ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಲೆಗೆ ಗುಂಡು ಹಾರಿಸಿಕೊಂಡು ಮುನ್ಸಿಪಲ್ ಕಮಿಷನರ್ ಆತ್ಮಹತ್ಯೆ ಯತ್ನ; ಕಾರಣ ನಿಗೂಢ

Babasaheb Manohare: ಮಹಾರಾಷ್ಟ್ರದ ಲಾತೂರ್‌ನಲ್ಲಿ ಶನಿವಾರ (ಏ. 5) ರಾತ್ರಿ ಮುನ್ಸಿಪಲ್ ಕಮಿಷನರ್ ಬಾಬಾಸಾಹೇಬ್ ಮನೋಹರೆ ತಲೆಗೆ ಗುಂಡು ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಮುಂದುವರಿದಿದೆ.

ತಲೆಗೆ ಗುಂಡು ಹಾರಿಸಿಕೊಂಡು ಮುನ್ಸಿಪಲ್ ಕಮಿಷನರ್ ಆತ್ಮಹತ್ಯೆ ಯತ್ನ

ಬಾಬಾಸಾಹೇಬ್ ಮನೋಹರೆ.

Profile Ramesh B Apr 6, 2025 5:05 PM

ಮುಂಬೈ: ಮಹಾರಾಷ್ಟ್ರದ ಲಾತೂರ್‌ನಲ್ಲಿ (Municipal commissioner in Latur) ಶನಿವಾರ (ಏ. 5) ರಾತ್ರಿ ಮುನ್ಸಿಪಲ್ ಕಮಿಷನರ್ ಬಾಬಾಸಾಹೇಬ್ ಮನೋಹರೆ (Babasaheb Manohare) ತಲೆಗೆ ಗುಂಡು ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಮುಂದುವರಿದಿದೆ. ಅವರನ್ನು ಸಹ್ಯಾದ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಪ್ರಕಾರ, 48 ವರ್ಷದ ಬಾಬಾ ಸಾಹೇಬ್ ಮನೋಹರೆ ಎಂಐಡಿಸಿ ಪ್ರದೇಶದ ತಮ್ಮ ಅಧಿಕೃತ ನಿವಾಸದಲ್ಲಿ ಕುಟುಂಬದವರೊಂದಿಗೆ ಊಟ ಮಾಡಿದ ಸ್ವಲ್ಪ ಸಮಯದ ನಂತರ ರಾತ್ರಿ 11:15ರ ಸುಮಾರಿಗೆ ಪರವಾನಗಿ ಹೊಂದಿದ ತಮ್ಮ ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ.

ಆ ವೇಳೆ ಪತ್ನಿ ಮತ್ತು ಅವರ 15 ಮತ್ತು 12 ವರ್ಷದ ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಗುಂಡಿನ ಶಬ್ದ ಕೇಳಿ ಅವರ ಕೋಣೆಗೆ ಧಾವಿಸಿದಾಗ ಮನೋಹರೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Manav Sharma: ಟೆಕ್ಕಿ ಮಾನವ್ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌; ತಿಂಗಳ ನಂತರ ಪತ್ನಿ, ಮಾವನ ಬಂಧನ

ಮನೋಹರೆ ಅವರ ತಲೆಯ ಬಲಭಾಗದಿಂದ ಗುಂಡು ಪ್ರವೇಶಿಸಿ ಮೇಲ್ಭಾಗದಿಂದ ಹೊರಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ʼʼಮೆದುಳಿಗೆ ಗಂಭೀರ ಹಾನಿಯಾಗಿದೆ. ಅವರ ತಲೆಬುರುಡೆಯ ತುಣುಕುಗಳು ಮೆದುಳನ್ನು ಪ್ರವೇಶಿಸಿವೆ. ಇದಕ್ಕೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆʼʼ ಎಂದು ಅವರು ಹೇಳಿದ್ದಾರೆ. ಮುನ್ಸಿಪಲ್ ಕಮಿಷನರ್ ಪ್ರಸ್ತುತ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮನೋಹರೆ ಅವರ ನಿವಾಸದಿಂದ ಪಿಸ್ತೂಲ್ ಮತ್ತು ಗುಂಡು ಹಾರಿಸಿದ ರೌಂಡ್ ಕ್ಯಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಮನೋಹರೆ ಅವರನ್ನು 2022ರಲ್ಲಿ ಲಾತೂರ್‌ನ ಮುನ್ಸಿಪಲ್ ಕಮಿಷನರ್ ಆಗಿ ನೇಮಿಸಲಾಯಿತು. ಅವರು ಮಾ. 27ರಂದು ಪುರಸಭೆಯ ವಾರ್ಷಿಕ ಬಜೆಟ್ ಅನ್ನು ಮಂಡಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನೋಹರೆ ಈ ಹಿಂದೆ ಜಲ್ನಾ, ಧಾರಾಶಿವ್, ನಾಂದೇಡ್ ಮತ್ತು ಔರಂಗಾಬಾದ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು.