ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyanka Chopra Jonas: ಅಲ್ಲು ಅರ್ಜುನ್‌ಗೆ ಜೋಡಿಯಾಗ್ತಾರಾ ಪ್ರಿಯಾಂಕಾ ಚೋಪ್ರಾ? ಚಿತ್ರತಂಡ ಕೊಟ್ಟ ಸ್ಪಷ್ಟನೆ ಇದು

Allu Arjun: ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಮತ್ತು ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಜೋನಸ್‌ ಮೊದಲ ಬಾರಿಗೆ ತೆರೆಮೇಲೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ.

ಅಲ್ಲು ಅರ್ಜುನ್‌ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ?

ಅಲ್ಲು ಅರ್ಜುನ್‌ ಮತ್ತು ಪ್ರಿಯಾಂಕಾ ಚೋಪ್ರಾ ಜೋನಸ್‌.

Profile Ramesh B Apr 6, 2025 6:04 PM

ಹೈದರಾಬಾದ್‌: ಭಾರತೀಯ ಸಿನಿರಂಗದ ಜನಪ್ರಿಯ ತಾರೆಗಳಾದ ದಕ್ಷಿಣದ ಅಲ್ಲು ಅರ್ಜುನ್‌ (Allu Arjun) ಮತ್ತು ಉತ್ತರದ ಪ್ರಿಯಾಂಕಾ ಚೋಪ್ರಾ ಜೋನಸ್‌ (Priyanka Chopra Jonas) ಸಮಾಗಮಕ್ಕೆ ವೇದಿಕೆಯೊಂದು ಸಿದ್ಧವಾಗುತ್ತಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಕಾಲಿವುಡ್‌ನಲ್ಲಿ ಕಮರ್ಷಿಯಲ್‌ ಚಿತ್ರಗಳಿಗೆ ಹೊಸ ಭಾಷ್ಯ ಬರೆದು ಬಾಲಿವುಡ್‌ನಲ್ಲೂ ಗೆಲುವಿನ ಮಿಂಚು ಹರಿಸಿದನಿರ್ದೇಶಕ ಅಟ್ಲಿ (Atlee) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಮುಂದಿನ ಚಿತ್ರದಲ್ಲಿ ಅಲ್ಲು ಅರ್ಜುನ್‌ ಮತ್ತು ಪ್ರಿಯಾಂಕಾ ಚೋಪ್ರಾ ಮೊಲ ಬಾರಿಗೆ ಒಂದಾಗುತ್ತಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಇದೀಗ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಈ ವದಂತಿಯನ್ನು ನಿರಾಕರಿಸಿದೆ ಎಂದು ಸುದ್ದಿಸಂಸ್ಥೆ ವಿಂಕಿವಿಲ್ಲಾ ವರದಿ ಮಾಡಿದೆ.

ಅಲ್ಲು ಅರ್ಜುನ್‌ ಮತ್ತು ಅಟ್ಲಿ ಕಾಂಬಿನೇಷನ್‌ನ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼಎ6ʼ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಅವರನ್ನು ಸಂಪರ್ಕಿಸಲಾಗಿದೆ ಎಂಬ ಸುದ್ದಿಯನ್ನು ಸಿನಿಮಾತಂಡ ನಿರಾಕರಿಸಿದೆಯಂತೆ.

ಈ ಸುದ್ದಿಯನ್ನೂ ಓದಿ: Allu Arjun: ಅಟ್ಲಿ ಚಿತ್ರದಲ್ಲಿ ಅಲ್ಲು ಅರ್ಜುನ್‌; ದ್ವಿಪಾತ್ರದಲ್ಲಿ ಮಿಂಚುತ್ತಾರಾ ಪುಷ್ಪರಾಜ್‌?

ಚಿತ್ರತಂಡದ ಸ್ಪಷ್ಟನೆ ಏನು?

ʼʼಅಟ್ಲಿ ನಿರ್ದೇಶನದ ಅಲ್ಲು ಅರ್ಜುನ್‌ ಚಿತ್ರಕ್ಕೆ ನಾಯಕಿಯನ್ನಾಗಿಸಲು ಪ್ರಿಯಾಂಕಾ ಚೋಪ್ರಾ ಅವರನ್ನು ನಾವು ಸಂಪರ್ಕಿಸಿಲ್ಲʼʼ ಎಂದು ಚಿತ್ರದ ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.
ಅದಾಗ್ಯೂ ಸಲ್ಮಾನ್‌ ಖಾನ್‌ಗಾಗಿ ಅಟ್ಲಿ ಆಕ್ಷನ್‌ ಕಟ್‌ ಹೇಳುತ್ತಿರುವ ಮುಂದಿನ ಪ್ರಾಜೆಕ್ಟ್‌ಗೆ ನಾಯಕಿಯನ್ನಾಗಿ ಪ್ರಿಯಾಂಕಾ ಅವರನ್ನು ಪರಿಗಣಿಸಲಾಗಿದೆಯಂತೆ. ಆದರೆ ಸದ್ಯ ಈ ಚಿತ್ರ ಸ್ಥಗಿತಗೊಂಡಿದೆ ಎನ್ನಲಾಗಿದೆ.

ʼಪುಷ್ಪ 2ʼ ಚಿತ್ರದ ಅಭೂತಪೂರ್ವ ಯಶಸ್ಸಿನಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್‌ ಮತ್ತು ಅಟ್ಲಿ ಮೊದಲ ಬಾರಿಗೆ ಜತೆಯಾಗುತ್ತಿರುವ ʼಎ6ʼ ಸದ್ಯ ದಕ್ಷಿಣ ಭಾರತದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಆ್ಯಕ್ಷನ್‌ ಡ್ರಾಮ ಆಗಿರುವ ಈ ಸೈನ್ಸ್‌ ಫಿಕ್ಷನ್‌ನ ಕಥೆ ವಿವಿಧ ಕಾಲಘಟ್ಟದಲ್ಲಿ ನಡೆಯಲಿದೆಯಂತೆ. ಅಲ್ಲು ಅರ್ಜುನ್‌ ಮತ್ತೊಮ್ಮೆ ಮಾಸ್‌ ಅವತಾರಣದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ. ಅಲ್ಲದೆ ಮೊದಲ ಬಾರಿಗೆ ಅವರು ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸದ್ಯ ಈ ಚಿತ್ರ ಪ್ರೀ-ಪ್ರೊಡಕ್ಷನ್‌ ಹಂತದಲ್ಲಿದೆ. ಈ ವರ್ಷದ ಆಗಸ್ಟ್‌ನಲ್ಲಿ ಸೆಟೇರುವ ಸಾಧ್ಯತೆ ಇದೆ. ಸದ್ಯ ಅಲ್ಲು ಅರ್ಜುನ್‌ ಕೈತುಂಬಾ ಚಿತ್ರಗಳಿವೆ. ಈಗ ಅವರು ಟಾಲಿವುಡ್‌ ಸ್ಟಾರ್‌ ಡೈರಕ್ಟರ್‌ ತ್ರಿವಿಕ್ರಂ ನಿರ್ದೇಶನದ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು 2026ರಲ್ಲಿ ಆರಂಭಗೊಳ್ಳಲಿದೆ. ಅದರ ಜತೆಗೆ ಸುಕುಮಾರ್‌ ಜತೆಗೆ ʼಪುಷ್ಪ 3ʼ ಚಿತ್ರದಲ್ಲಿಯೂ ಅಭಿನಯಿಸಲಿದ್ದಾರೆ. ಮಾತ್ರವಲ್ಲ ಬಾಲಿವುಡ್‌ಗೂ ಕಾಲಿಡುತ್ತಾರೆ ಎನ್ನುವ ಸುದ್ದಿ ಹಬ್ಬಿದೆ. ʼಪಠಾಣ್‌ 2ʼ ಸಿನಿಮಾದಲ್ಲಿ ಅವರು ಶಾರುಖ್‌ ಖಾನ್‌ಗೆ ಎದುರು ವಿಲನ್‌ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬರಬೇಕಿದೆ. ಇತ್ತ ಅಟ್ಲಿ ಅವರು ಸಲ್ಮಾನ್‌ ಖಾನ್‌ ಚಿತ್ರ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಅಟ್ಲಿ ಅವರ ಯಾವ ಚಿತ್ರ ಮೊದಲು ಸೆಟ್ಟೇರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.