದೆ.
ಅಮೆರಿಕದ ಒಂಬತ್ತು ಆರೋಪಗಳ ದೋಷಾರೋಪಣೆಯ ಪ್ರಕಾರ, 33 ವರ್ಷದ ಝೆವೆಯ್, ಚೀನಾದ ರಾಜ್ಯ ಭದ್ರತಾ ಸಚಿವಾಲಯದ ಸೂಚನೆಯಂತೆ ಕೋವಿಡ್-19 ಲಸಿಕೆ, ಚಿಕಿತ್ಸೆ ಮತ್ತು ಪರೀಕ್ಷೆಯ ಸಂಶೋಧನೆಯಲ್ಲಿ ತೊಡಗಿದ್ದ ಅಮೆರಿಕದ ವಿಶ್ವವಿದ್ಯಾಲಯಗಳು, ರೋಗನಿರೋಧಕ ತಜ್ಞರು ಮತ್ತು ವೈರಾಣು ತಜ್ಞರನ್ನು ಟಾರ್ಗೆಟ್ ಮಾಡಿದ್ದ. ಚೀನಾದಲ್ಲಿರುವ ಝಾಂಗ್ ಯು ಎಂಬಾತನೂ ಈ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಝೆವೆಯ್‌ನನ್ನು ಅಮೆರಿಕದ ಟೆಕ್ಸಾಸ್‌ಗೆ ಗಡಿಪಾರು ಮಾಡಲು ಪ್ರಕ್ರಿಯೆ ಆರಂಭವಾಗಿದ್ದು, ಆತನ ಮೇಲೆ ವೈರ್‌ಲೆಸ್ ವಂಚನೆ, ಹ್ಯಾಕಿಂಗ್ ಆರೋಪಗಳಿವೆ.
ಇಟಲಿಯ ನ್ಯಾಯಾಂಗ ಸಚಿವಾಲಯವು ಅಮೆರಿಕ ವಿನಂತಿಯನ್ನು ರೋಮ್‌ಗೆ ಕಳುಹಿಸಿದೆ ಎಂದು ದೃಢಪಡಿಸಿದೆ. ಝೆವೆಯ್‌ನನ್ನು "ಕೈಗಾರಿಕಾ ಗೂಢಚಾರಿಕೆಗಾಗಿ ಐಟಿ ಅಪರಾಧಗಳ ಶಂಕೆಯ ಮೇಲೆ" ಬಂಧನದಲ್ಲಿಡಲಾಗಿದೆ. ಮಿಲನ್ ಕೋರ್ಟ್‌ನಲ್ಲಿ ತಾನು ಐಟಿ ತಜ್ಞನೆಂದು ಹೇಳಿಕೊಂಡ ಚೀನಾದ ನಾಗರಿಕನ ಬಂಧನವು ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಸರ್ಕಾರಕ್ಕೆ ಒತ್ತಡ ಉಂಟುಮಾಡಬಹುದು.
ಈ ಸುದ್ದಿಯನ್ನು ಓದಿ: Child Marriage: 6 ವರ್ಷದ ಬಾಲಕಿ ಜೊತೆ 45 ವರ್ಷದ ವ್ಯಕ್ತಿಯ ವಿವಾಹ-ಇದು ತಾಲಿಬಾನ್ ವಿಕೃತಿ!
ಮೆಲೋನಿ ಸರ್ಕಾರವು ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸುತ್ತಲೇ ಚೀನಾದೊಂದಿಗೆ ಉತ್ತಮ ವಾಣಿಜ್ಯ ಸಂಬಂಧವನ್ನು ಕಾಪಾಡಿಕೊಂಡಿದೆ. ಚೀನಾದ ಬೆಲ್ಟ್ ಆಂಡ್ ರೋಡ್ ಉಪಕ್ರಮದಿಂದ ಹೊರಬಂದರೂ ರೋಮ್ ಮತ್ತು ಬೀಜಿಂಗ್ ಸೌಹಾರ್ದ ಸಂಬಂಧವನ್ನು ಮುಂದುವರೆಸಿವೆ.
ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯು ಝೆವೆಯ್ ಪ್ರಕರಣದ ಬಗ್ಗೆ ನಮಗೆ ಗೊತ್ತಿಲ್ಲ ಎಂದಿದೆ. ಆದರೆ, "ಇಂತಹ ಗಾಳಿಸುದ್ದಿಗಳು ಹಿಂದೆಯೂ ಹಲವಾರು ಬಾರಿ ಹರಡಿವೆ, ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ," ಎಂದು ರಾಯಭಾರಿ ವಕ್ತಾರ ಲಿಯು ಪೆಂಗ್ಯು ಹೇಳಿದ್ದಾರೆ. "ಚೀನಾದ ಲಸಿಕೆ ಸಂಶೋಧನೆ ವಿಶ್ವದ ಅತ್ಯಂತ ಸುಧಾರಿತವಾದದ್ದು. ಕಳವಿನ ಮೂಲಕ ಲಸಿಕೆ ಪಡೆಯುವ ಉದ್ದೇಶವಿಲ್ಲ," ಎಂದು ತಿಳಿಸಿದ್ದಾರೆ.