ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜೀವ ಭಯಕ್ಕೆ ಪ್ರಿಯಕರನಿಗೆ ಪತ್ನಿಯನ್ನು ಧಾರೆ ಎರೆದುಕೊಟ್ಟ ಪತಿ; ಆದ್ರೆ ಕೊನೆಗೆ ಕಾದಿತ್ತು ಬಿಗ್‌ ಟ್ವಿಸ್ಟ್‌!

ಮೀರತ್‍ನಲ್ಲಿ ನಡೆದ ಕೊಲೆ ಪ್ರಕರಣದ ಬಗ್ಗೆ ಕೇಳಿ ಹೆದರಿದ ಉತ್ತರಪ್ರದೇಶದ ವ್ಯಕ್ತಿ ಬಬ್ಲು ತನ್ನ ಎರಡು ಮಕ್ಕಳ ತಾಯಿಯಾದ ಪತ್ನಿ ರಾಧಿಕಾಳನ್ನು ಆಕೆಯ ಪ್ರಿಯಕರ ವಿಕಾಸನಿಗೆ ಕೊಟ್ಟು ಮದುವೆ ಮಾಡಿಸಿದ್ದಾನೆ. ಈ ಮದುವೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಲವ್ವರ್‌ ಜೊತೆ ಪತ್ನಿಯ ಮದ್ವೆ ಮಾಡಿಸಿದ ಪತಿ-ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌

Profile pavithra Apr 2, 2025 8:20 PM

ಲಖನೌ: ಮೀರತ್‍ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು 15 ಪೀಸ್ ಮಾಡಿ ಡ್ರಮ್‍ನಲ್ಲಿ ತುಂಬಿ ಸಿಮೆಂಟ್ ಸುರಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಕೊಲೆ ವಿಚಾರ ವಿವಾಹಿತ ಪುರುಷರ ಎದೆಯಲ್ಲಿ ನಡುಕ ಹುಟ್ಟುವುದು ಸಹಜವೇ! ಈ ಕೊಲೆ ಪ್ರಕರಣವನ್ನು ಕೇಳಿ ಹೆದರಿದ ಉತ್ತರಪ್ರದೇಶದ ವ್ಯಕ್ತಿಯೊಬ್ಬ ತನಗೂ ಅದೇ ಗತಿಯಾಗುವುದನ್ನು ತಪ್ಪಿಸಲು ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಲು ನಿರ್ಧರಿಸಿದ್ದಾನೆ. ಈಗಾಗಲೇ ಎರಡು ಮಕ್ಕಳ ತಾಯಿಯಾಗಿರುವ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಟ್ಟಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಉತ್ತರ ಪ್ರದೇಶದ ಸಂತ ಕಬೀರ್ ನಗರದ ಕತಾರ್ ಜೋತ್ ಗ್ರಾಮದ ಬಬ್ಲು 2017 ರಲ್ಲಿ ಗೋರಖ್ಪುರ ಜಿಲ್ಲೆಯ ರಾಧಿಕಾ ಎಂಬಾಕೆಯನ್ನು ವಿವಾಹವಾಗಿದ್ದನು. ಬೇರೆ ರಾಜ್ಯದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿಗೆ, ತನ್ನ ಪತ್ನಿ ಅದೇ ಗ್ರಾಮದ ವಿಕಾಸ್ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಒಂದೂವರೆ ವರ್ಷದಿಂದ ಸಂಬಂಧ ಹೊಂದಿದ್ದಾಳೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದರು. ನಂತರ ಬಬ್ಲು ಕತಾರ್ ಜೋತ್‍ಗೆ ಹೋಗಿ ಇವರಿಬ್ಬರ ಕಳ್ಳಾಟವನ್ನು ರೆಟ್‌ಹ್ಯಾಂಡಾಗಿ ಹಿಡಿದಿದ್ದ.

ಪತಿಯೇ ನಿಂತು ಪತ್ನಿಯ ಪ್ರೇಮಿಯ ಜೊತೆ ಮದುವೆ ಮಾಡಿಸಿದ ವಿಡಿಯೊ ಇಲ್ಲಿದೆ ನೋಡಿ...



ಕೆಲವು ದಿನಗಳವರೆಗೆ ರಾಧಿಕಾ ಮೇಲೆ ಕಣ್ಣಿಟ್ಟ ಆತ ವದಂತಿಗಳು ನಿಜವೆಂದು ಕಂಡುಕೊಂಡು ಪತ್ನಿಯನ್ನು ವಿಕಾಸ್ ಜೊತೆಯಲ್ಲಿ ಮದುವೆ ಮಾಡಲು ನಿರ್ಧರಿಸಿದ್ದನಂತೆ. ಎಂಟು ಮತ್ತು ಐದು ವರ್ಷದ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾನೆ.

ಕಳೆದ ತಿಂಗಳ ಕೊನೆಯಲ್ಲಿ, ಅವನು ಈ ಸಂಬಂಧ ಮತ್ತು ಅವನ ಯೋಜನೆಯ ಬಗ್ಗೆ ಗ್ರಾಮದ ಹಿರಿಯರಿಗೆ ಮಾಹಿತಿ ನೀಡಿದ್ದಾನೆ. ಹಾಗೇ ರಾಧಿಕಾ ಮತ್ತು ವಿಕಾಸ್ ಹಿಂದೂ ಸಂಪ್ರದಾಯಗಳ ಪ್ರಕಾರ ಶಿವ ದೇವಾಲಯದಲ್ಲಿ ವಿವಾಹವಾದರು. ರಾಧಿಕಾ ತನ್ನ ಮಕ್ಕಳು ಮತ್ತು ಇತರ ಗ್ರಾಮಸ್ಥರಿಂದ ತುಂಬಿರುವ ಸ್ಥಳದಲ್ಲಿ ವಿಕಾಸ್‌ನನ್ನು ಮದುವೆಯಾದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ. ಮದುವೆಯ ನಂತರ ಬಬ್ಲು ದಂಪತಿಯೊಂದಿಗೆ ಬೇಸರವಿಲ್ಲದೆ ಫೋಟೋಗೆ ಪೋಸ್ ನೀಡಿದ್ದನಂತೆ ಮತ್ತು ಈ ಮದುವೆಗೆ ಸಾಕ್ಷಿಯಾಗುವ ಮೂಲಕ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡಿದ್ದಾನಂತೆ.

ಈ ಸುದ್ದಿಯನ್ನೂ ಓದಿ:Viral News: ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಗೆ ಕೊಲೆ ಬೆದರಿಕೆ ಹಾಕಿದ ಭಾರತೀಯ- ಆಮೇಲೆ ಆಗಿದ್ದೇನು ಗೊತ್ತಾ?

ಆದರೆ ಗೋರಖ್ಪುರದಲ್ಲಿರುವ ವಿಕಾಸ್ ಮನೆಗೆ ಹೋದ ಕೆಲವೇ ದಿನಗಳ ನಂತರ, ರಾಧಿಕಾ ಅವಳನ್ನು ಅವಳ ಅತ್ತೆ ಬಬ್ಲು ಬಳಿಗೆ ಮರಳುವಂತೆ ಕೇಳಿಕೊಂಡಿದ್ದಾಳೆ. ಚಿಕ್ಕ ಮಕ್ಕಳನ್ನು ತಾಯಿ ಇಲ್ಲದೆ ಬೆಳೆಸಲು ಸಾಧ್ಯವಾಗುವುದಿಲ್ಲ ಎಂದು ಬುದ್ಧಿಮಾತು ಹೇಳಿದ್ದಾಳಂತೆ. ಇದಕ್ಕೆ ರಾಧಿಕಾ ಸಹ ಒಪ್ಪಿದ್ದು ಮಾತ್ರವಲ್ಲ, ಬಬ್ಲು ಕೂಡ ಒಪ್ಪಿಕೊಂಡಿದ್ದಾನೆ. ಈಗ ಅವರು ಸುಖ ಸಂಸಾರ ಮಾಡುತ್ತಿದ್ದಾರೆ ಎನ್ನಲಾಗಿದೆ.